Sunday Special Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಮಾಡಿ ರುಚಿ ರುಚಿಯಾದ ಮಟನ್ ಖೀಮಾ

NonVeg: ವೀಕೆಂಡ್ ಕರ್ಫ್ಯೂ ವೇಳೆ ನಿಮ್ಮ ಭಾನುವಾರವನ್ನು ಮತ್ತಷ್ಟು ಸ್ಪೆಷಲ್ ಆಗಿಸಲು, ಮನೆಯಲ್ಲಿ ನಿಮ್ಮ ಕೈಯಾರೆ ನೀವು ಬಯಸಿದ ರೀತಿ ಮಟನ್ ಖೀಮಾ ಮಾಡಿ ಸೇವನೆ ಮಾಡಬಹುದು

ಮಟನ್ ಖೀಮಾ

ಮಟನ್ ಖೀಮಾ

  • Share this:
    ಚಳಿಗಾಲದಲ್ಲಿ(Winter)ಬಿಸಿಯಾದ ಹಾಗೂ ಖಾರದ ಖಾದ್ಯಗಳನ್ನು ತಿನ್ನುವುದು ಇಷ್ಟವಾಗುತ್ತದೆ. ಪ್ರತಿ ಭಾನುವಾರ(Sunday)ಹೇಗಿದ್ರು ಮನೆಯಲ್ಲಿ(Home)ನಾನ್‍ವೆಜ್(Non veg )ಮಾಡುತ್ತೀರಾ . ಪ್ರತಿ ಸಂಡೇ, ಚಿಕನ್(Chicken), ಮಟನ್(Mutton), ಫಿಶ್(Fish)ತಿನ್ನುತ್ತೀರಾ. ಅದ್ರಲ್ಲೂ ಬಿರಿಯಾನಿ, ಕಬಾಬ್, ಪ್ರೈ ಪ್ರತಿ ವಾರ ಮಾಡಿ ತಿಂತಾನೇ ಇರ್ತಿರಾ. ಇನ್ನು ಕೆಲವರು ಹೋಟೆಲ್ಗಳಿಗೆ ಹೋಗಿ ಪ್ರತಿ ಭಾನುವಾರ ತಮ್ಮ ನೆಚ್ಚಿನ ಮಾಂಸಾಹಾರ ಸೇವನೆ ಮಾಡುತ್ತಾರೆ.. ಆದರೆ ಈ ವಾರ ವೀಕೆಂಡ್ ಕರ್ಫ್ಯೂ (Weekend Curfew)ಇರುವ ಕಾರಣ ಮನೆಯಿಂದ ಹೊರ ಹೋಗಲು ಸಾಧ್ಯವಿಲ್ಲ.ಮನೆಯಿಂದ ಹೊರ ಹೋದರು ಹೋಟೆಲ್ಗಳು ಓಪನ್ ಇರುವುದಿಲ್ಲ. ಹೀಗಾಗಿ ಈ ಭಾನುವಾರದ ಬಾಡೂಟಕ್ಕೆ ಏನು ಮಾಡುವುದು ಎನ್ನುವ ಚಿಂತೆ ಹಲವರಲ್ಲಿ ಕಾಡುತ್ತಿರುತ್ತದೆ.. ಹೀಗಾಗಿಯೇ ವೀಕೆಂಡ್ ಕರ್ಫ್ಯೂ ವೇಳೆ ನಿಮ್ಮ ಭಾನುವಾರವನ್ನು ಮತ್ತಷ್ಟು ಸ್ಪೆಷಲ್ ಆಗಿಸಲು, ಮನೆಯಲ್ಲಿ ನಿಮ್ಮ ಕೈಯಾರೆ ನೀವು ಬಯಸಿದ ರೀತಿ ಮಟನ್ ಖೀಮಾ ಮಾಡಿ ಸೇವನೆ ಮಾಡಬಹುದು..ನೀವು ಮಾಡುವ ಮಟನ್ ಖೀಮಾ ಚಳಿಗಾಲಕ್ಕೆ ಹಾಗೂ ನಿಮ್ಮ ಭಾನುವಾರದ ಬಾಡೂಟಕ್ಕೆ ಬೆಸ್ಟ್ ರೆಸಿಪಿ ಆಗಿರಲಿದೆ.

    ಬೇಕಾಗುವ ಪದಾರ್ಥ

    ಅರ್ಧ ಕೆಜಿ ಮಟನ್ ಖೀಮಾ
    ಲಿವರ್ 1/4 ಕೆಜಿ
    ಈರುಳ್ಳಿ 3
    ಬೆಳ್ಳುಳ್ಳಿ 7-8 ಎಸಳು
    ಶುಂಠಿ 2ಇಂಚಿನಷ್ಟು
    ಕತ್ತರಿಸಿದ ಹಸಿಮೆಣಸಿನ ಕಾಯಿ 4
    ಜೀರಿಗೆ 1 ಚಮಚ
    ಕರಿಮೆಣಸಿನಕಾಳು 1 ಚಮಚ
    ಚಕ್ಕೆ ಮತ್ತು ಲವಂಗ ( ರುಚಿಗೆ ತಕ್ಕ ಹಾಗೆ)
    ಕೆಂಪು ಮೆಣಸಿನ ಪುಡಿ 1 ಚಮಚ
    ಕೊತ್ತಂಬರಿ 1 ಚಮಚ
    ಟೊಮೆಟೊ 1 (ಕತ್ತರಿಸಿದ್ದು)
    ಮೊಸರು 2 ಚಮಚ
    ಕೊತ್ತಂಬರಿ ಸೊಪ್ಪು
    ಎಣ್ಣೆ 2 ಚಮಚ
    ಪಲಾವ್ ಎಲೆ 1
    ರುಚಿಗೆ ತಕ್ಕ ಉಪ್ಪು

    ಇದನ್ನೂ ಓದಿ: ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿಯ ಕಡಾಯಿ ಚಿಕನ್

    ತಯಾರಿಸುವ ವಿಧಾನ

    ತೊಳೆದ ಖೀಮಾಕ್ಕೆ ಮೊಸರು, ಅರಿಶಿಣಪುಡಿ, ಖಾರದ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಸುಮಾರು ಒಂದು ಗಂಟೆ ಹಾಗೆಯೇ ನೆನೆಯಲು ಬಿಡಿ. ಬಳಿಕ ಮಟನ್ ಖೀಮಾ, ಲಿವರ್, ಉಪ್ಪು ಮತ್ತು ಒಂದು ಬಟ್ಟಲು ನೀರನ್ನು ಅದಕ್ಕೆ ಸೇರಿಸಿ ಕುಕ್ಕರ್ ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಿ ಒಂದು ಪಾತ್ರೆಯಲ್ಲಿ ಹಾಕಿಡಬೇಕು.

    ಬಳಿಕ ಪ್ಯಾನ್‌ನಲ್ಲಿ ಹಾಕಿ ಅದರಲ್ಲಿ ಈರುಳ್ಳಿ , ಕರಿಮೆಣಸಿನ ಕಾಳು, ಜೀರಿಗೆ, ಚಕ್ಕೆ, ಲವಂಗ ಫ್ರೈ ಮಾಡಿ. ಈ ಫ್ರೈಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಪುನಃ 2-3 ನಿಮಿಷ ಫ್ರೈ ಮಾಡಿ.ಬಳಿಕ ಇದನ್ನೂ ಅರೆದು ಗಟ್ಟಿ ಪೇಸ್ಟ್ ಮಾಡಿ ಇಟ್ಟುಕೊಳ್ಳಬೇಕು.

    ಬಳಿಕ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ , ಅದರಲ್ಲಿ ಪಲಾವ್ ಎಲೆಗಳನ್ನು ಹಾಕಿ, ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಉರಿಯಬೇಕು. ಈರುಳ್ಳಿ ಕಂದು ಬಣ್ಣಕ್ಕೆ ಬರುವಾಗ ಖೀಮಾ ಮತ್ತು ಲಿವರ್ ಹಾಕಿ 2-3 ನಿಮಿಷ ಮಿಶ್ರ ಮಾಡಬೇಕು. ನಂತರ ಕತ್ತರಿಸಿದ ಹಸಿಮೆಣಸಿನ ಕಾಯಿ, ಸಂಬಾರ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.

    ಇದನ್ನೂ ಓದಿ: ಚಳಿಗಾಲದಲ್ಲಿ ಮನೆಯಲ್ಲಿಯೇ ತಯಾರಿಸಿ ಬಿಸಿಯಾದ ಕಾಲು ಸೂಪ್

    ನಂತರ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಬೇಕು. ನಂತರ ಕತ್ತರಿಸಿದ ಟೊಮೆಟೊ, ಕೆಂಪು ಮೆಣಸಿನ ಪುಡಿ ಕೊತ್ತಂಬರಿ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡ 2-3 ನಿಮಿಷಬೇಯಿಸಬೇಕು. 5. ನಂತರ 1 ಕಪ್ ನೀರು ಸೇರಿಸಿ ಮಿಶ್ರ ಮಾಡಿ, ಪಾತ್ರೆಯ ಬಾಯಿ ಮುಚ್ಚಿ 7-10 ನಿಮಿಷ ಬೇಯಿಸಬೇಕು.ನಂತರ 2 ಚಮಚ ಮೊಸರು ಹಾಕಿ ಪುನಃ2-5 ನಿಮಿಷ ಬೇಯಿಸಬೇಕು.

    ನೆನೆಯಲು ಬಿಟ್ಟು ಇರುವ ಖೀಮಾ ಇದಕ್ಕೆ ಹಾಕಿ. ಕೊತ್ತಂಬರಿ ಸೊಪ್ಪು ಹಾಕಿದ್ರೆ ಖೀಮಾ ರೆಡಿ. ಇದನ್ನು ಚಪಾತಿ ಅಥವಾ ಪರೋಟದ ಜೊತೆಗೆ ತಿಂದ್ರೆ ಅದ್ಭುತವಾಗಿರುತ್ತದೆ.
    Published by:ranjumbkgowda1 ranjumbkgowda1
    First published: