• Home
  • »
  • News
  • »
  • lifestyle
  • »
  • Curd: ಚಳಿಗಾಲದಲ್ಲಿ ಸೂಪರ್‌ ಆಗಿರೋ ಮೊಸರು ಮಾಡಲು ಈ 7 ಸುಲಭ ಟಿಪ್ಸ್‌ ಬಳಸಿ

Curd: ಚಳಿಗಾಲದಲ್ಲಿ ಸೂಪರ್‌ ಆಗಿರೋ ಮೊಸರು ಮಾಡಲು ಈ 7 ಸುಲಭ ಟಿಪ್ಸ್‌ ಬಳಸಿ

ಮೊಸರು

ಮೊಸರು

ಕಡಿಮೆ ತಾಪಮಾನ ಮತ್ತು ಗಾಳಿಯಲ್ಲಿ ತೇವಾಂಶದ ಕೊರತೆಯು ಹಾಲಿನಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಹೆಪ್ಪು ಬೆರೆಸಿ ಮೊಸರಾಗಿ ಪರಿವರ್ತಿಸುತ್ತದೆ. ಆದರೆ ಚಳಿಗಾಲದಲ್ಲಿ ಇಂತಹ ಸಮಸ್ಯೆಗಳನ್ನು ಎದುರಿಸುತ್ತೀರಿ.

  • Share this:

ಭಾರತದ ಊಟದ ಸಂಸ್ಕೃತಿ ನೋಡಿದಲ್ಲಿ ಮೊಸರು (Curd) ನಮ್ಮ ಆಹಾರದಲ್ಲಿ ಪ್ರಮುಖ ಭಾಗ ಎಂದು ಹೇಳಬಹುದು. ಪ್ರತಿ ಊಟದಲ್ಲಿ ತಾಜಾ ಮೊಸರಿನ ಬಟ್ಟಲು ಇರೋದು ಸರ್ವೇಸಾಮಾನ್ಯ. ಮೊಸರು ಊಟಕ್ಕೆ ಸುವಾಸನೆ ಮತ್ತು ತಾಜಾತನವನ್ನು ತರುತ್ತದೆ. ಊಟದಲ್ಲಿ ಮಾತ್ರವಲ್ಲದೇ, ಲಸ್ಸಿ (Lassi), ಮಜ್ಜಿಗೆ, ಸ್ಮೂಥಿಗಳನ್ನು (Smoothy) ಮಾಡಲು ಸಹ ಮೊಸರನ್ನು ಬಳಸಲಾಗುತ್ತದೆ. ಪಾಕೆಟ್‌ ಮೊಸರಿಗಿಂತ ಮನೆಯಲ್ಲಿಯೇ ಹಾಲಿಗೆ ಹೆಪ್ಪು ಹಾಕಿ ಮೊಸರನ್ನು ತಯಾರಿಸುವುದು ನಿಜಕ್ಕೂ ಒಳ್ಳೆಯದು.


ಚಳಿಗಾಲದಲ್ಲಿ ಹಾಲು ಹೆಪ್ಪಾಗುವಂತೆ ಮಾಡುವುದು ನಿಜಕ್ಕೂ ಒಂದು ಕಷ್ಟವಾದ ಕೆಲಸ, ಚಳಿಗಾಲದ ತೀವ್ರತೆ ಹೆಚ್ಚಾದಂತೆ, ಮೊಸರು ಆಗೋಕೆ ಟೈಮ್‌ ಹೆಚ್ಚಾಗುತ್ತಾ ಹೋಗುತ್ತೆ. ಹೆಚ್ಚಿನ ದಿನಗಳಲ್ಲಿ ಮೊಸರು ಗಟ್ಟಿಯಾಗಿರುವುದಿಲ್ಲ ಅಥವಾ ಗಟ್ಟಿಯಿದ್ದರೂ ಒಂಥರಾ ನೀರು ನೀರಾಗಿರುತ್ತದೆ.


ಕಡಿಮೆ ತಾಪಮಾನ ಮತ್ತು ಗಾಳಿಯಲ್ಲಿ ತೇವಾಂಶದ ಕೊರತೆಯು ಹಾಲಿನಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಹೆಪ್ಪು ಬೆರೆಸಿ ಮೊಸರಾಗಿ ಪರಿವರ್ತಿಸುತ್ತದೆ. ಆದರೆ ಚಳಿಗಾಲದಲ್ಲಿ ಇಂತಹ ಸಮಸ್ಯೆಗಳನ್ನು ಎದುರಿಸುತ್ತೀರಿ ಎಂದಾದಲ್ಲಿ, ಕೆಲವು ಟಿಪ್ಸ್‌ಗಳು ಇಲ್ಲಿವೆ. ಈ ಕೆಳಗೆ ನೀಡಿರುವ ಟಿಪ್ಸ್ ಗಳು ಚಳಿಗಾಲದಲ್ಲಿ ಯೂ ಸಹ ಗಟ್ಟಿ ಮೊಸರನ್ನು ಪಡೆಯಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: ಎಲ್ಲಾ ಅರಶಿನ ಹಳದಿಯೇ ಇರಲ್ಲ, ಕಪ್ಪು -ನೀಲಿ ಬಣ್ಣದಲ್ಲೂ ಇದೆಯಂತೆ ಟರ್ಮರಿಕ್!


ಚಳಿಗಾಲದಲ್ಲಿ ಗಟ್ಟಿ ಮೊಸರು ಮಾಡಲು 7 ಸುಲಭ ಸಲಹೆಗಳು:


  1. ಬೆಚ್ಚಗಿನ ಹಾಲನ್ನು ಬಳಸಿ: ಬೇಸಿಗೆಯಲ್ಲಿ ಉಗುರುಬೆಚ್ಚಗಿನ ಹಾಲಿಗೆ ಹೆಪ್ಪು ಹಾಕುತ್ತಿರಿ ಅಲ್ಲವೇ? ಆದರೆ ಚಳಿಗಾಲದಲ್ಲಿ ಹಾಲನ್ನು ಸ್ವಲ್ಪ ಹೆಚ್ಚು ಬಿಸಿ ಮಾಡಿ. ನಂತರ ಅದಕ್ಕೆ ಹೆಪ್ಪನ್ನು ಬೆರೆಸಿ. ಆಗ ನಿಮಗೆ ಗಟ್ಟಿ ಮೊಸರು ಸಿಗುತ್ತದೆ.

  2. ಕ್ಯಾಸರೋಲ್‌ ಪಾತ್ರೆಗಳನ್ನು ಬಳಸಿ: ಚಳಿಗಾಲದಲ್ಲಿ ಮೊಸರು ತಯಾರಿಸುವುದು ಬಹಳ ಸುಲಭದ ಕೆಲಸ. ಅದಕ್ಕೆ ಉತ್ತಮ ವಿಧಾನವೆಂದರೆ ಕ್ಯಾಸರೋಲ್ ಪಾತ್ರೆಗಳನ್ನು ಬಳಸುವುದು. ಕ್ಯಾಸರೋಲ್‌ ಪಾತ್ರೆಗಳನ್ನು ಶಾಖವನ್ನು ಉಳಿಸಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿರುತ್ತದೆ ಮತ್ತು ಹಾಲನ್ನು ದೀರ್ಘಕಾಲದವರೆಗೆ ಬೆಚ್ಚಗಿಡಬಲ್ಲವು. ಇದರಿಂದ ಬೆಚ್ಚಗಿನ ಹಾಲಿಗೆ ಹೆಪ್ಪು ಹಾಕಿ ಗಟ್ಟಿ ಮೊಸರನ್ನು ಪಡೆಯಬಹುದು.

  3. ಹಾಲಿಗೆ ಹೆಚ್ಚು ಹೆಪ್ಪನ್ನು ಹಾಕಿ: ಚಳಿಗಾಲದಲ್ಲಿ, ಬೆಚ್ಚಗಿನ ಹಾಲಿಗೆ ಸೇರಿಸಬೇಕಾದ ಸ್ಟಾರ್ಟರ್ (ಹೆಪ್ಪು) ಅನ್ನು ಹೆಚ್ಚೆ ಹಾಕಿ. ಉದಾಹರಣೆಗೆ, ನೀವು ಬೇಸಿಗೆಯಲ್ಲಿ ಒಂದು ಚಮಚ ಹೆಪ್ಪನ್ನು ಬಳಸಿದರೆ, ಚಳಿಗಾಲದಲ್ಲಿ ಅದೇ ಪ್ರಮಾಣದ ಹಾಲಿಗೆ ಎರಡು ಚಮಚ ಹೆಪ್ಪನ್ನು ಬಳಸಿ. ಆಗ ಗಟ್ಟಿ ಮೊಸರು ನಿಮ್ಮದಾಗುತ್ತೆ.

  4. ಡಾರ್ಕ್‌ ರೂಮಲ್ಲಿ ಹೆಪ್ಪು ಹಾಕಿರೋ ಪಾತ್ರೆ ಇರಿಸಿ: ಹಾಲಿಗೆ ಹೆಪ್ಪನ್ನು ಹಾಕಿದ ನಂತರ ಅದನ್ನು ಡಾರ್ಕ್ ಸ್ಥಳದಲ್ಲಿ ಇರಿಸಿ. ಅಲ್ಲಿ ಯಾವುದೇ ಗಾಳಿಯಾಡದಂತೆ ಜಾಗೃತೆ ವಹಿಸಿ. ಇದಕ್ಕೆ ಉತ್ತಮ ವಿಧಾನವೆಂದರೆ ಲೈಟ್‌ ಇರೋ ಮೈಕ್ರೋವೇವ್‌ನಲ್ಲಿ ಇರಿಸೋದರಿಂದ ಹಾಲು ಗಟ್ಟಿ ಮೊಸರಾಗುತ್ತದೆ.

  5. ಪಾತ್ರೆಯನ್ನು ಸರಿಯಾಗಿ ಮುಚ್ಚಿ: ಬೆಚ್ಚಗಿನ ಹಾಲಿಗೆ ಹೆಪ್ಪು ಹಾಕಿದ ನಂತರ, ಅದನ್ನು ಗಟ್ಟಿಯಾಗಿ ಬೆಚ್ಚಗಿನ ಬಟ್ಟೆಯಿಂದ ಕಂಟೇನರ್‌ಗೆ ಕಟ್ಟೊದು ಮತ್ತೊಂದು ಬೆಸ್ಟ್‌ ಟ್ರಿಕ್‌ ಅಂತಾನೇ ಹೇಳಬಹುದು. ಈ ಬೆಚ್ಚಗಿನ ಬಟ್ಟೆಯು ಹಾಲು ಶಾಖವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

  6. ಹಗಲು ಹೊತ್ತಿನಲ್ಲಿ ಹೆಪ್ಪು ಹಾಕಿ: ಚಳಿಗಾಲದ ಸಮಯದಲ್ಲಿ ಮುಂಜಾನೆಯೇ ಸ್ವಲ್ಪ ಬೆಚ್ಚಗಿರುವ ಕಾರಣ, ಮೊಸರು ಮಾಡಲು ಇದು ಸೂಕ್ತ ಸಮಯ ಆಗಿದೆ. ಆದ್ದರಿಂದ ಚಳಿಗಾಲದ ಸಮಯದಲ್ಲಿ ಹಗಲು ಹೊತ್ತಿನಲ್ಲಿ ಮೊಸರನ್ನು ಮಾಡಿಕೊಳ್ಳಿ.




7. ಬೆಚ್ಚಗಿನ ನೀರಿನಲ್ಲಿ ಇರಿಸಿ: ಬೆಚ್ಚಗಿನ ಹಾಲಿಗೆ ಹೆಪ್ಪು ಹಾಕಿದ ನಂತರ ಆ ಪಾತ್ರೆಯನ್ನು ಸ್ವಲ್ಪ ಬೆಚ್ಚಗಿರುವ ನೀರಿನ ಪಾತ್ರೆಯಲ್ಲಿ ಇರಿಸುವುದು ತುಂಬಾ ಸೂಕ್ತ. ಅದರ ಜೊತೆಗೆ ಹಾಲಿನ ಪಾತ್ರೆಯನ್ನು ಬಿಗಿಯಾಗಿ ಮುಚ್ಚಿ. ಇದರಿಂದ ಶಾಖ ಆಗೆಯೇ ಉಳಿದು ಗಟ್ಟಿ ಮೊಸರು ಆಗಲು ಈ ವಿಧಾನ ಬೆಸ್ಟ್‌ ಆಗಿದೆ ಅಂತ ಹೇಳಬಹುದು.

First published: