ಬೆಳಗ್ಗೆ ಅವಸರದಲ್ಲಿ ಆಫೀಸ್ಗೆ (Office) ಲಂಚ್ ಬಾಕ್ಸ್ ಗೆ (Lunch Box) ಏನನ್ನಾದರೂ ರೆಡಿ ಮಾಡಬೇಕು ಅಂದ್ರೆ ಮನೆ ಹೆಂಗಸರಿಗೆ ತಲೆನೋವಿನ ವಿಷಯವೇ ಸರಿ. ಅದರಲ್ಲೂ ದಿನವೂ ಹೊಸ ಅಡುಗೆ (Cooking) ಏನಾದರೂ ಮಾಡಬೇಕು ಎಂದು ಬಯಸುವವರಿಗೆ ಯೋಚನೆ ಇನ್ನಷ್ಟು ಜಾಸ್ತಿ. ನಿತ್ಯ ದೋಸೆ, ಇಡ್ಲಿ, ಉಪ್ಪಿಟ್ಟು ಚಿತ್ರಾನ್ನ ಅಂತ ಮಕ್ಕಳು (Children) ಮುಖ ಚಿಕ್ಕದು ಮಾಡೋದು ಉಂಟು. ಮಕ್ಕಳ ಬಾಕ್ಸ್ಗೆ ಈ ಕ್ಯಾಪ್ಸಿಕಂ ಬಾತ್ ಮಾಡಿಕೊಡಿ. ನಿಮ್ಮ ಮಕ್ಕಳು ಮಧ್ಯಾಹ್ನ ಬಾಕ್ಸ್ ಖಾಲಿ ಮಾಡೋದು ಗ್ಯಾರೆಂಟಿ ಅಷ್ಟು ರುಚಿಯಾಗಿದರತ್ತೆ ಈ ಬಾತ್
ರುಚಿಕರವಾದ ಕ್ಯಾಪ್ಸಿಕಂ ಟೊಮೆಟೊ ಬಾತ್ ಮಾಡೋದೇಗೆ ನೋಡಿ ಮನೆಯಲ್ಲಿ ಟ್ರೈ ಮಾಡಿ.
ಮಸಾಲೆ ರುಬ್ಬುವುದಕ್ಕೆ:
ಚಕ್ಕೆ - 2 ತುಂಡುಗಳು
ಲವಂಗ - 4-5
ಶುಂಠಿ - 4 ತುಂಡುಗಳು
ಬೆಳ್ಳುಳ್ಳಿ -10 ಎಸಳುಗಳು
ಕಾಳು ಮೆಣಸು - 10
ತೆಂಗಿನ ತುರಿ - ಸ್ವಲ್ಪ
ಕೊತ್ತಂಬರಿ ಸೊಪ್ಪು - ಒಂದು ಮುಷ್ಠಿಯಷ್ಟು
ಹೆಚ್ಚಿಕೊಂಡ ಈರುಳ್ಳಿ -ಒಂದು ಸಣ್ಣ ಗಾತ್ರದ್ದು
ಈ ಎಲ್ಲಾ ಸಾಮಗ್ರಿಗಳನ್ನು ಒಂದು ಮಿಕ್ಸರ್ ಜಾರ್ ಗೆ ಹಾಕಿ ಸ್ವಲ್ಪ ನೀರು ಬೆರೆಸಿ ರುಬ್ಬಿಟ್ಟುಕೊಳ್ಳಿ.
ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ
ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು:
ಪಲಾವ್ ಎಲೆ - 2
ಚಕ್ಕೆ - 2 ತುಂಡುಗಳು
ನಕ್ಷತ್ರ ಮೊಗ್ಗು - ಒಂದು
ಏಲಕ್ಕಿ - 2-3
ಅಡುಗೆ ಎಣ್ಣೆ - 5 ಟೇಬಲ್ ಸ್ಪೂನ್ (ಜೊತೆಗೆ ಒಂದು ಚಮಚ ತುಪ್ಪವನ್ನು ಸೇರಿಸಬಹುದು)
ಈರುಳ್ಳಿ - ಮಧ್ಯಮ ಗಾತ್ರದ 2-3 ಹೆಚ್ಚಿಟ್ಟುಕೊಂಡಿದ್ದು
ಕ್ಯಾಪಿಕಂ- 2-3 ಹೆಚ್ಚಿಕೊಳ್ಳಿ
ಟೊಮ್ಯಾಟೋ - ಮಧ್ಯಮ ಗಾತ್ರದ 3-4 ಹೆಚ್ಚಿಟ್ಟುಕೊಂಡಿದ್ದು
ಹಸಿಮೆಣಸು - 4-5 (ನಿಮ್ಮ ಖಾರಕ್ಕೆ ತಕ್ಕ ಹಾಗೆ ಬಳಸಿ)
ಹಸಿ ಬಟಾಟಿ - ಒಂದು ಕಪ್
ಸಬ್ಬಸಿಗೆ ಸೊಪ್ಪು - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಅರಿಶಿನ - ಚಿಟಿಕೆಯಷ್ಟು
ಅನ್ನ - ಒಂದೂವರೆ ಕಪ್
ಮಾಡುವ ವಿಧಾನ: ಮೊದಲು ಬಾಣಲೆಗೆ ಎಣ್ಣೆ (ಒಂದು ಚಮಚ ತುಪ್ಪವನ್ನೂ ಸೇರಿಸಬಹುದು) ಯನ್ನು ಹಾಕಿ ಬಿಸಿ ಮಾಡಿ, ಇದಕ್ಕೆ ಪಲಾವ್ ಎಲೆ ಚಕ್ಕೆ, ಮೊಗ್ಗು, ಏಲಕ್ಕಿ ಎಲ್ಲವನ್ನೂ ಹಾಕಿ ಹುರಿದುಕೊಳ್ಳಿ. ನಂತರ ಹೆಚ್ಚಿಟ್ಟುಕೊಂಡ ಹಸಿ ಮೆಣಸನ್ನು ಸೇರಿಸಿ.
ಈಗ ಈರುಳ್ಳಿಯನ್ನು ಕ್ಯಾಪ್ಸಿಕಂ ಸೇರಿಸಿ ಒಂದೈದು ನಿಮಿಷ ಎಣ್ಣೆಯಲ್ಲೇ ಬೇಯಲು ಬಿಡಿ. ನಂತರ ಹೆಚ್ಚಿಟ್ಟುಕೊಂಡ ಟೊಮ್ಯಾಟೊವನ್ನು ಸೇರಿಸಿ ಇವೆಲ್ಲವೂ ಚೆನ್ನಾಗಿ ಬೆಂದ ಮೇಲೆ ಪರಿಮಳಕ್ಕೆ ಸಬ್ಬಸ್ಸಿಗೆ ಸೊಪ್ಪನು ಸೇರಿಸಿ (ಬೇಕಿದ್ದರೆ ಮಾತ್ರ) ಇನ್ನು ಬಟಾಟಿಯನ್ನು ಸೇರಿಸಿ ಮಿಕ್ಸ್ ಮಾಡಿ.
ಆನಂತರ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ. ಇನ್ನು ಉಪ್ಪು ಹಾಗೂ ಚಿಟಿಕೆ ಅರಿಶಿನವನ್ನು ಸೇರಿಸಿ ಮಿಕ್ಸ್ ಮಾಡಿ, ಕೊನೆಯಲ್ಲಿ ಉದುರುದುರಾಗಿ ಮಾಡಿಟ್ಟುಕೊಂಡ ಅನ್ನವನ್ನು ಬೆರೆಸಿದರೆ ರುಚಿಕರವಾದ ಟೊಮ್ಯಾಟೊ ಬಾತ್ ರೆಡಿ!
ನೀವು ಕುಕ್ಕರ್ನಲ್ಲಿ ಮಾಡುವುದಾದರೆ ಅನ್ನುವನ್ನು ಪ್ರತ್ಯೇಕಾಗಿ ಬೇಯಿಸಬೇಕಾಗಿಲ್ಲ, ಮೊದಲಿಗೆ ಒಗ್ಗರಣೆ ಕೊಟ್ಟು ನಂತರ ಅಕ್ಕಿ ಹಾಕಿ, ಬೇಯಲು ತಕ್ಕ ನೀರು ಹಾಕಿ ಬೇಯಸಬಹುದು. ಆದರೆ ಅನ್ನ ಪ್ರತ್ಯೇಕ ಮಾಡಿಟ್ಟರೆ ಉದುರು-ಉದುರಾಗಿ ಚೆನ್ನಾಗಿರುತ್ತದೆ.
ಇದನ್ನೂ ಓದಿ: Breakfast Recipe: ಬೆಳಗಿನ ಬ್ರೇಕ್ಫಾಸ್ಟ್ಗೆ ಮಾಡಿ ರುಚಿಕರ ಮೆಂತ್ಯ ರೋಟಿ
ಟೊಮೆಟೊ ಬಾತ್ ಜೊತೆ ಚಟ್ನಿ
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಜಾಲರಿ ಇಟ್ಟು, ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಚೆನ್ನಾಗಿ ಸುಟ್ಟುಕೊಳ್ಳಿ. ಈರುಳ್ಳಿ ಒಳಗಿನಿಂದ ಮೃದುವಾಗುವವರೆಗೆ ಚೆನ್ನಾಗಿ ಸುಡಿ. ಸುಟ್ಟ ಈರುಳ್ಳಿ ಬೆಳ್ಳುಳ್ಳಿ ತಣ್ಣಗಾದ ನಂತರ ಸಿಪ್ಪೆತೆಗೆದು, ಮಿಕ್ಸಿ ಜಾರಿಗೆ ಹಾಕಿ, ಬದಿಯಲ್ಲಿಡಿ.
ಬಾಣಲಿಗೆ 2 ಟೀಸ್ಪೂನ್ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಅದಕ್ಕೆ 1 ಚಮಚ ಉದ್ದಿನ ಬೇಳೆ, 1 ಚಮಚ ಕಡೆಲೆ ಬೇಳೆ, ಕೊತ್ತಂಬರಿ ಬೀಜ ಜೊತೆಗೆ, 4 ಒಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ, ಚೆನ್ನಾಗಿ ಹುರಿದು, ತಣ್ಣಗಾಗಿಸಿ ಅದೇ ಮಿಕ್ಸಿ ಜಾರಿಗೆ ಸೇರಿಸಿ, ಒಂದು ಸುತ್ತು ರುಬ್ಬಿಕೊಳ್ಳಿ.ಹೆಚ್ಚುವರಿಯಾಗಿ, ಒಂದು ಸಣ್ಣ ತುಂಡು ಹುಣಸೆಹಣ್ಣು, ಳಿ ಟೀಸ್ಪೂನ್ ಉಪ್ಪು ಮತ್ತು ನೀರು ಸೇರಿಸಿ. ಅಗತ್ಯವಿದ್ದರೆ ನೀರನ್ನು ಸೇರಿಸಿ ನಯವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ