• Home
  • »
  • News
  • »
  • lifestyle
  • »
  • Upma Recipe: ಹೇಗ್ ಹೇಗೋ ಮಾಡಿದ್ರೆ ರುಚಿಯಾಗಲ್ಲ; ಈ ರೀತಿ ತಯಾರಿಸಿ ಸೋರೆಕಾಯಿ ಉಪ್ಪಿಟ್ಟು

Upma Recipe: ಹೇಗ್ ಹೇಗೋ ಮಾಡಿದ್ರೆ ರುಚಿಯಾಗಲ್ಲ; ಈ ರೀತಿ ತಯಾರಿಸಿ ಸೋರೆಕಾಯಿ ಉಪ್ಪಿಟ್ಟು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Breakfast Recipe: ಈ ಉಪ್ಪಿಟ್ಟು ಆರೋಗ್ಯಕರ ತಿಂಡಿಯಾಗಿದೆ. ಸೋರೆಕಾಯಿ (bottle gourd) ಬಳಕೆ ಮಾಡೋದರಿಂದ ಉಪ್ಪಿಟ್ಟು ತುಂಬಾನೇ ಸಾಫ್ಟ್​ ಆಗುತ್ತದೆ.

  • Share this:

Breakfast Recipe: ಪ್ರತಿದಿನ ಒಂದೇ ರೀತಿಯ ಉಪ್ಪಿಟ್ಟು (Uppittu) ಮಾಡಿದ್ರೆ ಯಾರಿಗೂ ಇಷ್ಟವಾಗಲ್ಲ. ಹಾಗಾಗಿ ಉಪ್ಪಿಟ್ಟು ಮಾಡುವ ವಿಧಾನ ಬೇರೆ ಬಳ ಸಿದ್ರೆ ಅದರ ರುಚಿ ಇಮ್ಮಡಿಯಾಗುತ್ತ್ತದೆ. ಈ ಹಿಂದೆ ಮಜ್ಜಿಗೆ (Buttermilk Upma), ತುಪ್ಪದ ಉಪ್ಪಿಟ್ಟು ಮಾಡೋದನ್ನು ಹೇಳಿದ್ದೀವಿ. ಇಂದು ನಿಮಗೆ ಹೊಸ ರುಚಿಯ ಸೋರೆಕಾಯಿ ಉಪ್ಪಿಟ್ಟು (Bottle Gourd Upma)  ಹೇಳುತ್ತಿದ್ದೇವೆ. ಈ ರೀತಿ ಉಪ್ಪಿಟ್ಟು ಮಾಡಿದ್ರೆ ಎಲ್ಲ ವರ್ಗದವರಿಗೂ ಇಷ್ಟವಾಗುತ್ತದೆ.  ಬಹುತೇಕರು ಇಷ್ಟಪಡದ ತಿಂಡಿ ಉಪ್ಪಿಟ್ಟು ಹೊಸ ರುಚಿಯಲ್ಲಿ  (Upma Recipe)  ಹೇಗೆ ಮಾಡೋದನ್ನು ಹೇಳುತ್ತಿದ್ದೇವೆ. ಈ ಉಪ್ಪಿಟ್ಟು ಆರೋಗ್ಯಕರ ತಿಂಡಿಯಾಗಿದೆ. ಸೋರೆಕಾಯಿ (bottle gourd) ಬಳಕೆ ಮಾಡೋದರಿಂದ ಉಪ್ಪಿಟ್ಟು ತುಂಬಾನೇ ಸಾಫ್ಟ್​ ಆಗುತ್ತದೆ.


ಬೇಕಾಗುವ ಸಾಮಾಗ್ರಿಗಳು


ದಪ್ಪ ರವೆ: ಒಂದು ಕಪ್ ಅಥವಾ ಗೋಧಿ ನುಚ್ಚು


ಸೋರೆಕಾಯಿ: 100 ಗ್ರಾಂ


ಜೀರಿಗೆ ಮತ್ತು ಸಾಸವೆ: 1 ಟೀ ಸ್ಪೂನ್


ಹಸಿಮೆಣಸಿಕಾಯಿ: 4 ರಿಂದ 5


ಕೋತಂಬರಿ ಸೊಪ್ಪು


ಈರುಳ್ಳಿ: 1 ಚಿಕ್ಕದು


ಅರಿಶಿಣ: ಚಿಟಿಕೆ


ಇಂಗು: ಚಿಟಿಕೆ


ಹುಣಸೆಹಣ್ಣಿನ ರಸ: 4 ರಿಂದ 5 ಟೀ ಸ್ಪೂನ್


ಗೋಡಂಬಿ: 6 ರಿಂದ 8


ಕರಿಬೇವು; 3ರಿಂದ 4 ಎಲೆ


ಎಣ್ಣೆ


ಉಪ್ಪು: ರುಚಿಗೆ ತಕ್ಕಷ್ಟು


How to make very delicious masala upma recipe
ಉಪ್ಪಿಟ್ಟು


ಸೋರೆಕಾಯಿ ಉಪ್ಪಿಟ್ಟು ಮಾಡುವ ವಿಧಾನ


*ಮೊದಲಿಗೆ ರವೆಯನ್ನು ಚೆನ್ನಾಗಿ ಹುರಿದುಕೊಂಡು ಎತ್ತಿಟ್ಟುಕೊಳ್ಳಿ ಈರುಳ್ಳಿಯನ್ನು ದೊಡ್ಡ ಗಾತ್ರದಲ್ಲಿ ಕತ್ತರಿಸಿಕೊಳ್ಳಿ. ಇದರ ಜೊತೆಗೆ ಹಸಿಮೆಣಸಿಕಾಯಿಯನ್ನು ಉದ್ದವಾಗಿ ಕತ್ತರಿಸಿಕೊಳ್ಳಬೇಕು.


*ಸೋರೆಕಾಯಿಯ ಮೇಲಿನ ಸಿಪ್ಪೆ ತೆಗೆದುಕೊಂಡು, ಮಧ್ಯಮ ಗಾತ್ರದಲ್ಲಿ ಕತ್ತರಿಸಿಕೊಳ್ಳಿ.


*ಈಗ ಒಂದು ಕುಕ್ಕರ್ ತೆಗೆದುಕೊಂಡು ಅದಕ್ಕೆ ಹುರಿದಿಟ್ಟುಕೊಂಡಿರುವ ರವೆ, ಸೋರೆಕಾಯಿ ಮತ್ತು ಚಿಟಿಕೆ ಅರಿಶಿನ ಹಾಕಿ ಎರಡೂವರೆ ಕಪ್​ನಷ್ಟು ನೀರು ಹಾಕಿ ಎರಡು ಕೂಗು ಕೂಗಿಸಿಕೊಳ್ಳಿ.


*ಈಗ ಮತ್ತೊಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟುಕೊಳ್ಳಿ. ಪಾತ್ರೆಗೆ ಎರಡು ಟೀ ಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಜೀರಿಗೆ ಮತ್ತು ಸಾಸವೆ ಹಾಕಬೇಕು. ಸಾಸವೆ ಚಿಟಪಟ ಅಂತ ಸಿಡಿಯುತ್ತಿದ್ದಂತೆ ಈರುಳ್ಳಿ ಸೇರಿಸಿ ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಬೇಕು.


ಇದನ್ನು ಓದಿ:  Breakfast Recipe: ಬೆಳಗಿನ ಉಪಹಾರಕ್ಕೆ ರುಚಿಕರ ಬ್ರೆಡ್ ಉಪ್ಮಾ


*ತದನಂತರ ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಎರಡು ನಿಮಿಷ ಫ್ರೈ ಮಾಡಿದ ನಂತರ ಹುಣಸೆಹಣ್ಣಿನ ರಸ ಸೇರಿಸಿ ಬೇಯಿಸಿ. ನಂತರ ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಬೇಕು. ತದನಂತರ ಚಿಟಿಕೆ ಇಂಗು ಹಾಕೋದನ್ನು ಮರೆಯಬೇಡಿ. (ಈ ಸಮಯದಲ್ಲಿ ಬೆಲ್ಲ ಸಹ ಸೇರಿಸಿಕೊಳ್ಳಬೇಕು)


*ಮತ್ತೊಂದು ಪ್ಯಾನ್ ಗ್ಯಾಸ್ ಸ್ಟೌವ್  ಮೇಲಿಟ್ಟು ಒಂದು ಟೀ ಸ್ಪೂನ್ ಎಣ್ಣೆ ಹಾಕಿ ಗೋಡಂಬಿಯನ್ನು ಫ್ರೈ ಮಾಡಿಕೊಂಡು ಎತ್ತಿಟ್ಟುಕೊಳ್ಳಿ.


*ಒಗ್ಗರಣೆ ಸಿದ್ಧವಾದ ನಂತರ ಕುಕ್ಕರ್​ನಲ್ಲಿ ಬೇಯಿಸಿಕೊಂಡಿರುವ ರವೆ ಮತ್ತು ಸೋರೆಕಾಯಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ತದನಂತರ ಮುಚ್ಚಳ ಮುಚ್ಚಿ ಮೂರರಿಂದ ನಾಲ್ಕು ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ.


how to make Bottle Gourd Upma mrq
ಉಪ್ಪಿಟ್ಟು


*ಕೊನೆಯದಾಗಿ ಸಿದ್ಧವಾದ ಉಪ್ಪಿಟ್ಟಿಗೆ ಫ್ರೈ ಮಾಡಿಕೊಂಡಿರುವ ಗೋಡಂಬಿಯನ್ನ ಮೇಲೆ ಹಾಕಿ ಕೋತಂಬರಿಯಿಂದ ಅಲಂಕರಿಸಿದ್ರೆ ರುಚಿಯಾದ ಸೋರೆಕಾಯಿ ಉಪ್ಮಾ ಸವಿಯಲು ಸಿದ್ಧ.


ಇದನ್ನೂ ಓದಿ:  Breakfast Recipe: ಉಪ್ಪಿಟ್ಟನ್ನು ಮತ್ತಷ್ಟು ರುಚಿಯಾಗಿಸಲು ಈ ಪದಾರ್ಥಗಳನ್ನ ಬಳಿಸಿ


(ಗಮನಿಸಿ: ಈ ಉಪ್ಪಿಟ್ಟು ತಯಾರಿಕೆಗೆ ಗೋಧಿ ನುಚ್ಚು ಬಳಸಿದ್ರೆ ರುಚಿಯಾಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಗೋಧಿ ನುಚ್ಚು ಲಭ್ಯವಿದೆ. ಒಂದು ವೇಳೆ ಗೋಧಿ ನುಚ್ಚು ಸಿಗದಿದ್ರೆ ದಪ್ಪ ರವೆ ಸಹ ಬಳಸಬಹುದು)

Published by:Mahmadrafik K
First published: