ಸದ್ಯ ಮಾರುಕಟ್ಟೆಯಲ್ಲಿ ಕಾಲಿಟ್ಟರೇ ಮಾವಿನ (Mango) ಪರಿಮಳ ನಿಮ್ಮನ್ನು ಸೆಳೆಯುತ್ತದೆ. ಮಾರುಕಟ್ಟೆಯಲ್ಲಿ (Market) ಬಗೆ ಬಗೆಯ ಮಾವಿನ ಹಣ್ಣುಗಳು ಸಿಗುತ್ತಿವೆ. ಇನ್ನು ಮನೆಗಳಲ್ಲಿ ಮಾವಿನ ಹಣ್ಣಿನ ರೆಸಿಪಿಗಳು (Mango Recipe) ರಾರಾಜಿಸುತ್ತಿವೆ. ಸಾಮಾನ್ಯವಾಗಿ ಮಾವು ಬಳಸಿ ವಿವಿಧ ರೀತಿಯ ಸಿಹಿ ಅಡುಗೆಗಳನ್ನು (Sweet Recipe) ಮಾಡುತ್ತಾರೆ. ಸಿಹಿಯಾದ ಮಾವಿನ ಹಣ್ಣಿನ ಐಸ್ಕ್ರೀಂಗಳು ಹೆಚ್ಚು ಬೇಡಿಕೆ ಹೊಂದಿವೆ. ಮಲೆನಾಡು, ಕರಾವಳಿ ಭಾಗದಲ್ಲಿ ಮಾವು ಬಳಸಿ ವಿಶಿಷ್ಟವಾಗಿ ಅಡುಗೆ ಮಾಡುತ್ತಾರೆ. ಇನ್ನೂ ಜ್ಯೂಸ್ಗಳಂತೂ ಫ್ರಿಡ್ಜ್ಗಳಲ್ಲಿ ತಮ್ಮ ಸ್ಥಾನವನ್ನು ಖಾತ್ರಿ ಮಾಡಿಕೊಂಡಿರುತ್ತವೆ. ಆದ್ರೆ ಇಂದು ನಾವು ನಿಮಗೆ ಆಮ್ರಸ್ ದೋಸೆ (Aamras Dosa / Mango Dosa) ಮಾಡುವ ವಿಧಾನವನ್ನು ಹೇಳುತ್ತಿದ್ದೇವೆ. ಮಾವು ಪ್ರಿಯರಿಗೆ ಈ ದೋಸೆ ಖಂಡಿತ ಇಷ್ಟವಾಗುತ್ತದೆ.
ಕಳೆದ ಕೆಲವು ದಿನಗಳಿಂದ ಆಮ್ರಸ್ ದೋಸೆ ಮಾಡುವ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ ಕೆಲವರು ಹೀಗೆಲ್ಲಾ ಮಾಡ್ತಾರಾ ಅಂದ್ರೆ, ಒಂದಿಷ್ಟು ಜನರು ನಾವು ಮನೆಯಲ್ಲಿ ಈ ರೆಸಿಪಿ ಟ್ರೈ ಮಾಡಬಹುದು. ಮ್ಯಾಂಗೋ ದೋಸೆ ಮಾಡುವ ವಿಧಾನ ಇಲ್ಲಿದೆ.
ಮ್ಯಾಂಗೋ ದೋಸೆ ಮಾಡುವ ವಿಧಾನ
ಮಾವಿನ ಹಣ್ಣು: ದೊಡ್ಡ ಗಾತ್ರದ್ದು ಒಂದು
ದೋಸೆ ಹಿಟ್ಟು
ಗೋಡಂಬಿ: 4 ರಿಂದ 5
ಒಣದ್ರಾಕ್ಷಿ: 2 ರಿಂದ 3
ಬಾದಾಮಿ: 2 ರಿಂದ 3
ಏಲಕ್ಕಿ: ಒಂದು
ಸಕ್ಕರೆ ಪುಡಿ: ಒಂದು ಟೀ ಸ್ಪೂನ್
ತುಪ್ಪ
ಉಪ್ಪು
ಮ್ಯಾಂಗೋ ದೋಸೆ ಮಾಡುವ ವಿಧಾನ
*ಮೊದಲಿಗೆ ದೋಸೆ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ. ಮ್ಯಾಂಗೋ ದೋಸೆಗಾಗಿ ಪ್ರತ್ಯೇಕವಾಗಿ ಹಿಟ್ಟು ಮಾಡಿಕೊಳ್ಳುವ ಅಗತ್ಯವಿಲ್ಲ.
*ಮಾರುಕಟ್ಟೆಯಿಂದ ತಂದಿರುವ ಮಾವಿನ ಹಣ್ಣನ್ನು ಸ್ವಚ್ಛವಾಗಿ ತೊಳೆದುಕೊಂಡು ಇಡೀ ರಸವನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಮಾವಿನ ಹಣ್ಣಿನ ರಸವನ್ನು ಬೇಕಾದ್ರೆ ಮಿಕ್ಸಿ ಜಾರ್ಗೆ ರುಬ್ಬಿಕೊಳ್ಳಬಹುದು. ಆದರೆ ಮಾವಿನ ರಸ ಮಾಡುವಾಗ ನೀರು ಸೇರಿಸಬಾರದು.
*ಈ ಮಾವಿನ ಹಣ್ಣಿನ ರಸಕ್ಕೆ ಚಿಟಿಕೆ ಉಪ್ಪು, ಒಂದು ಟೀ ಸ್ಪೂನ್ ಸಕ್ಕರೆ ಮತ್ತು ಅರ್ಧ ಟೀ ಸ್ಪೂನ್ ಏಲಕ್ಕಿ ಪೌಡರ್ ಸೇರಿಸಿಕೊಂಡು ಚೆನ್ನಾಗಿ ಕಲಸಿ ಎತ್ತಿಟ್ಟುಕೊಳ್ಳಿ.
*ಈಗ ತೆಗೆದುಕೊಂಡಿರುವ ಗೋಡಂಬಿ, ಒಣದ್ರಾಕ್ಷಿ, ಬಾದಾಮಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ತದನಂತರ ಚಿಕ್ಕ ಪಾತ್ರೆಯೊಂದನ್ನು ಒಲೆ ಮೇಲೆ ಇರಿಸಿಕೊಳ್ಳಿ. ಕಡಿಮೆ ಉರಿಯಲ್ಲಿ ಒಂದು ಟೀ ಸ್ಪೂನ್ ತುಪ್ಪ ಹಾಕಿ ಕತ್ತರಿಸಿಕೊಂಡಿರುವ ಡ್ರೈ ಫ್ರೂಟ್ಸ್ ಸೇರಿಸಿ ಫ್ರೈ ಮಾಡಿಕೊಂಡು ಎತ್ತಿಟ್ಟುಕೊಳ್ಳಿ.
*ತದನಂತರ ಒಲೆ ಆನ್ ಮಾಡ್ಕೊಂಡು ಕಾವಲಿಯನ್ನು ಇರಿಸಿಕೊಳ್ಳಿ. ಕಾವಲಿ ಬಿಸಿ ಆಗುತ್ತಿದ್ದಂತೆ ತುಪ್ಪ ಸವರಿ ದಪ್ಪವಾಗಿ ಹಿಟ್ಟು ಹಾಕಬೇಕು. ಸಾಮಾನ್ಯ ದೋಸೆಯಂತೆ ಹಿಟ್ಟನ್ನು ಹಾಕಿ.
*ಎರಡು ನಿಮಿಷದ ಬಳಿಕ ದೋಸೆ ಮೇಲೆ ಸಿದ್ಧಮಾಡಿಕೊಂಡಿರುವ ಮಾವಿನ ಹಣ್ಣಿನ ರಸವನ್ನು ಹಾಕಿ ಸುತ್ತಲೂ ಸವರಿ ಮೇಲೆ ಫ್ರೈ ಮಾಡಿಕೊಂಡಿರುವ ಡ್ರೈ ಫ್ರೂಟ್ಸ್ ಹಾಕಿ ಮೇಲೆ ಎರಡು ಟೀ ಸ್ಪೂನ್ ತುಪ್ಪ ಹಾಕಿ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ ಎರಡು ನಿಮಿಷ ಬೇಯಿಸಿ.
ಇದನ್ನೂ ಓದಿ: Morning Breakfast: ರುಚಿಗಷ್ಟೇ ಅಲ್ಲ ಆರೋಗ್ಯಕ್ಕೂ ಒಳ್ಳೆಯದು ಜೀರಾ ಪುಲಾವ್! ಇಲ್ಲಿದೆ ಸಿಂಪಲ್ ರೆಸಿಪಿ
*ಕೊನೆಯದಾಗಿ ದೋಸೆಯನ್ನು ಕಟರ್ ವೀಲ್ (ಪಿಜ್ಜಾ ಕಟರ್) ಬಳಸಿ ನಾಲ್ಕು ಭಾಗಗಳಾಗಿ ಕತ್ತರಿಸಿಕೊಳ್ಳಿ. ತದನಂತರ ದೋಸೆಯನ್ನ ರೋಲ್ ರೀತಿ ಮಾಡಿ ಕಾವಲಿಯಿಂದ ತೆಗೆದ್ರೆ ರುಚಿಯಾದ ಮ್ಯಾಂಗೋ ದೋಸೆ ಸವಿಯಲು ಸಿದ್ಧ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ