Drumstick Tea: ನುಗ್ಗೆಸೊಪ್ಪಿನ ಚಹಾ ಮಾಡುವುದು ಹೇಗೆ? ಇದರ ಆರೋಗ್ಯ ಪ್ರಯೋಜನಗಳೇನು?

ನುಗ್ಗೆಸೊಪ್ಪು ಆಂಟಿ ಫಂಗಲ್ ಔಷಧೀಯ ಗುಣ ಹೊಂದಿದೆ. ನುಗ್ಗೆಸೊಪ್ಪು ಬೇರುಗಳ ಕಟುವಾದ ರುಚಿಯಿಂದಾಗಿ ಇದನ್ನು ಡ್ರಮ್ ಸ್ಟಿಕ್ ಮರ ಎಂದು ಕರೆಯುತ್ತಾರೆ. ನುಗ್ಗೆಸೊಪ್ಪು ಚಹಾ ಆರೋಗ್ಯಕ್ಕೆ ಪ್ರಯೋಜನಕಾರಿ. ನುಗ್ಗೆಸೊಪ್ಪು ಎಲೆಗಳು ವಿಟಮಿನ್ ಸಿ ಯ ಅತ್ಯುತ್ತಮ ಮೂಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  NCBI ಯ ವರದಿ (Report) ಪ್ರಕಾರ ನುಗ್ಗೆಸೊಪ್ಪು (Drumstick)  ಪೌಷ್ಟಿಕಾಂಶವನ್ನು ಹೇರಳವಾಗಿ ಹೊಂದಿದೆ. ನುಗ್ಗೆಸೊಪ್ಪುನಲ್ಲಿರುವ ಪೌಷ್ಟಿಕಾಂಶ ಮೌಲ್ಯದೊಂದಿಗೆ ಔಷಧೀಯ (Medicinal) ಗುಣಗಳಿಂದ ಸಮೃದ್ಧವಾಗಿದೆ. ಇದು ಪ್ರಮುಖ ಖನಿಜ ಮತ್ತು ಪ್ರೋಟೀನ್‌ (Protein), ವಿಟಮಿನ್‌, ಬೀಟಾ-ಕ್ಯಾರೋಟಿನ್, ಅಮೈನೋ ಆಮ್ಲ ಮತ್ತು ವಿವಿಧ ಫೀನಾಲಿಕ್‌ ಉತ್ತಮ ಮೂಲ ಆಗಿದೆ. ನುಗ್ಗೆಸೊಪ್ಪು  ವಿವಿಧ ಭಾಗಗಳಾದ ಎಲೆ, ಬೇರು, ಬೀಜ, ತೊಗಟೆ, ಹಣ್ಣು, ಹೂವು ಮತ್ತು ಹಸಿ ಬೀಜಗಳು ಹೃದಯ ರಕ್ತನಾಳದ ಮತ್ತು ರಕ್ತ ಪರಿಚಲನಾ ಉತ್ತೇಜಕಗಳಾಗಿ ಕೆಲಸ ಮಾಡುತ್ತವೆ. ಇವುಗಳಲ್ಲಿ ಆಂಟಿಟ್ಯೂಮರ್, ಜ್ವರ ನಿವಾರಕ, ಆಂಟಿಪಿಲೆಪ್ಟಿಕ್, ಉರಿಯೂತ, ಹುಣ್ಣು, ಆಂಟಿಸ್ಪಾಸ್ಮೊಡಿಕ್, ಮೂತ್ರವರ್ಧಕ, ಆಂಟಿಹೈಪರ್ಟೆನ್ಸಿವ್, ಕೊಲೆಸ್ಟ್ರಾಲ್ ಕಡಿಮೆ ಮಾಡುವುದು, ಉತ್ಕರ್ಷಣ ನಿರೋಧಕ ಅಂಶಗಳು ಇವೆ.

  ನುಗ್ಗೆಸೊಪ್ಪಿನ ಚಹಾ

  ಇದರ ಜೊತೆಗೆ ನುಗ್ಗೆಸೊಪ್ಪು ಆಂಟಿ ಡಯಾಬಿಟಿಕ್, ಹೆಪಟೊಪ್ರೊಟೆಕ್ಟಿವ್, ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಔಷಧೀಯ ಗುಣ ಹೊಂದಿದೆ. ನುಗ್ಗೆಸೊಪ್ಪು ಮರವು ಅನೇಕ ಆಸಕ್ತಿದಾಯಕ ಅಡ್ಡ ಹೆಸರಿನಿಂದ ಕರೆಯಿಸಿಕೊಳ್ಳುತ್ತದೆ. ನುಗ್ಗೆಸೊಪ್ಪು ಬೇರುಗಳ ಕಟುವಾದ ರುಚಿಯಿಂದಾಗಿ ಇದನ್ನು ಡ್ರಮ್ ಸ್ಟಿಕ್ ಮರ ಎಂದು ಕರೆಯುತ್ತಾರೆ. ಇದರ ಔಷಧೀಯ ಬಳಕೆಯಿಂದಾಗಿ, ಕೆಲವರು ಇದನ್ನು ಪವಾಡ ಮರ ಎನ್ನುತ್ತಾರೆ.

  ಸಂಶೋಧಕರು, ನುಗ್ಗೆಸೊಪ್ಪಿನ ಸಂಭಾವ್ಯ ಆರೋಗ್ಯ ಪ್ರಯೋಜನ ಹೇಳಿದ್ದಾರೆ. ನುಗ್ಗೆಸೊಪ್ಪು ಚಹಾ ಆರೋಗ್ಯಕ್ಕೆ ಪ್ರಯೋಜನಕಾರಿ. ನುಗ್ಗೆಸೊಪ್ಪು ಎಲೆಗಳು ವಿಟಮಿನ್ ಸಿ ಯ ಅತ್ಯುತ್ತಮ ಮೂಲ. ಆದರೆ ನುಗ್ಗೆಸೊಪ್ಪು ಎಲೆಗಳನ್ನು ಒಣಗಿಸಿದರೆ ವಿಟಮಿನ್ ಸಿ ಸಣ್ಣ ಪ್ರಮಾಣದಲ್ಲಿ ಮಾತ್ರ ಉಳಿಯುತ್ತದೆ. ಇದರ ಹೊರತಾಗಿ, ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಎ, ಥಯಾಮಿನ್ ಅಂಶಗಳು ಇವೆ. ಗಂಭೀರ ಕಾಯಿಲೆ ತಡೆಯಲು ಪ್ರಯೋಜನಕಾರಿ.

  ಇದನ್ನೂ ಓದಿ: ದೀರ್ಘಕಾಲ ಕುಳಿತುಕೊಳ್ಳುತ್ತೀರಾ? ಉಬ್ಬಿರುವ ರಕ್ತನಾಳ ಸಮಸ್ಯೆ ಬರದಂತೆ ಇರಲಿ ಎಚ್ಚರ

  ಹೃದಯದ ಆರೋಗ್ಯ ಕಾಪಾಡುತ್ತದೆ

  ಅಧ್ಯಯನದ ಪ್ರಕಾರ, ಆಂಟಿಆಕ್ಸಿಡೆಂಟ್‌ಗಳು ನುಗ್ಗೆಸೊಪ್ಪು ಎಲೆಗಳಲ್ಲಿ ಹೇರಳವಾಗಿವೆ. ದೇಹದಲ್ಲಿ ಉರಿಯೂತದಿಂದ ಉಂಟಾಗುವ ಸಮಸ್ಯೆ ನಿವಾರಿಸುತ್ತದೆ. ಡ್ರಮ್ ಸ್ಟಿಕ್ ಎಲೆಗಳಲ್ಲಿ ಇರುವ ಬೀಟಾ-ಕ್ಯಾರೋಟಿನ್ ಉತ್ಕರ್ಷಣ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ ಹೃದಯದ ಆರೋಗ್ಯ ಕಾಪಾಡುತ್ತದೆ.

  ಮಧುಮೇಹ ನಿಯಂತ್ರಿಸುತ್ತದೆ

  ನುಗ್ಗೆಸೊಪ್ಪು ಚಹಾ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ನುಗ್ಗೆಸೊಪ್ಪು ಎಲೆಗಳು ಮಧುಮೇಹ ವಿರೋಧಿ ಗುಣ ಹೊಂದಿವೆ ಎಂದು ಅಧ್ಯಯನ ತೋರಿಸಿದೆ. ಚಹಾ ಅಥವಾ ತರಕಾರಿ ಇಷ್ಟವಾಗದಿದ್ದರೆ, ನೀವು ಅದರ ಟ್ಯಾಬ್ಲೆಟ್ ತೆಗೆದುಕೊಳ್ಳಬಹುದು.

  ಕೊಬ್ಬು ಕರಗಿಸುತ್ತದೆ

  ನುಗ್ಗೆಸೊಪ್ಪು ಹಲವಾರು ಅಗತ್ಯ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ. ಕರುಳಿನಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ತೆಗೆದು ಹಾಕುತ್ತದೆ. ಕ್ಲೋರೊಜೆನಿಕ್ ಆಮ್ಲವು ಕಂಡು ಬರುತ್ತದೆ. ಇದು ಬೊಜ್ಜು ವಿರೋಧಿ ಗುಣಲಕ್ಷಣ ಹೊಂದಿದೆ. ಇದು ಬೊಜ್ಜು ಅಥವಾ ತೂಕದ ಸಮಸ್ಯೆ ವಿರುದ್ಧ ಹೋರಾಡುತ್ತದೆ.

  ರಕ್ತದೊತ್ತಡ ಕಡಿಮೆ ಮಾಡುತ್ತದೆ

  ನುಗ್ಗೆಸೊಪ್ಪು ಚಹಾವನ್ನು ಒಣಗಿದ ಎಲೆಗಳಿಂದ ತಯಾರಿಸಲಾಗುತ್ತದೆ. ಈ ಎಲೆಗಳು ಕ್ವೆರ್ಸೆಟಿನ್ ಎಂಬ ಪೋಷಕಾಂಶ ಹೊಂದಿವೆ. ಇದು ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ. BP ರೋಗಿಗಳಿಗೆ ಅದರ ಆಂಟಿ-ಆಕ್ಸಿಡೇಟಿವ್ ಸಾಮರ್ಥ್ಯಗಳಿಂದ ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

  ನುಗ್ಗೆಸೊಪ್ಪು ಔಷಧೀಯ ಗುಣಗಳಿಂದಾಗಿ, ಅದರ ಎಲೆಗಳಿಂದ ತಯಾರಿಸಿದ ಚಹಾವು ಕ್ಯಾನ್ಸರ್, ದುರ್ಬಲ ಮೂಳೆಗಳು, ರಕ್ತಹೀನತೆ, ಆಲ್ಝೈಮರ್ಸ್, ಯಕೃತ್ತು ಸಂಬಂಧಿತ ಕಾಯಿಲೆಗಳು, ದುರ್ಬಲ ರೋಗನಿರೋಧಕ ಶಕ್ತಿ, ಕರುಳಿನ ಆರೋಗ್ಯ, ವಯಸ್ಸಾದ ವಿರೋಧಿ ಮತ್ತು ಚರ್ಮ ಸಂಬಂಧಿತ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

  ಇದನ್ನೂ ಓದಿ: ಚರ್ಮದ ವಿವಿಧ ಭಾಗಗಳಲ್ಲಿ ತುರಿಕೆ! ಇದಕ್ಕೇನು ಪರಿಹಾರ?

  ನುಗ್ಗೆಸೊಪ್ಪು ಚಹಾ ತಯಾರಿಸುವುದು ಹೇಗೆ?

  ನುಗ್ಗೆಸೊಪ್ಪು ಪುಡಿ ಆನ್‌ಲೈನ್‌ನಲ್ಲಿ ಮತ್ತು ಕಿರಾಣಿ ಅಂಗಡಿಗಳಲ್ಲಿ ಲಭ್ಯವಿದೆ. ನೀರಿನಲ್ಲಿ ಕುದಿಸಿ ಫಿಲ್ಟರ್ ಮಾಡಿ, ಕುಡಿಯುವುದು. ಮನೆಯಲ್ಲಿ ನುಗ್ಗೆಸೊಪ್ಪು ಪುಡಿ ತಯಾರಿಸಲು, ನುಗ್ಗೆಸೊಪ್ಪು ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ. ನಂತರ ಪುಡಿ ಮಾಡಿಟ್ಟುಕೊಂಡು ಚಹಾ ಮಾಡಿ.
  Published by:renukadariyannavar
  First published: