Non-veg Recipe: ಸಂಜೆ ಸ್ನ್ಯಾಕ್ಸ್​​ಗೆ ಸ್ಪೈಸಿ ಚಿಕನ್ ಪೊಟಾಟೊ ಕಬಾಬ್; ಸಖತ್ ಟೇಸ್ಟಿ, ಒಮ್ಮೆ ಟ್ರೈ ಮಾಡಿ

ನಾನ್​ ವೆಜ್​ ಪ್ರಿಯರಲ್ಲಿ ಅನೇಕರು ತಿನ್ನಲು ಇಷ್ಟಪಡುವ ಮೊದಲ ಆಯ್ಕೆ ಕಬಾಬ್ ಆಗಿರುತ್ತೆ. ಇದರ ಜೊತೆ ಆಲೂಗಡ್ಡೆ ಹಾಕಿ ಮಾಡಿದ್ರೆ ಈ ಕಬಾಬ್​ ರುಚಿ ಮತ್ತಷ್ಟು ಹೆಚ್ಚಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಹುತೇಕರಿಗೆ ಸಂಜೆ ಆಗುತ್ತಲೇ ಏನಾದರೂ ಸ್ನ್ಯಾಕ್​ (Snack) ತಿನ್ನಲು ಬೇಕೆ ಬೇಕು, ಅದರಲ್ಲೂ ಎಣ್ಣೆಯಲ್ಲಿ ಗರಿಗರಿಯಾಗಿ ಕರಿದಂತಹ ಪದಾರ್ಥಗಳು ಎಂದರೆ ಚಹಾದ (Tea) ಜೊತೆಗೆ ಇನ್ನಷ್ಟು ರುಚಿಯನ್ನು ನೀಡುತ್ತವೆ ಎಂದು ಹೇಳಬಹುದು. ಅದರಲ್ಲೂ ಕೆಲವರಿಗೆ ಈ ಆಲೂಗಡ್ಡೆಯಿಂದ (Potato) ಮಾಡಿದ ತಿಂಡಿಗಳು ಎಂದರೆ ಪಂಚಪ್ರಾಣ. ಮತ್ತೆ ಇನ್ನೂ ಕೆಲವರಿಗೆ ಈ ಚಿಕನ್ ಕಬಾಬ್ (Chicken Kabab) ಎಂದರೆ ತುಂಬಾನೇ ಇಷ್ಟ.ಸಂಜೆ ಹೊತ್ತಿನಲ್ಲಿ ನಿಮ್ಮ ಬಿಸಿ ಬಿಸಿ ಚಹಾದೊಂದಿಗೆ ಇಲ್ಲಿ ಒಂದು ಗರಿಗರಿಯಾದ ತಿಂಡಿ ಇದೆ ನೋಡಿ. ನೀವು ಮನೆಯಲ್ಲಿ ಇದನ್ನು ಒಮ್ಮೆ ಟ್ರೈ ಮಾಡಿ ನೋಡಿ.

ರಾಜಮನೆತನದ ಮುಘಲೈ ಆಹಾರದ ಬಗ್ಗೆ ಯೋಚಿಸುವಾಗ, ನಾನ್​ ಬೆಜ್​ ಪ್ರಿಯರಲ್ಲಿ ಅನೇಕರು ತಿನ್ನಲು ಇಷ್ಟಪಡುವ ಮೊದಲ ಆಯ್ಕೆ ಕಬಾಬ್ ಆಗಿರುತ್ತೆ. ರಸಭರಿತವಾದ, ಬಾಯಿಯಲ್ಲಿ ಕರಗುವ ಮತ್ತು ಆರೊಮ್ಯಾಟಿಕ್ ಕಬಾಬ್‌ಗಳು ರುಚಿ ಆಸ್ವಾದಿಸುವ ಗ್ರಂಥಿಗಳಿಗೆ ಅಸಾಮಾನ್ಯ ಪಾಕಶಾಲೆಯ ಅನುಭವವನ್ನು ನೀಡುತ್ತವೆ ಮತ್ತು ನಿಜವಾದ ಆಹಾರ ಪ್ರೇಮಿಗಳು ಎಂದಿಗೂ ಇದರ ರುಚಿಯನ್ನು ಮರೆಯಲು ಸಾಧ್ಯವಿಲ್ಲ. ಅದರಲ್ಲೂ ಇದರ ಜೊತೆಗೆ ಪುದೀನ ಚಟ್ನಿ ಇದ್ದರಂತೂ ರುಚಿಯನ್ನು ಬಾಯಿಯಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ.

Non-veg Recipe: ಈಸ್ಟರ್ ಸಂಡೇಗಾಗಿ ಸ್ಪೆಷಲ್ ಸ್ಪೈಸಿ ಚಿಕನ್ ಫ್ರೈ

ಪಂಚತಾರಾ ರೆಸ್ಟೊರೆಂಟ್ ಖಾದ್ಯ

ನೀವು ಪಂಚತಾರಾ ರೆಸ್ಟೊರೆಂಟ್ ಅಥವಾ ಕೆಫೆಯಲ್ಲಿ ಈ ಖಾದ್ಯವನ್ನು ಆರ್ಡರ್ ಮಾಡುತ್ತಿರಲಿ ಅಥವಾ ಚಿಕ್ಕ ಬೀದಿ ಬದಿಯ ತಿನಿಸುಗಳಿಂದ ಆನಂದಿಸುತ್ತಿರಲಿ, ಅಸಂಖ್ಯಾತ ಸುವಾಸನೆ ಮತ್ತು ಭರ್ತಿಗಳನ್ನು ಪ್ರಯೋಗಿಸಬಹುದು. ಮಟನ್ ಕಬಾಬ್ ಮತ್ತು ಚಿಕನ್ ಕಬಾಬ್, ಬೋಟಿ ಕಬಾಬ್ ಮತ್ತು ವೆಜ್ ಕಬಾಬ್‌ನಿಂದ, ಹೀಗೆ ಆಯ್ಕೆ ಮಾಡಲು ಸಾಕಷ್ಟು ಪಾಕ ವಿಧಾನಗಳಿವೆ. ಆದ್ದರಿಂದ, ನೀವು ಆರೋಗ್ಯಕರ ಕಬಾಬ್ ಅನ್ನು ಸಂಜೆ ಹೊತ್ತಿನಲ್ಲಿ ನಿಮ್ಮ ಮನೆಯಲ್ಲಿಯೇ ಮಾಡಿಕೊಂಡು ತಿನ್ನಲು ಬಯಸಿದರೆ, ಇಲ್ಲಿ ನಾವು ನಿಮಗೆ ಸ್ವಾದಿಷ್ಟವಾದ ಚಿಕನ್ ಕಬಾಬ್ ರೆಸಿಪಿಯನ್ನು ತಂದಿದ್ದೇವೆ ನೋಡಿ.

ಹೆಸರೇ ಸೂಚಿಸುವಂತೆ, ಈ ಕಬಾಬ್ ಪಾಕ ವಿಧಾನವು ಆಲೂಗೆಡ್ಡೆ ಮಿಶ್ರಣದೊಂದಿಗೆ ಚಿಕನ್ ಕೀಮಾವನ್ನು ಒಳಗೊಂಡಿರುತ್ತದೆ ಮತ್ತು ಅದು ಹೆಚ್ಚು ಕರಗುವ ಮತ್ತು ಮೆತ್ತಗಿನ ರುಚಿ ಮತ್ತು ವಿನ್ಯಾಸವನ್ನು ನೀಡುತ್ತದೆ. ತುಂಬಾ ರುಚಿಕರವಾಗಿರುವುದರ ಜೊತೆಗೆ, ಈ ಕಬಾಬ್ ಪಾಕ ವಿಧಾನವನ್ನು ತಯಾರಿಸಲು ತುಂಬಾ ಸುಲಭವಾಗಿದೆ. ಏಕೆಂದರೆ ಅಡುಗೆ ಮಾಡುವ ಮೊದಲು ಇದಕ್ಕೆ ದೀರ್ಘ ಗಂಟೆಗಳ ಮ್ಯಾರಿನೇಶನ್ ಅಗತ್ಯವಿಲ್ಲ. ಆದ್ದರಿಂದ ಇದು ಸುಲಭವಾಗಿ ಮತ್ತು ತ್ವರಿತವಾಗಿ ಮಾಡಿಕೊಳ್ಳಬಹುದು.

ಇದನ್ನೂ ಓದಿ: Sunday Special Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಮಾಡಿ ಸ್ಪೆಷಲ್ ಎಗ್ ಬಿರಿಯಾನಿ

ಚಿಕನ್ ಪೊಟ್ಯಾಟೊ (ಆಲೂಗಡ್ಡೆ) ಕಬಾಬ್ ಮಾಡುವ ವಿಧಾನ:

ಚಿಕನ್ ಆಲೂಗಡ್ಡೆ ಕಬಾಬ್ ಅನ್ನು ಹೇಗೆ ತಯಾರಿಸುವುದು ಎಂದು ಇಲ್ಲಿ ನೋಡಿಕೊಳ್ಳಿರಿ. ಈ ಪಾಕ ವಿಧಾನವನ್ನು ಪ್ರಾರಂಭಿಸಲು, ಮೊದಲು ಒಂದು ಬೌಲ್ ಅನ್ನು ತೆಗೆದುಕೊಂಡು, ಬೇಯಿಸಿದ ಆಲೂಗಡ್ಡೆ ಮತ್ತು ಬೇಯಿಸಿದ ಚಿಕನ್ ಅನ್ನು ಅದಕ್ಕೆ ಸೇರಿಸಿ ಅವುಗಳನ್ನು ಸರಿಯಾಗಿ ಕಲಸಿ ಕೊಳ್ಳಿ. ಈಗ ಒಂದು ಟೇಬಲ್ ಚಮಚದಷ್ಟು ಗರಂ ಮಸಾಲ, ಉಪ್ಪು, ಹುರಿದ ಜೀರಾ ಪುಡಿ, ಕಾಲಿ ಮಿರ್ಚ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಗಳನ್ನು ಅದರಲ್ಲಿ ಸೇರಿಸಿಕೊಳ್ಳಿ.

ಎಲ್ಲವೂ ಮಿಶ್ರಣ ಮಾಡಿದ ನಂತರ, ಕತ್ತರಿಸಿದ ಹಸಿರು ಮೆಣಸಿನಕಾಯಿಗಳು, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಪುದೀನಾ ಎಲೆಗಳನ್ನು ಅದಕ್ಕೆ ಸೇರಿಸಿ ಮತ್ತು ಎಲ್ಲವನ್ನೂ ಮತ್ತೆ ಮಿಶ್ರಣ ಮಾಡಿಕೊಳ್ಳಿರಿ. ನಂತರ 10 ರಿಂದ 15 ನಿಮಿಷಗಳ ಕಾಲ ಆ ಮಿಶ್ರಣವನ್ನು ನಿಮ್ಮ ಫ್ರಿಜ್‌ ನಲ್ಲಿಡಿ. ಸ್ವಲ್ಪ ಸಮಯದ ನಂತರ ಆ ಕಬಾಬ್ ಮಿಶ್ರಣವನ್ನು ಹೊರಕ್ಕೆ ತೆಗೆದಿಡಿ. ನಂತರ ಅದಕ್ಕೆ ಒಂದು ದುಂಡನೆಯ ಆಕಾರ ನೀಡಿ ಎಲ್ಲಾ ಟಿಕ್ಕಿಗಳನ್ನು ಎಣ್ಣೆಯಲ್ಲಿ ಹಾಕಿಕೊಂಡು ಡೀಪ್ ಆಗಿ ಫ್ರೈ ಮಾಡಿ ಮತ್ತು ನಿಮ್ಮ ಕಬಾಬ್‌ಗಳು ಸೇವಿಸಲು ಸಿದ್ಧವಾಗಿರುತ್ತವೆ.
Published by:Pavana HS
First published: