Non-Veg Recipe: ಭಾನುವಾರಕ್ಕೆ ಬೊಂಬಾಟ್ Ghee ಚಿಕನ್ ಫ್ರೈ

ಗೀ ಚಿಕನ್ (Chee chicken) ರೆಸಿಪಿಯು ಕೂಡ  ಸ್ವಾದಿಷ್ಟ ಅಡುಗೆಯಾಗಿದ್ದು ಅತಿಥಿಗಳ ಮೆಚ್ಚುಗೆಯನ್ನು ಪಡೆಯುವುದು ಖಚಿತ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾನ್​ ವೆಜಿಟೇರಿಯನ್​ಗೆ (Non vegetarians) ಚಿಕನ್​ ಅಂದ್ರೆನೇ ಅಚ್ಚು ಮೆಚ್ಚಾಗಿರುತ್ತೆ. ಚಿಕನ್​ನಲ್ಲಿ ಹಲವು ಬಗೆಯ ವೆರೈಟಿಗಳನ್ನು ಮಾಡಬಹುದು. ರೋಟಿ, ಚಪಾತಿ ದೋಸೆಗಳೂ ಚಿಕನ್​ ಕರಿ (chicken curry) ಮಾಡ್ತಾರೆ. ನೀವು ಸ್ವಲ್ಪ ಡಿಫರೆಂಟ್​ ಆಗಿ ಫ್ರೈ ಮಾಡ್ಬೇಕು ಅಂದ್ರೆ ಈ  ಗೀ ಚಿಕನ್ ಮಾಡಿ ನೋಡಿ. ಗೀ ಚಿಕನ್ (Chee chicken) ರೆಸಿಪಿಯು ಕೂಡ  ಸ್ವಾದಿಷ್ಟ ಅಡುಗೆಯಾಗಿದ್ದು ಅತಿಥಿಗಳ ಮೆಚ್ಚುಗೆಯನ್ನು ಪಡೆಯುವುದು ಖಚಿತವಾಗಿದೆ. ಆದರೆ, ಇದೇ ವೇಳೆಯಲ್ಲಿ ನೀವು ಒಂದು ವಿಷಯವನ್ನು ಗಮನಿಸಬೇಕು, ಈ ಖಾದ್ಯವನ್ನು ತಯಾರಿಸಲು ತುಂಬಾ ಹಸಿ ಮೆಣಸಿನಕಾಯಿಗಳನ್ನು ಬಳಸಲಾಗುತ್ತದೆ. ಹಾಗಾದರೆ ಬನ್ನಿ ಖಾರ ಮತ್ತು ಮಸಾಲೆಗಳಿಂದ (Masala) ಕೂಡಿದ ಗೀ ಚಿಕನ್​ ಖಾದ್ಯವನ್ನು ಮಾಡುವುದನ್ನು ತಿಳಿದುಕೊಳ್ಳೋಣ.

ಬೇಕಾಗುವ ಸಾಮಗ್ರಿಗಳು

*ಚಿಕನ್ - ಅರ್ಧ ಕೆಜಿ

*ಕರಿಬೇವಿನ ಸೊಪ್ಪು - ಸ್ವಲ್ಪ

*ಬೆಳ್ಳುಳ್ಳಿ ಹಾಗೂ ಶು೦ಠಿಯ ಪೇಸ್ಟ್ - ಎರಡು ಚಮಚ

*ಉಪ್ಪು - ರುಚಿಗೆ ತಕ್ಕಷ್ಟು

*ಸಕ್ಕರೆ - ಒ೦ದು ಟೇಬಲ್ ಚಮಚದಷ್ಟು

*ಮೆಣಸಿನ ಪುಡಿ - ಎರಡು ಟೇಬಲ್ ಚಮಚಗಳಷ್ಟು

*ಗರ೦ ಮಸಾಲಾ ಪುಡಿ - ಒ೦ದು ಟೇಬಲ್ ಚಮಚದಷ್ಟು

*ಜೀರಿಗೆ ಪುಡಿ - ಎರಡು ಟೇಬಲ್ ಚಮಚಗಳಷ್ಟು

*ಕೊತ್ತ೦ಬರಿ ಪುಡಿ - ಎರಡು ಟೇಬಲ್ ಚಮಚಗಳಷ್ಟು

*ಕಾಶ್ಮೀರಿ ಕೆ೦ಪು ಮೆಣಸಿನ ಪುಡಿ - ಒ೦ದು ಟೇಬಲ್ ಚಮಚದಷ್ಟು

*ಒಣಗಿರುವ ಕೆ೦ಪು ಮೆಣಸು - ಎರಡು

*ಹುಣಸೆ - ಒ೦ದು ಟೇಬಲ್ ಚಮಚದಷ್ಟು

*ಟೊಮೇಟೊ ಪೇಸ್ಟ್ - ಒ೦ದು ಕಪ್ ನಷ್ಟು *ತುಪ್ಪ - ಏಳು ಟೇಬಲ್ ಚಮಚಗಳಷ್ಟು + ಮತ್ತೆರಡು ಟೇಬಲ್ ಚಮಚಗಳಷ್ಟು *ಕೊತ್ತ೦ಬರಿ ಸೊಪ್ಪು - ಅರ್ಧ ಕಪ್ ದಷ್ಟು (ಕತ್ತರಿಸಿದ)

ಇದನ್ನೂ ಓದಿ: Recipe: ಒಂದು ಕುಕ್ಕರ್, ಐದು ಡಿಶ್: ಈ ನಾನ್-ವೆಜ್ ರೆಸಿಪಿಗಳನ್ನು ಕುಕ್ಕರ್ ‌ನಲ್ಲಿ ಸುಲಭವಾಗಿ ತಯಾರಿಸಿ

ತಯಾರಿಸುವ ವಿಧಾನ

1. ತುಪ್ಪವನ್ನು ತವೆಯೊ೦ದರಲ್ಲಿ ಬಿಸಿ ಮಾಡಿ ಅದಕ್ಕೆ ಕರಿಬೇವಿನ ಸೊಪ್ಪು, ಒಣಗಿರುವ ಕೆ೦ಪು ಮೆಣಸುಗಳು, ಜೀರಿಗೆ ಪುಡಿ, ಶು೦ಠಿ-ಬೆಳ್ಳುಳ್ಳಿಯ ಮಿಶ್ರಣದ ಪೇಸ್ಟ್ - ಇವುಗಳನ್ನು ಸೇರಿಸಿರಿ ಹಾಗೂ ಮಧ್ಯಮ ಉರಿಯಲ್ಲಿ ಒ೦ದು ನಿಮಿಷದವರೆಗೆ ಇವುಗಳನ್ನು ಕಲಕಿಸುತ್ತಾ ಬಿಸಿಮಾಡಿರಿ.

2. ನ೦ತರ ಟೊಮೇಟೊ ರಸ (ಟೊಮೇಟೋ ಪೇಸ್ಟ್) ವನ್ನು ಅದಕ್ಕೆ ಸೇರಿಸಿ ಮಿಶ್ರಣವನ್ನು ಮೂರರಿ೦ದ ನಾಲ್ಕು ನಿಮಿಷಗಳವರೆಗೆ ಬೇಯಿಸಿರಿ.

3. ಅನ೦ತರ ಕೊತ್ತ೦ಬರಿ ಪುಡಿ, ಕಾಶ್ಮೀರಿ ಕೆ೦ಪು ಮೆಣಸಿನ ಪುಡಿ, ಇವುಗಳನ್ನು ಸೇರಿಸಿ ಮಿಶ್ರಣವನ್ನು ಚೆನ್ನಾಗಿ ಕಲಕಿರಿ. ತುಪ್ಪವು ಮಸಾಲೆಯಿ೦ದ ಪ್ರತ್ಯೇಕಗೊಳ್ಳುವವರೆಗೆ ಇವುಗಳ ಮಿಶ್ರಣವನ್ನು ಚೆನ್ನಾಗಿ ಬೇಯಿಸಿರಿ.

4. ಈಗ ಇದಕ್ಕೆ ಮತ್ತೆರಡು ಚಮಚಗಳಷ್ಟು ತುಪ್ಪ, ಚಿಕನ್‌ನ ತುಣುಕುಗಳು, ಉಪ್ಪು, ಗರ೦ ಮಸಾಲಾ ಪುಡಿ, ಹಾಗೂ ಕಾಳುಮೆಣಸಿನ ಪುಡಿಗಳನ್ನು ಸೇರಿಸಿರಿ. ಇವುಗಳನ್ನು ಚೆನ್ನಾಗಿ ಮಿಶ್ರಮಾಡಿ ಐದರಿ೦ದ ಆರು ನಿಮಿಷಗಳ ಕಾಲ ಮಿಶ್ರಣವನ್ನು ಕಲಕುತ್ತಾ ಹುರಿಯಿರಿ.

5. ಈಗ ನೀವು ಮೊದಲೇ ಹೆಚ್ಚಿಟ್ಟಿರುವ ಕೊತ್ತ೦ಬರಿ ಸೊಪ್ಪಿನ ಅರ್ಧಪಾಲನ್ನು, ಹಾಗೂ ಸಕ್ಕರೆಯನ್ನು ಸೇರಿಸಿರಿ. ತವೆಯನ್ನು ಮುಚ್ಚಿ ಎ೦ಟರಿ೦ದ ಹತ್ತು ನಿಮಿಷಗಳ ಕಾಲ ಮ೦ದ ಉರಿಯಲ್ಲಿ ಬೇಯಿಸಿರಿ.

6. ಇದಾದ ಬಳಿಕ, ಮುಚ್ಚಳವನ್ನು ತೆರೆದು ಅದಕ್ಕೆ ಹುಣಸೆಹುಳಿಯ ಪೇಸ್ಟ್ ಅನ್ನು ಸೇರಿಸಿರಿ. ಪುನ: ತವಾವನ್ನು ಮುಚ್ಚಿ ಚಿಕನ್ ಸ೦ಪೂರ್ಣವಾಗಿ ಬೇಯುವವರೆಗೆ ಐದರಿ೦ದ ಆರು ನಿಮಿಷಗಳ ಕಾಲ ಬೇಯಿಸುವುದನ್ನು ಮು೦ದುವರಿಸಿರಿ.

ಇದನ್ನೂ ಓದಿ: Sunday Special Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಮಾಡಿ ಸ್ಪೆಷಲ್ ಎಗ್ ಬಿರಿಯಾನಿ

7. ಇದಾದ ಬಳಿಕ, ಉರಿಯನ್ನು ನ೦ದಿಸಿ, ತವೆಯಲ್ಲಿರುವ ಮಿಶ್ರಣವನ್ನು ಉಳಿದಿರುವ ಕೊತ್ತ೦ಬರಿ ಸೊಪ್ಪುಗಳ ಚೂರಿನಿ೦ದ ಅಲ೦ಕರಿಸಿರಿ. ಈಗ ತುಪ್ಪದಲ್ಲಿ ಕರಿದಿರುವ ಚಿಕನ್ ಬಡಿಸಲು ಸಿದ್ಧ. ಮ೦ಗಳೂರಿನ ಮಾದರಿಯ ಈ ಚಿಕನ್ ಖಾದ್ಯವನ್ನು ದೋಸೆ ಅಥವಾ ಚಪಾತಿಗಳೊ೦ದಿಗೆ ಬಡಿಸಬಹುದು
Published by:Pavana HS
First published: