• Home
  • »
  • News
  • »
  • lifestyle
  • »
  • Upma Recipe: ಗ್ಯಾಸ್ಟ್ರಿಕ್ ಸಮಸ್ಯೆ ಅನ್ನೋರು ಸಹ ಸೇವಿಸಬಹುದು ಅವರೆಕಾಳು ಮಸಾಲೆ ಉಪ್ಪಿಟ್ಟು; ಹೀಗೆ ಮಾಡಿದ್ರೆ ಸಾಕು

Upma Recipe: ಗ್ಯಾಸ್ಟ್ರಿಕ್ ಸಮಸ್ಯೆ ಅನ್ನೋರು ಸಹ ಸೇವಿಸಬಹುದು ಅವರೆಕಾಳು ಮಸಾಲೆ ಉಪ್ಪಿಟ್ಟು; ಹೀಗೆ ಮಾಡಿದ್ರೆ ಸಾಕು

ಅವರೆಕಾಳು ಮಸಾಲೆ ಉಪ್ಪಿಟ್ಟು

ಅವರೆಕಾಳು ಮಸಾಲೆ ಉಪ್ಪಿಟ್ಟು

ಉಪ್ಪಿಟ್ಟು ತಯಾರಿಸುವಾಗ ನೇರವಾಗಿ ಅವರೆಕಾಳು ಬಳಸಬಾರದು. ಅವರೆಕಾಳನ್ನು ಉಪ್ಪಿಟ್ಟಿಗೆ ಹಾಕುವ ಮೊದಲು ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಬೇಕು. ಹೀಗೆ ಮಾಡಿದ್ರೆ ಹಲ್ಲಿಲ್ಲದವರು ಅವರೆಕಾಳು ಉಪ್ಪಿಟ್ಟು ಸವಿಯಬಹುದು.

  • Share this:

Avare Kalu Masale Uppittu: ಕಾರ್ತಿಕ ಮಾಸ (Kartika Masa) ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ (Market) ಕಣ್ಣು ಹಾಯಿಸಿದಷ್ಟು ಬಗೆ  ಬಗೆಯ ಅವರೆಕಾಳು (Avarekalu) ಕಾಣಿಸುತ್ತಿವೆ. ಇನ್ನು ದಕ್ಷಿಣ ಕರ್ನಾಟಕದ ಮನೆಗಳಲ್ಲಿ  ಅವರೆಕಾಳು ಪರಿಮಳ ಹರಿದಾಡುತ್ತಿದೆ. ಅವರೆಕಾಳು (Hyacinth Bean) ಸಾಂಬಾರ್, ಅವರೆಕಾಳು ಪಲ್ಯ, ಅವರೆಕಾಳು ಕರ್ರಿ, ಅವರೆಕಾಳು ದೋಸೆ ಸೇರಿದಂತೆ ಬಗೆ ಬಗೆಯುವ ಅಡುಗೆ (Avarekalu Recipe) ಮಾಡಿರುತ್ತಾರೆ. ಇನ್ನು ಅವರೆಕಾಳು ಉಪ್ಪಿಟ್ಟು (Avarekalu Uppittu) ಕಾಮನ್. ಆದ್ರೆ ಇಂದು ನಾವು ನಿಮಗೆ ಮಸಾಲಾ ಉಪ್ಪಿಟ್ಟು (Avarekalu Upma) ಹೇಗೆ ಮಾಡಬೇಕು ಎಂಬುದನ್ನು ಹೇಳುತ್ತಿದ್ದೇವೆ. ಇದರಲ್ಲಿ ಕೆಲವು ಪದಾರ್ಥ ಬಳಕೆ ಮಾಡುವದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಅನ್ನೋರಿಗೆ ಇದು ಇಷ್ಟವಾಗುತ್ತದೆ. ಇನ್ನು ಅವರೆಕಾಳು ಜಗಿಯಲು ಆಗಲ್ಲ ಅನ್ನೋರಿಗೆ ಈ ರೀತಿ ತಯಾರಿಸಿದ್ರೆ ಇಷ್ಟವಾಗುತ್ತದೆ.


ಉಪ್ಪಿಟ್ಟು ತಯಾರಿಸುವಾಗ ನೇರವಾಗಿ ಅವರೆಕಾಳು ಬಳಸಬಾರದು. ಅವರೆಕಾಳನ್ನು ಉಪ್ಪಿಟ್ಟಿಗೆ ಹಾಕುವ ಮೊದಲು ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಬೇಕು. ಹೀಗೆ ಮಾಡಿದ್ರೆ ಹಲ್ಲಿಲ್ಲದವರು ಅವರೆಕಾಳು ಉಪ್ಪಿಟ್ಟು ಸವಿಯಬಹುದು.


ಬೇಕಾಗುವ ಸಾಮಾಗ್ರಿಗಳು


ಅವರೆಕಾಳು: ಒಂದು ಕಪ್


ರವೆ: ಒಂದು ಕಪ್ (ದಪ್ಪ ರವೆ)


ಹಸಿಮೆಣಸಿನಕಾಯಿ: ಎರಡು


ಜೀರಿಗೆ ಮತ್ತು ಸಾಸವೆ: 1 ಟೀ ಸ್ಪೂನ್


ಈರುಳ್ಳಿ: ಮಧ್ಯಮ ಗಾತ್ರದ್ದು ಒಂದು


ಟೊಮ್ಯಾಟೋ: ಒಂದು


ಹುಣಸೆಹಣ್ಣು: ನಿಂಬೆಹಣ್ಣಿನ ಗಾತ್ರದಷ್ಟು


ಹಸಿ ಶುಂಠಿ: ಅರ್ಧ ಇಂಚು


ಬೆಲ್ಲ: ಒಂದು ಟೀ ಸ್ಪೂನ್


ಉದ್ದಿನಬೇಳೆ: 1 ಟೀ ಸ್ಪೂನ್


ಕಡಲೆಬೀಜ/ಶೇಂಗಾ: 1 ಟೀ ಸ್ಪೂನ್


ಕಡಲಬೇಳೆ: 1 ಟೀ ಸ್ಪೂನ್


ಅರಿಶಿಣ: ಚಿಟಿಕೆ


ಅಚ್ಚ ಖಾರದ ಪುಡಿ: 1 ಟೀ ಸ್ಪೂನ್ (ಕಾಶ್ಮೀರಿ ಲಾಲ್​ ಮಿರ್ಚಿ ಪೌಡರ್ ಸಹ ಬಳಸಬಹುದು)


ಇಂಗು: ಚಿಟಿಕೆ


ಕರಿಬೇವು: 4 ಎಲೆ


ಕೋತಂಬರಿ ಸೊಪ್ಪು


ಎಣ್ಣೆ: ಮೂರು ಟೀ ಸ್ಪೂನ್


ತುಪ್ಪ: ಒಂದು ಟೀ ಸ್ಪೂನ್


ಉಪ್ಪು: ರುಚಿಗೆ ತಕ್ಕಷ್ಟು


ಅವರೆಕಾಳು ಮಸಾಲಾ ಉಪ್ಪಿಟ್ಟು ಮಾಡುವ ವಿಧಾನ


*ಮೊದಲಿಗೆ ಮಾರುಕಟ್ಟೆಯಿಂದ ತಂದಿರುವ ಅವರೆಕಾಳನ್ನು ಎರಡರಿಂದ ಮೂರು ಬಾರಿ ನೀರಿನಲ್ಲಿ ತೊಳೆದುಕೊಂಡು, ಒಂದು ಕಪ್​ನಷ್ಟು ನೀರು ಹಾಕಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಂಡು ಎತ್ತಿಟ್ಟುಕೊಳ್ಳಿ.


*ಈಗ ಈರುಳ್ಳಿ, ಟೊಮ್ಯಾಟೋವನ್ನು ಮಧ್ಯಮ ಗಾತ್ರದಲ್ಲಿ ಕತ್ತರಿಸಿಕೊಳ್ಳಿ. ಹುಣಸೆಹಣ್ಣಿಗೆ ಒಂದು ಕಪ್​ನಷ್ಟು ನೀರು ಹಾಕಿ ಎತ್ತಿಟ್ಟುಕೊಳ್ಳಿ. ಇದರ ಜೊತೆಗೆ ಹಸಿಮೆಣಸಿನಕಾಯಿ, ಹಸಿ ಶುಂಠಿ ಮತ್ತು ಕೋತಂಬರಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ.


*ಪ್ಯಾನ್ ಮೇಲೆ ಒಲೆ ಇರಿಸಿ ರವೆಯನ್ನು ಹುರಿದುಕೊಳ್ಳಿ.


*ಈಗ ಹುರಿದಿರುವ ರವೆಯನ್ನು ಮತ್ತೊಂದು ಪಾತ್ರೆಗೆ ಹಾಕಿ ತೆಗೆದಿಡಿ. ಈಗ ಇದೇ ಪಾತ್ರೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿ ಆಗ್ತಿದ್ದಂತೆ ತುಪ್ಪ ಹಾಕಿ.


*ಎಣ್ಣೆ ಮತ್ತು ತುಪ್ಪ ಬಿಸಿಯಾಗ್ತಿದ್ದಂತೆ ಜೀರಿಗೆ ಸಾಸವೆ ಹಾಕಿ ಚಿಟಪಟ ಸದ್ದು ಮಾಡುತ್ತಿದ್ದಂತೆ ಕಡಲೆಬೀಜ ಮತ್ತು ಉದ್ದಿನಬೇಳೆ ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.


*ಈಗ ಈರುಳ್ಳಿಯನ್ನು ಸೇರಿಸಿ ಹಸಿ ವಾಸನೆ ಹೋದ ನಂತರ ಟೊಮ್ಯಾಟೋ ಮಿಕ್ಸ್​ ಮಾಡಿ ಫ್ರೈ ಮಾಡಿಕೊಳ್ಳಿ.


ಇದನ್ನೂ ಓದಿ:  Breakfast Recipe: ಉಪ್ಪಿಟ್ಟನ್ನು ಮತ್ತಷ್ಟು ರುಚಿಯಾಗಿಸಲು ಈ ಪದಾರ್ಥಗಳನ್ನ ಬಳಿಸಿ


*ಈರುಳ್ಳಿ ಮತ್ತು ಟೊಮ್ಯಾಟೋ ಸೇರಿಸಿದ ನಂತರ ಹಸಿಮೆಣಸಿನಕಾಯಿ ಹಾಗೂ ಕರೀಬೇವು ಸೇರಿಸಿ ಚೆನ್ನಾಗಿ ಮಿಕ್ಸ್​ ಮಾಡಿಕೊಳ್ಳಿ. ತದನಂತರ ಒಂದು ಟೀ ಸ್ಪೂನ್ ಅಚ್ಚ ಖಾರದ ಪುಡಿ ಸೇರಿಸಿ.


*ತದನಂತರ ಹುಣಸೆಹಣ್ಣಿನ ರಸ ಸೇರಿಸಿ, ಬೆಲ್ಲ ಹಾಕಿ ಎರಡು ನಿಮಿಷ ಬೇಯಿಸಿಕೊಳ್ಳಿ. ಈ ವೇಳೆ ಚಿಟಿಕೆ ಇಂಗು, ಅರಿಶಿನ ಹಾಕಿಕೊಳ್ಳಿ. ತದನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.


*ಹುಣಸೆಹಣ್ಣಿನ ಜೊತೆ ಬೆಲ್ಲ ಮಿಕ್ಸ್​ ಆಗುತ್ತಿದ್ದಂತೆ ಬೇಯಿಸಿಕೊಂಡಿರುವ ಅವರೆಕಾಳು ಮಿಕ್ಸ್​ ಮಾಡಿಕೊಂಡು ಮುಚ್ಚಳ ಮುಚ್ಚಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಿ. ಅವರೆಕಾಳು ಬೇಯಿಸಿಕೊಂಡಿರುವ ನೀರನ್ನು ವೇಸ್ಟ್ ಮಾಡದೇ ಅದನ್ನು ಸಹ ಇದಕ್ಕೆ ಸೇರಿಸಿಕೊಳ್ಳಿ.


*ಈಗ ಅವರೆಕಾಳು ಬೇಯುತ್ತಿದ್ದಂತೆ  ಎರಡು ಕಪ್​ನಷ್ಟು ನೀರು ಹಾಕಿ, ಎರಡು ನಿಮಿಷ ಕುದಿಸಿ.


*ನೀರು ಕುದಿಯುತ್ತಿದ್ದಂತೆ ಹುರಿದಿಟ್ಟುಕೊಂಡಿರುವ ರವೆಯನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ನಿಮಿಷ ಬೇಯಿಸಿ.


ಇದನ್ನೂ ಓದಿ:  Breakfast Recipe: ಕೇವಲ 10 ನಿಮಿಷದಲ್ಲಿ ಮಾಡಿ ಬಿಸಿಬಿಸಿ ಶಾವಿಗೆ ಉಪ್ಪಿಟ್ಟು


*ತದನಂತರ ಪ್ಲೇಟ್ ತೆಗೆದ್ರು ಉಪ್ಪಿಟ್ಟನ್ನು ಮೇಲ ಕೆಳಗೆ ಮಾಡಿ, ಒಲೆ ಬಂದ್ ಮಾಡಿ ಮುಚ್ಚಳ ಮುಚ್ಚಿ ಐದು ನಿಮಿಷ ಎತ್ತಿಡಿ. ಈಗ ಮುಚ್ಚಳ ತೆಗೆದು ಕೋತಂಬರಿ ಸೊಪ್ಪು ಉದುರಿಸಿದ್ರೆ ಮಸಾಲಾ ಅವರೆಕಾಳು ಉಪ್ಪಿಟ್ಟು ಸವಿಯಲು ಸಿದ್ಧವಾಗುತ್ತದೆ.


(ಹಸಿ ಶುಂಠಿ ಬಳಕೆ ಮಾಡೋದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯುಂಟಾಗಲ್ಲ)

Published by:Mahmadrafik K
First published: