ಜೀವನದಲ್ಲಿ (Life) ಉತ್ತಮ ನಿರ್ಧಾರಗಳನ್ನು (Good Decision) ತೆಗೆದುಕೊಳ್ಳಲು ತಾಳ್ಮೆ (Patience) ಹಾಗೂ ಸಮಯ ಇರಬೇಕಾಗುತ್ತದೆ. ಒತ್ತಡದಲ್ಲಿದ್ದಾಗ (Stress) ಸರಿಯಾದ ಆಯ್ಕೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಆ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುವುದು ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ. ಬುದ್ಧಿವಂತರು ನಿರ್ಧಾರ ತೆಗೆದುಕೊಳ್ಳುವಾಗ ಬಳಸುವ ಅಭ್ಯಾಸಗಳು ಮತ್ತು ಪ್ರಕ್ರಿಯೆಗಳನ್ನು ನೀವು ಬೆಳೆಸಿಕೊಂಡರೆ, ಜೀವನವು ತುಂಬಾ ಸುಲಭವಾಗುತ್ತದೆ ಹಾಗಾಗಿ ಆ ನಿರ್ಧಾರಗಳು ಯಾವುವು ಮತ್ತು ಅವರು ಹೇಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಅರಿತುಕೊಂಡಿರಬೇಕಾಗುತ್ತದೆ. ನಿಮ್ಮಲ್ಲಿ ನೀವು ವಿಶ್ವಾಸ ಹಾಗೂ ನಂಬಿಕೆಯನ್ನು ಹೊಂದಿರುವುದು ಮುಖ್ಯವಾಗುತ್ತದೆ.
ಬುದ್ಧಿವಂತ ಜನರು ನಿರ್ಧಾರ ತೆಗೆದುಕೊಳ್ಳುವ ಮೊದಲು ಚೆನ್ನಾಗಿ ಯೋಚಿಸುತ್ತಾರೆ
ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಒತ್ತಡವುಂಟಾದ ಸಮಯದಲ್ಲಿ ಚೆನ್ನಾಗಿ ಯೋಚಿಸಬೇಕಾಗುತ್ತದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ವಲ್ಪ ಯೋಚಿಸುವ ಸಮಯಾವಕಾಶವಿರುತ್ತದೆ. ಅದನ್ನು ಬಳಸಿಕೊಳ್ಳಬೇಕಾಗುತ್ತದೆ.
ಭಾವನೆಗಳಿಗೆ ಧಕ್ಕೆಯಾಗದಂತೆ ನಿರ್ಧಾರ ತೆಗೆದುಕೊಳ್ಳುವುದು
ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ಚೆನ್ನಾಗಿ ಯೋಚಿಸುವ ಜನರು ಆಂತರಿಕ ಭಾವನೆಯನ್ನು ನಿಯಮಿತವಾಗಿ ಪರಿಶೀಲಿಸುತ್ತಾರೆ. ಹೀಗೆ ಮಾಡುವುದರಿಂದ ಅವರಿಗೆ ಯಾವುದೇ ಹಿಂಜರಿಕೆ ಅಥವಾ ಅಧೈರ್ಯ ಉಂಟಾಗುವುದಿಲ್ಲ.
ಇದನ್ನೂ ಓದಿ: ದೀರ್ಘಕಾಲದ ಒತ್ತಡ ಅರೋಗ್ಯದ ಶತ್ರು, ಇಷ್ಟೆಲ್ಲಾ ಸಮಸ್ಯೆಗಳಾಗುತ್ತೆ ನೋಡಿ!
ಸಂಬಂಧಿತ ಮಾಹಿತಿ ಕಲೆಹಾಕುವುದು
ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಾಧ್ಯವಾದಷ್ಟು ಮಾಹಿತಿ ಸಂಗ್ರಹಿಸಿ. ಒತ್ತಡದಲ್ಲಿದ್ದಾಗ ನಿರ್ಧಾರ ತೆಗೆದುಕೊಳ್ಳಲು ಮುಂದುವರಿಯದಿರಿ. ಈ ಸಮಯದಲ್ಲಿ ಆಪ್ತ ಸಮಾಲೋಚನೆ ನಡೆಸಿ ಕುಟುಂಬದವರ ಹಾಗೂ ಸ್ನೇಹಿತರ ಸಲಹೆಗಳನ್ನು ಪಡೆದುಕೊಳ್ಳಿ
ನಿರ್ಧಾರದಲ್ಲಿ ಅಚಲರಾಗಿರುವುದು
ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲ ಹಾಗೂ ಒತ್ತಡ ಉಂಟಾಗುವುದು ಸಹಜವಾಗಿದ್ದರೂ ಒಮ್ಮೆ ನಿರ್ಧಾರ ತೆಗೆದುಕೊಂಡ ನಂತರ ಅದಕ್ಕೆ ಅಚಲವಾಗಿರುವುದು ಮುಖ್ಯವಾಗಿರುತ್ತದೆ. ಹಾಗಾಗಿ ನಿರ್ಧಾರಕ್ಕೆ ಬದ್ಧವಾಗಿರುವ ಅಂಶವನ್ನು ಬೆಳೆಸಿಕೊಳ್ಳಿ.
ವಸ್ತುನಿಷ್ಠವಾಗಿರುವುದು ಹಾಗೂ ಗೊಂದಲಗಳನ್ನು ನಿವಾರಿಸಿಕೊಳ್ಳುವುದು
ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮೊದಲು ನಿರ್ಧಾರಕ್ಕೆ ಅಚಲವಾಗಿರುವುದು ಮುಖ್ಯವಾಗಿರುತ್ತದೆ ವಸ್ತುನಿಷ್ಠವಾಗಿರುವುದು ಎಂದರೆ ನಿರ್ಧಾರಕ್ಕೆ ಬದ್ಧವಾಗಿರುವುದು.
ಈ ಸಮಯದಲ್ಲಿ ಯಾವುದೇ ಗೊಂದಲಗಳಿಲ್ಲದಂತೆ ನಿರ್ಧಾರ ತೆಗೆದುಕೊಳ್ಳಿ. ಗೊಂದಲದ ನಿರ್ಧಾರ ಆದಷ್ಟು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತಡೆಯಾಗಿ ಕಾರ್ಯನಿರ್ವಹಿಸುತ್ತದೆ.
ಆಯ್ಕೆಗಳ ಬಗ್ಗೆ ಸಮಾಲೋಚನೆ ನಡೆಸಿ
ನಿಮ್ಮ ಮುಂದೆ ಆಯ್ಕೆಗಳ ರಾಶಿಯೇ ಇರುತ್ತದೆ, ಈ ಸಮಯದಲ್ಲಿ ಪ್ರತಿಯೊಂದು ಆಯ್ಕೆಗಳನ್ನು ಸೂಕ್ತವಾಗಿ ಯೋಚಿಸಿ ಸಮಾಲೋಚನೆ ನಡೆಸಬೇಕಾಗುತ್ತದೆ. ಪ್ರತಿಯೊಂದು ಆಯ್ಕೆಗಳನ್ನೂ ಯೋಚಿಸಿ ನಂತರ ಆರಿಸಿಕೊಳ್ಳಬೇಕಾಗುತ್ತದೆ.
ನಿರ್ಧಾರಗಳನ್ನು ವಿಭಜಿಸುವುದು
ಒಮ್ಮೊಮ್ಮೆ ನಿರ್ಧಾರಗಳು ಹೆಚ್ಚಿನ ಆಯ್ಕೆಗಳೊಂದಿಗೆ ಬರುತ್ತವೆ. ಅಂತೆಯೇ ಹೆಚ್ಚಿನ ಅಂಶಗಳನ್ನು ಒಳಗೊಂಡಿರುತ್ತದೆ. ಈ ಸಮಯದಲ್ಲಿ ಅತಿಯಾದ ಒತ್ತಡ ತೆಗೆದುಕೊಳ್ಳುವ ಮೊದಲು ಅದನ್ನು ವಿಭಜಿಸುವುದು ಉತ್ತಮ
ಉದ್ಯೋಗದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಸಂಬಳ ಹಾಗೂ ಪ್ರಯೋಜನಗಳ ಬಗ್ಗೆ ನಿರ್ಧರಿಸುವುದು; ಕೆಲಸದ ಅವಧಿಯ ಬಗ್ಗೆ ನಿರ್ಧಾರ ತಾಳುವುದು;ನಿಮ್ಮ ವೈಯಕ್ತಿಕ ಹಾಗೂ ಕೆಲಸದ ಅವಧಿಯ ನಡುವಿನ ವ್ಯತ್ಯಾಸಗಳನ್ನು ವಿಶ್ಲೇಷಿಸುವುದು; ವೃತ್ತಿ ಬೆಳವಣಿಗೆ ಹಾಗೂ ಪ್ರಯೋಜನಗಳ ಬಗ್ಗೆ ಅರಿತುಕೊಳ್ಳುವುದು; ಉದ್ಯೋಗದಿಂದ ನಿಮಗೆ ಎಷ್ಟು ಖುಷಿ ದೊರೆಯುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಹೀಗೆ ನಿರ್ಧಾರಗಳನ್ನು ವಿಭಜಿಸಿಕೊಳ್ಳಬಹುದು.
ನಿರ್ಧಾರ ತೆಗೆದುಕೊಳ್ಳುವುದು ಹಾಗೂ ಅವುಗಳನ್ನು ನಂಬುವುದು
ಅಂತಿಮವಾಗಿ, ನಾವು ಸಾಧ್ಯವಾದಷ್ಟು ಉತ್ತಮವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಖಚಿತಪಡಿಸಿಕೊಳ್ಳಲು ನಾವು ಅನೇಕ ಕೆಲಸಗಳನ್ನು ಮಾಡಬಹುದು, ಕೆಲವೊಮ್ಮೆ ನಾವು ಆ ಸಮಯದಲ್ಲಿ ಎಲ್ಲಾ ಸಂಬಂಧಿತ ಮಾಹಿತಿಯನ್ನು ಹೊಂದಿರುವುದಿಲ್ಲ. ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ನಿರಂತರವಾಗಿ ತಮ್ಮನ್ನು ತಾವು ಪ್ರಶ್ನಿಸುವ ಜನರಿಗೆ ಹೋಲಿಸಿದರೆ, ನಿರ್ಧಾರವನ್ನು ತೆಗೆದುಕೊಳ್ಳುವ ಮತ್ತು ನಂತರ ತಮ್ಮನ್ನು ತಾವು ನಂಬುವ ಜನರು ಸಂತೋಷದಿಂದ ಮತ್ತು ಜೀವನವನ್ನು ಹೆಚ್ಚು ಆನಂದಿಸುತ್ತಾರೆ.
ಒತ್ತಡದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಮೊದಲು ದೀರ್ಘವಾಗಿ ಉಸಿರಾಡಿ ಅಂತೆಯೇ ತ್ವರಿತ ನಿರ್ಧಾರ ತೆಗೆದುಕೊಳ್ಳುವ ಮೊದಲು ಕೊಂಚ ಕಾಲ ಸಮಯ ನೀಡಿ ನಂತರ ನಿರ್ಧರಿಸಿ
ನಿಮ್ಮ ಎಲ್ಲಾ ಆಯ್ಕೆಗಳನ್ನು ಪರಿಗಣಿಸಿ ಮತ್ತು ನಿಮ್ಮ ಪಕ್ಷಪಾತಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ. ಆಲೋಚನೆಗಳು, ಸಾಧಕ-ಬಾಧಕಗಳನ್ನು ಬುದ್ದಿಮತ್ತೆ ಮಾಡಿ ಮತ್ತು ಸಂಬಂಧಿತ ಮಾಹಿತಿಯನ್ನು ಹೊಂದಿರುವ ಇತರ ಜನರು/ಮೂಲಗಳನ್ನು ಸಂಪರ್ಕಿಸಿ ನಿಮ್ಮ ನಿರ್ಧಾರಗಳು ಭಾವನೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತುಕೊಳ್ಳಿ. ತದನಂತರವೇ ಆ ನಿರ್ಧಾರವನ್ನು ಅಳವಡಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ