• Home
  • »
  • News
  • »
  • lifestyle
  • »
  • Beetroot Halwa: ಬೀಟ್ರೂಟ್​ನಲ್ಲೂ ಮಾಡಬಹುದು ಸಖತ್ ಟೆಸ್ಟಿ ಹಲ್ವಾ!

Beetroot Halwa: ಬೀಟ್ರೂಟ್​ನಲ್ಲೂ ಮಾಡಬಹುದು ಸಖತ್ ಟೆಸ್ಟಿ ಹಲ್ವಾ!

ಬೀಟ್ರೂಟ್ ಹಲ್ವಾ

ಬೀಟ್ರೂಟ್ ಹಲ್ವಾ

ಹಲ್ವಾಗಳಲ್ಲಿ  ಕ್ಯಾರೆಟ್ ಹಲ್ವಾ, ಲೌಕಿ ಕಾ ಹಲ್ವಾ, ಕಾಶಿ ಹಲ್ವಾ, ಸೂಜಿ ಕಾ ಹಲ್ವಾ, ಆಟೆ ಕಾ ಹಲ್ವಾ, ಐಸ್ ಹಲ್ವಾ, ಬೇಸನ್ ಕಾ ಹಲ್ವಾ, ಹಯಗ್ರೀವಾ ಮಡ್ಡಿ ಮತ್ತು ಬಾಂಬೆ ಕರಾಚಿ ಹಲ್ವಾ ಮುಂತಾದ ಪಾಕವಿಧಾನಗಳಿದೆ. ಆದರೆ ಇಂದು ಹಲ್ವಾದಲ್ಲಿ ಡಿಫರೆಂಟ್ ಆದ  ರೆಸಿಪಿಯನ್ನು ನಾವು ನಿಮಗೆ ಹೇಳಿಕೊಡುತ್ತಿದ್ದೇವೆ ಅದುವೇ ಬೀಟ್ರೂಟ್ ಹಲ್ವಾ

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • New Delhi, India
  • Share this:

ಯಾವುದೇ ಶುಭ ವಿಚಾರ ಅಂತ ಬಂದಾಗ ಭಾರತದ (India) ಸಂಪ್ರದಾಯದ ಪ್ರಕಾರ ಸಿಹಿ ತಿಂದು ಕಾರ್ಯಾರಂಭ ಮಾಡುವುದು ವಾಡಿಕೆ. ಮದುವೆ-ಮುಂಜಿ, ಬರ್ತ್​​ಡೇ, ಮಗು ಜನಿಸಿದಾಗ ಜನ ಸಿಹಿ (Sweet) ಹಂಚಿ ಸಂಭ್ರಮಿಸುತ್ತಾರೆ. ಸಿಹಿ ತಿಂಡಿಗಳಲ್ಲಿ ವಿಧವಿಧವಾದ ನಾನಾ ಖಾದ್ಯಗಳಿದೆ. ಅವುಗಳಲ್ಲಿ ಹಲ್ವಾ ಕೂಡ ಒಂದು. ಒಂದು ಹಲ್ವಾಗಳಲ್ಲಿ  ಕ್ಯಾರೆಟ್ ಹಲ್ವಾ (Carrot Halwa), ಲೌಕಿ ಕಾ ಹಲ್ವಾ, ಕಾಶಿ ಹಲ್ವಾ, ಸೂಜಿ ಕಾ ಹಲ್ವಾ, ಆಟೆ ಕಾ ಹಲ್ವಾ, ಐಸ್ ಹಲ್ವಾ, ಬೇಸನ್ ಕಾ ಹಲ್ವಾ, ಹಯಗ್ರೀವಾ ಮಡ್ಡಿ ಮತ್ತು ಬಾಂಬೆ ಕರಾಚಿ ಹಲ್ವಾ ಮುಂತಾದ ಪಾಕವಿಧಾನಗಳಿದೆ. ಆದರೆ ಇಂದು ಹಲ್ವಾದಲ್ಲಿ ಡಿಫರೆಂಟ್ ಆದ  ರೆಸಿಪಿಯನ್ನು (Recipe) ನಾವು ನಿಮಗೆ ಹೇಳಿಕೊಡುತ್ತಿದ್ದೇವೆ ಅದುವೇ ಬೀಟ್ರೂಟ್ ಹಲ್ವಾ (Beetroot Halwa). ಸಾಮಾನ್ಯವಾಗಿ ಕ್ಯಾರೆಂಟ್​ನಲ್ಲಿ ಮಾತ್ರ ಜನ ಹಲ್ವಾ ಮಾಡಬಹುದು ಎಂದು ಅಂದುಕೊಂಡಿರುತ್ತಾರೆ. ಆದರೆ ಬೀಟ್ರೂಟ್​ನಲ್ಲಿಯೂ ಹಲ್ವಾ ಮಾಡಬಹುದು. ಇನ್ನೂ ಇದು ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ.


how to make beetroot halwa
ಬೀಟ್ರೂಟ್ ಹಲ್ವಾ


ಬೀಟ್ರೂಟ್ ಹಲ್ವಾ ಮಾಡಲು ಬೇಕಾಗುವ ಸಾಮಾಗ್ರಿಗಳು


  • 2 ಟೇಬಲ್ ಸ್ಪೂನ್ ತುಪ್ಪ

  • 4 ಕಪ್​ ತುರಿದ ಬಿಟ್​ರೋಟ್​

  • 1 ಕಪ್ ಹಾಲು

  • ¼ ಕಪ್​ ಸಕ್ಕರೆ

  • ಕತ್ತರಿಸಿದ 6 ಗೋಡಂಬಿ / ಕಾಜು

  • ¼ಟೀಸ್ಪೂನ್ ಏಲಕ್ಕಿ ಪುಡಿ

  • 1 ಟೀಸ್ಪೂನ್ ತುಪ್ಪ

  • ½ಕಪ್ ಹಾಲಿನ ಪುಡಿ


 ಬೀಟ್ರೂಟ್ ಹಲ್ವಾ ಮಾಡುವ ವಿಧಾನ


ಮೊದಲಿಗೆ ಸಿಪ್ಪೆ ತೆರೆದು  ಬೀಟ್ರೂಟ್ ಅನ್ನು ತುರಿದುಕೊಳ್ಳಿ. ನಂತರ ದೊಡ್ಡ ಕಡಾಯಿಯಲ್ಲಿ 2 ಟೇಬಲ್​​ ಸ್ಪೂನ್ ತುಪ್ಪ ಹಾಕಿ. ಬಿಸಿಯಾದ ತುಪ್ಪದ ಜೊತೆಗೆ 4 ಕಪ್ ತುರಿದಿಟ್ಟ ಬೀಟ್ರೂಟ್ ಸೇರಿಸಿ. 2-4 ನಿಮಿಷಗಳವರೆಗೂ ಬೀಟ್ರೂಟ್​ ಅನ್ನು ಬೇಯಿಸಿಕೊಳ್ಳಿ. ​ಈಗ ಅದಕ್ಕೆ 1 ಕಪ್ ಹಾಲು ಬೆರೆಸಿ. ಸೌಟ್​ನಲ್ಲಿ ಬಾಡಿಸಿ 20 ನಿಮಿಷ ಮಧ್ಯಮ ಉರಿಯಲ್ಲಿ ಕುದಿಸಿ, ಸಂಪೂರ್ಣವಾಗಿ ಆವಿಯಾಗುವವರೆಗೂ ಬೀಟ್ರೂಟ್ ಬೇಯಿಸಿ. ಬಳಿಕ ¼ ಕಪ್ ಸಕ್ಕರೆ ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ. ಸಕ್ಕರೆ ಕರಗುವ ತನಕ ಬೇಯಿಸುವುದನ್ನು ಮುಂದುವರಿಸಿ. ನಂತರ ತುಪ್ಪ ಹಲ್ವಾದಿಂದ ಬೇರ್ಪಟ್ಟಿರುತ್ತದೆ.


how to make beetroot halwa
ಬೀಟ್ರೂಟ್ ಹಲ್ವಾ


ಕೋವಾ ಮಾಡುವ ವಿಧಾನ


ಕಾದ ಬಾಣಲಿಗೆ 1 ಟೀಸ್ಪೂನ್ ತುಪ್ಪ ಮತ್ತು ¼ ಕಪ್ ಹಾಲನ್ನು ಹಾಕಿ ಬಿಸಿ ಮಾಡುವ ಮೂಲಕ ತ್ವರಿತ ಖೋವಾವನ್ನು ತಯಾರಿಸಿ. ½ ಕಪ್ ಹಾಲಿನ ಪುಡಿಯನ್ನು ಮಿಕ್ಸ್​ ಮಾಡಿ ಸಣ್ಣ ಉರಿಯಲ್ಲಿ ಬೇಯಿಸಿ. ಮಿಶ್ರಣವು ದಪ್ಪವಾಗುವವರೆಗೆ ಮತ್ತು ಪ್ಯಾನ್‌ನಿಂದ ಬೇರ್ಪಡಿಸುವವರೆಗೆ ಬೇಯಿಸಿದಾಗ ಖೋವಾ ಸಿದ್ಧವಾಗುತ್ತದೆ.


ಇದನ್ನೂ ಓದಿ: Morning Breakfast: ಬೆಳಗಿನ ತಿಂಡಿಗೆ ಕಪ್ಪು ಕಡಲೆ ಕಾಳಿನ ದೋಸೆ ರೆಸಿಪಿ ಮಾಡಿ ಸೇವಿಸಿ!


ನಂತರ ತಯಾರಾದ ಬೀಟ್ರೂಟ್ ಹಲ್ವಾಕ್ಕೆ ಕೋವಾವನ್ನು ಮಿಕ್ಸ್ ಮಾಡಬೇಕು. ಸುಮಾರು ½ ಕಪ್​ನಷ್ಟು ಖೋವಾವನ್ನು ನೀವು ಬಳಸಬಹುದು. ಇದರ ಜೊತೆಗೆ ಸಣ್ಣದಾಗಿ ಕತ್ತರಿಸಿಕೊಂಡಿದ್ದ 6 ಗೋಡಂಬಿ / ಕಾಜು ಮತ್ತು ¼ ಟೀಸ್ಪೂನ್ ಏಲಕ್ಕಿ ಪುಡಿಯನ್ನು ಸೇರಿಸಿ. ಚೆನ್ನಾಗಿ ಬೆರೆಸಿ. ಈಗ ಬೀಟ್ರೂಟ್ ಹಲ್ವಾ ಸವಿಯಲು ಸಿದ್ಧವಾಗಿದೆ.


ಬೀಟ್ರೂಟ್ ಆರೋಗ್ಯಕ್ಕೆ ಒಳ್ಳೆಯದು. ರಕ್ತ ಹೀನತೆಯಿಂದ ಬಳಲುತ್ತಿರುವವರು ಬೀಟ್ರೂಟ್ ಜಾಸ್ತಿ ತಿನ್ನಬೇಕು. ಕೆಲವರಿಗೆ  ಬೀಟ್ರೂಟ್ ಸಾಂಬಾರ್, ಪಲ್ಯೆ ಇಷ್ಟವಾಗುವುದಿಲ್ಲ. ಅಂತವರು ಬೀಟ್ರೂಟ್ ಹಲ್ವಾ ಮಾಡಿ ತಿನ್ನಿ.

Published by:Monika N
First published: