Homemade CC Cream: ಮನೆಯಲ್ಲಿಯೇ ಸಿಸಿ ಕ್ರೀಮ್ ತಯಾರಿಸುವುದು ಹೇಗೆ? ಇದರ ಪ್ರಯೋಜನಗಳೇನು?

ಚರ್ಮದ ಬಣ್ಣವನ್ನು ಸುಧಾರಿಸಲು ಸಿಸಿ ಕ್ರೀಂನ್ನು ಬಳಕೆ ಮಾಡುವುದು ರೂಢಿಯಲ್ಲಿದೆ. ಸಿಸಿ ಕ್ರೀಂ ಇದು ಮುಖದ ಮಂದತೆ, ಕಪ್ಪು ಕಲೆ, ಕೆಂಪು ಮತ್ತು ಆಯಾಸದ ಚಿಹ್ನೆಗಳನ್ನು ಮರೆಮಾಡುವ ಕ್ರೀಮ್ ಆಗಿದೆ. ಇದನ್ನು ಹೆಚ್ಚಾಗಿ ಪ್ರೈಮರ್ ಗೆ ಹೋಲಿಕೆ ಮಾಡಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬಹುತೇಕರು ಮಾರುಕಟ್ಟೆಯಲ್ಲಿ (Market) ಸಿಗುವ ವಿವಿಧ ಬ್ರ್ಯಾಂಡ್ ನ (Different Brand) ಸಿಸಿ ಕ್ರೀಮ್ (CC Cream) ಬಳಕೆ ಮಾಡುತ್ತಾರೆ. ತ್ವಚೆಯ (Skin) ಬಗ್ಗೆ ಹೆಚ್ಚು ಕಾಳಜಿ (Care) ಮತ್ತು ಸರಿಯಾದ ಮೇಕಪ್ ಗಾಗಿ ಸಿಸಿ ಕ್ರೀಮ್ ಬಳಸುವುದನ್ನು ನೀವು ನೋಡಿರಬಹುದು. ನೀವು ನಿಯಮಿತವಾಗಿ ನಿಮ್ಮ ತ್ವಚೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರೆ, ಮತ್ತು ನೀವು ಮೇಕಪ್ ಮಾಡಲು ಇಷ್ಟ ಪಡುತ್ತಿದ್ದರೆ ನೀವು ಸಿಸಿ ಕ್ರೀಮ್ ಬಳಸುವುದು ನಿಮಗೆ ಗೊತ್ತಿರಬಹುದು. ಆದರೆ ಸಿಸಿ ಕ್ರೀಮ್ ಎಂದರೇನು ಎಂಬುದನ್ನು ನೀವು ತಿಳಿದುಕೊಳ್ಳಲು ಯಾವತ್ತಾದ್ರೂ ಪ್ರಯತ್ನ ಮಾಡಿದ್ದೀರಾ? ಸಿಸಿ ಕ್ರೀಮ್ ನಿಮ್ಮ ಚರ್ಮಕ್ಕೆ ಮಾಂತ್ರಿಕ ಕ್ರೀಮ್ ನಂತೆ ಕೆಲಸ ಮಾಡುತ್ತದೆ.

    ಸಿಸಿ ಕ್ರೀಮ್ ಬಳಕೆ

    ಸಿಸಿ ಕ್ರೀಂ ನ್ನು ಸಾಮಾನ್ಯವಾಗಿ 'ಬಣ್ಣ ನಿಯಂತ್ರಣ' ಅಥವಾ 'ಬಣ್ಣದ ಮೈಬಣ್ಣ' ಎಂದೂ ಕರೆಯುತ್ತಾರೆ. ಚರ್ಮದ ಬಣ್ಣವನ್ನು ಸುಧಾರಿಸಲು ಸಿಸಿ ಕ್ರೀಂನ್ನು ಬಳಕೆ ಮಾಡುವುದು ರೂಢಿಯಲ್ಲಿದೆ. ಸರಳವಾಗಿ ಹೇಳುವುದಾದರೆ ಸಿಸಿ ಕ್ರೀಂ ಇದು ಮುಖದ ಮಂದತೆ, ಕಪ್ಪು ಕಲೆ, ಕೆಂಪು ಮತ್ತು ಆಯಾಸದ ಚಿಹ್ನೆಗಳನ್ನು ಮರೆಮಾಡುವ ಕ್ರೀಮ್ ಆಗಿದೆ. ಇದನ್ನು ಹೆಚ್ಚಾಗಿ ಪ್ರೈಮರ್ ಗೆ ಹೋಲಿಕೆ ಮಾಡಲಾಗುತ್ತದೆ.

    ನಿಮ್ಮ ಚರ್ಮದ ಮೇಲೆ ಯಾವುದೇ ಬಣ್ಣ ಅಥವಾ ಹೈಪರ್ ಪಿಗ್ಮೆಂಟೇಶನ್ ಇದ್ದರೆ, ನೀವು ಪ್ರತ್ಯೇಕ ಪರಿಹಾರದ ಬದಲಿಗೆ CC ಕ್ರೀಮ್ ಅನ್ನು ಅನ್ವಯಿಸಿಕೊಳ್ಳಬಹುದು. ಇದು ಕನ್ಸೀಲರ್ ಜೊತೆಗೆ ಫೌಂಡೇಶನ್ ಕಾಂಬೊವನ್ನು ಹೊಂದಿರುತ್ತದೆ.

    ಇದನ್ನೂ ಓದಿ: ಹೇಗಪ್ಪಾ ತೂಕ ಇಳಿಸೋದು ಎಂಬ ಚಿಂತೆನಾ? ಹಾಗಿದ್ರೆ ತಜ್ಞರು ಹೇಳಿರುವ ಈ ಟಿಪ್ಸ್ ಫಾಲೋ ಮಾಡಿ

    ಚರ್ಮದ ಟೋನ್ ಸರಿಪಡಿಸಲು ಸಿಸಿ ಕ್ರೀಮ್

    ಸಿಸಿ ಕ್ರೀಮ್‌ಗಳ ಮುಖ್ಯ ಉದ್ದೇಶ ಅಂದ್ರೆ ಅದು ನಿಮ್ಮ ಚರ್ಮದ ಟೋನ್ ಅನ್ನು ಸರಿಪಡಿಸುತ್ತದೆ. ನೀವು ಸರಿಯಾದ ಸಿಸಿ ಕ್ರೀಮ್‌ ಖರೀದಿಸುವುದು ಬಹಳ ಮುಖ್ಯ. ಕನ್ಸೀಲರ್ ಮತ್ತು ಫೌಂಡೇಶನ್‌ಗೆ ಹೋಲಿಸಿದರೆ, ಸಿಸಿ ಕ್ರೀಮ್ ದೈನಂದಿನ ಬಳಕೆಗೆ ತುಂಬಾ ಒಳ್ಳೆಯದು.

    ಈ ಕ್ರೀಂ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ನೀವು ಬಯಸಿದರೆ ಇದನ್ನು ಮನೆಯಲ್ಲಿಯೂ ತಯಾರಿಸಿಕೊಳ್ಳಬಹುದು. ಮನೆಯಲ್ಲಿ ಸಿಸಿ ಕ್ರೀಮ್ ಹೇಗೆ ತಯಾರಿಸುವುದು ಎಂದು ಇಲ್ಲಿ ನೋಡೋಣ. ಮನೆಯಲ್ಲಿ ಸಿಸಿ ಕ್ರೀಮ್ ತಯಾರಿಸಲು ಕೇವಲ 7 ನಿಮಿಷ ಸಾಕು. ಸಿಸಿ ಕ್ರೀಂ ಪ್ರಯೋಜನಗಳು ಮತ್ತು ಮಾಡುವ ವಿಧಾನ ತಿಳಿಯೋಣ.

    ಸಿಸಿ ಕ್ರೀಮ್ ಬಳಕೆಯ ಪ್ರಯೋಜನಗಳು

    CC ಕ್ರೀಮ್‌ಗಳು ನಿಮ್ಮ ಚರ್ಮವನ್ನು UV ಕಿರಣಗಳಿಂದ ರಕ್ಷಿಸುತ್ತವೆ. ಇದು ಫೋಟೋಜಿಂಗ್‌ಗೆ ಕಾರಣ. ನಿಮಗೆ ಮೇಕಪ್ ಇಲ್ಲದ ಸರಿಯಾದ ನೋಟ ನೀಡುತ್ತದೆ. ದಿನನಿತ್ಯದ ಬಳಕೆಗೆ ಇದು ತುಂಬಾ ಒಳ್ಳೆಯದು.

    ಮನೆಯಲ್ಲಿ ಸಿಸಿ ಕ್ರೀಮ್ ತಯಾರಿಸುವುದು ಹೇಗೆ?

    ಬೇಕಾಗುವ ಸಾಮಗ್ರಿಗಳು

    ಮಾಯಿಶ್ಚರೈಸರ್

    ಅಲೋವೆರಾ ಜೆಲ್

    ಬೇಸ್

    ಸನ್ಸ್ಕ್ರೀನ್

    ಬ್ಲಶ್ ಪುಡಿ

    ಕಾಂಪ್ಯಾಕ್ಟ್ ಪುಡಿ

    ಸಿಸಿ ಕ್ರೀಮ್ ತಯಾರಿಸುವ ವಿಧಾನ

    ಸಿಸಿ ಕ್ರೀಮ್ ತಯಾರಿಸಲು ಸಣ್ಣ ಗಾಜಿನ ಬಟ್ಟಲಿನಲ್ಲಿ 1 ಟೀಚಮಚ ಮಾಯಿಶ್ಚರೈಸರ್ ಹಾಕಿ. ಇದಕ್ಕೆ 1 ಚಮಚ ಅಲೋವೆರಾ ಜೆಲ್ ಸೇರಿಸಿ. ಸಮಾನ ಪ್ರಮಾಣದಲ್ಲಿ ಬೇಸ್ ಮತ್ತು ಸನ್‌ಸ್ಕ್ರೀನ್  ಸೇರಿಸಿ ಮಿಶ್ರಣ ಮಾಡಿ. ಅದರಲ್ಲಿ ತಿಳಿ ಗುಲಾಬಿ ಬ್ಲಶ್ ಪುಡಿ ಸೇರಿಸಿ ಚೆನ್ನಾಗಿ ನಯವಾಗುವವರೆಗೆ ಮಿಶ್ರಣ ಮಾಡಿ.

    ಈಗ ನಿಮ್ಮ ಮನೆಯಲ್ಲಿ ತಯಾರಿಸಿದ ಸಿಸ್ ಕ್ರೀಮ್ ಬಳಕೆಗೆ ಸಿದ್ಧವಾಗಿದೆ. ನಿಮ್ಮ ಚರ್ಮದ ಮೇಲೆ ಅನ್ವಯಿಸುವ ಮೊದಲು ಪ್ಯಾಚ್ ಪರೀಕ್ಷೆಯನ್ನು ಮಾಡಿ. ಈ ಕ್ರೀಮ್ ಅನ್ನು ಯಾವಾಗ ಬೇಕಾದರೂ ತಯಾರಿಸಬಹುದು ಮತ್ತು ಕೆಲವು ತಿಂಗಳುಗಳವರೆಗೆ ಸಂಗ್ರಹಿಸಬಹುದು.

    ಇದನ್ನೂ ಓದಿ: ಮಹಿಳೆಯರಲ್ಲಿ ಗರ್ಭಾಶಯದಲ್ಲಿನ ಗಡ್ಡೆ ಆದಾಗ ಯಾವ ಲಕ್ಷಣಗಳು ಕಂಡು ಬರುತ್ತವೆ? ಆಯುರ್ವೇದ ಪರಿಹಾರವೇನು?

    ಇದು ಸ್ಕಿನ್ ಟೋನ್ ಬ್ಯಾಲೆನ್ಸ್ ಮಾಡಲು ಫೌಂಡೇಶನ್ ಬದಲಿಗೆ ಈ ಕ್ರೀಮ್ ಬಳಸಬಹುದು. ತಜ್ಞರ ಪ್ರಕಾರ, ನೀವು ಇದನ್ನು ಪ್ರತಿದಿನ ಬಳಸಲು ವಾಟರ್ ಪ್ರೂಫ್ ಸಿಸಿ ಕ್ರೀಮ್ ಬಳಸಿ.
    Published by:renukadariyannavar
    First published: