Sunday Special: ಭಾನುವಾರದ ಬಾಡೂಟಕ್ಕೆ ಬಾಯಲ್ಲಿ ನೀರೂರಿಸುವ ಚಿಕನ್ ಗ್ರೇವಿ ರೆಸಿಪಿ

Chicken gravy: ವೀಕೆಂಡ್ ಕರ್ಫ್ಯೂ ವೇಳೆ ನಿಮ್ಮ ಭಾನುವಾರವನ್ನು ಮತ್ತಷ್ಟು ಸ್ಪೆಷಲ್ ಆಗಿಸಲು, ಮನೆಯಲ್ಲಿ ನಿಮ್ಮ ಕೈಯಾರೆ ನೀವು ಬಯಸಿದ ರೀತಿ ಚಿಕನ್ ಗ್ರೇವಿ ಮಾಡಿ ಮನೆಯಲ್ಲಿಯೇ ಸವಿಯಬಹುದು.

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

  • Share this:
    ಚಳಿಗಾಲದಲ್ಲಿ(Winter)ಬಿಸಿಯಾದ ಹಾಗೂ ಖಾರದ ಖಾದ್ಯಗಳನ್ನು ತಿನ್ನುವುದು ಇಷ್ಟವಾಗುತ್ತದೆ. ಪ್ರತಿ ಭಾನುವಾರ(Sunday)ಹೇಗಿದ್ರು ಮನೆಯಲ್ಲಿ(Home)ನಾನ್‍ವೆಜ್(Nonveg )ಮಾಡುತ್ತೀರಾ . ಪ್ರತಿ ಸಂಡೇ, ಚಿಕನ್(Chicken), ಮಟನ್(Mutton), ಫಿಶ್(Fish)ತಿನ್ನುತ್ತೀರಾ. ಅದ್ರಲ್ಲೂ ಬಿರಿಯಾನಿ, ಕಬಾಬ್, ಪ್ರೈ ಪ್ರತಿ ವಾರ ಮಾಡಿ ತಿಂತಾನೇ ಇರ್ತಿರಾ. ಇನ್ನು ಕೆಲವರು ಹೋಟೆಲ್ ಗಳಿಗೆ ಹೋಗಿ ಪ್ರತಿ ಭಾನುವಾರ ತಮ್ಮ ನೆಚ್ಚಿನ ಮಾಂಸಾಹಾರ ಸೇವನೆ ಮಾಡುತ್ತಾರೆ. ಆದರೆ ಈ ವಾರ ವೀಕೆಂಡ್ ಕರ್ಫ್ಯೂ (Weekend Curfew)ಇರುವ ಕಾರಣ ಮನೆಯಿಂದ ಹೊರ ಹೋಗಲು ಸಾಧ್ಯವಿಲ್ಲ. ಮನೆಯಿಂದ ಹೊರ ಹೋದರು ಹೋಟೆಲ್ ಗಳು ಓಪನ್ ಇರುವುದಿಲ್ಲ. ಹೀಗಾಗಿ ಈ ಭಾನುವಾರದ ಬಾಡೂಟಕ್ಕೆ ಏನು ಮಾಡುವುದು ಎನ್ನುವ ಚಿಂತೆ ಹಲವರಲ್ಲಿ ಕಾಡುತ್ತಿರುತ್ತದೆ. ಹೀಗಾಗಿಯೇ ವೀಕೆಂಡ್ ಕರ್ಫ್ಯೂ ವೇಳೆ ನಿಮ್ಮ ಭಾನುವಾರವನ್ನು ಮತ್ತಷ್ಟು ಸ್ಪೆಷಲ್ ಆಗಿಸಲು, ಮನೆಯಲ್ಲಿ ನಿಮ್ಮ ಕೈಯಾರೆ ನೀವು ಬಯಸಿದ ರೀತಿ ಚಿಕನ್ ಗ್ರೇವಿ ಮಾಡಿ ಮನೆಯಲ್ಲಿಯೇ ಸವಿಯಬಹುದು. ರುಚಿ ರುಚಿಯಾದ ಆಹಾರ ಸೇವಿಸುವುದೆಂದರೆ ಎಲ್ಲರಿಗೂ ಒಂದು ರೀತಿಯಲ್ಲಿ ಇಷ್ಟ. ಆದ್ರೆ ಅನ್ನದೊಂದಿಗೆ ಚಿಕನ್ ಗ್ರೇವಿ ಇದ್ರೆ ಎಷ್ಟು ಚಂದ ಅಲ್ವಾ. ಚಿಕನ್ ಗ್ರೇವಿಯನ್ನು ಈ ಭಾರೀ ವಿಭಿನ್ನವಾಗಿ ಮಾಡಲು ಟ್ರೈ ಮಾಡುವ ನಿಮಗೆ ಇಲ್ಲಿದೆ ರೆಸಿಪಿ. 

    ಬೇಕಾಗಿರುವ ಸಾಮಗ್ರಿಗಳು

    1) ಚಿಕನ್/Chicken – ½ Kg
    2) ತುಪ್ಪ/Ghee – 1 Spoon
    3) ಎಣ್ಣೆ/Oil – 1 Spoon
    4) ಮೊಸರು/Curd – 1 Spoon
    5) ದನಿಯ ಪುಡಿ/Coriander Powder – 1 Spoon
    6) ಜೀರಿಗೆ ಪುಡಿ/Jeera Powder – ½ Spoon
    7) ಚಿಕನ್ ಮಸಾಲ/Chicken Masala – 1 Spoon

    ಇದನ್ನೂ ಓದಿ: ವೀಕೆಂಡ್ ಸ್ಪೆಷಲ್ ಮಲಬಾರ್ ಧಮ್ ಬಿರಿಯಾನಿ ಮನೆಯಲ್ಲಿಯೇ ಮಾಡೋದು ಹೇಗೆ ಗೊತ್ತಾ..?

    8) ಮೆಣಸು ಪುಡಿ/Pepper Powder – 1 Spoon
    9) ಖಾರದ ಪುಡಿ/Chilli Powder – ¾ Spoon
    10) ಗರಂ ಮಸಾಲ/Garam Masala – ¼ Spoon
    11) ಅರಿಶಿಣ/Turmeric Powder – ¼ Spoon
    12) ಉಪ್ಪು/Salt
    13) ಸೋಂಪು/Sompu – ¼ Spoon
    14) ಕೊತ್ತಂಬರಿ ಸೊಪ್ಪು/Coriander Leaves – 3 Spoon
    15) ಪುದೀನ ಸೊಪ್ಪು/ Mint Leaves – 2 Spoon
    16) ಈರುಳ್ಳಿ/Onion – 2
    17) ಹಸಿಮೆಣಸಿನಕಾಯಿ/Chilli – 3
    18) ಟೊಮೊಟೊ/Tomato – 2
    19) ನೀರು/Water – 250 ml

    ಚಿಕನ್ ಗ್ರೇವಿ ಮಾಡುವುದು ಹೇಗೆ..?

    ಮೊದಲು ಹಸಿ ಮೆಣಸಿನಕಾಯಿನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು. ನಂತರ ನೆನೆದ ಹಸಿ ಮೆಣಸಿನಕಾಯಿ ಟೊಮೆಟೊ ಮತ್ತು ಗೋಡಂಬಿಯನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

    ಒಲೆ ಮೇಲೆ ಬಾಣಲೆ ಇಟ್ಟು ತುಪ್ಪ ಹಾಕಿ ಬಿಸಿ ಮಾಡಿ. ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಸೇರಿಸಿ, ಇದರ ಜೊತೆ ಚಕ್ಕೆ, ಲವಂಗ, ಏಲಕ್ಕಿ, ಸೋಂಪು, ಕರಿಮೆಣಸು ಹಾಕಿ ಚನ್ನಾಗಿ ಹುರಿದುಕೊಳ್ಳಿ.  ಅರ್ಧ ಭಾಗ ಹುರಿದ ನಂತರ ಟೊಮೆಟೊ ಹಾಕಿ. ಟೊಮೆಟೊ ನೀರು ಬಿಡುವವರೆಗೂ ಹುರಿಯಿರಿ.

    ಹುರಿದ ಮಿಶ್ರಣ ಬದಿಗೆ ಇಡಿ.ನಂತರ ತೊಳೆದಿಟ್ಟ ಚಿಕನ್ ಸೇರಿಸಿ ಅದಕ್ಕೆ ಅರಿಸಿಣ, ಉಪ್ಪು, ಕೆಂಪು ಮೆಣಸಿನ ಪುಡಿ, ಚಿಕನ್ ಮಸಾಲಾ, ಗರಂ ಮಸಾಲಾ, ಖಾರದ ಪುಡಿ, ಕೊತ್ತಂಬರಿ ಪುಡಿ ಹಾಕಿ. ಚಿಕನ್ ಅರ್ಧ ಬೇಯುವವರೆಗೂ ಫ್ರೈ ಮಾಡಿ.

    ಇದನ್ನೂ ಓದಿ: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಮಾಡಿ ರುಚಿ ರುಚಿಯಾದ ಮಟನ್ ಖೀಮಾ

    ಈಗ ರುಬ್ಬಿದ ಮಸಾಲೆಯನ್ನು ಸೇರಿಸಿ ಎಣ್ಣೆ ಬಿಡುವವರೆಗೂ ಬೇಯಿಸಿ. ಕೊನೆಯಲ್ಲಿ , ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪು ಹಾಗೂ ಅರ್ಧ ಲೋಟ ನೀರು, ಮತ್ತು ಮೊಸರು ಸೇರಿಸಿ ಕುದಿಸಿಕೊಂಡರೆ ರೆಸ್ಟೋರೆಂಟ್ ಸ್ಟೈಲ್ ಚಿಕನ್ ಗ್ರೇವಿ ಮನೆಯಲ್ಲಿಯೇ ಸಿದ್ಧವಾಗುತ್ತದೆ. ಇದನ್ನೂ ನೀವು ಚಪಾತಿ, ಅನ್ನದ ಜೊತೆಗೂ ಕೂಡ ಸವಿಯಬಹುದು
    Published by:ranjumbkgowda1 ranjumbkgowda1
    First published: