Crab Sambar: ಮೈ ನಡುಗಿಸೋ ಮಳೆಯಲ್ಲಿ ಬಿಸಿ ಬಿಸಿ ಏಡಿ ಸಾರು ತಿನ್ನೋ ಮಜಾನೇ ಬೇರೆ! ರೆಸಿಪಿ ಇಲ್ಲಿದೆ ಓದಿ, ಇಂದೇ ಟ್ರೈ ಮಾಡಿ

ಜೋರು ಮಳೆಯಲ್ಲಿ ಹೊರಗಡೆ ಹೋಟೆಲ್‌ಗೆ ಹೋಗೋಕೆ ಆಗ್ತಿಲ್ಲ ಅಂದ್ರೂ ಈ ಹಾಳಾದ ನಾಲಿಗೆ ಕೇಳೋದಿಲ್ವಲ್ಲಾ? ಏನ್ ಮಾಡೋದು ಅಂತ ಯೋಚನೆ ಮಾಡ್ತಾ ಇದ್ದೀರಾ? ಹಾಗಾದ್ರೆ ನಾವು ನಿಮಗೆ ಇಂದು ಸಾಂಪ್ರದಾಯಿಕವಾದ ಹಾಗೂ ಸ್ಪೆಷಲ್ ಆದ ನಾನ್ ವೆಜ್ ಅಡುಗೆ ಬಗ್ಗೆ ಹೇಳಿ ಕೊಡ್ತೀವಿ. ಅದೇ ಏಡಿ ಸಾರು!

ರುಚಿಯಾದ ಏಡಿ ಸಾಂಬಾರ್

ರುಚಿಯಾದ ಏಡಿ ಸಾಂಬಾರ್

  • Share this:
ಇಂದು ಭಾನುವಾರ (Sunday), ಜೋರಾದ ಮಳೆ (Heavy Rain) ಬೇರೆ ಇದೆ. ಮೈ ನಡುಗಿಸೋ ಚಳಿ (Cold) ಜೊತೆ, ಮಳೆ ಅಬ್ಬರ ಕೂಡ ಇದೆ. ನಾನ್ ವೆಜ್ (Non Veg) ಇಲ್ಲದೇ ನಾಲಿಗೆ ಕೆಟ್ಟು ಹೋಗಿದೆ. ಈ ಮಳೆಯಲ್ಲಿ ಹೊರಗಡೆ ಹೋಗಿ ಊಟ (Meals) ಮಾಡೋದು ಅಂದ್ರೆ ಕಿರಿಕಿರಿ. ಆದ್ರೆ ಈ ಹಾಳಾದ ನಾಲಿಗೆ ಕೇಳೋದಿಲ್ವಲ್ಲಾ? ಏನ್ ಮಾಡೋದು ಅಂತ ಯೋಚನೆ ಮಾಡ್ತಾ ಇದ್ದೀರಾ? ಹಾಗಾದ್ರೆ ನಾವು ನಿಮಗೆ ಇಂದು ಸಾಂಪ್ರದಾಯಿಕವಾದ (Traditional) ಹಾಗೂ ಸ್ಪೆಷಲ್ (Special) ಆದ ನಾನ್ ವೆಜ್ ಅಡುಗೆ ಬಗ್ಗೆ ಹೇಳಿ ಕೊಡ್ತೀವಿ. ಅದೇ ಏಡಿ ಸಾರು (Crab Sambar)!

ದೇಹಕ್ಕೆ ಅಗತ್ಯ ಪೋಷಣೆ ಒದಗಿಸುವ ಏಡಿ

ಏಡಿ ಕೇವಲ ರುಚಿಕರ ಮಾತ್ರವಲ್ಲ ಪ್ರೋಟೀನ್ ಸಮೃದ್ಧ ಆಹಾರವೂ ಆಗಿದೆ. ಜೊತೆಗೆ ಹಲವಾರು ಅಮೈನೋ ಆಮ್ಲಗಳಿದ್ದು ಇವು ಪ್ರೋಟೀನ್ ಉತ್ಪಾದನೆಗೆ ನೆರವಾಗುತ್ತವೆ. ವಿಶೇಷವಾಗಿ, ತೂಕ ಇಳಿಕೆಯ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಕಡಲೇಡಿ ಅತ್ಯುತ್ತಮ ಆಹಾರವಾಗಿದೆ. ಏಕೆಂದರೆ, ಈ ಪ್ರೋಟೀನ್ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಜೊತೆಗೇ ವ್ಯಾಯಾಮಕ್ಕೆ ಅಗತ್ಯವಾದ ಶಕ್ತಿಯನ್ನೂ ಒದಗಿಸುತ್ತದೆ ಮತ್ತು ಹೆಚ್ಚು ಹೊತ್ತು ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಅಹಾರ ಸೇವನೆಯಿಂದ ತಡೆಯುತ್ತದೆ. ಹೀಗಾಗಿ ಇಂದು ನೀವು ಏಡಿ ಸಾಂಬಾರು ಮಾಡಿ ಸವಿಯಲೇ ಬೇಕು.

ಬಾಯಲ್ಲಿ ನಿರೂರಿಸುವ ಏಡಿ ಖಾದ್ಯ


ಏಡಿ ಸಾಂಬಾರಿಗೆ ಬೇಕಾಗುವ ಸಾಮಗ್ರಿಗಳು

  • ಸಾಂಬಾರಿಗೆ ಬೇಕಾಗುವಷ್ಟು ಏಡಿ. ಹಳ್ಳದ ಏಡಿ, ಸಮುದ್ರದ ಏಡಿ ಯಾವುದಾದರೂ ಸರಿ

  • ಟೊಮೋಟೊ

  • ತೆಂಗಿನತುರಿ

  • ಈರುಳ್ಳಿ

  • ಬೆಳ್ಳುಳ್ಳಿ

  • ಶುಂಠಿ

  • ಹುಣಸೆಹಣ್ಣು

  • ಜೀರಿಗೆ

  • ಕಾಳುಮೆಣಸು

  • ಬ್ಯಾಡಿಗೆ ಮೆಣಸಿನಕಾಯಿ

  • ಕೊತ್ತಂಬರಿ ಬೀಜ

  • ಕರಿಬೇವಿನ ಸೊಪ್ಪು

  • ಕೊತ್ತಂಬರಿ ಸೊಪ್ಪು


ಚಳಿ ಮಳೆಗೆ ಏಡಿ ಸಾರು ಸಖತ್ ಕಾಂಬಿನೇಷನ್


ಏಡಿ ಸಾಂಬಾರು ಮಾಡುವ ವಿಧಾನ

  • ಮೊದಲಿಗೆ ಏಡಿಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು

  • ನಂತರ ಬ್ಯಾಡಗಿ ಮೆಣಸಿನಕಾಯಿ ಕೊತ್ತಂಬರಿ ಮತ್ತು ಈರುಳ್ಳಿ, ಕೊತ್ತಂಬರಿಸೊಪ್ಪು ಮತ್ತು ಜೀರಿಗೆ ಬೆಳ್ಳುಳ್ಳಿ ಶುಂಠಿ ಎಲ್ಲವನ್ನೂ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು

  • ಟೊಮೊಟೊ ಮತ್ತು ತೆಂಗಿನ ತುರಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು

  • ಅದಾದ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕರಿಬೇವಿನ ಸೊಪ್ಪು ಮತ್ತು ರುಬ್ಬಿಕೊಂಡ ಮಸಾಲೆಯನ್ನು ಹಾಕಬೇಕು

  • ಚೆನ್ನಾಗಿ ಫ್ರೈ ಆಗಿ, ಹಸಿ ವಾಸನೆ ಹೋಗುವವರೆಗೂ ಬಿಸಿ ಮಾಡಬೇಕು

  • ನಂತರ ಏಡಿಯನ್ನು ಹಾಕಬೇಕು

  • ಅದಾದ ಮೇಲೆ ಟೊಮೆಟೊ ಮತ್ತು ತೆಂಗಿನತುರಿ ರುಬ್ಬಿಕೊಂಡು ರೆಡಿ ಮಾಡಿಟ್ಟುಕೊಂಡ ಮಸಾಲೆ ಹಾಕಬೇಕು

  • ನಂತರ ಚೆನ್ನಾಗಿ ಕುದಿಸಬೇಕು

  • ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಬೇಕು


ಇದನ್ನೂ ಓದಿ: Sunday Special Non-Veg: ಇಂದು ನಿಮ್ಮ ಮನೆಯಲ್ಲಿ ಮಾಡಿ ಬಾಯಲ್ಲಿ ನೀರೂರಿಸುವ ಬಂಗಾಳಿ ಶೈಲಿಯ ರೇಜಲ್ ಚಿಕನ್

ಈ ಮೈ ಕೊರೆಯುವ ಮಳೆ ಹಾಗೂ ಚಳಿಗೆ ಬಿಸಿ ಬಿಸಿ ಏಡಿ ಸಾಂಬಾರು ಸೂಪರ್ ಆಗಿರುತ್ತದೆ. ಇದನ್ನು ಅನ್ನದ ಜೊತೆ ಹಾಕಿಕೊಂಡು ಊಟ ಮಾಡಬಹುದು. ಇಲ್ಲವಾದರೆ ರೊಟ್ಟಿ, ಚಪಾತಿ, ದೋಸೆ, ಇಡ್ಲಿ, ಕಡುಬು ಅಥವಾ ರಾಗಿಮುದ್ದೆ ಜೊತೆ ತಿನ್ನಬಹುದು.
Published by:Annappa Achari
First published: