ಆಂಧ್ರ ಶೈಲಿಯ (Andra Style) ಸಸ್ಯಾಹಾರಿ (Vegetarian) ಅಡುಗೆ, ಅದರಲ್ಲೂ ಪಾಲಕ್ ಸೊಪ್ಪಿನ ದಾಲ್ ಅತ್ಯಂತ ಸ್ವಾದಿಷ್ಟವಾಗಿದೆ. ಇದೇ ರೀತಿ ಆಂಧ್ರ ಶೈಲಿಯ ಮಾಂಸಾಹಾರದಲ್ಲಿ (Non-veg) ಖಾರವಾದ ಕೋಳಿ ಸಾರು ಅತ್ಯಂತ ಜನಪ್ರಿಯವಾಗಿದೆ. ಆಂಧ್ರ ಸ್ಟೈಲ್ ನಾನ್ ವೆಜ್ ಅಡುಗೆ ಅಂದ್ರೆ , ಎಲ್ಲರೂ ಇಷ್ಟಪಟ್ಟು ತಿನ್ತಾರೆ. ಹೋಟೆಲ್ಗಳಲ್ಲಿ (Hotel) ಆಂಧ್ರ ಸ್ಟೈಲ್ ಫುಡ್ (Food) ಫುಲ್ ಫೇಮಸ್ ಆಗಿರುತ್ತೆ. ಈ ರುಚಿಯನ್ನು ಮನೆಯಲ್ಲಿಯೇ ಸವಿಯಲು ಸುಲಭವಾದ ವಿಧಾನವನ್ನು ಇಲ್ಲಿ ನೀಡಲಾಗಿದೆ.
ಅಗತ್ಯವಿರುವ ಸಾಮಾಗ್ರಿಗಳು:
ಒಂದು ಇಡಿಯ ತಾಜಾ ಕೋಳಿ (ಮೂಳೆ ಸಹಿತ, ಆದರೆ ಚರ್ಮ ರಹಿತವಾದದ್ದು)
2 ಮಧ್ಯಮ ಗಾತ್ರದ ಈರುಳ್ಳಿ, ಚಿಕ್ಕದಾಗಿ ಹೆಚ್ಚಿದ್ದು
2 ಮಧ್ಯಮ ಗಾತ್ರದ ಟೊಮೇಟೊ, ಚಿಕ್ಕದಾಗಿ ಕತ್ತರಿಸಿದ್ದು.
¼ ಕಪ್ ಕೊತ್ತಂಬರಿ ಸೊಪ್ಪಿ, ಚಿಕ್ಕದಾಗಿ ಹೆಚ್ಚಿದ್ದು
5 ಹಸಿರು ಮೆಣಸಿನ ಕಾಯಿ, ಉದ್ದಕ್ಕೆ ಸೀಳಿದ್ದು
ಸಾಸಿವೆ- 2 ಟೀ ಚಮಚ
ಗೋಡಂಬಿ - ಸ್ವಲ್ಪ
3 ದೊಡ್ಡ ಚಮಚ ಹಸಿಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್
3 ದೊಡ್ಡ ಚಮಚ ಕೆಂಪುಮೆಣಸಿನ ಪುಡಿ
2 ಲವಂಗ
1 ಏಲಕ್ಕಿ
3 ದೊಡ್ಡಚಮಚ ಮೊಸರು
¼ ಚಿಕ್ಕ ಚಮಚ ಹಳದಿಪುಡಿ
1 ಚಿಕ್ಕ ಚಮಚ ಗರಂ ಮಸಾಲಾ ಪುಡಿ
5 ದೊಡ್ಡಚಮಚ ಅಡುಗೆ ಎಣ್ಣೆ
1 ಕಪ್ ನೀರು
ಉಪ್ಪು ರುಚಿಗನುಸಾರ
ಇದನ್ನೂ ಓದಿ: Non-Veg Recipe: ಎಲ್ಲರಿಗೂ ಇಷ್ಟವಾಗೋ ಟೇಸ್ಟಿ ಪಾಲಕ್ ಚಿಕನ್ ಕರಿ
ಮಾಡುವ ವಿಧಾನ:
1) ಮೊದಲು ಕೋಳಿಯನ್ನು ಚೆನ್ನಾಗಿ ತೊಳೆದು ಕೊಬ್ಬಿನ ಅಂಶವನ್ನು ನಿವಾರಿಸಿ. ನೀರೆಲ್ಲಾ ಇಳಿದ ನಂತರ ನಿಮಗೆ ಸೂಕ್ತವೆನಿಸಿದ ಗಾತ್ರದಲ್ಲಿ ತುಂಡು ಮಾಡಿಕೊಳ್ಳಿ. ಒಂದು ಪಾತ್ರೆಯಲ್ಲಿ ಈ ತುಂಡುಗಳನ್ನು ಹಾಕಿ ಮೇಲಿನಿಂದ ಮೊಸರು, ಹಸಿಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್, ಅರಿಶಿನ, ಉಪ್ಪು, ಕೆಂಪು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲಕಿ. ಎಲ್ಲಾ ತುಂಡುಗಳು ಈ ಮಿಶ್ರಣದಿಂದ ಆವೃತವಾಗಬೇಕು. ಈ ಪಾತ್ರೆಯನ್ನು ಸುಮಾರು ಒಂದು ಗಂಟೆ ಕಾಲ ಮುಚ್ಚಿಡಿ.
2)ಒಂದು ಬಾಣಲೆಯನ್ನು ಚಿಕ್ಕ ಉರಿಯ ಮೇಲಿರಿಸಿ ಸಾಸಿವೆಯನ್ನು ಕಂದುಬಣ್ಣಬರುವವರೆಗೆ ಹುರಿಯಿರಿ.
3) ಹುರಿದ ಸಾಸಿವೆಯನ್ನು ಮಿಕ್ಸಿಯಲ್ಲಿ ಒಣದಾಗಿಯೇ ಇರುವಂತೆ ಪುಡಿಮಾಡಿಕೊಳ್ಳಿ. ಈಗ ಗೋಡಂಬಿಯನ್ನು ಸೇರಿಸಿ ನುಣ್ಣನೆ ಪುಡಿಮಾಡಿ.
4) ಒಂದು ದೊಡ್ಡ ಬಾಣಲೆ ಅಥವಾ ದಪ್ಪತಳದ ಪಾತ್ರೆಯಲ್ಲಿ (ತಳ ದಪ್ಪಗ್ಗಿದ್ದಷ್ಟೂ ಅಡುಗೆ ಸುಟ್ಟುಹೋಗುವ ಸಂಭವ ಕಡಿಮೆಯಾಗುತ್ತದೆ) ಎಣ್ಣೆ ಬಿಸಿಮಾಡಿ ಲವಂಗ ಮತ್ತು ಏಲಕ್ಕೆ ಸೇರಿಸಿ.
5) ಈಗ ಈರುಳ್ಳಿ ಸೇರಿಸಿ ಮಧ್ಯಮ ಉರಿಯಲ್ಲಿ ಚಿನ್ನದ ಬಣ್ಣ ಬರುವಷ್ಟು ಹುರಿಯಿರಿ.
6) ಬಳಿಕ ಟೊಮೇಟೋ ಸೇರಿಸಿ ಅಲುಗಾಡಿಸುತ್ತಾ ಈರುಳ್ಳಿಯೊಡನೆ ಪೂರ್ಣವಾಗಿ ಬೇಯುವಷ್ಟು ಹುರಿಯಿರಿ.
7) ಈಗ ಹಸಿಮೆಣಸು, ಗೋಡಂಬಿ ಮತ್ತು ಸಾಸಿವೆ ಪುಡಿ ಸೇರಿಸಿ ಹುರಿಯುವುದನ್ನು ಎಣ್ಣೆ ಬೇರ್ಪಡುವವರೆಗೆ ಮುಂದುವರೆಸಿ.
8) ಈಗ ಮುಚ್ಚಿಟ್ಟಿದ್ದ ಪಾತ್ರೆಯಿಂದ ಕೋಳಿಯ ತುಂಡುಗಳನ್ನು ಸೇರಿಸಿ ಸುಮಾರು ಐದು ನಿಮಿಷಗಳ ವರೆಗೆ ಹುರಿಯಿರಿ. ನಡುನಡುವೆ ಸೌಟಿನಿಂದ ತಳಹಿಡಿಯದಂತೆ ನೋಡಿಕೊಳ್ಳಿ
9) ಈಗ ಒಂದು ಕಪ್ ನೀರು ಹಾಕಿ ಚೆನ್ನಾಗಿ ಕಲಕಿ ಪಾತ್ರೆಯನ್ನು ಗಟ್ಟಿಯಾಗಿ ಮುಚ್ಚಿ ಸುಮಾರು ಹತ್ತು ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿಯೇ ಬೇಯಲು ಬಿಡಿ.
ಇದನ್ನೂ ಓದಿ: Sunday Special Recipe: ಸಖತ್ ಸಂಡೇಗೆ ಚಿಕನ್ ಪುಳಿಮುಂಚಿ, ರೆಸಿಪಿ ಇಲ್ಲಿದೆ..ಟ್ರೈ ಮಾಡಿ!
10) ಕೋಳಿಯ ಮಾಂಸ ಬೆಂದಿದೆ ಎಂದು ಪ್ರಮಾಣಿಸಿಕೊಂಡ ಬಳಿಕ ಗರಂ ಮಸಾಲಾ ಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿ. ಪಾತ್ರೆಯ ಮುಚ್ಚಳ ಮುಚ್ಚಿದ್ದಂತೆ ಕೊಂಚ ಕಾಲ ಇಡಿ. ಈ ಸಾರನ್ನು ಅನ್ನ, ಚಪಾತಿ, ರೋಟಿ ಕುಲ್ಛಾ ಮೊದಲಾದವುಗಳ ಜೊತೆಗೆ ಸೇವಿಸಲು ರುಚಿಯಾಗಿರುತ್ತದೆ.
ಈ ಖಾದ್ಯದಲ್ಲಿ ಹಸಿ ಮತ್ತು ಒಣ ಮೆಣಸನ್ನು ಬಳಸಿರುವುದರಿಂದ ಊಟದ ಬಳಿಕ ಮೊಸರು ಅಥವಾ ಮಜ್ಜಿಗೆ ಕುಡಿಯುವುದು ಅತೀ ಅಗತ್ಯ. ಇಲ್ಲದಿದ್ದರೆ ಮರುದಿನದ ಬಹಿರ್ದೆಶೆಯ ಸಮಯದಲ್ಲಿ ಭಾರೀ ಉರಿ ಉಂಟಾಗುತ್ತದೆ. ಒಂದು ವೇಳೆ ನಿಮಗೆ ವಾಯುಪ್ರಕೋಪದ ತೊಂದರೆ ಇದ್ದಲ್ಲಿ ಹುರಿಯುವ ಸಮಯದಲ್ಲಿ ಚಿಟಿಕೆ ಇಂಗು ಸೇರಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ