Sunday Special Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಮಾಡಿ ರುಚಿಯಾದ ಕಲ್ಮಿ ಕಬಾಬ್

Kalmi kabab: ಮನೆಯಲ್ಲಿಯೇ ರೆಸ್ಟೋರೆಂಟ್ ಶೈಲಿಯ ರೀತಿಯಲ್ಲಿ ಕಲ್ಮಿ ಕಬಾಬ್ ಮಾಡಲು ಪ್ರತ್ಯೇಕ ಉಪಕರಣ ಕೆಂಡ ಬೇಕು ಎಂದು ಬಹುತೇಕರು ಅಂದುಕೊಂಡಿರುತ್ತಾರೆ.. ಆದರೆ ಇದ್ಯಾವುದು ಇಲ್ಲದೆ ಮನೆಯಲ್ಲಿ ರುಚಿರುಚಿಯಾದ ರೆಸ್ಟೋರೆಂಟ್ ಶೈಲಿಯ ಕಲ್ಮಿ ಕಬಾಬ್ ಅನ್ನು ಕೇವಲ ಸ್ಟೀಮ್ ಮಾಡಿ ಮನೆಯಲ್ಲಿಯೆ ತಯಾರಿಸುವ ವಿಧಾನ ಹೇಗೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಕಲ್ಮಿ ಕಬಾಬ್

ಕಲ್ಮಿ ಕಬಾಬ್

  • Share this:
    ಭಾನುವಾರ(Sunday) ಬಂತು ಅಂದರೆ, ನಾನ್ ವೆಜ್(Non Veg) ಪ್ರಿಯರಿಗೆ ಹಬ್ಬ. ರಜೆ ದಿನ ಬೆಳ್ಳಂಬೆಳ್ಳಗೆ ಮಾಂಸದಂಗಡಿ ಮುಂದೆ ಕ್ಯೂ ನಿಂತು, ಬಿರಿಯಾನಿ (Biryani)ಕನಸು ಕಾಣುವುದು ಕಾಮನ್. ಮಾಂಸಾಹಾರಿಗಳಿಗೆ ತಮಗಿಷ್ಟವಾದ ಊಟ(Meal) ತಿನ್ನಲು ವಾರದ ಮಿತಿ ಇಲ್ಲದಿದ್ದರೂ ವೀಕೆಂಡ್​​​​​ನಲ್ಲಿ(Weekend) ತಮ್ಮ ಪ್ರೀತಿಪಾತ್ರರೊಂದಿಗೆ ಕುಳಿತು ವೆರೈಟಿ ಅಡುಗೆ(Food) ಮಾಡಿ ತಿಂದರೆ ಅದರ ಮಜಾನಾ ಬೇರೆ. ಹೀಗಾಗಿ ಹೆಚ್ಚಿನ ಜನರು ಭಾನುವಾರದ ಸಮಯದಲ್ಲಿ ಪ್ರೀತಿ ಪಾತ್ರರೊಂದಿಗೆ ನೆಚ್ಚಿನ ಹೋಟೆಲ್ ಗಳಿಗೆ (Hotel)ಹೋಗಿ ವೆರೈಟಿ ವೆರೈಟಿ ಬಾಡೂಟ ಮಾಡಲು ಇಷ್ಟಪಡುತ್ತಾರೆ. ಆದರೆ ಇನ್ನೂ ಕೆಲವರು ಮಾತ್ರ ಮನೆಯಲ್ಲಿಯೇ(Home) ಕುಳಿತು ರುಚಿರುಚಿಯಾಗಿ ವಿಭಿನ್ನವಾದ ಅಡುಗೆ ಗಳನ್ನು ತಯಾರಿಸಿ ತಮ್ಮ ಕುಟುಂಬದವರಿಗೂ ತಿನ್ನಿಸಿ ತಾವು ತಿಂದು ತಮ್ಮ ಭಾನುವಾರವನ್ನು ಮತ್ತಷ್ಟು ವಿಭಿನ್ನವಾಗಿಯೇ ಕಳೆಯಲು ಇಷ್ಟಪಡುತ್ತಾರೆ.

    ಇದನ್ನೂ ಓದಿ: ಭಾನುವಾರದ ಬಾಡೂಟಕ್ಕೆ ಬಾಯಲ್ಲಿ ನೀರೂರಿಸುವ ಚಿಕನ್ ಗ್ರೇವಿ ರೆಸಿಪಿ

    ಸದ್ಯ ಹೇಗೂ ರಾಜ್ಯ ಸರ್ಕಾರ ಈ ಬಾರಿ ವೀಕೆಂಡ್ ಕರ್ಫ್ಯೂ ರದ್ದುಮಾಡಿದೆ. ಹೀಗಾಗಿ ಕೆಲವು ಮಾಂಸಹಾರಿ ಪ್ರಿಯರು ಹೋಟೆಲ್ ಗಳತ್ತ ಮುಖ ಮಾಡಿದರೆ ಇನ್ನು ಕೆಲವರು, ಮನೆಯಲ್ಲಿ ರುಚಿರುಚಿಯಾದ ಮಾಂಸಾಹಾರಿ ಖಾದ್ಯ ತಯಾರಿಸಲು ಮಾಂಸದ ಅಂಗಡಿಗಳತ್ತ ತೆರಳಿ ಫ್ರೆಶ್ ಆಗಿರುವ ಮಾಂಸ ತಂದು ಮನೆಯಲ್ಲಿ ಅಡುಗೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

    ಹೀಗಾಗಿ ಮನೆಯಲ್ಲಿ ವಿಭಿನ್ನವಾದ ಅಡುಗೆ ಮಾಡಬೇಕು ಎಂದುಕೊಳ್ಳುತ್ತಿರುವವರಿಗಾಗಿ ಈ ವಾರ ಕಲ್ಮಿ ಕಬಾಬ್ ಮಾಡುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ..

    ಕಲ್ಮಿ ಕಬಾಬ್ ಮಾಡಲು ಬೇಕಾಗುವ ಸಾಮಗ್ರಿ

    ಚಿಕನ್ ಲೆಗ್‌ ಪೀಸ್ 7-8

    ಖಾರದ ಪುಡಿ 2 ಚಮಚ

    ಕೊತ್ತಂಬರಿ ಪುಡಿ 1 ಚಮಚ

    ಅರಿಶಿಣ ಪುಡಿ /4 ಚಮಚ

    ಗರಂ ಮಸಾಲ ಪುಡಿ 1/4 ಚಮಚ

    ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ

    1 ಈರುಳ್ಳಿ ಪೇಸ್ಟ್ (ಬೇಕಾದರೆ ಮಾತ್ರ ಬಳಸಬಹುದು)

    ರುಚಿಗೆ ತಕ್ಕ ಉಪ್ಪು

    ನಿಂಬೆಹಣ್ಣು 1/2

    ಕಲ್ಮಿ ಕಬಾಬ್ ಮಾಡುವ ವಿಧಾನ

    ಮನೆಯಲ್ಲಿಯೇ ರೆಸ್ಟೋರೆಂಟ್ ಶೈಲಿಯ ರೀತಿಯಲ್ಲಿ ಕಲ್ಮಿ ಕಬಾಬ್ ಮಾಡಲು ಪ್ರತ್ಯೇಕ ಉಪಕರಣ ಕೆಂಡ ಬೇಕು ಎಂದು ಬಹುತೇಕರು ಅಂದುಕೊಂಡಿರುತ್ತಾರೆ. ಆದರೆ ಇದ್ಯಾವುದು ಇಲ್ಲದೆ ಮನೆಯಲ್ಲಿ ರುಚಿ ರುಚಿಯಾದ ರೆಸ್ಟೋರೆಂಟ್ ಶೈಲಿಯ ಕಲ್ಮಿ ಕಬಾಬ್ ಅನ್ನು ಕೇವಲ ಸ್ಟೀಮ್ ಮಾಡಿ ಮನೆಯಲ್ಲಿಯೆ ತಯಾರಿಸುವ ವಿಧಾನ ಹೇಗೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ..

    ಕಲ್ಮಿ ಕಬಾಬ್ ಮಾಡಲು ಮೊದಲು ಮಸಾಲೆ ಮಿಶ್ರಣವನ್ನು ಹರಡಿ ಮಾಡಿಕೊಳ್ಳಬೇಕು.. ಹೀಗಾಗಿ ಅರ್ಧ ಚಮಚ ಖಾರದ ಪುಡಿ ಅರ್ಧ ಚಮಚ ಕೊತ್ತಂಬರಿ ಪುಡಿ, ಉಪ್ಪು ಸ್ವಲ್ಪ ಅರಿಶಿಣದ ಪುಡಿ ಹಾಕಿ ಮಿಶ್ರಣ ಮಾಡಿ ಮಸಾಲೆ ರೆಡಿ ಇಟ್ಟುಕೊಳ್ಳಬೇಕು.

    ಹೀಗೆ ರೆಡಿ ಇಟ್ಟುಕೊಂಡ ಮಸಾಲೆ ಮಿಶ್ರಣವನ್ನು ನಾವು ಅಂಗಡಿಯಿಂದ ತಂದ ಲೆಗ್‌ ಪೀಸ್‌ಗೆ ಸರಿಯಾಗಿ ಮಸಾಲೆ ಹಿಡಿಯುವಂತೆ ಸೇರಿಸಬೇಕು.

    ಈ ಮಸಾಲೆ ಮಿಶ್ರಣವನ್ನು ಲೆಗ್‌ ಪೀಸ್‌ಗೆ ಸೇರಿಸಿದ ನಂತರ ಸ್ಟೀಮ್‌ನಲ್ಲಿ 30 ನಿಮಿಷ ಬೇಯಿಸಿ. ಇಡ್ಲಿ ಪಾತ್ರೆಯಲ್ಲಿ ಬೇಕಾದರೂ ಬೇಯಿಸಬಹುದು. ನಂತರ ಬೆಂದ ಚಿಕನ್‌ ಪೀಸ್‌ ತೆಗೆದು ಒನದು ಪ್ಲೇಟ್‌ನಲ್ಲಿ ಹಾಕಿಡಿ. ಆ ಪ್ಲೇಟ್‌ಗೆ ಉಳಿದ ಮಸಾಲೆ ಮಿಶ್ರಣ ಹಾಕಿ ಸ್ವಲ್ಪ ನೀರು ಹಾಕಿ ಮಿಶ್ರ ಮಾಡಿ ನಂತರ ಲೆಗ್‌ಪೀಸ್‌ಗೆ ಮತ್ತೊಮ್ಮೆ ಹಚ್ಚಿ.

    ಇದನ್ನೂ ಓದಿ: ಭಾನುವಾರದ ಬಾಡೂಟಕ್ಕೆ ಮಾಡಿಕೊಳ್ಳಿ ಖಡಕ್ ಸ್ಪೈಸಿ ಚಿಕನ್ ಪೆಪ್ಪರ್ ಡ್ರೈ

    ಈಗ ತವಾವನ್ನು ಬಿಸಿ ಮಾಡಿ ಅದರ ಮೇಲೆ ಎಣ್ಣೆ ಅಥವಾ ತುಪ್ಪ ಹಾಕಿ ಸ್ಟೀಮ್ ಮಾಡಿಕೊಂಡ ಅಥವಾ ಬೇಯಿಸಿದ ಚಿಕನ್ ಲೆಗ್ ಪೀಸ್ ಇಟ್ಟು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಫ್ರೈ ಮಾಡಿ.. ಹೀಗೆ ಮಾಡಿದರೆ ಮನೆಯಲ್ಲಿಯೇ ರೆಸ್ಟೋರೆಂಟ್ ಮಾದರಿಯ ಕಲ್ಮಿ ಕಬಾಬ್ ತಿನ್ನಲು ರೆಡಿ..
    Published by:ranjumbkgowda1 ranjumbkgowda1
    First published: