Mango Kheer: ಮಾವಿನ ಹಣ್ಣಿನ ಖೀರ್ ಟೇಸ್ಟ್ ಮಾಡಿದ್ದೀರಾ? ರೆಸಿಪಿ ಇಲ್ಲಿದೆ ನೋಡಿ

ನಾವೆಲ್ಲರೂ ನಮ್ಮ ಸಾಂಪ್ರದಾಯಿಕ ಸಿಹಿತಿಂಡಿಗಳನ್ನು ಪ್ರೀತಿಸುತ್ತೇವೆಯಾದರೂ, ಕ್ಲಾಸಿಕ್ ಪಾಕವಿಧಾನಗಳಿಗೆ ಹೊಸ ಮತ್ತು ಫಂಕಿ ತಿರುವನ್ನು ನೀಡುವುದು ಯಾವಾಗಲೂ ಉತ್ತಮ ಆಲೋಚನೆಯಾಗಿರುತ್ತದೆ ನೋಡಿ.

 ಮಾವಿನ ಹಣ್ಣಿನ ಖೀರ್

ಮಾವಿನ ಹಣ್ಣಿನ ಖೀರ್

  • Share this:
ನಾವು ಭಾರತೀಯರು ಈ ಸಿಹಿತಿಂಡಿಗಳ (Sweets) ಬಗ್ಗೆ ಅಪಾರವಾದ ಒಲವನ್ನು ಹೊಂದಿರುತ್ತೇವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಊಟ (Lunch) ಮುಗಿಸಲು ಕೊನೆಯದಾಗಿ ಒಂದು ಸಿಹಿಯಾದುದೇನಾದರೂ ನಮ್ಮ ತಟ್ಟೆಯ ಪಕ್ಕದಲ್ಲಿ ಇರದೇ ಹೋಗಿದ್ದರೆ, ಆ ಊಟ ಒಂದು ರೀತಿಯಲ್ಲಿ ಅಪೂರ್ಣವಿದ್ದಂತೆ ಎಂದು ಹೇಳಬಹುದು. ಕೆಲವೊಬ್ಬರಿಗಂತೂ ಊಟದ ತಟ್ಟೆಯಲ್ಲಿಯೇ ಸಿಹಿತಿಂಡಿ ಇರಬೇಕು, ಊಟದಲ್ಲಿರುವ ಖಾರದ ಪದಾರ್ಥಗಳನ್ನು ಸೇವಿಸಿದ ನಂತರ ಅವರಿಗೆ ಸಿಹಿಯಾದ ತಿಂಡಿ ಬೇಕಾಗುತ್ತದೆ. ಪಾಯಸಂನಿಂದ ಹಿಡಿದು ಶ್ರೀಖಂಡದವರೆಗೆ, ರಸಗುಲ್ಲಾದಿಂದ ಹಿಡಿದು ಕೊಬ್ಬರಿ ಬರ್ಫಿಯವರೆಗೆ ದೇಶಾದ್ಯಂತ ಅನೇಕ ಆರೋಗ್ಯಕರ (Healthy) ಮತ್ತು ಆಹ್ಲಾದಕರ ಸಿಹಿ ಪಾಕವಿಧಾನಗಳನ್ನು ನಾವು ನೋಡುತ್ತೇವೆ.

ನಾವೆಲ್ಲರೂ ನಮ್ಮ ಸಾಂಪ್ರದಾಯಿಕ ಸಿಹಿತಿಂಡಿಗಳನ್ನು ಪ್ರೀತಿಸುತ್ತೇವೆಯಾದರೂ, ಕ್ಲಾಸಿಕ್ ಪಾಕವಿಧಾನಗಳಿಗೆ ಹೊಸ ಮತ್ತು ಫಂಕಿ ತಿರುವನ್ನು ನೀಡುವುದು ಯಾವಾಗಲೂ ಉತ್ತಮ ಆಲೋಚನೆಯಾಗಿರುತ್ತದೆ ನೋಡಿ.

ಮಾವಿನ ಹಣ್ಣಿನ ಖೀರ್
ಖೀರ್ ಅಂತಹ ಒಂದು ಅದ್ಭುತ ಸಿಹಿತಿಂಡಿಯಾಗಿದ್ದು, ಹಬ್ಬಗಳ ಸಮಯದಲ್ಲಿ ಅಥವಾ ಇತರೇ ಸಂದರ್ಭಗಳಲ್ಲಿ ತಯಾರಿಸಿಕೊಂಡು ನಾವು ಆಗಾಗ್ಗೆ ಆನಂದಿಸುತ್ತೇವೆ. ಒಂದು ಅಕ್ಕಿ ಮತ್ತು ಹಾಲಿನ ಪುಡ್ಡಿಂಗ್, ಖೀರ್ ಅನ್ನು ತಣ್ಣಗೆ ಅಥವಾ ಆರಾಮದಾಯಕವಾಗಿ ಬೆಚ್ಚಗೆ ಬಡಿಸಿದರೂ ಸಹ ಅಷ್ಟೇ ರುಚಿಕರವಾಗಿರುತ್ತದೆ. ನಿಮ್ಮ ಸಿಹಿ ತಿಂಡಿಯ ಅನುಭವವನ್ನು ಹೆಚ್ಚಿಸಲು ನಿಮ್ಮ ಈ ಖೀರ್ ಗೆ ನಿಮಗೆ ಇಷ್ಟವಾದ ಮಾವಿನ ಹಣ್ಣನ್ನು ಸೇರಿಸಿದರೆ ಹೇಗಿರುತ್ತೆ ಗೊತ್ತೇ? ಮಾವಿನ ಹಣ್ಣಿನ ಖೀರ್ ಅನ್ನು ಮಾಡುವ ಪಾಕವಿಧಾನ ಇಲ್ಲಿದೆ.

ಹಣ್ಣುಗಳ ರಾಜ ಎಂದೂ ಕರೆಯಲ್ಪಡುವ ಮಾವನ್ನು ಸಿಹಿ ತಿಂಡಿಗಳಲ್ಲಿಯೂ ಸಹ ಬಳಸಲಾಗುತ್ತದೆ. ರಸಭರಿತ ಮತ್ತು ಸಿಹಿಯಾದ ಮಾವಿನಹಣ್ಣು ಈ ಮಾವಿನ ಖೀರ್ ಸೇರಿದಂತೆ ಯಾವುದೇ ಸಿಹಿತಿಂಡಿಯ ಪರಿಮಳವನ್ನು ಸಹ ಇನ್ನಷ್ಟು ಹೆಚ್ಚಿಸಬಹುದು. ಈ ಮಾವಿನ ಖೀರ್ ಅನ್ನು ತಯಾರಿಸಲು, ನಿಮಗೆ ಬೇಕಾಗಿರುವುದು ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ಸರಳ ಪದಾರ್ಥಗಳು. ನೀವು ಏನಾದರೂ ಸಿಹಿ ತಿಂಡಿ ಮಾಡಿಕೊಂಡು ತಿನ್ನಬೇಕು ಎಂದೆನಿಸಿದಾಗ ಈ ತ್ವರಿತವಾಗಿ ಮಾಡಿಕೊಳ್ಳಬಹುದಾದ ಪಾಕವಿಧಾನವನ್ನು ಅನುಸರಿಸಿ.

ಇದನ್ನೂ ಓದಿ:  Food Recipe: ನಿನ್ನೆಯ ಅನ್ನ ಮಿಕ್ಕಿದ್ಯಾ? ಹಾಗಿದ್ರೆ ಈ ಅನ್ನದ ಆರು ಟೇಸ್ಟಿ ರೆಸಿಪಿ ಟ್ರೈ ಮಾಡಿ

ಸಾಮಾನ್ಯವಾಗಿ, ಖೀರ್ ಅನ್ನು ತಯಾರಿಸಿಕೊಳ್ಳಬೇಕು ಎಂದರೆ ನಿಮಗೆ ಸಾಕಷ್ಟು ಸಮಯ ಬೇಕಾಗಬಹುದು, ಆದರೆ ಈ ಮಾವಿನ ಹಣ್ಣಿನ ಖೀರ್ ನಿಮಗೆ ತಿಳಿಯುವ ಮೊದಲೇ ಸಿದ್ಧವಾಗಿರುತ್ತದೆ. ಎಂದರೆ ಈ ಖೀರ್ ತಯಾರಿಸಲು ಅಷ್ಟೊಂದು ಸಮಯ ಬೇಕಿಲ್ಲ ಅಂತ ಅರ್ಥ. ಮಾವಿನ ಹಣ್ಣಿನ ಖೀರ್ ನ ಸಂಪೂರ್ಣ ಪಾಕವಿಧಾನವನ್ನು ಇಲ್ಲಿ ನೋಡೋಣ ಬನ್ನಿ.

ಮಾವಿನ ಹಣ್ಣಿನ ಖೀರ್ ತಯಾರಿಸುವುದು ಹೇಗೆ?

  • ಮೊದಲಿಗೆ ನೀವು ಒಂದು ಕಪ್ ಹಾಲನ್ನು ತೆಗೆದುಕೊಂಡು ಅದನ್ನು ಸ್ಟೋವ್ ಮೇಲೆ ಕುದಿಯಲು ಇಡುವುದರೊಂದಿಗೆ ಪ್ರಾರಂಭಿಸಬಹುದು. ನಂತರ ಇದಕ್ಕೆ ಒರಟಾಗಿ ರುಬ್ಬಿದ ಅಕ್ಕಿಯನ್ನು ಸೇರಿಸಿ ಮತ್ತು ಆ ಹಾಕಿದಂತಹ ಅಕ್ಕಿ ಚೆನ್ನಾಗಿ ಬೇಯುವವರೆಗೆ ಮತ್ತು ಆ ಹಾಲು ಸ್ವಲ್ಪ ದಪ್ಪಗಾಗುವವರೆಗೆ ಹಾಗೆಯೇ ಕುದಿಸಿರಿ.

  •  ನಂತರ ಈ ಖೀರ್ ಗೆ ನಿಮ್ಮ ರುಚಿಗೆ ತಕ್ಕಷ್ಟು ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿಕೊಳ್ಳಿರಿ. ನಂತರ ಇದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಕೋಣೆಯ ತಾಪಮಾನದಲ್ಲಿ ಇದನ್ನು ಪೂರ್ತಿಯಾಗಿ ತಣ್ಣಗಾಗಲು ಬಿಡಿ.

  • ಖೀರ್ ಮಿಶ್ರಣ ಪೂರ್ತಿಯಾಗಿ ತಣ್ಣಗಾದ ನಂತರ, ಅದಕ್ಕೆ ಮಾವಿನ ಪ್ಯೂರಿಯನ್ನು ಸೇರಿಸಿಕೊಳ್ಳಿರಿ. ಮಾವಿನ ಹಣ್ಣಿನ ರುಚಿಯನ್ನು ಖೀರ್ ನೊಂದಿಗೆ ಪರಿಪೂರ್ಣವಾಗಿ ಬೆರೆಸುವಂತೆ ಚೆನ್ನಾಗಿ ಮಿಶ್ರಣ ಮಾಡಿ. ಇಷ್ಟು ಮಾಡಿದರೆ ನಿಮ್ಮ ಮಾವಿನ ಖೀರ್ ಸಿದ್ಧವಾಗುತ್ತದೆ.


ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಮಕ್ಕಳಿಗೆ ಮಾಡಿಕೊಡಿ ಆಲೂ ರೋಲ್

  • ನಿಮ್ಮ ಆದ್ಯತೆಗೆ ಅನುಗುಣವಾಗಿ ಅದನ್ನು ತಣ್ಣಗೆ ಮಾಡಿಕೊಂಡು ಸರ್ವ್ ಮಾಡಿ. ಕೆಲವು ಕತ್ತರಿಸಿದ ಮಾವಿನ ತುಂಡುಗಳು ಮತ್ತು ಕೆಲವು ಪಿಸ್ತಾಗಳಿಂದ ಈ ಮಾವಿನ ಹಣ್ಣಿನ ಖೀರ್ ಅನ್ನು ಅಲಂಕರಿಸಲುಬಹುದು.

Published by:Ashwini Prabhu
First published: