Non Veg: ರೆಸ್ಟೊರೆಂಟ್​ಗೆ ಹೋಗೋದೇ ಬೇಡ ಮನೆಯಲ್ಲೂ ಮಾಡಬಹುದು ಕ್ರಿಸ್ಪಿ ಕೆಎಫ್​ಸಿ ಚಿಕನ್!

ಕೆಎಫ್​ಸಿ ಚಿಕನ್

ಕೆಎಫ್​ಸಿ ಚಿಕನ್

ಇನ್ಮುಂದೆ  ನಿಮಗೆ ಇಷ್ಟವಾದ ರುಚಿಕರವಾದ ಕೆಎಫ್​ಸಿ ಚಿಕನ್ ಅನ್ನು ಮನೆಯಲ್ಲಿಯೇ ಸುಲಭವಾಗಿ ಮಾಡುವ ವಿಧಾನವನ್ನು ನಾವು ಇಂದು ನಿಮಗೆ ತಿಳಿಸಲಿದ್ದೇವೆ. ಹಾಗಾದ್ರೆ ಕೆಎಫ್​ಸಿ ಚಿಕನ್ ಮಾಡುವುದೇಗೆ? ಅದನ್ನು ಮನೆಯಲ್ಲಿ ಬೇಯಿಸುವುದೇಗೆ? ಈ ಎಲ್ಲದರ ಕುರಿತ ಫುಲ್ ಡಿಟೇಲ್ಸ್​ ಈ ಕೆಳಗಿನಂತಿದೆ ಓದಿ.

ಮುಂದೆ ಓದಿ ...
 • Share this:

ಮಕ್ಕಳಿಂದ ಹಿಡಿದು ದೊಡ್ಡವರವರೆಗೂ KFC ಚಿಕನ್ (KFC Chicken) ಅನ್ನು ಜೊಲ್ಲು ಸುರಿಸಿಕೊಂಡು ತಿನ್ನುತ್ತಾರೆ. ಕೆಎಫ್​ಸಿ ಚಿಕನ್​ ಭಾರತದಲ್ಲಿ (India) ಮಾತ್ರವಲ್ಲದೇ ಪ್ರಪಂಚದಾದ್ಯಂತ ಸಿಕ್ಕಾಪಟ್ಟೆ ಫೇಮಸ್. KFC ಮೆಕ್ಡೊನಾಲ್ಡ್ಸ್ (Mcdonald) ನಂತರ ವಿಶ್ವದ ಎರಡನೇ ಅತಿದೊಡ್ಡ ರೆಸ್ಟೋರೆಂಟ್. ರಸ್ತೆಯಲ್ಲಿ ಹೋಗುವಾಗ ಕೆಎಫ್​ಸಿ ಬೋರ್ಡ್ ನೋಡಿದರೆ ಸಾಕು, ಕೆಎಫ್​ಸಿ ಚಿಕನ್ನತ್ತ ನಿಮ್ಮ ಗಮನ ಹೋಗುತ್ತದೆ. ಆಗ ಅಂಗಡಿಗೆ ಹೋಗಿ ಯಾವುದಾದರೂ ಫ್ರೈಡ್ ಚಿಕನ್ ಆರ್ಡರ್ ಮಾಡಿ, ತಿಂದು ತೃಪ್ತರಾಗುತ್ತೀರಾ. ಆದರೆ ಇನ್ಮುಂದೆ  ನಿಮಗೆ ಇಷ್ಟವಾದ ರುಚಿಕರವಾದ ಕೆಎಫ್​ಸಿ ಚಿಕನ್ ಅನ್ನು ಮನೆಯಲ್ಲಿಯೇ ಸುಲಭವಾಗಿ ಮಾಡುವ ವಿಧಾನವನ್ನು ನಾವು ಇಂದು ನಿಮಗೆ ತಿಳಿಸಲಿದ್ದೇವೆ. ಹಾಗಾದ್ರೆ ಕೆಎಫ್​ಸಿ ಚಿಕನ್ ಮಾಡುವುದೇಗೆ? ಅದನ್ನು ಮನೆಯಲ್ಲಿ ಬೇಯಿಸುವುದೇಗೆ? ಈ ಎಲ್ಲದರ ಕುರಿತ ಫುಲ್ ಡಿಟೇಲ್ಸ್​ ಈ ಕೆಳಗಿನಂತಿದೆ ಓದಿ.


ಕೆಎಫ್​ಸಿ ಚಿಕನ್


KFC ಚಿಕನ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು:


 • ಮೊಸರು - 1/2 ಕಪ್

 • ಹಾಲು - 1 ಕಪ್

 • ಮೊಟ್ಟೆ - 1

 • ಶುಂಠಿ ಪೇಸ್ಟ್ – 1 ಟೇಬಲ್ ಸ್ಪೂನ್

 • ಬೆಳ್ಳುಳ್ಳಿ ಪೇಸ್ಟ್ - 2 ಟೇಬಲ್ ಸ್ಪೂನ್

 • ಮೆಣಸಿನ ಪುಡಿ - 3 ಟೇಬಲ್ ಸ್ಪೂನ್

 • ಕಾಳುಮೆಣಸಿನ ಪುಡಿ - 2 ಟೇಬಲ್ ಸ್ಪೂನ್

 • ಉಪ್ಪು – ಅಗತ್ಯಕ್ಕೆ ತಕ್ಕಷ್ಟು

 • ನಿಂಬೆ ಹಣ್ಣು - ಅರ್ಧ

 • ಚಿಕನ್​ ಪೀಸ್​ಗಳು - 8

 • ಮೈದಾ - 1 ಕಪ್

 • ಕಾರ್ನ್ ಹಿಟ್ಟು - 1/2 ಕಪ್

 • ಧನಿಯಾ ಪುಡಿ - ½ ಟೀಸ್ಪೂನ್

 • ಜೀರಿಗೆ ಪುಡಿ - 1/2 ಟೀಸ್ಪೂನ್

 • ಬೆಳ್ಳುಳ್ಳಿ ಪುಡಿ - 1 ಟೇಬಲ್ ಸ್ಪೂನ್

 • ಎಣ್ಣೆ - ಅಗತ್ಯಕ್ಕೆ ತಕ್ಕಷ್ಟುಕೆಎಫ್​ಸಿ ಚಿಕನ್


KFC ಚಿಕನ್ ಮಾಡುವ ವಿಧಾನ:


 • ಮೊದಲು ಮೊಸರು, ಹಾಲು ಮತ್ತು ಮೊಟ್ಟೆಯನ್ನು ಒಡೆದು ಅಗಲವಾದ ಬಾಣಲೆಗೆ ಹಾಕಿ.

 • ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, 1 ಚಮಚ ಮೆಣಸು ಪುಡಿ, ಉಪ್ಪು, ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

 • ಈಗ, ಚಿಕನ್ ತುಂಡುಗಳನ್ನು ಮಿಶ್ರಣಕ್ಕೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ, ಫ್ರಿಜ್​ನಲ್ಲಿ 2 ಗಂಟೆಗಳ ಕಾಲ ನೆನೆಸಿಡಿ.

 • ನಂತರ, ತಟ್ಟೆಗೆ ಮೈದಾ, ಕಾರ್ನ್ ಫ್ಲೋರ್, ಧನಿಯಾ ಪುಡಿ, ಜೀರಿಗೆ ಪುಡಿ, ಬೆಳ್ಳುಳ್ಳಿ ಪೇಸ್ಟ್​, ಮೆಣಸು ಪುಡಿ ಮತ್ತು ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

 • ಅದಾದ ನಂತರ, ಈ ಹಿಟ್ಟಿನ ಮಿಶ್ರಣದಲ್ಲಿ ನೆನೆಸಿದ ಚಿಕನ್ ತುಂಡುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.


ಕೆಎಫ್​ಸಿ ಚಿಕನ್


 • ಈಗ ಬಾಣಲೆಯನ್ನು ಒಲೆಯ ಮೇಲಿಟ್ಟು ಅದರಲ್ಲಿ ಎಣ್ಣೆಯನ್ನು ಹಾಕಿ ಮತ್ತು ಚೆನ್ನಾಗಿ ಒಣಗಿಸಿ. ಎಣ್ಣೆ ಆರಿದ ನಂತರ ಸಿದ್ಧಪಡಿಸಿದ ಚಿಕನ್ ತುಂಡುಗಳನ್ನು ಹಾಕಿ

 • ಹೊಂಬಣ್ಣ (ಕೆಂಪು) ಬರುವವರೆಗೆ ಫ್ರೈ ಮಾಡಿದರೆ ರುಚಿಕರವಾದ ಕೆಎಫ್ ಸಿ ಫ್ರೈಡ್ ಚಿಕನ್ ಸವಿಯಲುಸಿದ್ಧ.


ನಿಮ್ಮ ರಜಾದಿನಗಳಲ್ಲಿ ಮನೆಯಲ್ಲಿ ಫ್ರೀ ಆಗಿದ್ದಾಗ ಕೆಎಫ್​ಸಿ ಚಿಕನ್​ ಅನ್ನು ಆದಷ್ಟು ಮನೆಯಲ್ಲಿಯೇ ತಯಾರಿಸಲು ಟ್ರೈ ಮಾಡಿ. ಇದರಿಂದ ಹೊರಗಡೆ ಹೋಗಿ ತಿನ್ನುವುದು ತಪ್ಪುತ್ತದೆ. ಜೊತೆಗೆ ನಿಮ್ಮ ಟೈಂ ಕೂಡ ಸೇವ್​ ಆಗುವುದರ ಜೊತೆಗೆ ಮನೆ ಮಂದಿಯಲ್ಲಾ ಒಟ್ಟಿಗೆ ಕುಳಿತುಕೊಂಡು ಆರಾಮವಾಗಿ ಕೆಎಫ್​ಸಿ ಚಿಕನ್ ಸವಿಯಬಹುದು.

Published by:Monika N
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು