Kitchen Hacks: ಕಾಸ್ಟ್‌ ಐರನ್‌ ತವಾವನ್ನು ರಕ್ಷಣೆ ಮಾಡಲು ಈ ಟಿಪ್ಸ್ ಟ್ರೈ ಮಾಡಿ

ದೋಸೆ ರುಚಿಯಾಗಿ ಬರಬೇಕೆಂದರೆ ಕಾಸ್ಟ್‌ ಐರನ್‌ ತವಾ ಅತ್ಯುತ್ತಮ ಆಯ್ಕೆಯಾಗಿದೆ. ಇಂದು ಹೆಚ್ಚಿನ ಮನೆಗಳಲ್ಲಿ ನಾನ್ ಸ್ಟಿಕ್ ತವಾವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ ಎಂದು ಗೃಹಿಣಿಯರು ಒಪ್ಪಿಕೊಂಡಿದ್ದಾರೆ. ಆದರೆ, ನಿಮ್ಮ ಅಜ್ಜಿ ತಯಾರಿಸಿದ ರೀತಿಯಲ್ಲಿಯೇ ನೀವು ಸಂಪೂರ್ಣ ದುಂಡನೆ, ಗರಿಗರಿಯಾದ ಮತ್ತು ರುಚಿಕರವಾದ ದೋಸೆಯನ್ನು ಮನೆಯಲ್ಲಿಯೇ ತಿನ್ನಬೇಕು ಎಂದು ಬಯಸುತ್ತಿದ್ದರೆ, ಈ ಸಾಂಪ್ರದಾಯಿಕ ಕುಕ್‌ವೇರ್ ಟ್ರಿಕ್ ಅನ್ನು ಬಳಸಬೇಕಾಗುತ್ತದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ರೆಸ್ಟೋರೆಂಟ್ (Restaurant) ತರಹದ ದೋಸೆಗಳನ್ನು (Dosa) ಮನೆಯಲ್ಲಿ (Home) ಮಾಡುವುದು ಸ್ವಲ್ಪ ಕಷ್ಟವೇ ಸರಿ. ಅಲ್ಲಿ ಸಿಗುವ ದೋಸೆಗಳ ತರ ಮಾಡುವುದಕ್ಕೆ ಹಲವು ಸಲ ಪ್ರಯತ್ನಪಟ್ಟು ಸೋತಿರುತ್ತೇವೆ. ಈ ಹಿಂದೆ ನಮ್ಮ ಅಜ್ಜಿ (Grandmother), ಈ ರೀತಿಯ ಗರಿ-ಗರಿ ದೋಸೆ ಮಾಡುತ್ತಿದ್ದರು. ಅದು ಹೇಗೆ? ಅವರು ಮಾಡೋ ದೋಸೆ ಗರಿ-ಗರಿ ಆಗಿರುತ್ತದೆ. ಆದರೆ ನಾವು ಮಾಡೋ ದೋಸೆ ಗರಿ-ಗರಿ ಇರುವುದಿಲ್ಲ ಎಂದೆನಿಸುತ್ತದೆ. ಅಲ್ವಾ? ಇನ್ನೊಂದು ವಿಷಯ ನಿಮಗೆ ಗೊತ್ತಾ? ಅದು ಏನೆಂದರೆ ದೋಸೆ ಹಿಟ್ಟು ಚೆನ್ನಾಗಿ ಇದ್ದರೆ ಮಾತ್ರ ದೋಸೆ ಚೆನ್ನಾಗಿ ಬರುತ್ತೆ ಅಂತಲ್ಲ, ಅದಕ್ಕೆ ತಕ್ಕದಾದ ದೋಸೆ ತವಾ (Tawa) ಕೂಡ ಗರಿ-ಗರಿ ದೋಸೆ ಬರೋದಕ್ಕೆ ಮುಖ್ಯ ಕಾರಣ.

ದೋಸೆ ರುಚಿಯಾಗಿ ಬರಬೇಕೆಂದರೆ ಕಾಸ್ಟ್‌ ಐರನ್‌ ತವಾ ಅತ್ಯುತ್ತಮ ಆಯ್ಕೆಯಾಗಿದೆ. ಇಂದು ಹೆಚ್ಚಿನ ಮನೆಗಳಲ್ಲಿ ನಾನ್ ಸ್ಟಿಕ್ ತವಾವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ ಎಂದು ಗೃಹಿಣಿಯರು ಒಪ್ಪಿಕೊಂಡಿದ್ದಾರೆ. ಆದರೆ, ನಿಮ್ಮ ಅಜ್ಜಿ ತಯಾರಿಸಿದ ರೀತಿಯಲ್ಲಿಯೇ ನೀವು ಸಂಪೂರ್ಣ ದುಂಡನೆ, ಗರಿಗರಿಯಾದ ಮತ್ತು ರುಚಿಕರವಾದ ದೋಸೆಯನ್ನು ಮನೆಯಲ್ಲಿಯೇ ತಿನ್ನಬೇಕು ಎಂದು ಬಯಸುತ್ತಿದ್ದರೆ, ಈ ಸಾಂಪ್ರದಾಯಿಕ ಕುಕ್‌ವೇರ್ ಟ್ರಿಕ್ ಅನ್ನು ಬಳಸಬೇಕಾಗುತ್ತದೆ.

ಕಾಸ್ಟ್‌ ಐರನ್‌ ತವಾವನ್ನು ಹೇಗೆ ತಯಾರಿಸಲಾಗುತ್ತದೆ?
ಕಾಸ್ಟ್‌ ಐರನ್‌ ತವಾವನ್ನು ಕನ್ನಡದಲ್ಲಿ ಎರಕಹೊಯ್ದ ಕಬ್ಬಿಣದ ತವಾ ಎಂದು ಕರೆಯುತ್ತಾರೆ. ಈ ತವಾವನ್ನು ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಅವುಗಳಲ್ಲಿ ಕಬ್ಬಿಣ ಮತ್ತು ಇಂಗಾಲವನ್ನು ಒಳಗೊಂಡಂತೆ ಮಿಶ್ರಲೋಹಗಳ ಮಿಶ್ರಣ ಇರುತ್ತದೆ. ಆದ್ದರಿಂದ, ಅಡುಗೆ ಮನೆಯಲ್ಲಿ ಅನುಕೂಲ ಮತ್ತು ಸುಲಭ ನಿರ್ವಹಣೆಯ ಕಾರಣದಿಂದ ನಾನ್ ಸ್ಟಿಕ್ ದೋಸೆ ತವಾ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಎರಕಹೊಯ್ದ ಕಬ್ಬಿಣದ ತವಾ ಕೂಡ ಕೆಲವು ಅನಾನುಕೂಲಗಳನ್ನು ಹೊಂದಿದೆ.

ಆದರೆ ಗುಣಮಟ್ಟದ ಆಹಾರ ಮತ್ತು ಆರೋಗ್ಯದ ವಿಷಯಕ್ಕೆ ಬಂದಾಗ, ಯಾವುದೇ ರಾಜಿ ಮಾಡಿಕೊಳ್ಳದೇ ಸೂಕ್ತಮವಾದ ತವಾವನ್ನು ಆರಿಸಿಕೊಳ್ಳುವುದು ಉತ್ತಮ. ಆದರೆ ಎರಕಹೊಯ್ದ ಕಬ್ಬಿಣದ ದೋಸೆ ತವಾ ಬಹಳಷ್ಟು ಪ್ರಯೋಜನಗಳನ್ನು ಹೊಂದಿದೆ. ಈ ಲೇಖನದಲ್ಲಿ, ಎರಕಹೊಯ್ದ ಕಬ್ಬಿಣದ ತವಾವನ್ನು ಹೇಗೆ ಉತ್ತಮವಾಗಿ ಬಳಸುವುದು ಎಂದು ನೀವು ತಿಳಿದುಕೊಳ್ಳುತ್ತೀರಿ. ಕಾಸ್ಟ್ ಐರನ್‌ ತವಾವನ್ನು ಹೇಗೆ ಸೀಜನ್‌ ಮಾಡುವುದು ಮತ್ತು ಅದರ ಗುಣಮಟ್ಟವನ್ನು ಹೇಗೆ ಕಾಪಾಡುವುದು ಎಂಬುದರ ಕುರಿತು ನಾವು ನಿಮ್ಮೊಂದಿಗೆ ಕೆಲವು ಸಲಹೆಗಳನ್ನು ಹಂಚಿಕೊಳ್ಳುತ್ತೇವೆ. ಮತ್ತಷ್ಟು ಮಾಹಿತಿಗಾಗಿ ಮುಂದೆ ಓದಿ.

ಇದನ್ನೂ ಓದಿ: Health Tips: ಮೊಸರನ್ನು ಅಪ್ಪಿ ತಪ್ಪಿ ಈ ಆಹಾರಗಳ ಜೊತೆ ಮಿಕ್ಸ್ ಮಾಡಬಾರದಂತೆ

ಹೊಸ ದೋಸೆ ತವಾ ಕಿಲುಬು ಕಟ್ಟದಂತೆ ಅಥವಾ ಸೀಜನ್ ಮಾಡುವುದು ಹೇಗೆ?
ಈ ಸೀಜನ್‌ ಅಂದರೆ ಏನು ಅಂತ ಕೆಲವರಿಗೆ ಗೊತ್ತಿರುವುದಿಲ್ಲ. ಅದಕ್ಕೆ ಇಲ್ಲಿದೆ ಉತ್ತರ. ಈ ಸೀಜನ್‌ ಅಂದರೆ ತವಾವನ್ನು ಚೆನ್ನಾಗಿ ಸ್ವಚ್ಛಗೊಳಿಸುವುದು ಮತ್ತು ಅದು ಎಣ್ಣೆಯ ಕಿಲುಬು ಕಟ್ಟದಂತೆ ನೋಡಿಕೊಳ್ಳುವುದಕ್ಕೆ ಸೀಜನ್‌ (ಹದ ಹಾಗೂ ಯೋಗ್ಯಗೊಳಿಸುವಿಕೆ) ಅಂತ ಸಾಮಾನ್ಯ ಭಾಷೆಯಲ್ಲಿ ಕರೆಯುತ್ತಾರೆ. ಕಾಸ್ಟ್‌ ಐರನ್‌ ತವಾವನ್ನು ಮೊದಲ ಬಾರಿಗೆ ಮನೆಗೆ ತಂದಾಗ ಅದನ್ನು ಹೇಗೆ ಸ್ವಚ್ಛಗೊಳಿಸುವುದು ಮತ್ತು ಬಳಸುವುದು ಹೇಗೆ ಎಂದು ನಿಮಗೆ ತಿಳಿದಿದ್ದರೆ, ಅದು ನಿಜಕ್ಕೂ ಉತ್ತಮ ವಿಚಾರ. ಇದರಿಂದ ನೀವು ದೋಸೆ ಮಾಡುವುದು ಆರಂಭಗೊಳಿಸಬಹುದು. ಆದರೆ, ಕಬ್ಬಿಣದ ತವಾವನ್ನು ಹೇಗೆ ಬಳಸುವುದು ಅಥವಾ ಎರಕಹೊಯ್ದ ಕಬ್ಬಿಣದ ತವಾವನ್ನು ಹೇಗೆ ಸೀಜನ್ ಮಾಡುವುದು ಎಂಬುದರ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿರುತ್ತದೆ. ಆದರೆ ಇನ್ನು ಕೆಲವರಿಗೆ ಇದರ ಬಗ್ಗೆ ಮಾಹಿತಿ ಇರುವುದಿಲ್ಲ. ಅದಕ್ಕೆ ನಿಮಗಾಗಿ ಈ ಲೇಖನವನ್ನು ಪ್ರಸ್ತುತಪಡಿಸುತ್ತಿದ್ದೇವೆ.

ಹೊಸ ದೋಸೆ ತವಾವನ್ನು ಕಿಲುಬು ಕಟ್ಟದಂತೆ ಅಥವಾ ಸೀಜನ್ ಮಾಡುವುದು ಹೇಗೆ? ಎಂದು ನೋಡೋಣ. ಅದರ ಹಂತಗಳು ಇಲ್ಲಿವೆ:

  • ಪಾತ್ರೆ ತೊಳೆಯುವ ದ್ರವ, ಸ್ಕ್ರಬ್ಬರ್ ಮತ್ತು ನೀರನ್ನು ಬಳಸಿ ನಿಮ್ಮ ಹೊಸ ದೋಸೆ ತವಾವನ್ನು ಸ್ವಚ್ಛವಾಗಿ ತೊಳೆಯಿರಿ.

  • ಸ್ವಚ್ಛಗೊಳಿಸಿದ ನಂತರ, ಮೃದುವಾದ ಬಟ್ಟೆಯನ್ನು ಬಳಸಿ ತವಾವನ್ನು ಒರೆಸಿ. ಅದು ಆರಿದ ನಂತರ ಎಣ್ಣೆ ಹಚ್ಚಿ ಆರು ಗಂಟೆ ಒಣಗಲು ಬಿಡಿ.

  • ಅದರ ನಂತರ, ಎರಕಹೊಯ್ದ ಕಬ್ಬಿಣದ ತವಾವನ್ನು ಮೀಡಿಯಮ್‌ ಉರಿಯಲ್ಲಿ 5 ನಿಮಿಷಗಳ ಕಾಲ ಬಿಸಿ ಮಾಡಿ. ಒಮ್ಮೆ ಹೀಗೆ ಮಾಡಿದ ನಂತರ, ಉರಿಯನ್ನು ಆಫ್ ಮಾಡಿ ಮತ್ತು ತವಾವನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.

  • ತಣ್ಣಗಾದ ನಂತರ, ಅದರ ಮೇಲೆ ಇರುವ ಹೆಚ್ಚುವರಿ ಎಣ್ಣೆಯನ್ನು ಒರೆಸಲು ಮೃದುವಾದ ಬಟ್ಟೆಯನ್ನು ಬಳಸಿ ಮತ್ತು ಎರಕಹೊಯ್ದ ಕಬ್ಬಿಣದ ತವಾವನ್ನು ಒಣಗಿರುವ ಸ್ಥಳದಲ್ಲಿ ಇರಿಸಿ.

  • ಉತ್ತಮ ಫಲಿತಾಂಶ ಪಡೆಯಲು, ಅಡುಗೆ ಪ್ರಾರಂಭಿಸುವ ಮೊದಲು ಈ ಪ್ರಕ್ರಿಯೆಯನ್ನು 3-4 ಬಾರಿ ಪುನರಾವರ್ತಿಸಿ.


ಕಾಸ್ಟ್‌ ಐರನ್‌ ತವಾವನ್ನು ಹೇಗೆ ಕಿಲುಬು ಕಟ್ಟದಂತೆ ಅಥವಾ ಸೀಜನ್ ಮಾಡುವುದು ಎಂಬುದರ ಕುರಿತು ಹೆಚ್ಚಿನ ಸಲಹೆಗಳು:

  • ಇದಕ್ಕೆ ಪರ್ಯಾಯವಾಗಿ, ಮೊದಲ ಬಾರಿಗೆ ದೋಸೆ ತವಾ ತಂದಾಗ, ನೀವು ಅಕ್ಕಿ ನೀರನ್ನು ಅಥವಾ ಅಕ್ಕಿ ಗಂಜಿಯನ್ನು ದೋಸೆ ತವಾವನ್ನು ಸ್ವಚ್ಛಗೊಳಿಸಲು ಬಳಸಬಹುದು. ಇದಕ್ಕಾಗಿ, ಕಾಸ್ಟ್‌ ಐರನ್‌ ತವಾವನ್ನು ಅಕ್ಕಿ ಗಂಜಿಯಲ್ಲಿ ಒಂದೆರಡು ದಿನಗಳವರೆಗೆ ನೆನೆಸಿಡಬೇಕು. ನಂತರ ಅದನ್ನು ಚೆನ್ನಾಗಿ ತೊಳೆಯಿರಿ. ಈ ಪ್ರಕ್ರಿಯೆಯನ್ನು 2 ರಿಂದ 3 ಬಾರಿ ಪುನರಾವರ್ತಿಸಿ.

  • ಮೊದಲ ಬಾರಿಗೆ ಈ ಕಾಸ್ಟ್‌ ಐರನ್‌ ತವಾ ಬಳಸುತ್ತಿದ್ದಿರಿ ಎಂದರೆ ಅದನ್ನು ಮಿಡಿಯಮ್‌ ಉರಿಯಲ್ಲಿ ಬಿಸಿ ಮಾಡಿ. ದೋಸೆ ತವಾ ಮೇಲೆ ಕೆಲವು ಹನಿ ಎಣ್ಣೆಯನ್ನು ಸುರಿಯಿರಿ. ತವಾದ ತುಂಬಾ ಎಣ್ಣೆ ಹರಡಲು ಅರ್ಧ ಕತ್ತರಿಸಿದ ಈರುಳ್ಳಿ ಬಳಸಿ. ಈರುಳ್ಳಿ ಗೋಲ್ಡನ್ ಬ್ರೌನ್ ಆಗುವವರೆಗೆ ಈರುಳ್ಳಿಯನ್ನು ಒಂದೆರಡು ಬಾರಿ ಬಳಸಿ. ನಂತರ ಒಂದು ಟಿಶ್ಯು ಪೇಪರ್‌ ಅಥವಾ ಮೃದು ಬಟ್ಟೆಯಿಂದ ದೋಸೆ ತವಾದಲ್ಲಿ ಉಳಿದ ಹೆಚ್ಚುವರಿ ಎಣ್ಣೆಯನ್ನು ಒರೆಸಿ.

  • ಆರಂಭಿಕ ದೋಸೆಗಳು ಚೆನ್ನಾಗಿ ಬರದಿದ್ದರೆ ಚಿಂತಿಸಬೇಕಾಗಿಲ್ಲ. ಇದು ಸಾಮಾನ್ಯ. ಎರಕಹೊಯ್ದ ಕಬ್ಬಿಣದ ತವಾ ಕೆಲವು ಪ್ರಯತ್ನಗಳ ನಂತರ ಚೆನ್ನಾಗಿ ಕೆಲಸ ಮಾಡುತ್ತದೆ.

  • ನಿರಂತರ ಬಳಕೆಯಿಂದ, ಎರಕಹೊಯ್ದ ಕಬ್ಬಿಣದ ತವಾದಲ್ಲಿ ಅಂಟಿಕೊಳ್ಳದ ಹಾಗೆ ದೋಸೆಯನ್ನು ಮಾಡುವುದು ನಂತರದಲ್ಲಿ ಸುಲಭವಾಗುತ್ತದೆ. ಆಗ ನಿಮ್ಮ ದೋಸೆಯು ತುಂಬಾ ರುಚಿಯಾಗಿ ಮತ್ತು ಗರಿ-ಗರಿಯಾಗಿ ಬರುತ್ತದೆ ಎಂಬುದನ್ನು ನೆನಪಿಡಿ.

  • ಹೊಸ ಎರಕಹೊಯ್ದ ಕಬ್ಬಿಣದ ದೋಸೆ ತವಾ ಅಥವಾ ತವಾವನ್ನು ದೀರ್ಘಕಾಲದವರೆಗೆ ಬಳಸದಿದ್ದಾಗ ಮತ್ತು ನಂತರ ಬಳಸುವಾಗ ಮತ್ತೆ ಅಕ್ಕಿ ಗಂಜಿ ಪ್ರಕ್ರಿಯೆಯನ್ನು ಮಾಡುವುದು ಅಗತ್ಯ ಆಗಿರುತ್ತದೆ.


ಇದನ್ನೂ ಓದಿ:  Carbon Footprint: ರೆಸ್ಟೊರೆಂಟ್​ ಮೆನುಲಿ ಫುಡ್​ ಮಾತ್ರ ಅಲ್ಲ ಅದರ ಕಾರ್ಬನ್​ ಮಟ್ಟ ಕೂಡ ಇರುತ್ತಂತೆ

ಕಬ್ಬಿಣದ ದೋಸೆ ತವಾವನ್ನು ಕಿಲುಬು ಕಟ್ಟದಂತೆ ಅಥವಾ ಸೀಜನ್ ಮಾಡುವುದು ಮತ್ತು ನಿರ್ವಹಿಸುವುದು ಹೇಗೆ?
ಕಬ್ಬಿಣದ ಅಡುಗೆ ಪಾತ್ರೆಗಳು ಬೇಗೆನೆ ತುಕ್ಕು ಹಿಡಿಯುವುದನ್ನು ತಪ್ಪಿಸಲು ನಿಯಮಿತವಾಗಿ ಅಕ್ಕಿ ಗಂಜಿ ಪ್ರಕ್ರಿಯೆಯನ್ನು ಬಳಸುತ್ತಿರಬೇಕು. ಈ ಪ್ರಕ್ರಿಯೆಯು ತವಾವು ಉತ್ತಮ ಫಲಿತಾಂಶ ನೀಡಲು ಸಹಾಯ ಮಾಡುತ್ತದೆ. ಇದು ಕಬ್ಬಿಣದ ತವಾವನ್ನು ತುಕ್ಕು ರಹಿತ ಮತ್ತು ದೋಸೆಗಳು ಅಂಟಿಕೊಳ್ಳದಂತೆ ಇರಲು ಸಹಾಯ ಮಾಡುತ್ತದೆ. ಹಾಗಿದ್ರೆ ಕಬ್ಬಿಣದ ತವಾವನ್ನು ಹೇಗೆ ಬಳಸುವುದು ಎಂಬುದರ ಬಗ್ಗೆ ಈಗ ತಿಳಿಯೋಣ.

ಕಬ್ಬಿಣದ ತವಾವನ್ನು ಬಳಸುವುದು ಹೇಗೆ?

  • ದೋಸೆ ಮತ್ತು ರೊಟ್ಟಿ/ಚಪಾತಿಗಳಿಗೆ ಪ್ರತ್ಯೇಕ ಎರಕಹೊಯ್ದ ಕಬ್ಬಿಣ ಅಥವಾ ಕಬ್ಬಿಣದ ತವಾವನ್ನು ನಿರ್ವಹಿಸುವುದು ಸೂಕ್ತ. ಎರಕಹೊಯ್ದ ಕಬ್ಬಿಣಕ್ಕೆ ಹೋಲಿಸಿದರೆ ಕಬ್ಬಿಣದ ಕುಕ್‌ವೇರ್ ಬೇಗನೆ ಬಿಸಿಯಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು. ಕಬ್ಬಿಣದ ದೋಸೆ ತವಾವನ್ನು ಹೆಚ್ಚು ಬಿಸಿಯಾಗಲು ಬಿಟ್ಟಾಗ, ಅದು ದೋಸೆಗಳನ್ನು ತವಾಗೆ ಅಂಟಿಕೊಳ್ಳುವಂತೆ ಮಾಡುತ್ತದೆ. ಇದನ್ನು ತಪ್ಪಿಸಲು, ಕಬ್ಬಿಣದ ತವಾವನ್ನು ಕಡಿಮೆ ಅಥವಾ ಮಧ್ಯಮ ಉರಿಯಲ್ಲಿ ಬಳಸಲು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ.

  • ದೋಸೆ ತವಾವನ್ನು ಬಳಸುವ ಮೊದಲು, ಉತ್ತಮ ದೋಸೆ ಪಡೆಯಲು ಮತ್ತು ದೋಸೆಗಳು ತವಾಗೆ ಅಂಟಿಕೊಳ್ಳದಂತೆ ಮಾಡಲು ಈ ವಿಧಾನವನ್ನು ಅನುಸರಿಸಿ. ಕಬ್ಬಿಣದ ತವಾ ಮೇಲೆ ಎಣ್ಣೆಯನ್ನು ಹಚ್ಚಿ ಮತ್ತು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ಎಣ್ಣೆ ಮತ್ತು ಉಪ್ಪನ್ನು ಕಲೆಸಿರುವ ದ್ರವವನ್ನು ಲೇಪಿಸಿ. ನಂತರ ತವಾದ ತುಂಬಾ ಈ ದ್ರವವನ್ನು ಹರಡಿ. ಒಂದೆರಡು ನಿಮಿಷ ಹೀಗೆ ಮಾಡುತ್ತಾ ಇರಿ. ಉರಿ ಸಣ್ಣಗೆ ಮಾಡಿ, ಟಿಶ್ಯೂ ಅಥವಾ ಮೃದು ಬಟ್ಟೆಯಿಂದ ಎಣ್ಣೆಯನ್ನು ಒರೆಸಿ. ಇದರಿಂದ ದೋಸೆಗಳು ರುಚಿಯಾಗಿ ಮತ್ತು ಗರಿ-ಗರಿಯಾಗಿ ಬರುತ್ತವೆ.

  • ಪರ್ಯಾಯ ವಿಧಾನ: ಕಬ್ಬಿಣದ ತವಾವನ್ನು ಕಡಿಮೆ ಉರಿಯ ಮೇಲೆ ಬಿಸಿ ಮಾಡಿ. ಅದರ ಮೇಲೆ ಎರಡು ಸಣ್ಣ ಗಾತ್ರದ ಕೆಂಪು ಮೆಣಸಿನಕಾಯಿಗಳನ್ನು ಇರಿಸಿ, ಅವುಗಳನ್ನು ಒಂದೆರಡು ನಿಮಿಷಗಳ ಕಾಲ ಹುರಿಯಿರಿ. ಸರಿಸುಮಾರು ಹುರಿದ ನಂತರ, ಅವುಗಳ ಕಬ್ಬಿಣದ ತವಾದ ತುಂಬಾ ಹರಡಿ. ಉರಿಯನ್ನು ಆಫ್ ಮಾಡಿ. ಬಟ್ಟೆ ಅಥವಾ ಟಿಶ್ಯು ಪೇಪರ್‌ ಬಳಸಿ, ದೋಸೆ ತವಾವನ್ನು ಸ್ವಚ್ಛಗೊಳಿಸಿ. ಇದರ ನಂತರ ಕಬ್ಬಿಣದ ತವಾವನ್ನು ಬಳಸಬಹುದು.

  • ದೋಸೆ ಉತ್ತಮವಾಗಿ ಬರಲು, ಎರಕಹೊಯ್ದ ಕಬ್ಬಿಣದ ತವಾದ ಮೇಲೆ ಮೇಲಿನ ಹಂತಗಳಲ್ಲಿ ತಿಳಿಸಲಾದ ಈರುಳ್ಳಿ ಟ್ರಿಕ್ ಅನ್ನು ಸಹ ನೀವು ಅನುಸರಿಸಬಹುದು.


ಕಬ್ಬಿಣದ ದೋಸೆ ತವಾವನ್ನು ಸ್ವಚ್ಛಗೊಳಿಸಲು ಕೆಲವು ಸಲಹೆಗಳು ಇಲ್ಲಿವೆ:

  • ದೋಸೆ ತವಾ ಸ್ವಚ್ಛಗೊಳಿಸಲು ಸ್ವಲ್ಪ ಕೆಮಿಕಲ್‌ ಕಡಿಮೆ ಇರುವ ಪಾತ್ರೆ ತೊಳೆಯುವ ದ್ರವ / ಸೋಪ್ ಬಳಸಿ.

  • ಈ ಕಬ್ಬಿಣ ತವಾದಲ್ಲಿ ದೋಸೆ ಚೆನ್ನಾಗಿ ಬರಲು ಮಾಡಿದ ಕೆಲವು ಪದರವನ್ನು ತೆಗೆದುಹಾಕದೆಯೇ ಮೃದುವಾದ ಸ್ಪಾಂಜಿನೊಂದಿಗೆ ನಿಧಾನವಾಗಿ ಸ್ವಚ್ಛಗೊಳಿಸಿ.

  • ಇದು ಒಣಗಿದ ನಂತರ ಎಣ್ಣೆಯನ್ನು ಬಳಸಿ. ನಾನ್ ಸ್ಟಿಕ್ ಕುಕ್‌ವೇರ್‌ ಎಣ್ಣೆಯನ್ನು ಬಳಸುವುದರಿಂದ ಕ್ರಮೇಣ ತವಾವು ಉತ್ತಮವಾಗುತ್ತದೆ.

  • ನೀವು ತವಾವನ್ನು ಟಿಶ್ಯು ಪೇಪರ್‌ನಿಂದ ಒರೆಸಬಹುದು.

  • ನೀವು ಇದನ್ನು ಒಳಗಡೆ ಇರಿಸುವ ಮೊದಲು ತವಾದ ಮೇಲ್ಮೈಯಲ್ಲಿ ಸ್ವಲ್ಪ ಎಣ್ಣೆಯನ್ನು ಬ್ರಷ್ ಮೂಲಕ ಹರಡುವ ಅಗತ್ಯವಿರುತ್ತದೆ.


ಇದನ್ನೂ ಓದಿ: Gowri Bagina: ಗೌರಿ ಬಾಗಿನದಲ್ಲಿ ಏನೆಲ್ಲಾ ಇರಬೇಕು? ಇದನ್ನು ತಯಾರಿಸುವ ರೀತಿ ಇಲ್ಲಿದೆ ನೋಡಿ

ಎರಕಹೊಯ್ದ ಕಬ್ಬಿಣ ಅಥವಾ ಕಬ್ಬಿಣದ ಕುಕ್‌ವೇರ್‌ನಲ್ಲಿ ಅಡುಗೆ ಮಾಡುವುದು ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯಕ್ಕಾಗಿ ನೀವು ಮಾಡಬಹುದಾದ ಅತ್ಯುತ್ತಮವಾದ ಆಯ್ಕೆ ಆಗಿದೆ. ಎರಕಹೊಯ್ದ ಕಬ್ಬಿಣದ ದೋಸೆ ತವಾ / ಕಬ್ಬಿಣದ ತವಾಗೆ ಹೆಚ್ಚಿನ ಗಮನ ವಹಿಸಬೇಕಾದರೂ ಅಂತಹ ಕುಕ್‌ವೇರ್ ಬಹಳಷ್ಟು ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳಬಹುದು. ಎರಕಹೊಯ್ದ ಕಬ್ಬಿಣದ ತವಾ ನಿಮ್ಮ ಅಡುಗೆಮನೆಯಲ್ಲಿ ಅತ್ಯಂತ ವಿಶ್ವಾಸಾರ್ಹ ಕುಕ್‌ವೇರ್ ಆಗಿ ಕಾರ್ಯ ನಿರ್ವಹಿಸುತ್ತದೆ.
Published by:Ashwini Prabhu
First published: