Morning Breakfast: ಬೆಳಗಿನ ತಿಂಡಿಗೆ ತರಕಾರಿಗಳಿಂದ ಸಮೃದ್ಧ ಬಿಸಿ ಬೇಳೆ ಬಾತ್ ಹೀಗೆ ಮಾಡಿ!

ಬಿಸಿ ಬೇಳೆ ಬಾತ್ ನ್ನು ಬೆಳಗಿನ ಉಪಾಹಾರ ಅಥವಾ ಊಟಕ್ಕೆ ಅಥವಾ ಟಿಫಿನ್ ಬಾಕ್ಸ್‌ಗೆ ಸಹ ತಯಾರಿಸಲಾಗುತ್ತದೆ. ಜೊತೆಗೆ ಇದನ್ನು ತರಕಾರಿ ರೈತಾ ಜೊತೆ ರಾತ್ರಿಯ ಊಟಕ್ಕೂ ಸಹ ತಯಾರಿಸಬಹುದು. ಕೆಲವರು ವಾರಾಂತ್ಯದ ಉಪಹಾರ ಪಾಕವಿಧಾನಗಳಲ್ಲಿ ಬಿಸಿ ಬೇಳೆ ಬಾತ್ ಮಾಡಿ ಸವಿಯುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕರ್ನಾಟಕ (Karnataka) ಅಥವಾ ಕನ್ನಡ ಪಾಕ ಪದ್ಧತಿಯಲ್ಲಿ ಅನ್ನ (Rice) ಸೇವನೆ ತುಂಬಾ ಜನಪ್ರಿಯ (Famous). ವಿವಿಧ ರೀತಿಯ ಅನ್ನದ ಖಾದ್ಯಗಳನ್ನು ಮಾಡಿ ಸವಿಯುತ್ತಾರೆ. ಅದರಲ್ಲಿ ಬೆಳಗಿನ ತಿಂಡಿಗೆ (Morning Breakfast) ಹಲವು ಖಾದ್ಯ ಮತ್ತು ಪಾಕವಿಧಾನಗಳು ಜನಪ್ರಿಯವಾಗಿವೆ. ಅದರಲ್ಲಿ ಬಿಸಿ ಬೇಳೆ ಬಾತ್ ರೆಸಿಪಿ ಕೂಡ ಒಂದು. ಅನ್ನ ಮತ್ತು ಬೇಳೆ ಕಾಳುಗಳಿಂದ ಮಾಡಲಾಗುವ ಬಿಸಿ ಬೇಳೆ ಬಾತ್ ಸಾಕಷ್ಟು ಜನಪ್ರಿಯ ಹಾಗೂ ಟೇಸ್ಟಿ. ಹೆಚ್ಚುವರಿ ಸುವಾಸನೆಯ ಮಸಾಲೆ ಮತ್ತು ತರಕಾರಿಗಳ ಮಿಶ್ರಣದೊಂದಿಗೆ ತಯಾರಿಸಲಾಗುವ ಬಿಸಿ ಬೇಳೆ ಬಾತ್ ತುಂಬಾ ಜನರ ಪೇವರಿಟ್ ತಿಂಡಿ ಆಗಿದೆ. ದಕ್ಷಿಣ ಭಾರತದ ಪ್ರತಿಯೊಂದು ಮನೆಯಲ್ಲೂ ತಯಾರಿಸಲಾಗುವ ರೆಸಿಪಿ ಇದಾಗಿದೆ.

    ಬೆಳಗಿನ ತಿಂಡಿಗೆ ಬಿಸಿ ಬೇಳೆ ಬಾತ್

    ಬಿಸಿ ಬೇಳೆ ಬಾತ್ ನ್ನು ಬೆಳಗಿನ ಉಪಾಹಾರ ಅಥವಾ ಊಟಕ್ಕೆ ಅಥವಾ ಟಿಫಿನ್ ಬಾಕ್ಸ್‌ಗೆ ಸಹ ತಯಾರಿಸಲಾಗುತ್ತದೆ. ಜೊತೆಗೆ ಇದನ್ನು ತರಕಾರಿ ರೈತಾ ಜೊತೆ ರಾತ್ರಿಯ ಊಟಕ್ಕೂ ಸಹ ತಯಾರಿಸಬಹುದು. ಕೆಲವರು ವಾರಾಂತ್ಯದ ಉಪಹಾರ ಪಾಕ ವಿಧಾನಗಳಲ್ಲಿ ಬಿಸಿ ಬೇಳೆ ಬಾತ್ ಮಾಡಿ ಸವಿಯುತ್ತಾರೆ.

    ಇದನ್ನೂ ಓದಿ: ನಾಲಿಗೆ ಮೇಲೆ ಈ ರೀತಿ ಆದಲ್ಲಿ ವಿಟಮಿನ್ ಡಿ ಕೊರತೆಯಂತೆ, ಎಚ್ಚರ ವಹಿಸಿ

    ಬಿಸಿ ಬೇಳೆ ಬಾತ್ ಮಾಡಲು ಬೇಕಾಗುವ ಸಾಮಗ್ರಿಗಳು

    ಬಿಸಿ ಬೇಳೆ ಬಾತ್ ಮಸಾಲಾ ಪುಡಿ, ಕೊತ್ತಂಬರಿ ಬೀಜ, ಕಡಲೇ ಬೇಳೆ, 2 ಟೀಸ್ಪೂನ್ ಉದ್ದಿನ ಬೇಳೆ, 2 ಟೀಸ್ಪೂನ್ ಜೀರಿಗೆ, ½ ಟೀಸ್ಪೂನ್ ಮೆಂತ್ಯ ಕಾಳು, 2 ಟೀಸ್ಪೂನ್ ಎಳ್ಳು, 2 ಟೀಸ್ಪೂನ್ ಗಸಗಸೆ ಬೀಜ, ½ ಟೀಸ್ಪೂನ್ ಮೆಣಸು, 6 ಏಲಕ್ಕಿ, 2 ಇಂಚಿನ ದಾಲ್ಚಿನ್ನಿ, 5 ಲವಂಗ, 1 ಟೀಸ್ಪೂನ್ ಎಣ್ಣೆ, 20 ಒಣಗಿದ ಕೆಂಪು ಮೆಣಸಿನಕಾಯಿ, ಕೆಲವು ಕರಿಬೇವಿನ ಎಲೆಗಳು,

    ಒಣ ತೆಂಗಿನಕಾಯಿ,  ಅರಿಶಿನ, ಹಿಂಗ್, ತೊಗರಿ ಬೇಳೆ- 20 ನಿಮಿಷ ನೆನೆಸಿದ್ದು, ಅಕ್ಕಿ, ಎಣ್ಣೆ, ನೀರು, ತುಪ್ಪ,  ಸಾಸಿವೆ, ಪಿಂಚ್ ಹಿಂಗ್, ಕಡಲೆಕಾಯಿ, ಹೆಚ್ಚಿದ  ಈರುಳ್ಳಿ, ಕತ್ತರಿಸಿದ1 ಕ್ಯಾರೆಟ್, 1 ಆಲೂಗಡ್ಡೆ, ಕತ್ತರಿಸಿದ 5 ಬೀನ್ಸ್ ,  ಟೊಮೆಟೊ, ಹುಣಸೆ ಹಣ್ಣಿನ ಸಾರ, ಬಿಸಿ ಬೇಳೆ ಬಾತ್ ಮಸಾಲಾ, ಉಪ್ಪು, ಗೋಡಂಬಿ

    ಬಿಸಿ ಬೇಳೆ ಬಾತ್ ಮಾಡುವ ವಿಧಾನ

    ಪ್ರೆಶರ್ ಕುಕ್ಕರ್‌ನಲ್ಲಿ ಬೇಳೆ,  ಅಕ್ಕಿ, ಅರಿಶಿನ ಮತ್ತು ಎಣ್ಣೆ, ತೆಗೆದುಕೊಳ್ಳಿ. 3ನೀರು ಸೇರಿಸಿ ಪ್ರೆಶರ್ ಕುಕ್ ಮಾಡಿ. ಪಕ್ಕಕ್ಕೆ ಇರಿಸಿ. ದೊಡ್ಡ ಕಡಾಯಿಯಲ್ಲಿ  ಎಣ್ಣೆ,  ತುಪ್ಪ, ಸಾಸಿವೆ,  ಒಣಗಿದ ಕೆಂಪು ಮೆಣಸಿನಕಾಯಿ, ಹಿಂಗ್,  ಕಡಲೆಕಾಯಿ ಮತ್ತು ಕರಿಬೇವಿನ ಎಲೆ ಬಿಸಿ ಮಾಡಿ. ಈರುಳ್ಳಿ ಸೇರಿಸಿ ಮತ್ತು ಸ್ವಲ್ಪ ಹುರಿಯಿರಿ.

    ಈಗ 1 ಕ್ಯಾರೆಟ್, 1 ಆಲೂಗಡ್ಡೆ, 2 ಟೀಸ್ಪೂನ್ ಬಟಾಣಿ, 5 ಬೀನ್ಸ್, ಟೊಮ್ಯಾಟೊ,  ಮತ್ತು  ಉಪ್ಪು ಸೇರಿಸಿ. ತರಕಾರಿ ಸ್ವಲ್ಪ ಮೃದುವಾಗುವವರೆಗೆ ಹುರಿಯಿರಿ.  ನೀರು ಸೇರಿಸಿ ಮತ್ತು ತರಕಾರಿಗಳು ಚೆನ್ನಾಗಿ ಬೇಯಿಯುವವರೆಗೆ ಕುದಿಸಿ.  ಹುಣಸೆಹಣ್ಣಿನ ಸಾರವನ್ನು ಸೇರಿಸಿ ಮತ್ತು ಚೆನ್ನಾಗಿ ಕುದಿಸಿ.

    ಬಿಸಿ ಬೇಳೆ ಬಾತ್ ಮಸಾಲಾ,  ಮೆಣಸಿನ ಪುಡಿ ಮತ್ತು  ಉಪ್ಪು ಸೇರಿಸಿ. ಮಸಾಲೆ ಚೆನ್ನಾಗಿ ಬೇಯಿಸಿ. ಬೇಯಿಸಿದ ಅಕ್ಕಿ, ಬೇಳೆ,  ಉಪ್ಪು, 2 ಕಪ್ ನೀರು ಸೇರಿಸಿ ಮಿಶ್ರಣ ಮಾಡಿ. ಮುಚ್ಚಿ. ಕುದಿಯುವ ನೀರಿಗೆ ಹಾಕಿ. ಕುದ್ದ ನಂತರ ಗೋಡಂಬಿ ಹಾಕಿ ಮಿಶ್ರಣ ಮಾಡಿ. ಬೂಂದಿ ಮತ್ತು ರೈತಾದೊಂದಿಗೆ ಬಿಸಿ ಬೇಳೆ ಬಾತ್ ಸವಿಯಿರಿ.

    ಇದನ್ನೂ ಓದಿ: ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಮಜ್ಜಿಗೆ ಬಳಸ್ತೀರಾ? ಹಾಗಾದ್ರೆ ತಪ್ಪದೇ ಓದಿ

    ಬಿಸಿ ಬೇಳೆ ಬಾತ್ ತಯಾರಿಸಲು ನೀವು ಡ್ರಮ್‌ಸ್ಟಿಕ್‌, ಮೂಲಂಗಿ, ಬಟಾಣಿ, ಕ್ಯಾಪ್ಸಿಕಂ, ಗೋಬಿ, ಬ್ರೊಕೊಲಿ ಮತ್ತು ಸೌತೆಕಾಯಿ ಹೀಗೆ ಹಲವು ತರಕಾರಿ ಬಳಸಬಹುದು. ಅತಿಯಾಗಿ ತರಕಾರಿ ಸೇರಿಸಬೇಡಿ. ಅಕ್ಕಿ ಮತ್ತು ತರಕಾರಿಗಳ ನಡುವೆ ಸಮತೋಲನ ಕಾಪಾಡಿ.
    Published by:renukadariyannavar
    First published: