ಮನೆಯಲ್ಲಿ ಏನೇ ವಿಶೇಷ ಇದ್ರೂ ಅಂದು ಚಿಕನ್ ರೆಸಿಪಿ (Chicken Recipe) ಮಾಡೋದು ಕಾಮನ್. ಚಿಕನ್ ಕರ್ರಿ, ಸುಕ್ಕಾ, ಕಬಾಬ್, ಸಾಂಬಾರ್ ಮಾಡೋದು ಸಾಮಾನ್ಯ. ಒಂದೇ ರೀತಿಯ ಚಿಕನ್ ಅಡುಗೆ ತಿಂದು ಬೇಸರ ಆಗಿದ್ರೆ ಇಂದು ನಾವು ನಿಮಗೆ ಗುಜರಾತಿ ಶೈಲಿಯ ಚಿಕನ್ ವಡೆ (Chicken Vada) ಮಾಡೋದು ಹೇಗೆ ಅಂತ ಹೇಳುತ್ತಿದ್ದೇವೆ. ಇದನ್ನು ಸಂಜೆ ಸ್ನ್ಯಾಕ್ಸ್ (Snacks) ರೂಪದಲ್ಲಿ ಅಥವಾ ಬೆಳಗ್ಗೆ ತಿಂಡಿಯಾಗಿಯೂ (Breakfast) ಮಾಡಬಹುದು. ಊಟಕ್ಕೆ ಸ್ಟಾರ್ಟರ್ ಆಗಿ ಚಿಕನ್ ವಡೆ ನೀಡಿದರೆ ಮನೆಗೆ ಬಂದ ಅತಿಥಿಗಳು ಫುಲ್ ಖುಷಿ ಆಗ್ತಾರೆ.
ಒಂದೇ ರೀತಿಯ ಚಿಕನ್ ಅಡುಗೆ ತಿಂದವರು ಹೊಸದಾಗಿ ಏನಾದ್ರೂ ಟ್ರೈ ಮಾಡ್ತಿದ್ರೆ ಗುಜರಾತಿ ಶೈಲಿಯ ನಟ್-ಕಟ್ ಚಿಕನ್ ವಡೆ ಮಾಡಬಹುದು. ಚಿಕನ್ ವಡೆ ಹೊರಗೆ ಕ್ರಂಚಿಯಾಗಿ ಮತ್ತು ಒಳಗೆ ಸಾಫ್ಟ್ ಆಗಿರುತ್ತದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಗುಜರಾತಿ ಶೈಲಿಯ ಚಿಕನ್ ವಡೆ ಇಷ್ಟವಾಗುತ್ತದೆ.
ಗುಜರಾತಿ ಶೈಲಿಯ ಚಿಕನ್ ವಡೆ ಮಾಡುವ ವಿಧಾನ
ಅಕ್ಕಿ: ಒಂದು ಕಪ್
ಕಡಲೆಬೇಳೆ: ಅರ್ಧ ಕಪ್
ಚಿಕನ್: 100 ಗ್ರಾಂ
ಕೋತಂಬರಿ ಸೊಪ್ಪು
ಹಸಿಮೆಣಸಿನಕಾಯಿ: ಮೂರರಿಂದ ನಾಲ್ಕು
ಬಿಳಿ ಎಳ್ಳು: 4 ಟೀ ಸ್ಪೂನ್
ಕಾರ್ನ್ ಫ್ಲೋರ್: 4 ಟೀ ಸ್ಪೂನ್
ಚಿಕನ್ ಕಬಾಬ್ ಪೌಡರ್: 2 ಟೀ ಸ್ಪೂನ್
ಅರಿಶಿಣ: ಚಿಟಿಕೆ
ಉಪ್ಪು: ರುಚಿಗೆ ತಕ್ಕಷ್ಟು
ಎಣ್ಣೆ
ಮಾಡುವ ವಿಧಾನ
*ಮೊದಲಿಗೆ ಮಾರುಕಟ್ಟೆಯಿಂದ ತಂದಿರುವ ಚಿಕನ್ನ್ನು ಚೆನ್ನಾಗಿ ಎರಡ್ಮೂರು ನೀರಿನಲ್ಲಿ ತೊಳೆದುಕೊಳ್ಳಿ. ತದನಂತರ ಚಿಕನ್ ಕುಕ್ಕರ್ಗೆ ಹಾಕಿ ಚಿಟಿಕೆ ಅರಿಶಿನ ಸೇರಿಸಿ ಒಂದು ವಿಷಲ್ ಕೂಗಿಸಿಕೊಳ್ಳಿ. ನಂತರ ತಣ್ಣಗಾದ ಮೇಲೆ ಚಿಕನ್ ತರಿ ತರಿಯಾಗಿ ಬಿಡಿಸಿಕೊಂಡು ಎತ್ತಿಟ್ಟುಕೊಳ್ಳಿ.
*ಈಗ ಒಂದು ಪಾತ್ರೆಗೆ ಅಕ್ಕಿ ಮತ್ತು ಕಡಲೆಬೇಳು ಹಾಕಿ 5ರಿಂದ 6 ನಿಮಿಷ ಫ್ರೈ ಮಾಡಿಕೊಂಡು, ಮಿಕ್ಸಿಗೆ ಹಾಕಿ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
*ಈಗ ಈ ಮಿಶ್ರಣವನ್ನು ಒಂದು ದೊಡ್ಡದಾದ ಪಾತ್ರೆಗೆ ಹಾಕಿಕೊಳ್ಳಿ. ಈ ಮಿಶ್ರಣಕ್ಕೆ ಬೇಯಿಸಿಕೊಂಡಿರುವ ಚಿಕನ್ ಸೇರಿಸಿ. ಇದೇ ಮಿಶ್ರಣಕ್ಕೆ ಹಸಿಮೆಣಸಿನಕಾಯಿ, ಕೋತಂಬರಿ ಸೊಪ್ಪು, ಕಬಾಬ್ ಪೌಡರ್, ಬಿಳಿ ಎಳ್ಳು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
*ಹೀಗೆ ಸಿದ್ಧವಾದ ಮಿಶ್ರಣವನ್ನು ಮುಚ್ಚಳ ಮುಚ್ಚಿ 10 ರಿಂದ 20 ನಿಮಿಷ ಎತ್ತಿಟ್ಟುಕೊಳ್ಳಿ.
*ಒಂದು ಪಾತ್ರೆಯಲ್ಲಿ ಕರಿಯಲು ಬೇಕಾದಷ್ಟು ಎಣ್ಣೆ ಹಾಕಿಕೊಳ್ಳಿ. ನಿಮ್ಮ ಚಿಕನ್ ವಡೆ ಸಿದ್ಧವಾಗೋವರೆಗೂ ಒಲೆ ಕಡಿಮೆ ಉರಿಯಲ್ಲಿರಬೇಕು.
*ಸಿದ್ಧವಾಗಿರುವ ಮಿಶ್ರಣ ತೆಗೆದುಕೊಂಡು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಎಣ್ಣೆ ಬಿಸಿ ಆಗುತ್ತಿದ್ದಂತೆ ಚಿಕ್ಕ ಉಂಡೆಯನ್ನು ಅಂಗೈಯಲ್ಲಿ ಮೇಲಿಟ್ಟುಕೊಂಡು ತಟ್ಟಿ ಬಿಸಿ ಎಣ್ಣೆಗೆ ಹಾಕಿ. ಹೀಗೆ ಒಂದಾದ ನಂತರ ಒಂದರಂತೆ ವಡೆಗಳನ್ನು ಹಾಕಬೇಕು.
*ಎರಡು ಕಡೆ ಚೆನ್ನಾಗಿ ಫ್ರೈ ನಂತರ ವಡೆಯನ್ನು ತೆಗೆದು ಪಾತ್ರೆಗೆ ಹಾಕಿದ್ರೆ ಗುಜರಾತಿ ಶೈಲಿಯ ನಟ್-ಕಟ್ ಚಿಕನ್ ವಡೆ ತಿನ್ನಲು ರೆಡಿ.
ಇದನ್ನೂ ಓದಿ: Chicken Cleaning Tips: ಈ ಸುದ್ದಿ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ; ಅಡುಗೆ ಮಾಡೋ ಮುಂಚೆ ಕೋಳಿ ಮಾಂಸ ತೊಳೆಯಬಾರದಂತೆ!
ಚಿಕನ್ ವಡೆ ಮೇಲೆ ನಿಂಬೆಹಣ್ಣಿನ ರಸ ಹಾಕಿಸಿ ಈರುಳ್ಳಿ ಜೊತೆ ಸವಿಯಬಹುದು. ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ತಂಪಾದ ವಾತಾವರಣದಲ್ಲಿ ಗುಜರಾತಿ ಶೈಲಿಯ ನಟ್-ಕಟ್ ಚಿಕನ್ ವಡೆ ಬೆಸ್ಟ್ ತಿಂಡಿಯಾಗಿದೆ. ಟೊಮ್ಯಾಟೋ ಸಾಸ್, ಗ್ರೀನ್ ಚಿಲ್ಲಿ, ಚೀಸ್ ಜೊತೆ ಸವಿಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ