Earrings : ಮನೆಯಲ್ಲಿಯೇ ವಿವಿಧ ಬಗೆಯ ಇಯರಿಂಗ್ಸ್ ಮಾಡೋದು ಹೇಗೆ ಗೊತ್ತಾ..?
Craft Earrings :ದೇಶದ ಒಂದೊಂದು ಭಾಗಕ್ಕೆ ಭೇಟಿ ನೀಡಿದಾಗ ನಮಗೆ ಅಲ್ಲಿನ ಸಾಂಪ್ರದಾಯಿಕ ಆಭರಣಗಳ ಅನಾವರಣ ಆಗುತ್ತದೆ.. ಆಭರಣಗಳು ಬಹುತೇಕ ಚಿನ್ನ ಹಾಗೂ ಬೆಳ್ಳಿ ಆಗಿರುತ್ತವೆ..ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಖರೀದಿ ಸಿಕ್ಕಾಪಟ್ಟೆ ದುಬಾರಿಯಾಗಿರುವುದರಿಂದ, ಮಾರುಕಟ್ಟೆಯಲ್ಲಿ ಗನ್ ಮೆಟಲ್, ಅಥವಾ ಕಪ್ಪು ಮೆಟಲ್, ಪ್ಲಾಸ್ಟಿಕ್ ಫ್ಯಾನ್ಸಿ ವೈರ್ ಬಳಸಿ ವಿವಿಧ ಬಗೆಯ ಕಿವಿಯೋಲೆ ಲಭ್ಯವಿದೆ
ಹೆಣ್ಣು ಮಕ್ಕಳು ಬಟ್ಟೆ(Dress)ಎಷ್ಟು ಇಷ್ಟ(Like) ಪಡ್ತಾರೋ ಬಟ್ಟೆಗೆ ಮ್ಯಾಚ್ ಮಾಡೋ ಅಲಂಕಾರಿಕ ವಸ್ತುಗಳ(cosmetics) ಬಗ್ಗೆ ಅಷ್ಟೇ ಗಮನ ಕೊಡುತ್ತಾರೆ.. ಅದರಲ್ಲೂ ಚಿನ್ನದ ಒಡವೆ ಗಳಿಗಿಂತ(Gold jewelry) ಮಾರುಕಟ್ಟೆಯಲ್ಲಿ(Market) ಸಿಗುವ ಬಣ್ಣಬಣ್ಣದ ವಿಭಿನ್ನಬಗೆಯ ಕಿವಿಯೋಲೆಗಳು(Earrings) ಅಂದರೆ ಹುಡುಗಿಯರಿಗೆ ಅಚ್ಚುಮೆಚ್ಚು.. ಜಾತ್ರೆಯಲ್ಲಿ, ಯಾವುದೇ ಸಭೆ ಸಮಾರಂಭದಲ್ಲಿ ಇನ್ನೊಬ್ಬರು ಸಿಕ್ಕಾಗ ಅವರ ಕಿವಿಯಲ್ಲಿದ್ದ ಕಿವಿಯೋಲೆಗಳನ್ನು ಗಮನದಲ್ಲಿ ಇಟ್ಟುಕೊಂಡು ಅದೇ ರೀತಿಯ ಕಿವಿಯೋಲೆಗಳನ್ನು ಖರೀದಿ ಮಾಡಿ ಹುಡುಗಿಯರು ಸಂತಸಪಡುತ್ತಾರೆ.. ಅದರಲ್ಲೂ ತೊಡುವ ಬಟ್ಟೆಗೆ ತಕ್ಕಂತೆ ಮ್ಯಾಚಿಂಗ್ ಇಯರಿಂಗ್ಸ್ ಹಾಕೋದು ಅಂದ್ರೆ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟ.. ಈಗಂತೂ ಮಾರುಕಟ್ಟೆಯಲ್ಲಿ ತರಹೇವಾರಿ ಕಿವಿಯೋಲೆಗಳು ಬಂದಿವೆ.. ಮಾರುಕಟ್ಟೆಯಲ್ಲಿ ಬರೋ ತರಹೇವಾರಿ ಕಿವಿಯೋಲೆಗಳನ್ನು ನಾವು ಕೂಡ ಮನೆಯಲ್ಲಿಯೇ ನಮಗೆ ಇಷ್ಟ ಬಂದ ರೀತಿಯಲ್ಲಿ ಡಿಫರೆಂಟ್ ಸ್ಟೈಲ್ ನಲ್ಲಿ ಮಾಡಿಕೊಳ್ಳಬಹುದು.. ಅದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ..
ದೇಶದ ಒಂದೊಂದು ಭಾಗಕ್ಕೆ ಭೇಟಿ ನೀಡಿದಾಗ ನಮಗೆ ಅಲ್ಲಿನ ಸಾಂಪ್ರದಾಯಿಕ ಆಭರಣಗಳ ಅನಾವರಣ ಆಗುತ್ತದೆ.. ಆಭರಣಗಳು ಬಹುತೇಕ ಚಿನ್ನ ಹಾಗೂ ಬೆಳ್ಳಿ ಆಗಿರುತ್ತವೆ..ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಖರೀದಿ ಸಿಕ್ಕಾಪಟ್ಟೆ ದುಬಾರಿಯಾಗಿರುವುದರಿಂದ, ಮಾರುಕಟ್ಟೆಯಲ್ಲಿ ಗನ್ ಮೆಟಲ್, ಅಥವಾ ಕಪ್ಪು ಮೆಟಲ್, ಪ್ಲಾಸ್ಟಿಕ್ ಫ್ಯಾನ್ಸಿ ವೈರ್ ಬಳಸಿ ವಿವಿಧ ಬಗೆಯ ಕಿವಿಯೋಲೆ ಲಭ್ಯವಿದೆ.. ಸದ್ಯ ಮಾರುಕಟ್ಟೆಯಲ್ಲಿ ಕಣ್ಮನಸೆಳೆಯುವ ಪ್ಲಾಸ್ಟಿಕ್, ಉಣ್ಣೆ, ರೈಮ್ಸ್ ಟೋನ್, ಶ್ರೀ ಹಾಗೂ ಇತರ ಮೆಟಲ್ ಹಾಗೂ ಪೇಪರ್ ಬಳಸಿ ತಯಾರಿಸಿದ ಕಿವಿಯೋಲೆಗಳು ಮಾರುಕಟ್ಟೆಯಲ್ಲಿವೆ.. ಇವುಗಳನ್ನು ನಾವು ಕೂಡ ಮನೆಯಲ್ಲಿಯೇ ತಯಾರು ಮಾಡಬಹುದು..
ಸದ್ಯ ಮಾರ್ಕೆಟ್ ನಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಯಾಗಿರುವ ಇಯರಿಂಗ್ಸ್ ಅಂದ್ರೆ ಅದು ಪೋಮ್ ಪೋಮ್ ಇಯರಿಂಗ್ಸ್ ಅಥವಾ ಸಿಲ್ಕ್ ತ್ರೆಡ್ ಇಯರಿಂಗ್.. ನೋಡೋಕು ಸಿಕ್ಕಾಪಟ್ಟೆ ಕ್ಯೂಟಾಗಿದೆ ಇಯರಿಂಗ್ಸ್ ಗಳು ಕಡಿಮೆ ಬಜೆಟ್ ನಲ್ಲಿ ಮನೆಯಲ್ಲಿಯೇ ತಯಾರಿಸಬಹುದಾದ ಇಯರಿಂಗ್ಸ್ ಗಳಾಗಿವೆ..
ಪ್ರತಿಯೊಬ್ಬರಿಗೂ ಮುದ್ದಿನ ಓಲೆಗಳನ್ನು ಧರಿಸಬೇಕು ಅಂತ ಆಸೆ ಇರುತ್ತೆ.. ಅದರಲ್ಲೂ ಹೆಣ್ಣುಮಕ್ಕಳು ಮುತ್ತು ಇರುವ ಓಲೆಗಳನ್ನು ಧರಿಸಿದರೆ ಅಷ್ಟೇ ಮುದ್ದು ಮುದ್ದಾಗಿ ಕಾಣುತ್ತಾರೆ.. ಮುತ್ತುಗಳನ್ನು ಇಟ್ಟುಕೊಂಡು ಗೋಲ್ಡ್ ತ್ರೆಡ್ ಬಳಸಿ ತಯಾರಿಸೋ ಪರ್ಲ್ ಸ್ಟಡ್ ಇಯರಿಂಗ್ಸ್ ಎಲ್ಲಾ ಮಾಡ್ರನ್ ಡ್ರೆಸ್ ಗಳಿಗೆ ವಿಭಿನ್ನಬಗೆಯ ಲುಕ್ ಕಲ್ಪಿಸಲಿದೆ..
ಎಲ್ಲಾ ಸಮಾರಂಭಗಳಿಗೆ ಸೂಟ್ ಆಗುವಂತಹ ಚಾಂದ್ಬಾಲಿ/ ಕುಂದನ್ ಇಯರಿಂಗ್ಸ್ ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ಇಯರಿಂಗ್ಸ್ ಗ್ರ್ಯಾಂಡ್ ಸಮಾರಂಭಗಳಿಗೆ ಫೆಸ್ಟಿವ್ ಸೀಸನ್ಗೆ ಇವು ಸೂಟ್ ಆಗುತ್ತವೆ. ಗ್ರ್ಯಾಂಡ್ ಲುಕ್ ನೀಡುತ್ತವೆ. ಆದಷ್ಟೂ ಡಿಸೈನರ್ವೇರ್ಗೆ ಮ್ಯಾಚ್ ಆಗುವಂತಹದ್ದನ್ನೇ ಸೆಲೆಕ್ಟ್ ಮಾಡಿದ್ರೆ ಡ್ರೆಸ್ ಜೊತೆಗೆ ಸಿಕ್ಕಾಪಟ್ಟೆ ಪರ್ಫೆಕ್ಟ್ ಆಗಿರುತ್ತವೆ..
ಸೆಲೆಬ್ರಿಟಿಗಳಿಗೂ ಅಚ್ಚುಮೆಚ್ಚಾಗಿ ರುವ ಜಾಕೆಟ್ ಸ್ಟೈಲ್ ಇಯರಿಂಗ್ಸ್, ಧರಿಸಿದಾಗ ಸಿಕ್ಕಾಪಟ್ಟೆ ಡಿಫ್ರೆಂಟಾಗಿ ಕಾಣುತ್ತದೆ. ಪ್ರತಿ ಹುಡುಗಿಯರು ತಮ್ಮ ಇಯರಿಂಗ್ಸ್ ಕಲೆಕ್ಷನ್ನಲ್ಲಿ ಇಟ್ಟುಕೊಳ್ಳಬೇಕಾದ ಜಾಕೆಟ್ ಸ್ಟೈಲ್ ಇಯರಿಂಗ್ಸ್ ಮನೆಯಲ್ಲಿ ಮಾಡುವುದು ಸಿಕ್ಕಾಪಟ್ಟೆ ಸುಲುಭ
ಫೆದರ್ ಇಯರಿಂಗ್ಸ್ (Feather Earrings)
ಫೆದರ್ ಇಯರಿಂಗ್ಸ್ ನೋಡೋಕೆ ಯಾವುದು ಪಕ್ಷಿಗಳ ಪಕ್ಕದಿಂದ ಮಾಡಿದೆ ಎನ್ನುವಂತೆ ಕಾಣುವ ಫೆದರ್ ಇಯರಿಂಗ್ಸ್, ಸದ್ಯದ ಮಟ್ಟಿಗೆ ಹುಡುಗಿಯರು ರಿಂಗ್ಸ್ ಕಲೆಕ್ಷನ್ನಲ್ಲಿ ಹಾಟ್ ಫೇವರೇಟ್.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ