Sunday Special Recipe: ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿಯ ಕಡಾಯಿ ಚಿಕನ್

Non veg: ಕಡಾಯಿ ಚಿಕನ್‌ ಇದು ನೀವು ರೆಸ್ಟೋರೆಂಟ್‌ಗಳಿಗೆ ಹೋದಾಗ ಮೆನುವಿನಲ್ಲಿ ಕಾಣ ಸಿಗುವ ಒಂದು ಐಟಂ ಆಗಿದೆ. ರೆಸ್ಟೋರೆಂಟ್‌ ರುಚಿಯಲ್ಲಿಯೇ ಕಡಾಯಿ ಚಿಕನ್ ಅನ್ನು ಮನೆಯಲ್ಲಿಯೂ ಮಾಡಬಹುದು.ಇನ್ನು ಈ ಕಡಾಯಿ ಚಿಕನ್‌ ಸೆಮಿ ಗ್ರೇವಿ ರೆಸಿಪಿಯಾಗಿದ್ದು ರೊಟ್ಟಿ/ನೀರುದೋಸೆ/ಅನ್ನ/ಚಪಾತಿಗೆ ಸೇರಿಸಿ ತಿನ್ನಲು ಸಖತ್ ಟೇಸ್ಟಿ ರೆಸಿಪಿಯಾಗಿದೆ

ಕಡಾಯಿ ಚಿಕನ್

ಕಡಾಯಿ ಚಿಕನ್

  • Share this:
    ಭಾನುವಾರ(Sunday)ಬಂತು ಅಂದ್ರೆ ಸಾಕು ಭಾನುವಾರದ ಬಾಡೂಟ (Non Veg food)ಮಾಡೋಕೆ ನಾನ್ ವೆಜ್(Non vegetarian)ಪ್ರಿಯರು ರೆಡಿ ಆಗಿರ್ತಾರೆ.. ಹೀಗಾಗಿ ಕೆಲವ್ರು ಹೋಟೆಲ್ ಗಳಿಗೆ (Hotel)ಹೋಗಿ ತಮ್ಮ ಭಾನುವಾರದ ಬಾಡೂಟ ಮಾಡಲು ವಿವಿಧ ಭೋಜನಗಳನ್ನು(Food) ಆಯ್ಕೆ ಮಾಡಿಕೊಳ್ಳುತ್ತಾರೆ.ಆದರೆ ಕೆಲವರಿಗೆ ಮನೆಯಲ್ಲಿ ನಾನ್ವೆಜ್ ತಿಂದಷ್ಟು ತೃಪ್ತಿ ಆಗುವುದಿಲ್ಲ.. ಹೀಗಾಗಿಯೇ ನಿಮ್ಮ ಭಾನುವಾರವನ್ನು ನಿಮಗ್ ಇಷ್ಟ ಬಂದ ರೀತಿಯಲ್ಲಿ ಅಡುಗೆ ಮಾಡಿಕೊಂಡು ತಿನ್ನಲು ಮನೆಯಲ್ಲಿಯೇ(Home) ವಿವಿಧ ಬಗೆಯ ಮಾಂಸಹಾರಿ ಅಡುಗೆಗಳನ್ನು ಮಾಡಿಕೊಳ್ಳಬಹುದು.. ಅದರಲ್ಲೂ ರೆಸ್ಟೋರೆಂಟ್ (Restaurants)ಶೈಲಿಯ (Style)ಆಹಾರ ಪದಾರ್ಥ ಇಷ್ಟಪಡುವವರು ಕಡಾಯಿ ಚಿಕನ್ ಮಾಡಿಕೊಂಡು ಸೇವನೆ ಮಾಡಬಹುದು. ಕಡಾಯಿ ಚಿಕನ್ ಮಾಡುವ ವಿಧಾನ ಇಲ್ಲಿದೆ

    ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿಯ ಕಡಾಯಿ ಚಿಕನ್

    ಕಡಾಯಿ ಚಿಕನ್‌ ಇದು ನೀವು ರೆಸ್ಟೋರೆಂಟ್‌ಗಳಿಗೆ ಹೋದಾಗ ಮೆನುವಿನಲ್ಲಿ ಕಾಣ ಸಿಗುವ ಒಂದು ಐಟಂ ಆಗಿದೆ. ರೆಸ್ಟೋರೆಂಟ್‌ ರುಚಿಯಲ್ಲಿಯೇ ಕಡಾಯಿ ಚಿಕನ್ ಅನ್ನು ಮನೆಯಲ್ಲಿಯೂ ಮಾಡಬಹುದು.ಇನ್ನು ಈ ಕಡಾಯಿ ಚಿಕನ್‌ ಸೆಮಿ ಗ್ರೇವಿ ರೆಸಿಪಿಯಾಗಿದ್ದು ರೊಟ್ಟಿ/ನೀರುದೋಸೆ/ಅನ್ನ/ಚಪಾತಿಗೆ ಸೇರಿಸಿ ತಿನ್ನಲು ಸಖತ್ ಟೇಸ್ಟಿ ರೆಸಿಪಿಯಾಗಿದೆ. ಹಾಗಿದ್ರೆ ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಹೇಗೆ ಕಡಾಯಿ ಚಿಕನ್ ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ.

    ಇದನ್ನೂ ಓದಿ: ವೀಕೆಂಡ್ ಸ್ಪೆಷಲ್ ಮಲಬಾರ್ ಧಮ್ ಬಿರಿಯಾನಿ ಮನೆಯಲ್ಲಿಯೇ ಮಾಡೋದು ಹೇಗೆ ಗೊತ್ತಾ..?

    ಕಡಾಯಿ ಚಿಕನ್ ಮಾಡಲು ಬೇಕಾಗುವ ಪದಾರ್ಥ

    *1 ಚಮಚ ಕಾಳು ಮೆಣಸು
    *2 ಚಮಚ ಕೊತ್ತಂಬರಿ ಬೀಜ
    *2 ಚಮಚ ಜೀರಿಗೆ
    *3 ಚಮಚ ತುಪ್ಪ
    *1 ಪಲಾವ್‌ ಎಲೆ
    *4 ಈರುಳ್ಳಿ
    *6 ಬೆಳ್ಳುಳ್ಳಿ ಎಸಳು
    *ಸ್ವಲ್ಪ ಶುಂಠಿ
    *1-2 ಮೆಣಸಿನ ಕಾಯಿ
    *1 ಚಮಚ ಖಾರದ ಪುಡಿ
    *1 ಚಮಚ ಖಾರದ ಪುಡಿ
    *1 ಚಮಚ ಅರಿಶಿಣ ಪುಡಿ
    *1/2 ಕೆಜಿ ಚಿಕನ್
    *3 ಟೊಮೆಟೊ
    *1 ಕ್ಯಾಪ್ಸಿಕಂ
    *ಉಪ್ಪು
    *ಮಾವಿನ ಕಾಯಿ ಪುಡಿ

    ಕಡಾಯಿ ಚಿಕನ್ ಮಾಡುವ ವಿಧಾನ

    ಮೊದಲಿಗೆ ಕಾಳುಮೆಣಸು, ಜೀರಿಗೆ, ಕೊತ್ತಂಬರಿ ಬೀಜ ಇವುಗಳನ್ನು ಹುರಿಯಿರಿ. ನಂತರ ಅವುಗಳನ್ನು ತರಿತರಿಯಾಗಿ ರುಬ್ಬಿಕೊಳ್ಳಿ. ಬಳಿಕ ಈಗ ಪ್ಯಾನ್‌ಗೆ ತುಪ್ಪ ಹಾಕಿ ಹಾಕಿ ಬಿಸಿ ಮಾಡಿ, ನಂತರ ಪಲಾವ್‌ ಎಲೆ ಹಾಕಿ ಈರುಳ್ಳಿ ಹಾಕಿ ಅದು ಕಂದು ಬಣ್ಣಕ್ಕೆ ತಿರುಗುವಷ್ಟು ಹೊತ್ತು ಫ್ರೈ ಮಾಡಿ.ಕತ್ತರಿಸಿದ ಒಣ ಮಾವಿನಕಾಯಿ ಪುಡಿ, ಗರಂ ಮಸಾಲ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ.

    ಇದನ್ನೂ ಓದಿ: ಸಿಂಪಲ್​​ ಈರುಳ್ಳಿ ಚಿಕನ್​ ಗ್ರೇವಿ: 20 ನಿಮಿಷದಲ್ಲೇ ರೆಡಿ, ಕೊಂಚ ಖಾರ-ಸಖತ್​ ರುಚಿ​!

    ನಂತರ ಶುಂಠಿ, ಬೆಳ್ಳುಳ್ಳಿ ಜಜ್ಜಿ ಹಾಕಿ 2 ಸೆಕೆಂಡ್‌ ಸೌಟ್‌ನಿಂದ ಆಡಿಸಿ. ನಂತರ ತರಿತರಿಯಾಗಿ ರುಬ್ಬಿದ ಮಸಾಲೆ ಹಾಕಿ.ನಂತರ ಚಿಕನ್ ಹಾಕಿ ಮಿಕ್ಸ್‌ ಮಾಡಿ. ಬಳಿಕ ಚಿಕನ್‌ ಮಸಾಲೆ ಜೊತೆ ಮಿಕ್ಸ್‌ ಆದ ಮೇಲೆ ಟೊಮೆಟೊ ಪೇಸ್ಟ್, ಕ್ಯಾಪ್ಸಿಕಂ ಹಾಕಿ 2-3 ನಿಮಿಷ ಸೌಟ್‌ನಿಂದ ಆಡಿಸುತ್ತಾ ಇರಿ.

    ಬಿಸಿ ಬಿಸಿ ಅನ್ನ, ರೊಟ್ಟಿ, ಚಪಾತಿ

    ನಂತರ ಅರಿಶಿಣ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಜೊತಗೆ ತಾಜಾ ತೆಂಗಿನಕಾಯಿ ಹಾಲು ಹಾಕಿ ಮಿಕ್ಸ್‌ ಮಾಡಿ 25-30 ನಿಮಿಷ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ. ಹೀಗೆ ಬೇಯಿಸುವಾಗ ಆಗಾಗ ತಿರುಗಿಸುತ್ತಾ ಇರಿ. ಹೀಗೆ ಮಾಡಿದ್ರೆ ಮನೆಯಲ್ಲಿಯೇ ರೆಸ್ಟೋರೆಂಟ್ ಶೈಲಿಯ ಕಡಾಯಿ ಚಿಕನ್ ಬಿಸಿ ಬಿಸಿ ಅನ್ನ, ರೊಟ್ಟಿ, ಚಪಾತಿ, ನೀರ್ ದೋಸೆ,  ದೋಸೆ ಜೊತೆಗೆ ಸವಿಯಲು ಸಿದ್ದ.
    Published by:ranjumbkgowda1 ranjumbkgowda1
    First published: