Sunday Special Recipe: ಭಾನುವಾರದ ಬಾಡೂಟಕ್ಕೆ ಮಾಡಿಕೊಳ್ಳಿ ಖಡಕ್ ಸ್ಪೈಸಿ ಚಿಕನ್ ಪೆಪ್ಪರ್ ಡ್ರೈ

chicken pepper dry: ರಾಜ್ಯ ಸರ್ಕಾರ ಈ ಬಾರಿ ವೀಕೆಂಡ್ ಕರ್ಫ್ಯೂ ರದ್ದುಮಾಡಿದೆ.. ಹೀಗಾಗಿ ಕೆಲವು ಮಾಂಸಹಾರಿ ಪ್ರಿಯರು ಹೋಟೆಲ್ ಗಳತ್ತ ಮುಖ ಮಾಡಿದರೆ ಇನ್ನು ಕೆಲವರು, ಮನೆಯಲ್ಲಿ ರುಚಿರುಚಿಯಾದ ಮಾಂಸಾಹಾರಿ ಖಾದ್ಯ ತಯಾರಿಸಲು ಮಾಂಸದ ಅಂಗಡಿಗಳತ್ತ ತೆರಳಿ ಫ್ರೆಶ್ ಆಗಿರುವ ಮಾಂಸ ತಂದು ಮನೆಯಲ್ಲಿ ಅಡುಗೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ

 ಚಿಕನ್ ಪೆಪ್ಪರ್ ಡ್ರೈ

ಚಿಕನ್ ಪೆಪ್ಪರ್ ಡ್ರೈ

  • Share this:
    ಭಾನುವಾರ(Sunday) ಬಂತು ಅಂದರೆ, ನಾನ್ ವೆಜ್(Non veg) ಪ್ರಿಯರಿಗೆ ಹಬ್ಬ. ರಜೆ ದಿನ (Holiday) ಬೆಳ್ಳಂಬೆಳ್ಳಗೆ ಮಾಂಸದಂಗಡಿ ಮುಂದೆ ಕ್ಯೂ ನಿಂತು, ಬಿರಿಯಾನಿ (Biriyani) ಕನಸು ಕಾಣುವುದು ಕಾಮನ್.. ಮಾಂಸಾಹಾರಿಗಳಿಗೆ ತಮಗಿಷ್ಟವಾದ ಊಟ(Meal) ತಿನ್ನಲು ವಾರದ ಮಿತಿ ಇಲ್ಲದಿದ್ದರೂ ವೀಕೆಂಡ್​​​​​ನಲ್ಲಿ (Weekend) ತಮ್ಮ ಪ್ರೀತಿಪಾತ್ರರೊಂದಿಗೆ ಕುಳಿತು ವೆರೈಟಿ ಅಡುಗೆ(Food) ಮಾಡಿ ತಿಂದರೆ ಅದರ ಮಜಾನಾ ಬೇರೆ.ಹೀಗಾಗಿ ಹೆಚ್ಚಿನ ಜನರು ಭಾನುವಾರದ ಸಮಯದಲ್ಲಿ ಪ್ರೀತಿ ಪಾತ್ರರೊಂದಿಗೆ ನೆಚ್ಚಿನ ಹೋಟೆಲ್ಗಳಿಗೆ(Hotel) ಹೋಗಿ ವೆರೈಟಿ ವೆರೈಟಿ ಬಾಡೂಟ ಮಾಡಲು ಇಷ್ಟಪಡುತ್ತಾರೆ.. ಆದರೆ ಇನ್ನೂ ಕೆಲವರು ಮಾತ್ರ ಮನೆಯಲ್ಲಿಯೇ ಕುಳಿತು ರುಚಿರುಚಿಯಾಗಿ ವಿಭಿನ್ನವಾದ ಅಡುಗೆ ಗಳನ್ನು ತಯಾರಿಸಿ ತಮ್ಮ ಕುಟುಂಬದವರಿಗೂ ತಿನ್ನಿಸಿ ತಾವು ತಿಂದು ತಮ್ಮ ಭಾನುವಾರವನ್ನು ಮತ್ತಷ್ಟು ವಿಭಿನ್ನವಾಗಿಯೇ ಕಳೆಯಲು ಇಷ್ಟಪಡುತ್ತಾರೆ.

    ಸದ್ಯ ಹೇಗೂ ರಾಜ್ಯ ಸರ್ಕಾರ ಈ ಬಾರಿ ವೀಕೆಂಡ್ ಕರ್ಫ್ಯೂ ರದ್ದುಮಾಡಿದೆ. ಹೀಗಾಗಿ ಕೆಲವು ಮಾಂಸಹಾರಿ ಪ್ರಿಯರು ಹೋಟೆಲ್ ಗಳತ್ತ ಮುಖ ಮಾಡಿದರೆ ಇನ್ನು ಕೆಲವರು, ಮನೆಯಲ್ಲಿ ರುಚಿರುಚಿಯಾದ ಮಾಂಸಾಹಾರಿ ಖಾದ್ಯ ತಯಾರಿಸಲು ಮಾಂಸದ ಅಂಗಡಿಗಳತ್ತ ತೆರಳಿ ಫ್ರೆಶ್ ಆಗಿರುವ ಮಾಂಸ ತಂದು ಮನೆಯಲ್ಲಿ ಅಡುಗೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

    ಹೀಗಾಗಿ ಮನೆಯಲ್ಲಿ ವಿಭಿನ್ನವಾದ ಅಡುಗೆ ಮಾಡಬೇಕು ಎಂದುಕೊಳ್ಳುತ್ತಿರುವವರಿಗಾಗಿ ಈ ವಾರ ಚಿಕನ್ ಪೆಪ್ಪರ್ ಡ್ರೈ ಮಾಡುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ..

    ಇದನ್ನೂ ಓದಿ: ನಾಟಿ ಸ್ಟೈಲ್​ನಲ್ಲಿ ಸ್ವಾದಿಷ್ಟ ಚಿಕನ್ 65 ರೆಸಿಪಿ - ನೀವೂ ಟ್ರೈ ಮಾಡಿ

    ಚಿಕನ್ ಪೆಪ್ಪರ್ ಡ್ರೈ ಮಾಡಲು ಬೇಕಾಗುವ ಪದಾರ್ಥ

    ಚಿಕನ್ ಡ್ರಮ್​​​ಸ್ಟಿಕ್ – 1 kg
    ಮಧ್ಯಮ ಗಾತ್ರದ ಈರುಳ್ಳಿ – 4
    ಬೆಳ್ಳುಳ್ಳಿ – 2
    ಶುಂಠಿ – 1/2 ಇಂಚು
    ಕರಿಬೇವು – 2 ಎಸಳು
    ಹಸಿಮೆಣಸಿನಕಾಯಿ – 6
    ಕರಿಮೆಣಸಿನಪುಡಿ – 2 1/2 tsp
    ಅರಿಸಿನ ಪುಡಿ – 1/2 tsp
    ಗರಂ ಮಸಾಲೆ – 1 tsp
    ಎಣ್ಣೆ – 4 tbsp
    ಶುಂಠಿ ಬೆಳ್ಳುಳ್ಳಿ ಪೇಸ್ಟ್​​​​ – 1 tbsp
    ಸೋಯಾಸಾಸ್ – 2 tbsp
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 tbsp
    ಉಪ್ಪು – ರುಚಿಗೆ ತಕ್ಕಷ್ಟು

    ಚಿಕನ್ ಪೆಪ್ಪರ್ ಡ್ರೈ ತಯಾರಿಸುವುದು ಹೇಗೆ..?

    ಮೊದಲು ಅಂಗಡಿಯಿಂದ ತಂದ ಚಿಕನ್ ಡ್ರಮ್​​​​ಸ್ಟಿಕ್​​​​​ಗಳನ್ನು ತೊಳೆದು ನೀರು ಡ್ರೈ ಬಿಡಬೇಕು. ನಂತರ ಚಾಕುವಿನಿಂದ ಅಲ್ಲಲ್ಲಿ ಸ್ಪ್ಲಿಟ್​​​​​​​​​ (ತುಂಡಾಗದಂತೆ) ಮಾಡಬೇಕು.. ಹೀಗೆ ಮಾಡುವುದರಿಂದ ಚಿಕನ್​​​​ಗೆ ನಾವು ಸೇರಿಸುವ ಮಸಾಲೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇದರಿಂದ ಚಿಕನ್ ರುಚಿ ಮತ್ತಷ್ಟು ಹೆಚ್ಚಾಗುತ್ತದೆ..

    ಬಳಿಕ ಈರುಳ್ಳಿಯನ್ನು ಸಣ್ಣ ಹಾಗೂ ಉದ್ದವಾಗಿ ಹೆಚ್ಚಿಕೊಂಡು, ಪ್ಯಾನ್ ನಲ್ಲಿ ಎಣ್ಣೆ ಬಿಸಿಮಾಡಿ ಇಟ್ಟು ಯಾಕೆ ಈರುಳ್ಳಿ ಹಾಗೂ ಕರಿಬೇವು ಸೇರಿಸಿ ಈರುಳ್ಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಚೆನ್ನಾಗಿ ಹುರಿಯಬೇಕು.. ನಂತರ ಇದಕ್ಕೆ ಉದ್ದಕ್ಕೆ ಸೀಳಿಕೊಂಡ ಮೆಣಸಿನ ಕಾಯಿಯನ್ನು ಸೇರಿಸಿ ಮಿಕ್ಸ್ ಮಾಡಿ, ಉಪ್ಪು ಅರಿಶಿನ ಗರಂ ಮಸಾಲೆ ಸೇರಿಸಿ ಎರಡರಿಂದ ಮೂರು ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಬೇಕು.

    ಇದರ ನಡುವೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಚೆನ್ನಾಗಿ ನಯವಾಗಿ ರುಬ್ಬಿಕೊಂಡು, ಈರುಳ್ಳಿ ಮೆಣಸಿನಕಾಯಿ ಗರಂಮಸಾಲೆ ಮಿಶ್ರಿತ ಒಗ್ಗರಣೆಗೆ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಹುರಿಯಬೇಕು.. ಹೀಗೆ ತಯಾರಿಟ್ಟುಕೊಂಡ ಮಿಶ್ರಣ ದೊಂದಿಗೆ ನಾವು ಒಂದೊಂದಾಗಿ ಚಿಕನ್ ಡ್ರಮ್​​ ಸ್ಟಿಕ್ ಸೇರಿಸಿ ಎಲ್ಲವೂ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿ

    ಇದನ್ನೂ ಓದಿ: ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿಯ ಕಡಾಯಿ ಚಿಕನ್

    ಚಿಕನ್ ಡ್ರಮ್ ಸ್ಟಿಕ್ ಮಿಕ್ಸ್ ಮಾಡಿದ ನಂತರ ಅಗತ್ಯವಿದ್ದಷ್ಟು ಉಪ್ಪು ಹಾಗೂ ಸ್ವಲ್ಪ ನೀರು ಸೇರಿಸಿ ಮಧ್ಯಮ ಗಾತ್ರದ ಉರಿಯಲ್ಲಿ 10 ನಿಮಿಷ ಮುಚ್ಚಳ ಮುಚ್ಚಿ ಚಿಕನ್ ಬೇಯಿಸಬೇಕು.. ಹತ್ತು ನಿಮಿಷಗಳ ಕಾಲ ಚಿಕನ್ ಬೆಂದ ಬಳಿಕ ಮುಚ್ಚಳ ತೆಗೆದು ಸ್ವಲ್ಪ ಸೋಯಾಸಾಸ್ ಹಾಗೂ ಕರಿಮೆಣಸಿನ ಪುಡಿ ಸೇರಿಸಿ ನಿಧಾನವಾಗಿ ತಿರುವಿ ಮುಚ್ಚಳ ಮುಚ್ಚಿ, ಮತ್ತೆ ಏಳರಿಂದ ಹತ್ತು ನಿಮಿಷಗಳ ಕಾಲ ಹದವಾದ ಉರಿಯಲ್ಲಿ ಚಿಕನ್ ಬೇಯುವಂತೆ ನೋಡಿಕೊಳ್ಳಬೇಕು.

    ಹೀಗೆ ಹತ್ತು ನಿಮಿಷಗಳ ಕಾಲ ಚಿಕನ್ ಬೇಯುವಂತೆ ನೋಡಿಕೊಂಡರೆ ರುಚಿರುಚಿಯಾದ ಸ್ಪೈಸಿ ಚಿಕನ್ ಪೆಪ್ಪರ್ ಡ್ರೈ ತಿನ್ನಲು ಸಿದ್ಧವಾಗಿರುತ್ತೆ. ಬಳಿಕ ಸರ್ವಿಂಗ್ ಪ್ಲೇಟ್​​​​ಗೆ ಚಿಕನ್ ಪೆಪ್ಪರ್ ಡ್ರೈ ಸೇರಿಸಿ ಕೊತ್ತಂಬರಿ ಸೊಪ್ಪಿನಿಂದ ಗಾರ್ನಿಶ್ ಮಾಡಿ ಸರ್ವ್ ಮಾಡಿ
    Published by:ranjumbkgowda1 ranjumbkgowda1
    First published: