• Home
  • »
  • News
  • »
  • lifestyle
  • »
  • DIY Hacks: ಕೆಮಿಕಲ್ಸ್​ ಇಲ್ಲದೇ ಮನೆಯಲ್ಲಿಯೇ ಪಾತ್ರೆ ತೊಳೆಯುವ ಲಿಕ್ವಿಡ್​ ನೀವೇ ಮಾಡಿ

DIY Hacks: ಕೆಮಿಕಲ್ಸ್​ ಇಲ್ಲದೇ ಮನೆಯಲ್ಲಿಯೇ ಪಾತ್ರೆ ತೊಳೆಯುವ ಲಿಕ್ವಿಡ್​ ನೀವೇ ಮಾಡಿ

ಸಾಂದರ್ಭಿಕ  ಚಿತ್ರ

ಸಾಂದರ್ಭಿಕ ಚಿತ್ರ

Homemade Dish Wash Liquid: ಪಾತ್ರೆ ತೊಳೆಯುವಾಗ ನೊರೆ ಬಂದರೆ, ಗುಳ್ಳೆ ಬಂದರೆ ಮಾತ್ರ ಅದು ಒಳ್ಳೆ ಪಾತ್ರೆ ತೊಳೆಯುವ ದ್ರವ ಎನ್ನುವ ಭಾವನೆಯಲ್ಲಿ ನಮ್ಮ ಜನ ಇದ್ದಾರೆ. ಆದರೆ ಇದು ಸತ್ಯವಲ್ಲ, ನೈಸರ್ಗಿಕವಾಗಿ ತಯಾರಿಸಿದ ದ್ರವದಲ್ಲಿ ಗುಳ್ಳೆಗಳು ಕಾಣಿಸುವುದಿಲ್ಲ.

  • Share this:

ಪಾತ್ರೆಗಳನ್ನು ತೊಳೆಯುವುದು ದಿನನಿತ್ಯದ ಪ್ರಮುಖ ಕೆಲಸಗಳಲ್ಲಿ (Important Work). ಪಾತ್ರೆಗಳನ್ನು ತೊಳೆಯಲು ಸರಾಸರಿ 15 ನಿಮಿಷದಿಂದ ಒಂದು ಗಂಟೆಯವರೆಗೆ ಹೆಚ್ಚಿನ ಜನರು ಕಳೆಯುತ್ತಾರೆ ಎಂದು ಹಲವಾರು ಅಧ್ಯಯನಗಳು (Research)  ಸಾಬೀತು ಮಾಡಿದೆ. ಆದರೆ ನೀವು ಹೆಚ್ಚು ಪಾತ್ರೆ ತೊಳೆಯುವುದರಿಂದ, ಪಾತ್ರೆ ತೊಳೆಯುವ ದ್ರವದಲ್ಲಿರುವ ರಾಸಾಯನಿಕಗಳು 9Dish Wash Liquid) ನಿಮ್ಮ ಕೈಗಳಿಗೆ ಹಾನಿ ಮಾಡಬಹುದು. ಈ ರಾಸಾಯನಿಕಗಳು (Chemicals) ಮಾನವ ದೇಹಕ್ಕೆ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಚರ್ಮದ ಮೇಲೆ ಅಲರ್ಜಿಗಳು ಸಹ ಉಂಟಾಗಬಹುದು. ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ನೀವು ಮನೆಯಲ್ಲಿಯೇ ನೈಸರ್ಗಿಕವಾಗಿ ತಯಾರಿಸಿದ ಪಾತ್ರೆಗಳನ್ನು ತೊಳೆಯುವ ದ್ರವವನ್ನು ಬಳಸಬಹುದು.


ಪಾತ್ರೆ ತೊಳೆಯುವಾಗ ನೊರೆ ಬಂದರೆ, ಗುಳ್ಳೆ ಬಂದರೆ ಮಾತ್ರ ಅದು ಒಳ್ಳೆ ಪಾತ್ರೆ ತೊಳೆಯುವ ದ್ರವ ಎನ್ನುವ ಭಾವನೆಯಲ್ಲಿ ನಮ್ಮ ಜನ ಇದ್ದಾರೆ. ಆದರೆ ಇದು ಸತ್ಯವಲ್ಲ, ನೈಸರ್ಗಿಕವಾಗಿ ತಯಾರಿಸಿದ ದ್ರವದಲ್ಲಿ ಗುಳ್ಳೆಗಳು ಕಾಣಿಸುವುದಿಲ್ಲ. ಆದರೆ ಈ ನೈಸರ್ಗಿಕ ಪಾತ್ರೆ ತೊಳೆಯುವ ದ್ರವವು ಸಾಮಾನ್ಯವಾಗಿ ಕೊಳೆಯನ್ನು ಸುಲಭವಾಗಿ ಮತ್ತು ಸಂಪೂರ್ಣವಾಗಿ ತೆಗೆದುಹಾಕುತ್ತದೆ.


ನೈಸರ್ಗಿಕ ಪಾತ್ರೆ ತೊಳೆಯುವ ದ್ರವವನ್ನು ತಯಾರಿಸಲು ನೀವು ಆನ್‌ಲೈನ್‌ನಲ್ಲಿ ಬಹಳಷ್ಟು ವಿಧಾನಗಳನ್ನು ನೋಡಿರುತ್ತೀರಿ ಆದರೆ ಹೆಚ್ಚಾಗಿ ಅನೇಕ ಜನರು ಇದನ್ನು ಮಾಡುವಲ್ಲಿ ವಿಫಲರಾಗುತ್ತಾರೆ. ಜನರು ಮನೆಯಲ್ಲಿ ಪ್ರಯೋಗ ಮಾಡಲು ಹಿಂಜರಿಯಲು ಇದು ಒಂದು ಕಾರಣವಾಗಿದೆ.


ನೀವು ಅರ್ಥಮಾಡಿಕೊಳ್ಳಬೇಕಾದ ಇನ್ನೊಂದು ವಿಷಯವೆಂದರೆ ಮನೆಯಲ್ಲಿ ತಯಾರಿಸಿದ ಪಾತ್ರೆ ತೊಳೆಯುವ ದ್ರವವು ಸಾಕಷ್ಟು ಗುಳ್ಳೆಗಳನ್ನು ಹೊಂದಿರುವುದಿಲ್ಲ. ಏಕೆಂದರೆ ಆ ಗುಳ್ಳೆಗಳು ಅನೇಕ ರಾಸಾಯನಿಕಗಳಿಂದ ಉಂಟಾಗುತ್ತದೆ.


ಹಾಗೆಯೇ, ರಾಸಾಯನಿಕಗಳು ಬೆರೆಸಿದ ದ್ರವಕ್ಕಿಂತ ಹೆಚ್ಚಾಗಿ ದೇಹಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ನೈಸರ್ಗಿಕವಾಗಿ ಪಾತ್ರೆ ತೊಳೆಯುವ ದ್ರವವನ್ನು ಹೇಗೆ ತಯಾರಿಸುವುದು ಎನ್ನುವುದು ಇಲ್ಲಿದ್ದು, ನೀವೂ ಟ್ರೈ ಮಾಡಬಹುದು.


ಲಿಕ್ವಿಡ್ ತಯಾರಿಸಲು ಬೇಕಾಗುವ ಸಾಮಗ್ರಿಗಳು:


ಒಂದು ಕಪ್ ಅಂಟುವಾಳ ಕಾಯಿ


ಎರಡು ಕಪ್ ನೀರು


¼ ಕಪ್ ಕಲ್ಲು ಉಪ್ಪು


7 ನಿಂಬೆಹಣ್ಣುಗಳು


ನಾಲ್ಕು ಟೇಬಲ್ಸ್ಪೂನ್ ಬಿಳಿ ವಿನೆಗರ್​


ಇದನ್ನೂ ಓದಿ: ಈ ಸಿಂಪಲ್ ಹ್ಯಾಕ್ಸ್​ಗಳನ್ನು ಬಳಸಿದ್ರೆ ನಿಮ್ಮ ಅಡುಗೆ ಮನೆ ಬೇಗ ಕ್ಲೀನ್ ಆಗುತ್ತೆ



ಲಿಕ್ವಿಡ್​ ಮಾಡುವ ವಿಧಾನ: 


ಮೊದಲು ಅಂಟುವಾಳ ಕಾಯಿ ಬೀಜಗಳನ್ನು ತೆಗೆದುಕೊಂಡು 8-9 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಮರುದಿನ, ಒಂದು ಪಾತ್ರೆ ನೀರನ್ನು ತೆಗೆದುಕೊಂಡು ಅದಕ್ಕೆ ನೆನೆಸಿದ ಈ ಅಂಟುವಾಳ ಕಾಯಿ ಬೀಜಗಳನ್ನು ಹಾಕಿ ಕುದಿಸಿ. ಅದು ಕುದಿಯುತ್ತಿರುವಾಗ, ನಿಂಬೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಹಾಕಬೇಕು.


ನಂತರ ಮಿಶ್ರಣವನ್ನು ಗ್ಯಾಸ್​ನಿಂದ ತೆಗೆದು, ಅದನ್ನು ತಣ್ಣಗಾಗಲು ಬಿಡಿ. ಈಗ ಬೀಜಗಳನ್ನು ಮಾತ್ರ ಹೊರಗೆ ತೆಗೆದು, ಅದರಿಂದ ಸಿಪ್ಪೆ ತೆಗೆಯಿರಿ. ಈಗಾಗಲೇ ಅದು ಬಿಸಿ ಆಗಿರುವುದರಿಂದ ಸಿಪ್ಪೆ ತೆಗೆಯುವುದು ಸುಲಭವಾಗುತ್ತದೆ.


ನಂತರ ಈ ಮಿಶ್ರಣವನ್ನು ಮಿಕ್ಸಿಗೆ ಹಾಕಿ ಪೇಸ್ಟ್ ನುಣ್ಣಗೆ, ಚೆನ್ನಾಗಿ ಆಗುವಂತೆ ರುಬ್ಬಿಕೊಳ್ಳಿ. ಈಗ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಕಲ್ಲು ಉಪ್ಪು ಮತ್ತು ಅರ್ಧ ಕಪ್ ಬಿಳಿ ವಿನೆಗರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಐದಾರು ನಿಮಿಷಗಳ ಕಾಲ ಕುದಿಸಿ.


ಇದನ್ನೂ ಓದಿ: ಚಪಾತಿ ಇಷ್ಟ ಅಂತ ಜಾಸ್ತಿ ತಿನ್ಬೇಡಿ, ಈ ಸಮಸ್ಯೆಗಳು ಶುರುವಾಗುತ್ತೆ


ಚೆನ್ನಾಗಿ ಕುದ್ದ ನಂತರ ಸ್ಟವ್ ಆಫ್ ಮಾಡಿ ಮಿಶ್ರಣವನ್ನು ತಣ್ಣಗಾಗಲು ಬಿಡಿ. ನಂತರ ಈ ಮಿಶ್ರಣವನ್ನು  ನಿಮ್ಮ ಪಾತ್ರೆ ತೊಳೆಯುವ ಲಿಕ್ವಿಡ್​ ಇದ್ದ ಬಾಟಲ್​ಗೆ ಹಾಕಿ. ಈಗ ಎಲ್ಲಾ ನೈಸರ್ಗಿಕ ಪಾತ್ರೆಗಳನ್ನು ತೊಳೆಯುವ ದ್ರವವು ನಿಮ್ಮ ಚರ್ಮ ಅಥವಾ ದೇಹಕ್ಕೆ ಹಾನಿ ಮಾಡುವುದಿಲ್ಲ ಮತ್ತು ನಿಮ್ಮ ಪಾತ್ರೆಗಳನ್ನು ಸ್ವಚ್ಛ ಮಾಡುತ್ತದೆ ಮತ್ತು ಕೊಳಕು ಜೀವಿಗಳನ್ನು ತೆಗೆದುಹಾಕುತ್ತದೆ. ಇದರಿಂದ ಮನೆಯಲ್ಲಿಯೇ ಲಿಕ್ವಿಡ್​ ಮಾಡುವುದು ನಿಜಕ್ಕೂ ಸುಲಭ ಹಾಗೂ ಆರೋಗ್ಯಕರ.

Published by:Sandhya M
First published: