ನಿಮ್ಮ ಉಪಹಾರದ (BreakFast) ಜೊತೆಗೆ ಒಂದು ರುಚಿಕರವಾದ ಪಾನೀಯವನ್ನು (Drink) ಸವಿಯುವುದು ಯಾವತ್ತಿಗೂ ಒಳ್ಳೆಯದೇ. ಬೆಳ್ಳಂಬೆಳಗ್ಗೆಯೇ ಹಬೆಯಾಡುವ ಕಾಫಿ ಮತ್ತು ಟೀಯನ್ನು ಸವಿಯಲು ನಿಮಗೆ ಇಷ್ಟವಾಗದಿದ್ದಲ್ಲಿ, ಮಿಲ್ಕ್‌ಶೇಕ್ (Milkshake) ನಿಮಗೆ ಹೇಳಿ ಮಾಡಿಸಿದ ಆಯ್ಕೆಯಾಗಿರುತ್ತದೆ. ನಮ್ಮ ದಿನ ಚೆನ್ನಾಗಿರಬೇಕಾದಲ್ಲಿ, ನಮ್ಮ ಉಪಾಹಾರವು ಅಷ್ಟೇ ಚೆನ್ನಾಗಿರಬೇಕು. ಉಪಹಾರವು ನಮ್ಮ ಆರೋಗ್ಯವನ್ನು (Health) ನಿರ್ಧರಿಸುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ.
ಬೆಳಗಿನ ಉಪಹಾರದ ಜೊತೆಯಲ್ಲಿ ಸೇವಿಸಲು ಮಿಲ್ಕ್‌ಶೇಕ್‍ಗಳ ದೊಡ್ಡ ಪಟ್ಟಿಯೇ ನಮ್ಮ ಮುಂದಿದೆ. ಹಣ್ಣಿನ ಶೇಕ್ ಗಳಿಂದ ಹಿಡಿದು ತರಕಾರಿಗಳ ಶೇಕ್ ಗಳವರೆಗೆ ಹಲವಾರು ಮಿಲ್ಕ್‌ಶೇಕ್‍ಗಳನ್ನು ನಾವು ಸೇವಿಸಬಹುದು. ನಿಮ್ಮ ಊಟದ ಜೊತೆಗೆ ಸೇವಿಸಲು ಹಲವಾರು ಪಾನೀಯಗಳು ದೊರೆಯುತ್ತವೆ. ಆದರೆ ಈ ಬಗೆಯ ಮಿಲ್ಕ್‌ಶೇಕ್‍ಗಳು ನಿಮ್ಮ ನಾಲಿಗೆಗೆ ಮತ್ತು
ರೋಸ್ ಮಿಲ್ಕ್‌ಶೇಕ್
ರೋಸ್ ಮಿಲ್ಕ್ ಈ ಚಳಿಗಾಲದ ಋತುವಿಗೆ ಹೇಳಿ ಮಾಡಿಸಿದಂತಹ ಮಿಲ್ಕ್‌ಶೇಕ್ ಆಗಿದೆ. ಇದಕ್ಕಾಗಿ ನಿಮಗೆ ತಂಪಾಗಿ ಕೊರೆಯುವ ಹಾಲು, ರೋಸ್ ಮಿಲ್ಕ್ ಸ್ವಾದ, ಸಕ್ಕರೆ, ಬಾದಾಮಿ, ಗೋಡಂಬಿ ಬೇಕಾಗುತ್ತದೆ. ಈ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ರುಬ್ಬಿ, ರುಚಿ ರುಚಿಯಾದ ಮಿಲ್ಕ್ ಶೇಕ್ ತಯಾರಿಸಿಕೊಂಡು ಉಪಹಾರದ ಜೊತೆಗೆ ಸವಿಯಿರಿ.
ಬಾಳೆಹಣ್ಣಿನ ಮಿಲ್ಕ್‌ಶೇಕ್
ಇದೊಂದು ಅತ್ಯಂತ ರುಚಿಕರವಾದ ಮಿಲ್ಕ್‌ಶೇಕ್ ಆಗಿದ್ದು, ಇದನ್ನು ನಿಮ್ಮ ಬೆಳಗಿನ ಉಪಹಾರದ ಜೊತೆಗೆ ಸೇವಿಸಬಹುದು. ಇದಕ್ಕೆ ಮೊದಲು ಈ ಹಣ್ಣುಗಳನ್ನು ನೀವು ತೊಳೆದು, ಸಿಪ್ಪೆ ಸುಲಿದು, ಬೀಜಗಳಿಂದ ಮುಕ್ತಗೊಳಿಸಬೇಕಾಗುತ್ತದೆ. ಆ ನಂತರ ಇದನ್ನು ರುಬ್ಬಿಕೊಂಡು ಒಂದು ರುಚಿಕರವಾದ ಮಿಲ್ಕ್‌ಶೇಕ್ ಮಾಡಿಕೊಳ್ಳಬಹುದು.
ಇದನ್ನೂ ಓದಿ:BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ
ಅವೊಕ್ಯಾಡೊ ಮಿಲ್ಕ್‌ಶೇಕ್
ಅವೊಕ್ಯಾಡೊ ಮಿಲ್ಕ್‌ಶೇಕ್ ನಿಮ್ಮ ಉಪಹಾರಕ್ಕೆ ಮತ್ತೊಂದು ಸೇರ್ಪಡೆಯಾಗಿರುತ್ತದೆ. ಒಂದು ಸ್ವಲ್ಪ ಹಾಲಿನ ಜೊತೆಗೆ ಸಕ್ಕರೆ ಬೆರೆಸಿ ರುಬ್ಬಿಕೊಳ್ಳಿ. ಇದಕ್ಕೆ ಅವೊಕ್ಯಾಡೊಗಳನ್ನು ಸೇರಿಸಿ ಸ್ವಲ್ಪ ಗಟ್ಟಿಯಾದ ಜ್ಯೂಸ್ ರೀತಿ ಮಾಡಿಕೊಳ್ಳಿ. ನಿಮಗೆ ಅಗತ್ಯವಿದ್ದಲ್ಲಿ, ಸಕ್ಕರೆಗೆ ಬದಲಾಗಿ ಜೇನು ತುಪ್ಪವನ್ನು ಸಹ ಹಾಕಿಕೊಳ್ಳಬಹುದು.
ಚಾಕೊಲೆಟ್ ಮಿಲ್ಕ್‌ಶೇಕ್
ಈ ರುಚಿಕರವಾದ ಮಿಲ್ಕ್‌ಶೇಕ್ ತಯಾರಿಸಲು ನಿಮಗೆ ಹಾಲು, ವೆನಿಲಾ, ಐಸ್‌ಕ್ರೀಮ್, ಚಾಕೊಲೆಟ್ ಸಿರಪ್ ಮತ್ತು ಬಿಸ್ಕೆಟ್ ಬೇಕಾಗುತ್ತದೆ. ಬಿಸ್ಕೆಟ್‌ಗಳನ್ನು ಹೊರತುಪಡಿಸಿ ಈ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಹಾಕಿ ನೊರೆ ರೂಪಕ್ಕೆ ಬರುವವರೆಗು ರುಬ್ಬಿಕೊಳ್ಳಿ. ನಂತರ ಇದಕ್ಕೆ ಬಿಸ್ಕೆಟ್‌ಗಳನ್ನು ಹಾಕಿ ಮತ್ತು ಒಂದು ನಿಮಿಷ ಕಾಲ ಚೆನ್ನಾಗಿ ರುಬ್ಬಿ. ಹಾಲಿನ ಕ್ರೀಮ್ ಅನ್ನು ಇದರೆ ಮೇಲೆ ಬೇಕಾದರು ಹಾಕಬಹುದು.
ಕಲ್ಲಂಗಡಿ ಮಿಲ್ಕ್‌ಶೇಕ್
ಇದು ಹೇಳಿ ಕೇಳಿ ಕಲ್ಲಂಗಡಿಯ ಕಾಲ, ಮಿಲ್ಕ್‌ಶೇಕ್ ಮಾಡಲು ಈ ಹಣ್ಣು ಸಹ ಒಂದು ಒಳ್ಳೆಯ ಆಯ್ಕೆಯಾಗಿರುತ್ತದೆ. ಆದ್ದರಿಂದ ನೀವೇಕೆ ಒಮ್ಮೆ ಇದನ್ನು ಪ್ರಯತ್ನಿಸಬಾರದು. ಚೌಕಾಕಾರವಾಗಿ ಕತ್ತರಿಸಿ ಫ್ರೀಜರಿನಲ್ಲಿಟ್ಟಿರುವ ಕಲ್ಲಂಗಡಿ ಹೋಳುಗಳು, ಹಾಲು, ವೆನಿಲಾ ಸಾರ ಮತ್ತು ಸಕ್ಕರೆಗಳನ್ನು ಹದವಾಗಿ ರುಬ್ಬಿ ಸ್ವಲ್ಪ ಗಟ್ಟಿಯಾದ ಮಿಲ್ಕ್‌ಶೇಕ್ ಮಾಡಿಕೊಳ್ಳಿ. ಒಂದು ವೇಳೆ ಕಲ್ಲಂಗಡಿ ಸಿಹಿಯಾಗಿದ್ದಲ್ಲಿ, ಸಕ್ಕರೆಯ ಅವಶ್ಯಕತೆಯಿರುವುದಿಲ್ಲ.
ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ
ಬಾದಾಮಿ ಮಿಲ್ಕ್ ಶೇಕ್
ಮೊದಲಿಗೆ ಬಾದಾಮಿ ಹಾಗೂ ಸ್ವಲ್ಪ ಹಾಲನ್ನು ಮಿಕ್ಸಿ ಜಾರ್'ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು.
ಒಲೆಯ ಮೇಲೆ ಪಾತ್ರೆ ಇಟ್ಟು ಹಾಲನ್ನು ಹಾಕಿ 5-10 ನಿಮಿಷ ಕಾಯಿಸಬೇಕು. ಆಗಾಗ ಸ್ಪೂನ್ ನಲ್ಲಿ ಕೈಯಾಡಿಸುತ್ತಿರಬೇಕು.
ನಂತರ ಕಂಡೆನ್ಸ್ಡ್ ಮಿಲ್ಕ್, ರುಬ್ಬಿಕೊಂಡ ಬಾದಾಮಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 10 ನಿಮಿಷ ಕುದಿಯಲು ಬಿಡಬೇಕು. ನಂತರ ಕೇಸರಿ ದಳವನ್ನು ಹಾಕಿ 3 ನಿಮಿಷ ಕಾಯಲು ಬಿಡಿ.
ನಂತರ ಹಾಲು ಸಂಪೂರ್ಣವಾಗಿ ತಣ್ಣಗಾದ ಬಳಿಕ ಫ್ರಿಡ್ಜ್ ನಲ್ಲಿ 30 ನಿಮಿಷ ಇಡಿ. ನಂತರ ಮಿಕ್ಸಿ ಜಾರ್'ಗೆ ಸಣ್ಣಗಾದ ಹಾಲು ಸ್ವಲ್ಪ ಸಕ್ಕರೆ ಹಾಗೂ ಐಸ್'ಕ್ರೀಮ್ ಹಾಕಿ ರುಬ್ಬಿಕೊಂಡರೆ ರುಚಿಕರವಾದ ಬಾದಾಮಿ ಮಿಲ್ಕ್ ಶೇಕ್ ಕುಡಿಯಲು ಸಿದ್ಧ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ