• Home
  • »
  • News
  • »
  • lifestyle
  • »
  • Upma Recipe: ಮಕ್ಕಳಿಗೆ ಇಷ್ಟವಾಗುತ್ತೆ ಕಟ್ಟಾ ಮಿಟ್ಟಾ ಉಪ್ಪಿಟ್ಟು; ನೀವೂ ಟ್ರೈ ಮಾಡಿ ರೆಸಿಪಿ

Upma Recipe: ಮಕ್ಕಳಿಗೆ ಇಷ್ಟವಾಗುತ್ತೆ ಕಟ್ಟಾ ಮಿಟ್ಟಾ ಉಪ್ಪಿಟ್ಟು; ನೀವೂ ಟ್ರೈ ಮಾಡಿ ರೆಸಿಪಿ

ಉಪ್ಪಿಟ್ಟು

ಉಪ್ಪಿಟ್ಟು

ಇಂದಿನ ಮಕ್ಕಳು ಹೊರಗಿನ ತಿಂಡಿಯನ್ನು ಇಷ್ಟಪಡುತ್ತಾರೆ. ಕಾರಣ ಅದರಲ್ಲಿ ಕಟ್ಟಾ-ಮಿಟ್ಟಾ ರುಚಿ (Katta Mitta Taste) ಇರುತ್ತದೆ. ಹಾಗಾಗಿ ಇಂದು ನಿಮಗೆ ಕಟ್ಟಾ-ಮಿಟ್ಟಾ ಉಪ್ಪಿಟ್ಟು (Katta Mitta Upma) ಹೇಗೆ ತಯಾರಿಸಬೇಕು ಎಂಬುದನ್ನು ಹೇಳುತ್ತಿದ್ದೇವೆ.

  • Share this:

Katta Mitta Uppittu: ಉಪ್ಪಿಟ್ಟು (Uppittu/ Upma Recipe) ಸರ್ವಕಾಲಿಕ ಎಲ್ಲಾ ಭಾಗದಲ್ಲಿಯೂ ಸಲ್ಲಿಕೆಯಾಗುವ ತಿಂಡಿಯಾಗಿದೆ. ಬೆಳಗ್ಗೆ ಅಥವಾ ಸಂಜೆಯ ತಿಂಡಿಯಾಗಿಯೂ (Breakfast Recipe) ಉಪ್ಪಿಟ್ಟು ಸೇವಿಸಲಾಗುತ್ತದೆ. ಆದ್ರೆ ಉಪ್ಪಿಟ್ಟು ಮಾಡುವ ವಿಧಾನ ಭಾಗದಿಂದ ಭಾಗಕ್ಕೆ ಬದಲಾಗುತ್ತಾ  ಇರುತ್ತದೆ. ಇದು ಎಲ್ಲಾ ಪ್ರಾದೇಶಿಕತೆಗೂ ಹೊಂದಿಕೆಯಾಗುವ ಉಪಹಾರವಾಗಿದೆ. ಆದ್ದರಿಂದ ಬಹುತೇಕ ಮನೆಗಳಲ್ಲಿ ಉಪ್ಪಿಟ್ಟಿನ ಪರಿಮಳ (Uppittu Smell) ಇರುತ್ತದೆ. ಉಪ್ಪಿಟ್ಟು ಮಾಡುವಾಗ ನೀರಿನ ಪ್ರಮಾಣ ಪ್ರಮುಖವಾಗಿರುತ್ತದೆ. ಆದ್ದರಿಂದ ಎಷ್ಟು ನೀರು ಸೇರಿಸಬೇಕು ಎಂಬುದನ್ನು ತಿಳಿದುಕೊಂಡಿರಬೇಕು. ರೆಸ್ಟೊರೆಂಟ್, ಹೋಟೆಲ್​ಗಳಲ್ಲಿ ತಯಾರಿಸುವ ಉಪ್ಪಿಟ್ಟಿನಲ್ಲಿ ಅಧಿಕ ನೀರು ಬಳಕೆ ಮಾಡಲಾಗುತ್ತದೆ. ಆದ್ರೆ ಬಹುತೇಕರು ಡ್ರೈ ಉಪ್ಪಿಟ್ಟು ಇಷ್ಟಪಡುತ್ತಾರೆ. ಇನ್ನು ಉಪ್ಪಿಟ್ಟನ್ನು ತಯಾರಿಸಲು ಎರಡು ರವೆ (Rava) ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಒಂದು ದಪ್ಪ ರವೆ (ಬನ್ಸಿ), ಮತ್ತೊಂದು ಚಿರೋಟಿ ರವೆ (ಸಣ್ಣ ಅಥವಾ ಮುಂಬೈ). ಹಾಗಾಗಿ ಯಾವ ರವೆ ಬಳಕೆ ಮಾಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿ, ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಬೇಕು.


ಇಂದಿನ ಮಕ್ಕಳು ಹೊರಗಿನ ತಿಂಡಿಯನ್ನು ಇಷ್ಟಪಡುತ್ತಾರೆ. ಕಾರಣ ಅದರಲ್ಲಿ ಕಟ್ಟಾ-ಮಿಟ್ಟಾ ರುಚಿ (Katta Mitta Taste) ಇರುತ್ತದೆ. ಹಾಗಾಗಿ ಇಂದು ನಿಮಗೆ ಕಟ್ಟಾ-ಮಿಟ್ಟಾ ಉಪ್ಪಿಟ್ಟು (Katta Mitta Upma) ಹೇಗೆ ತಯಾರಿಸಬೇಕು ಎಂಬುದನ್ನು ಹೇಳುತ್ತಿದ್ದೇವೆ.


ಬೇಕಾಗುವ ಸಾಮಾಗ್ರಿಗಳು


*ದಪ್ಪ ರವೆ: ಒಂದು ಕಪ್


*ಟೊಮ್ಯಾಟೋ: ಒಂದು (ಚಿಕ್ಕದು)


*ಈರುಳ್ಳಿ: ಒಂದು (ಚಿಕ್ಕದು)


*ಕಡಲೆಬೀಜ: 10 ರಿಂದ 12


*ಹಸಿಮೆಣಸಿನಕಾಯಿ: ಎರಡು


*ಹುಣಸೆಹಣ್ಣಿನ ರಸ: 4 ರಿಂದ 5 ಟೀ ಸ್ಪೂನ್


*ಬೆಲ್ಲದ ಪುಡಿ: 2 ರಿಂದ 3 ಟೀ ಸ್ಪೂನ್


*ಕರೀಬೇವು: 4 ಎಲೆ


*ಜೀರಿಗೆ/ಸಾಸವೆ: 1 ಟೀ ಸ್ಪೂನ್


*ಉದ್ದಿನಬೇಳ: 1 ಟೀ ಸ್ಪೂನ್


*ಅರಿಶಿನ: ಚಿಟಿಕೆ


*ಕಡ್ಲೆಬೇಳೆ: 1 ಟೀ ಸ್ಪೂನ್


*ಎಣ್ಣೆ


*ಉಪ್ಪು: ರುಚಿಗೆ ತಕ್ಕಷ್ಟು


ಕಟ್ಟಾ-ಮಿಟ್ಟಾ ಉಪ್ಪಿಟ್ಟು ಮಾಡುವ ವಿಧಾನ


*ಮೊದಲಿಗೆ ಟೊಮ್ಯಾಟೋ, ಈರುಳ್ಳಿ, ಹಸಿ ಮೆಣಸಿನಕಾಯಿಯನ್ನು ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿರಿ


*ಒಂದು ಪ್ಯಾನ್​ಗೆ ರವೆಯನ್ನು ಹಾಕಿಕೊಂಡು ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ. ರವೆಯ ಪರಿಮಳ ಬರೋವರೆಗೂ ಚೆನ್ನಾಗಿ ಹುರಿದುಕೊಳ್ಳಬೇಕು. ಹುರಿದುಕೊಳ್ಳುವಾಗ ಒಂದು ಟೀ ಸ್ಪೂನ್​ನಷ್ಟು ಎಣ್ಣೆ ಬಳಸಬಹುದು.


ಇದನ್ನೂ ಓದಿ: Upma Recipe: ಒಮ್ಮೆ ತಿಂದ್ರೆ ಮತ್ತೆ ಮತ್ತೆ ಬೇಕೆನ್ನುವ ರುಚಿಯಾದ ಮಸಾಲೆ ಉಪ್ಪಿಟ್ಟು ಮಾಡುವ ವಿಧಾನ


*ಈಗ ಮತ್ತೊಂದು ಪ್ಯಾನ್ ಗ್ಯಾಸ್​ ಸ್ಟೌವ್ ಮೇಲಿಟ್ಟುಕೊಂಡು ಮೂರು ಟೀ ಸ್ಪೂನ್​ಗಳಷ್ಟು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸವೆ ಮತ್ತು ಜೀರಿಗೆ ಹಾಕಿ.


*ಸಾಸವೆ ಜೀರಿಗೆ ಸಿಡಿಯುತ್ತಿದ್ದಂತೆ ಉದ್ದಿನಬೇಳೆ, ಕಡಲೆಬೇಳೆ ಹಾಗೂ ಕಡಲೆಬೀಜ ಸೇರಿಸಿ ಕಂದು ಬಣ್ಣಕ್ಕೆ ಬರೋವರೆಗೂ ಫ್ರೈ ಮಾಡಿಕೊಳ್ಳಿ.


*ತದನಂತರ ಈರುಳ್ಳಿ ಹಾಕಿ ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿಕೊಳ್ಳಬೇಕು. ತದನಂತರ ಟೊಮ್ಯಾಟೋ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ ಮೂರರಿಂದ ನಾಲ್ಕು ನಿಮಿಷ ಫ್ರೈ ಮಾಡಬೇಕು.


*ತದನಂತರ ಚಿಟಿಕೆ ಅರಿಶಿನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಈಗ ಹುಣಸೆ ಹಣ್ಣಿನ ರಸ ಸೇರಿಸಿ. ಹುಣಸೆಹಣ್ಣಿನ ರಸ ಸೇರಿಸಿದ ನಂತರವೇ ಬೆಲ್ಲದ ಪುಡಿಯನ್ನು ಮಿಕ್ಸ್​ ಮಾಡಿಕೊಳ್ಳಿ. ಕೊನೆಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ನಿಮಿಷ ಬೇಯಿಸಿಕೊಳ್ಳಿ.


ಇದನ್ನೂ ಓದಿ:  Ragi Upma Recipe: ರಾಗಿ ಉಪ್ಪಿಟ್ಟು ರುಚಿ ಹೇಗಿರುತ್ತೆ ಗೊತ್ತಾ? ಇದನ್ನ ತಿಂದವರು ಹೇಳ್ತಾರೆ ವಾವ್, ವಾವ್!

 *ಈಗ ಸಿದ್ಧವಾದ ಮಸಾಲೆಗೆ ಎರಡೂವರೆ ಕಪ್​ಗಳಷ್ಟು ನೀರು ಹಾಕಿ ಮತ್ತೆ ನಾಲ್ಕರಿಂದ ಐದು ನಿಮಿಷ ಬೇಯಿಸಿ.


*ನೀರು ಕುದಿಯುತ್ತಿರುವಾಗ ಉರಿಯನ್ನು ಕಡಿಮೆ ಮಾಡ್ಕೊಂಡು ಹುರಿದುಕೊಂಡಿರುವ ರವೆಯನ್ನು ಸೇರಿಸಿ ಮೂರರಿಂದ ನಾಲ್ಕು ನಿಮಿಷ ಬೇಯಿಸಿದ್ರೆ ನಿಮ್ಮ ಕಟ್ಟಾ ಮಿಟ್ಟಾ ಉಪ್ಮಾ ಅಥವಾ ಉಪ್ಪಿಟ್ಟು ಸವಿಯಲು ಸಿದ್ಧವಾಗುತ್ತದೆ.


*ಈ ಉಪ್ಪಿಟ್ಟನ್ನು ಹಸಿಕೊಬ್ಬರಿ ಚಟ್ನಿ ಅಥವಾ ಚಟ್ನಿ ಪುಡಿ ಅಥವಾ ಮೊಸರಿನ ಜೊತೆ ಸೇವಿಸಬಹುದು.

Published by:Mahmadrafik K
First published: