• Home
  • »
  • News
  • »
  • lifestyle
  • »
  • Avarekalu Upma: ಮನೆಯಲ್ಲಿಯೇ ತಯಾರಿಸಿ ರುಚಿಕರವಾದ ಅವರೆಕಾಳು ಉಪ್ಪಿಟ್ಟು

Avarekalu Upma: ಮನೆಯಲ್ಲಿಯೇ ತಯಾರಿಸಿ ರುಚಿಕರವಾದ ಅವರೆಕಾಳು ಉಪ್ಪಿಟ್ಟು

ಅವರೆಕಾಳು ಉಪ್ಪಿಟ್ಟು

ಅವರೆಕಾಳು ಉಪ್ಪಿಟ್ಟು

ಸಾಮಾನ್ಯವಾಗಿ ಮಾಡುವ ಶೈಲಿಯಲ್ಲಿಯೇ ಅವರೆಕಾಳು ಉಪ್ಪಿಟ್ಟು ಮಾಡಬಹುದು. ಆದ್ರೆ ಅವರೆಕಾಳು ಯಾವ ಸಮಯದಲ್ಲಿ ಬಳಸಬೇಕು ಎಂಬುದರ ಬಗ್ಗೆ ತಿಳಿದಿರಬೇಕು. ಇಂದು ನಾವು ನಿಮಗೆ ಆ ವಿಧಾನವನ್ನು ಹೇಳುತ್ತಿದ್ದೇವೆ.

  • Share this:

Avarekalu Uppittu: ಕಳೆದ ಒಂದು ವಾರದಿಂದ ಮಾರುಕಟ್ಟೆಗೆ ಅವರೆಕಾಳು (Avarekalu/ Hyacinth bean ) ಕಾಲಿಟ್ಟಿದೆ. ವಿಶೇಷವಾದ ಬೆಂಗಳೂರು ಭಾಗದಲ್ಲಿಯೇ ಅಡುಗೆ ಮನೆಯಲ್ಲಿಯೇ ಅವರೆಕಾಳಿಗೆ ವಿಶೇಷ ಸ್ಥಾನವಿದೆ. ಎಲ್ಲಾ ಪಾಕ ವಿಧಾನಗಳಲ್ಲಿಯೂ ಅವರೆಕಾಳು ಬಳಕೆ ಮಾಡಿದ್ರೆ ಅದರ ರುಚಿ ಇಮ್ಮಡಿ ಆಗುತ್ತೆ ಎಂದು ಪಾಕ (Avarekalu Recipe) ಸವಿದವರು ಹೇಳುತ್ತಾರೆ. ಅದರಲ್ಲಿ ಒಂದು ಪಾಕ ವಿಧಾನ ಅವರೆಕಾಳು ಉಪ್ಪಿಟ್ಟು (Avarekalu Upma). ಪ್ರತಿದಿನ ಒಂದೇ ಬಗೆಯ ಉಪ್ಪಿಟ್ಟು (Upma) ತಿಂದು ಬೇಜಾರು ಆಗಿದ್ದರೆ ಅವರೆಕಾಳು ಬಳಸಿ ಉಪ್ಪಿಟ್ಟು ಮಾಡಿ. ಅವರೆಕಾಳು ಸೀಸನ್ (Avarekalu Season) ಇದ್ದಾಗ ಮಾತ್ರ ರುಚಿಯಲು ಸಿಗುತ್ತದೆ. ಬೆಂಗಳೂರಿನಲ್ಲಿ ವಿಶೇಷವಾಗಿ ಅವರೆಕಾಳು ಮೇಳ (Bengaluru Avarekalu Mela) ಸಹ ನಡೆಯುತ್ತದೆ. ಇಲ್ಲಿ ನಿಮಗೆ ಬಗೆ ಬಗೆಯ ಅವರೆಕಾಳು ಸಿಗುತ್ತದೆ.


ಸಾಮಾನ್ಯವಾಗಿ ಮಾಡುವ ಶೈಲಿಯಲ್ಲಿಯೇ ಅವರೆಕಾಳು ಉಪ್ಪಿಟ್ಟು ಮಾಡಬಹುದು. ಆದ್ರೆ ಅವರೆಕಾಳು ಯಾವ ಸಮಯದಲ್ಲಿ ಬಳಸಬೇಕು ಎಂಬುದರ ಬಗ್ಗೆ ತಿಳಿದಿರಬೇಕು. ಇಂದು ನಾವು ನಿಮಗೆ ಆ ವಿಧಾನವನ್ನು ಹೇಳುತ್ತಿದ್ದೇವೆ.


ಬೇಕಾಗುವ ಸಾಮಾಗ್ರಿಗಳು


ದಪ್ಪ ರವೆ: ಒಂದು ಕಪ್ (100 ಗ್ರಾಂ)


ಅವರೆಕಾಳು: 100 ಗ್ರಾಂ


ಈರುಳ್ಳಿ: ಎರಡು


ಟೊಮ್ಯಾಟೋ: ಎರಡು


ಜೀರಿಗೆ ಮತ್ತು ಸಾಸವೆ: ಒಂದು ಟೀ ಸ್ಪೂನ್


ಹಸಿಮೆಣಸಿನಕಾಯಿ: ಎರಡರಿಂದ ಮೂರು


ಕರಿಬೇವು: ನಾಲ್ಕರಿಂದ ಐದು


ಅರಿಶಿನ: ಚಿಟಿಕೆ


ತುಪ್ಪ: ಒಂದು ಟೀ ಸ್ಪೂನ್


ಎಣ್ಣೆ : ಎರಡು ಟೀ ಸ್ಪೂನ್


ಕೋತಂಬರಿ ಸೊಪ್ಪು


ಉಪ್ಪು: ರುಚಿಗೆ ತಕ್ಕಷ್ಟು


how to make avarekalu upma mrq
ಅವರೆಕಾಳು


ಅವರೆಕಾಳು ಉಪ್ಪಿಟ್ಟು ಮಾಡುವ ವಿಧಾನ


*ಮೊದಲಿಗೆ ಮಾರುಕಟ್ಟೆಯಿಂದ ತಂದಿರುವ ಅವರೆಕಾಳು ಬಿಡಿಸಿ, ಎರಡು ಬಾರಿ ನೀರಿನಲ್ಲಿ ತೊಳೆದುಕೊಳ್ಳಿ. ನಂತರ ಒಂದು ಕಪ್​ನಷ್ಟು ನೀರಿನಲ್ಲಿ ಅವರೆಕಾಳು ಹಾಕಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಂಡು ಎತ್ತಿಟ್ಟುಕೊಳ್ಳಿ.


*ಈಗ ಮತ್ತೊಂದು ಪ್ಯಾನ್​ ಒಲೆಯ ಮೇಲಿಟ್ಟುಕೊಂಡು ರವೆ ಹಾಕಿಕೊಂಡು ಮಧ್ಯಮ ಫ್ಲೇಮ್​ನಲ್ಲಿ ಘಮ ಬರೋವರೆಗೂ ಹುರಿದುಕೊಳ್ಳಿ. ರವೆ ಕಂದು ಬಣ್ಣಕ್ಕೆ ತಿರುಗುವ ಮೊದಲೇ ಇಳಿಸಿಕೊಂಡು ಬೇರೆ ಪಾತ್ರೆಗೆ ಹಾಕಿಕೊಳ್ಳಿ.


*ಈಗ ಇದೇ ಪಾತ್ರೆಗೆ ಎರಡು ಟೀ ಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಒಂದು ಟೀ ಸ್ಪೂನ್​ನಷ್ಟು ತುಪ್ಪ ಹಾಕಿ. ಇದು ಎಣ್ಣೆಯೊಂದಿಗೆ ಬೆರೆತ ನಂತರ ಜೀರಿಗೆ ಮತ್ತು ಸಾಸವೆ ಹಾಕಿ.


ಇದನ್ನೂ ಓದಿ:  Coconut Milk Upma: ಉಪ್ಪಿಟ್ಟು ತಿನ್ನಲ್ಲ ಅನ್ನೋರಿಗೂ ಇಷ್ಟವಾಗುತ್ತೆ ಕೊಕೋನಟ್ ಮಿಲ್ಕ್ ಉಪ್ಮಾ: ಇಲ್ಲಿದೆ ಕೇರಳ ಶೈಲಿಯ ರೆಸಿಪಿ


*ಜೀರಿಗೆ ಸಾಸವೆ ಸಿಡಿಯಲು ಆರಂಭಿಸುತ್ತಿದ್ದಂತೆ ದೊಡ್ಡ ಗಾತ್ರದಲ್ಲಿ ಕತ್ತರಿಸಿರುವ ಈರುಳ್ಳಿ ಸೇರಿಸಿ, ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿಕೊಳ್ಳಿ.


*ಈರುಳ್ಳಿ ಬೇಯುತ್ತಿದ್ದಂತೆ ಉದ್ದ ಉದ್ದವಾಗಿ ಕತ್ತರಿಸಿಕೊಂಡಿರುವ ಹಸಿಮೆಣಸಿನಕಾಯಿ ಸೇರಿಸಿ. ತದನಂತರ ಕರಿಬೇವು ಮತ್ತು ಟೊಮ್ಯಾಟೋ ಸೇರಿಸಿ ಎರಡರಿಂದ ಮೂರು ನಿಮಿಷ ಫ್ರೈ ಮಾಡಿಕೊಳ್ಳಿ.


*ಈಗ ಬೇಯಿಸಿಕೊಂಡಿರುವ ಅವರೆಕಾಳನ್ನು ಮಿಕ್ಸ್ ಮಾಡಿಕೊಳ್ಳಿ. ಅವರೆಕಾಳು ಬೇಯಿಸಿರುವ ನೀರನ್ನು ವೇಸ್ಟ್ ಮಾಡದೇ ಅದನ್ನು ಸಹ ಸೇರಿಸಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಿ.


how to make avarekalu upma mrq
ಅವರೆಕಾಳು


*ಈ ಮಸಾಲೆಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಚಿಟಿಕೆ ಅರಿಶಿನ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಒಂದು ಕಪ್​ ರವೆಗೆ ಎರಡು ಕಪ್​ ನೀರು ಸೇರಿಸಬೇಕು. ನೀರು ಸೇರಿಸಿದ ನಂತರ ನಾಲ್ಕರಿಂದ ಐದು ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಿ.


*ನೀರು ಕುದಿಯಲು ಆರಂಭಿಸುತ್ತಿದ್ದಂತೆ ಒಲೆಯು ಉರಿಯನ್ನು ಕಡಿಮೆ ಮಾಡಿಕೊಂಡು ರವೆ ಸೇರಿಸಿ ಚೆನ್ನಾಗಿ ಮಿಕ್ಸ್​ ಮಾಡಿಕೊಳ್ಳಿ. ತದನಂತರ ಕತ್ತರಿಸಿಕೊಂಡಿರುವ ಕೋತಂಬರಿ ಸೇರಿಸಿ ಚೆನ್ನಾಗಿ ಮಿಕ್ಸ್​ ಮಾಡಿಕೊಂಡು ಎರಡು ನಿಮಿಷ ಬೇಯಿಸಿದ್ರೆ ಅವರೆಕಾಳು ಉಪ್ಪಿಟ್ಟು ಸವಿಯಲು ಸಿದ್ಧ.


ಇದನ್ನೂ ಓದಿ: Breakfast Recipe: ಬೇಡ ಬೇಡ ಅನ್ನೋರು ಸಹ ಚಪ್ಪರಿಸಿಕೊಂಡು ತಿಂತಾರೆ ‘ಮಜ್ಜಿಗೆ ಉಪ್ಪಿಟ್ಟು’; ಇಲ್ಲಿದೆ ಸ್ಪೆಷಲ್ ರೆಸಿಪಿ


*ಅವರೆಕಾಳು ಉಪ್ಪಿಟ್ಟನ್ನು ಗಟ್ಟಿ ಮೊಸರು ಅಥವಾ ಕಾಯಿಚಟ್ನಿ ಅಥವಾ ನಿಂಬೆ ರಸ ಸೇರಿಸಿ ಸೇವಿಸಬಹುದು. ಅವರೆಕಾಳು ಹೆಚ್ಚಿನ ಪ್ರಮಾಣದಲ್ಲಿ ಸೇರಿಸೋದರಿಂದ ಶೇಂಗಾ/ಕಡಲೆಬೀಜ, ಉದ್ದಿನಬೇಳೆ, ಕಡಲೆಬೇಳೆ ಸ್ಕಿಪ್ ಮಾಡಿದ್ರೆ ಉತ್ತಮ.

Published by:Mahmadrafik K
First published: