Coconut Recipe: ತೆಂಗಿನಕಾಯಿ ನಿಂಬೆ ಪಾನಕ ಸೇವನೆ ಮಾಡಿದ್ರೆ ಸಾಕು ದೇಹ ಹೈಡ್ರೇಟ್​ ಆಗಿರುತ್ತೆ

ನಿಮಗೆ ಸಾದಾ ನೀರನ್ನು ಕುಡಿಯಲು ಮನಸ್ಸಾಗದೇ ಇದ್ದರೆ ನೀವು ಜಲಸಂಚಯನ ಕಾಪಾಡಿಕೊಳ್ಳಲು ಕೆಲವು ಪರ್ಯಾಯ ದ್ರವ ಪದಾರ್ಥಗಳನ್ನು ಸೇವನೆ ಮಾಡಬಹುದು. ನೀವು ನಿಂಬೆ ಪಾನಕ ಜ್ಯೂಸ್ ಹೀಗೆ ಹಲವು ಪದಾರ್ಥ ಸೇವಿಸಬಹುದು. ಆರೋಗ್ಯಕರ ತೆಂಗಿನಕಾಯಿ ನಿಂಬೆ ಪಾನಕ ರೆಸಿಪಿ ಕೂಡ ನಿಮಗೆ ಹೆಚ್ಚು ಲಾಭಕಾರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ತಜ್ಞರು (Experts) ದೇಹವನ್ನು (Body) ಹೈಡ್ರೇಟ್ (Hydrate) ಆಗಿಡಲು ಮತ್ತು ಆರೋಗ್ಯದ (Health) ದೃಷ್ಟಿಯಿಂದ ಹೆಚ್ಚು ಹೆಚ್ಚು ನೀರು (Water) ಕುಡಿಯಬೇಕು. ಅದರಲ್ಲೂ ದಿನಕ್ಕೆ ಏಳರಿಂದ ಎಂಟು ಗ್ಲಾಸ್ ನೀರು ಕುಡಿಯಬೇಕು ಎಂದು ಸಲಹೆ ನೀಡುತ್ತಾರೆ. ಆದರೆ ಕೆಲವರು ಪದೇ ಪದೇ ಸಾದಾ ಬರೀ ನೀರನ್ನು ಕುಡಿಯಲು ಮನಸ್ಸು ಮಾಡಲ್ಲ. ಹಾಗಾಗಿ ಎಷ್ಟೋ ಬಾರಿ ನೀರು ಕುಡಿಯದೇ ಇದ್ದು ಬಿಡ್ತಾರೆ. ಆದರೆ ಹೀಗೆ ಮಾಡುವುದು ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆ ಹೆಚ್ಚು. ಹಾಗಾಗಿ ಮನಸ್ಸಿರಲಿ, ಇಲ್ಲದಿರಲಿ ಚೆನ್ನಾಗಿ ನೀರು ಕುಡಿಯುವುದು ತುಂಬಾ ಮುಖ್ಯ. ಬೆಳಗ್ಗೆ ಎದ್ದ ಕೂಡಲೇ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿಯುವ ಮೂಲಕ ದಿನವನ್ನು ಆರಂಭಿಸಬೇಕು.

   ಆರೋಗ್ಯಕರ ತೆಂಗಿನಕಾಯಿ ನಿಂಬೆ ಪಾನಕ ರೆಸಿಪಿ

  ಒಂದು ವೇಳೆ ನಿಮಗೆ ಸಾದಾ ನೀರನ್ನು ಕುಡಿಯಲು ಮನಸ್ಸಾಗದೇ ಇದ್ದರೆ ನೀವು ಜಲಸಂಚಯನ ಕಾಪಾಡಿಕೊಳ್ಳಲು ಕೆಲವು ಪರ್ಯಾಯ ದ್ರವ ಪದಾರ್ಥಗಳನ್ನು ಸೇವನೆ ಮಾಡಬಹುದು. ನೀವು ನಿಂಬೆ ಪಾನಕ, ಜ್ಯೂಸ್ ಹೀಗೆ ಹಲವು ಪದಾರ್ಥ ಸೇವಿಸಬಹುದು. ಆರೋಗ್ಯಕರ ತೆಂಗಿನಕಾಯಿ ನಿಂಬೆ ಪಾನಕ ರೆಸಿಪಿ ಕೂಡ ನಿಮಗೆ ಹೆಚ್ಚು ಲಾಭಕಾರಿ.

  ತೆಂಗಿನಕಾಯಿ ನೀರು ಮತ್ತು ತೆಂಗಿನಕಾಯಿ ಕ್ರೀಮ್‌ನಿಂದ ಮಾಡಿದ ವಿಶೇಷ ಪಾಕ ವಿಧಾನ ಇದಾಗಿದೆ. ಇದು ಸೌಮ್ಯವಾದ ನಿಂಬೆ ಪರಿಮಳ ಹೊಂದಿರುತ್ತದೆ.

  ಇದನ್ನೂ ಓದಿ: ನಾಲಿಗೆ ಮೇಲೆ ಈ ರೀತಿ ಆದಲ್ಲಿ ವಿಟಮಿನ್ ಡಿ ಕೊರತೆಯಂತೆ, ಎಚ್ಚರ ವಹಿಸಿ

  ತೆಂಗಿನಕಾಯಿ ನಿಂಬೆ ಪಾನಕ ರೆಸಿಪಿ ತಯಾರಿಸಲು ಬೇಕಾದ ಪದಾರ್ಥಗಳು

  ತೆಂಗಿನ ನೀರು ಒಂದು ಕಪ್, ತೆಂಗಿನ ಕೆನೆ ಒಂದು ಕಪ್, ನಿಂಬೆ ರಸ 2 ಟೀಸ್ಪೂನ್, ಜೇನುತುಪ್ಪ 2 ಟೀಸ್ಪೂನ್, ಅಲಂಕಾರಕ್ಕಾಗಿ ತುಳಸಿ ಎಲೆಗಳು, ಅಲಂಕರಿಸಲು ನಿಂಬೆ ಚೂರು.

  ತೆಂಗಿನಕಾಯಿ ನಿಂಬೆ ಪಾನಕ ರೆಸಿಪಿ ತಯಾರಿಸುವ ವಿಧಾನ

  ಒಂದು ಬಟ್ಟಲಿನಲ್ಲಿ ನಿಂಬೆ ರಸ ತೆಗೆದುಕೊಳ್ಳಿ. ಜೇನುತುಪ್ಪ ಮತ್ತು ತೆಂಗಿನಕಾಯಿ ಕ್ರೀಮ್ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ತೆಂಗಿನ ನೀರು ಸೇರಿಸಿ ಮತ್ತು ಮತ್ತೆ ಮಿಶ್ರಣ ಮಾಡಿ. ಕತ್ತರಿಸಿದ ತುಳಸಿ ಎಲೆ ಸೇರಿಸಿ, ಮಿಶ್ರಣ ಮಾಡಿ.

  ತೆಂಗಿನಕಾಯಿ ತಿರುಳನ್ನು ಒರಟಾಗಿ ಕತ್ತರಿಸಿ. ಪ್ರತ್ಯೇಕ ಸರ್ವಿಂಗ್ ಗ್ಲಾಸ್‌ ಗೆ ಹಾಕಿರಿ. ನಂತರ ನಿಂಬೆ ಚೂರು ಮತ್ತು ತುಳಸಿ ಎಲೆಗಳಿಂದ ಅಲಂಕರಿಸಿ.

  ತೆಂಗಿನಕಾಯಿ ನಿಂಬೆ ಪಾನಕ ರೆಸಿಪಿ ಪೌಷ್ಟಿಕಾಂಶದ ಮೌಲ್ಯ ಹೀಗಿದೆ

  ಕ್ಯಾಲೋರಿ: 234 ಕೆ.ಸಿ.ಎಲ್

  ಕಾರ್ಬೋಹೈಡ್ರೇಟ್ಗಳು: 3.8 ಗ್ರಾಂ

  ಪ್ರೋಟೀನ್: 36.9 ಗ್ರಾಂ

  ಕೊಬ್ಬು: 7.9 ಗ್ರಾಂ

  ಇತರೆ: ಕ್ಯಾಲ್ಸಿಯಂ - 100.5 ಮಿಗ್ರಾಂ

  ತೆಂಗಿನಕಾಯಿ ನಿಂಬೆ ಪಾನಕ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ?

  ದೇಹದಲ್ಲಿ ಸರಿಯಾದ ಜಲಸಂಚಯನ ಕಾಪಾಡಿಕೊಳ್ಳಲು ಇದು ಅವಶ್ಯಕ. ಸರಿಯಾದ ಪ್ರಮಾಣದ ವಿಟಮಿನ್ ಸಿ ಮತ್ತು ಎಲೆಕ್ಟ್ರೋಲೈಟ್‌ ಹೊಂದಿದೆ. ಇದು ನಿಮಗೆ ಉಲ್ಲಾಸ ನೀಡುತ್ತದೆ. ವಿಟಮಿನ್ಗಳು ಮತ್ತು ಖನಿಜ ಹೊಂದಿದೆ. ಇದು ನಿಮ್ಮನ್ನು ಪೋಷಿಸುತ್ತದೆ. ಮತ್ತು ಚರ್ಮಕ್ಕೆ ಉತ್ತಮ ಹೊಳಪನ್ನು ತರಲು ಸಹಾಯ ಮಾಡುತ್ತದೆ.

  ಈ ಪಾಕವಿಧಾನದಲ್ಲಿ ಸಕ್ಕರೆಯ ಬದಲಿಗೆ ಜೇನುತುಪ್ಪ ಬಳರಿದ್ದು, ದಿನಕ್ಕೆ ಆರೋಗ್ಯಕರ ಆರಂಭ ನೀಡಬಹುದು. ಕಡಿಮೆ ನಾರಿನಂಶವಿರುವ ಆಹಾ ಸೇವನೆಯಿಂದ ಕಾಡುವ ಮಲಬದ್ಧತೆ ನಿವಾರಿಸುತ್ತದೆ. ಹಸಿ ತೆಂಗಿನಕಾಯಿ ನಿಮಗೆ ಪ್ರಯೋಜನ ನೀಡುತ್ತದೆ. ಇದರಲ್ಲಿ ಉತ್ತಮ ಪ್ರಮಾಣದ ನಾರಿನಂಶವಿದೆ.

  ಹೃದಯದ ಆರೋಗ್ಯ ಕಾಪಾಡುತ್ತದೆ. ಹಸಿ ತೆಂಗಿನಕಾಯಿಯಲ್ಲಿ ಉತ್ತಮ ಕೊಬ್ಬನ್ನು ಹೊಂದಿದೆ. ಇದು ದೇಹವು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಮತ್ತು ಹೃದಯ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ.

  ಇದನ್ನೂ ಓದಿ: ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಮಜ್ಜಿಗೆ ಬಳಸ್ತೀರಾ? ಹಾಗಾದ್ರೆ ತಪ್ಪದೇ ಓದಿ

  ತೆಂಗಿನಕಾಯಿ ತಿನ್ನುವುದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಸ್ನಾಯುಗಳಿಗೆ ಪ್ರಯೋಜನ ನೀಡುತ್ತದೆ. ತೆಂಗಿನಕಾಯಿಯಲ್ಲಿರುವ ಕೊಬ್ಬಿನಂಶವು ಚರ್ಮವನ್ನು ಪೋಷಿಸುತ್ತದೆ. ಚರ್ಮವನ್ನು ತೇವಾಂಶ ಮತ್ತು ಮೃದುಗೊಳಿಸುತ್ತದೆ.
  Published by:renukadariyannavar
  First published: