ಅದೆಷ್ಟೋ ಜನರಿಗೆ ಟೀ, ಕಾಫಿ ಕುಡಿಯದೇ ದಿನ ಆರಂಭವೇ ಆಗೋಲ್ಲ. ನಾನಾರೀತಿಯಾಗಿ ಕಾಫಿ, ಚಹಾವನ್ನು ಮಾಡಿಕೊಳ್ಳುವವರು ಇರುತ್ತಾರೆ. ಕೆಲವೊಬ್ಬರು ಕಾಫಿಗೆ ಹಾಲಿನ (Milk) ಜೊತೆ ಸಕ್ಕರೆಯನ್ನು ಹಾಕಿಕೊಂಡರೆ, ಇನ್ನೂ ಕೆಲವೊಬ್ಬರು ಬೆಲ್ಲದ ತುಂಡುಗಳನ್ನು ಹಾಕಿ ಕುಡಿಯುತ್ತಾರೆ. ಸಾಮಾನ್ಯವಾಗಿ ಬೆಲ್ಲದಕಾಫಿಗಳನ್ನು ಹಳ್ಳಿಯ ಪ್ರದೇಶಗಳಲ್ಲಿ ಮಾಡಿಕೊಂಡು ಕುಡಿಯುತ್ತಾರೆ. ಇದರಿಂದ ಹೆಚ್ಚುತ್ತಿರುವ ಮಧುಮೇಹ 2 (2 Diabetic) ಒಂದು ಹಿಡಿತಕ್ಕೆ ಬರುತ್ತದೆ ಅಂತಾನೇ ಹೇಳಬಹುದು. ಇನ್ನು ಟೀ ವಿಷಯಕ್ಕೆ ಬಂದ್ರೆ ಕೆಲವೊಬ್ಬರು ಟೀಗೆ ಹಾಲನ್ನು ಹಾಕಿ ರೆಡಿ ಮಾಡ್ತಾರೆ. ಇನ್ನೂ ಕೆಲವೊಬ್ಬರು ಟೀ ಗೆ ನೀರನ್ನು ಹಾಕಿ ಕುಡಿಯುತ್ತಾರೆ. ಹೀಗೆ ನಾನಾರೀತಿಯ ಶೈಲಿಯಲ್ಲಿ ಪಾನೀಯಗಳನ್ನು ಕುಡಿಯುವ ಹವ್ಯಾಸವಿರುತ್ತದೆ. ಇದೀಗ ಒಂದು ಸ್ಪೆಷಲ್ ಚಹಾದ (Special Tea) ಬಗ್ಗೆ ನಿಮಗೆ ತಿಳಿಸಿಕೊಡ್ತೀವಿ ಕೇಳಿ.
ನೀವು ದಮ್ ಬಿರಿಯಾನಿಯ ಪ್ರಿಯರೇ? ನಾನಾ ರೀತಿಯ ಶೈಲಿಯಲ್ಲಿ ಬಿರಿಯಾನಿಗಳನ್ನು ಮಾಡೋದು ಕೆಲವೊಬ್ಬರ ಕೈಚಳಕ ಅಂತಾನೇ ಹೇಳಬಹುದು. ಇನ್ನು ನೀವು ಬೆಂಗಳೂರಿನ ನಿವಾಸಿಗರಾಗಿದ್ರೆ ಅತೀ ಕಡಿಮೆ ಬೆಲೆಯಲ್ಲಿ ಸೂಪರ್, ಟೇಸ್ಟಿಯಾಗಿ ಎಲ್ಲೆಲ್ಲಿ ಬಿರಿಯಾನಿ ಸಿಗುತ್ತೆ ಅಂತ ನಾವು ಹೇಳಬೇಕು ಅಂತೇನೂ ಇಲ್ಲ, ನೀವೇ ಹೇಳ್ತೀರ ಬಿಡಿ.
ಇದೇನು ಈ ಕಡೆ ಟೀ ಬಗ್ಗೆನೂ ಹೇಳ್ತಾ ಇದ್ದಾರೆ. ಇತ್ತ ದಮ್ ಬಿರಿಯಾನಿಯ ಬಗ್ಗೆನೂ ಹೇಳ್ತಾ ಇದ್ದಾರೆ. ಏನು ನಿಜವಾದ ವಿಷಯ ಅಂತ ತಲೆಗೆ ಹುಳ ಬಿಟ್ಟುಕೊಳ್ತಾ ಇದ್ದೀರಾ? ಹೌದು, ನಾವು ಇವತ್ತು ನಿಮಗೆ ಸ್ಪೆಷಲ್ ದಮ್ ಚಾ ಮಾಡೋದು ಹೇಗೆ ಅನ್ನೋದ್ರ ಬಗ್ಗೆ ತಿಳಿಸ್ತೀವಿ ಕೇಳಿ. ಅರೇ! ಇದೇನಪ್ಪಾ ಅಂತ ಆಶ್ಚರ್ಯಗೊಳ್ತಾ ಇದ್ದೀರಾ? ಹೇಗೆ ಅಂತ ವಿಧಾನವನ್ನು ವಿವರಿಸುತ್ತೇವೆ ಮತ್ತು ವೈರಲ್ ಆದ ದಮ್ ಚಾ ವಿಡಿಯೋವನ್ನು ತೋರಿಸ್ತೀವಿ ನೋಡಿ.
ಇದಕ್ಕೆ ಬೇಕಾದ ಸಾಮಾಗ್ರಿಗಳು
ನೀವು ಎಷ್ಟು ಕಪ್ ಚಹಾ ಮಾಡಲು ಬಯಸುತ್ತೀರೋ ಅದರ ಆಧಾರದ ಮೇಲೆ ಸಾಮಗ್ರಿ ತೆಗೆದುಕೊಳ್ಳಿ. ನಾವಿಲ್ಲಿ ಕೇವಲ ಎರಡು ಕಪ್ ಚಹಾಕ್ಕೆ ಬೇಕಾಗುವ ಸಾಮಗ್ರಿ ಬಳಸಿಕೊಂಡಿದ್ದೇವೆ.
- 2 ಚಮಚ ಸಕ್ಕರೆ
- ಒಂದೂವರೆ ಚಮಚ ಚಹಾ ಪುಡಿ
- ಚಿಕ್ಕ ಎರಡು ಎಸಳು ಶುಂಠಿ
- ಎರಡು ಏಲಕ್ಕಿ
- ನಾಲ್ಕು ಲವಂಗ
- ಎರಡು ತುಂಡು ದಾಲ್ಚಿನ್ನಿ
- ನಾಲ್ಕೈದು ತುಳಸಿ ಎಲೆಗಳು
- ದಮ್ಗಾಗಿ ನೀರು..
- ಚಹಾಕ್ಕೆ ಮೂರು ಕಪ್ ಹಾಲು
ಇದನ್ನೂ ಓದಿ: ಧಮ್ ಇದ್ಯಾ? ಹಾಗಿದ್ರೆ ಮಧ್ಯಾಹ್ನ ಧಮ್ ಬಿರಿಯಾನಿ ಮಾಡಿ ಸೇವಿಸಿ
ದಮ್ ಚಹಾ ಮಾಡುವ ವಿಧಾನ
ಮೊದಲಿಗೆ ಒಂದು ಸಣ್ಣ ಟೀ ಕಪ್ ಮೇಲೆ ತೆಳುವಾದ ಕಾಟನ್ ರೀತಿಯ ಬಟ್ಟೆಯನ್ನು ಮುಚ್ಚಳದ ರೀತಿಯಲ್ಲಿ ಕಟ್ಟಿ. ಆ ಬಟ್ಟೆಯ ಮೇಲೆ ಎರಡು ಚಮಚ ಸಕ್ಕರೆ, ಒಂದೂವರೆ ಚಮಚ ಟೀ ಪುಡಿ ಹಾಕಿ. ಇವುಗಳ ಜತೆ ಕತ್ತರಿಸಿದ ಶುಂಠಿ, ಏಲಕ್ಕಿ, ಲವಂಗ, ದಾಲ್ಚಿನ್ನಿ, ತುಳಸಿ ಎಲೆಗಳನ್ನು ಹಾಕಿ. ಬಳಿಕ ಇದೆಲ್ಲವನ್ನು ಒಂದು ಪಾತ್ರೆಯಲ್ಲಿ ನೀರು ಹಾಕಿ. ಆ ನೀರಿನ ಮಧ್ಯದಲ್ಲೆ ಈ ಟೀ ಕಪ್ ಇಟ್ಟು, ಹಬೆಯಲ್ಲಿಯೇ 10 ನಿಮಿಷ ಚೆನ್ನಾಗಿ ಬೇಯಿಸಿ.
ಇತ್ತ ಸ್ಟೋವ್ ಮೇಲೆ ಹಾಲನ್ನು ಕುದಿಯಲು ಇಡಿ. ಹಾಲು ಕುದಿ ಬರುತ್ತಿದ್ದಂತೆ, ಹಬೆಯಲ್ಲಿ ಬೇಯಿಸಿದ ಮಿಶ್ರಣವನ್ನು ಟೀ ಕಪ್ನಲ್ಲಿಯೇ ಬಟ್ಟೆ ಸಮೇತ ಚೆನ್ನಾಗಿ ಹಿಂಡಿ. ಅದನ್ನು ಕುದಿಯುವ ಹಾಲಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ