Morning Breakfast: ಬೆಳಗಿನ ಉಪಹಾರಕ್ಕೆ ಆರೋಗ್ಯಕರ ಮುಸ್ಲಿ ಮಾಡಿ, ಸುಲಭದ ರೆಸಿಪಿ ಇಲ್ಲಿದೆ ಓದಿ

ತರಾತುರಿಯಲ್ಲಿ ಆಫೀಸ್‌ಗೆ ರೆಡಿಯಾಗುವ ಜನರು ಟೋಸ್ಟ್ ಕಾರ್ನ್ ಫ್ಲೇಕ್ಸ್ ನಂತಹ ಕಡಿಮೆ ಸಮಯದಲ್ಲಿ ತಯಾರಾಗುವ ಉಪಹಾರ ಸೇವಿಸಲು ಮುಂದಾಗುತ್ತಿದ್ದಾರೆ. ಇದು ಸಮಯದ ಜೊತೆಗೆ ಆರೋಗ್ಯವನ್ನೂ ಉಳಿಸುತ್ತದೆ. ಅದಕ್ಕಾಗಿ ನೀವು ತಿಂಡಿಗೆ ಪೋಷಕಾಂಶ ಹೊಂದಿರುವ ಮುಸ್ಲಿ ಮಾಡಿ ಸೇವಿಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಳಗಿನ ಉಪಹಾರವನ್ನು (Morning Breakfast) ದಿನದ ಪ್ರಮುಖ ಊಟ ಎಂದು ಹೇಳುತ್ತಾರೆ. ಬೆಳಗಿನ ಉಪಾಹಾರವನ್ನು ಎಂದಿಗೂ ಸ್ಕಿಪ್ (Skip) ಮಾಡಬಾರದು. ಸಮಯಕ್ಕೆ (Time) ಸರಿಯಾಗಿ ತಿಂಡಿ ತಿನ್ನುವುದು ಬಹಳ ಮುಖ್ಯ. ಆದರೆ ನಮ್ಮಲ್ಲಿ ಅನೇಕರು ಉಪಹಾರದ ಬಗ್ಗೆ ಶಿಸ್ತು ಅನುಸರಿಸುವುದಿಲ್ಲ. ಇಂದಿನ ದಿನಗಳಲ್ಲಿ ಬಹುತೇಕ ಎಲ್ಲರೂ ಬೆಳಗ್ಗೆ ತುಂಬಾ ತಡವಾಗಿ ಏಳುತ್ತಾರೆ. ಹೀಗಾಗಿ ತಿಂಡಿಯನ್ನು ಸ್ಕಿಪ್ ಮಾಡುತ್ತಾರೆ. ಇಲ್ಲವೇ ತಡವಾಗಿ ಸೇವಿಸುತ್ತಾರೆ. ತರಾತುರಿಯಲ್ಲಿ ಆಫೀಸ್ ಗೆ ರೆಡಿಯಾಗುವ ಜನರು ಟೋಸ್ಟ್, ಕಾರ್ನ್ ಫ್ಲೇಕ್ಸ್ ನಂತಹ ಕಡಿಮೆ ಸಮಯದಲ್ಲಿ ತಯಾರಾಗುವ ಉಪಹಾರ ಸೇವಿಸಲು ಮುಂದಾಗುತ್ತಿದ್ದಾರೆ.  ಇದು ನಿಮ್ಮ ಸಮಯದ ಜೊತೆಗೆ ಆರೋಗ್ಯವನ್ನೂ ಉಳಿಸುತ್ತದೆ. ಅದಕ್ಕಾಗಿ ನೀವು ತಿಂಡಿಗೆ ಪೋಷಕಾಂಶ ಹೊಂದಿರುವ ಮುಸ್ಲಿ ರೆಸಿಪಿ ಮಾಡಿ ಸೇವಿಸಿ.

    ಮುಸ್ಲಿ ರೆಸಿಪಿ ಎಂದರೇನು?

    ಮುಸ್ಲಿ ರೆಸಿಪಿ ಸ್ವಿಟ್ಜರ್ಲೆಂಡ್‌ನಲ್ಲಿ ಮ್ಯಾಕ್ಸಿಮಿಲಿಯನ್ ಬಿರ್ಚರ್-ಬೆನ್ನರ್ ಎಂಬ ವೈದ್ಯ ಪರಿಚಯಿಸಿದರು. ಕಚ್ಚಾ ಓಟ್ಸ್, ತುರಿದ ಸೇಬು ಮತ್ತು ಕತ್ತರಿಸಿದ ಡ್ರೈ ಫ್ರೂಟ್ ಬೀಜಗಳು, ನಿಂಬೆ ರಸ, ನೀರು ಮತ್ತು ಸಿಹಿ ಹಾಲಿನಿಂದ ತಯಾರು ಮಾಡಲಾಗುತ್ತದೆ.

    ಮುಸ್ಲಿ ರೆಸಿಪಿ ಮಾಡಲು ಬೇಕಾಗುವ ಸಾಮಗ್ರಿಗಳು

    ನಾಲ್ಕು ಕಪ್ ಧಾನ್ಯಗಳು, ಒಂದೂವರೆ ಕಪ್ ಡ್ರೈ ಫ್ರೂಟ್ ಗಳು, ಬೀಜಗಳು , ರೋಲ್ಡ್ ಓಟ್ಸ್, ಗೋಧಿ ಹೊಟ್ಟು, ಬಾರ್ಲಿ, ಸೋರ್ಗಮ್ ಪದರ, ಕ್ವಿನೋವಾ, ರಾಗಿ ಪಫ್ , ಬಾದಾಮಿ, ವಾಲ್ನಟ್ಸ್, ಗೋಡಂಬಿ, ಪಿಸ್ತಾ, ಹ್ಯಾಝೆಲ್ನಟ್ಸ್, ಸೂರ್ಯಕಾಂತಿ ಬೀಜ, ಪೆಪಿಟಾಸ್, ಚಿಯಾ ಬೀಜ, ಗಸಗಸೆ ಬೀಜ, ಎಳ್ಳು ಬೀಜ, ಒಣಗಿದ ಏಪ್ರಿಕಾಟ್ಗಳು, ಒಣಗಿದ ಚೆರ್ರಿಗಳು, ಒಣಗಿದ ಅಂಜೂರ, ಒಣದ್ರಾಕ್ಷಿ, ಗೋಲ್ಡನ್ ಒಣದ್ರಾಕ್ಷಿ, ಸೇಬು ಇವುಗಳು ಬೇಕು.

    ಇದನ್ನೂ ಓದಿ: ನಿದ್ರೆಯ ಸಮಸ್ಯೆಗಳು ಯಾವುವು, ನಿದ್ರಾಹೀನತೆಗೆ ಕಾರಣವೇನು?

    ಮುಸ್ಲಿ ರೆಸಿಪಿ ಮಾಡುವ ವಿಧಾನ

    ಮುಸ್ಲಿಯನ್ನು ಸಣ್ಣ ಜಾರ್‌ಗೆ ಹಾಕಿ, ಹಾಲು ಹಾಕಿ, ಬೆರಿಹಣ್ಣು ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಎಲ್ಲಾ ರೀತಿಯ ಬೀಜಗಳು, ಹಣ್ಣು, ಒಣ ಹಣ್ಣು ಎಲ್ಲವನ್ನೂ ಸೇರಿಸಿ. ಚಿಯಾ ಬೀಜ ಸೇರಿಸಿ. ಈಗ ನಿಮ್ಮ ಮುಸ್ಲಿ ರೆಸಿಪಿ ಸಿದ್ಧವಾಗಿದೆ. ಸುಲಭವಾದ ರೀತಿಯಲ್ಲಿ ಇದನ್ನು ತಯಾರು ಮಾಡಬಹುದು.

    ಮುಸ್ಲಿಯನ್ನು ಕತ್ತರಿಸಿದ ಬಾಳೆಹಣ್ಣುಗಳು, ತಾಜಾ ಬೆರ್ರಿ, ಮೊಸರಿಗೆ ಅಥವಾ ಹಾಲು ಬೆರೆಸಿ  ಓಟ್ಮೀಲ್ನಂತೆ ತಿನ್ನಬಹುದು.

    ಮುಸ್ಲಿ ಆರೋಗ್ಯಕರ ಉಪಹಾರ

    ಮುಸ್ಲಿ ಆರೋಗ್ಯಕರ ಉಪಹಾರ ಆಗಿದೆ. ಇದು ಫೈಬರ್ ಮತ್ತು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ. ಧಾನ್ಯಗಳು, ಓಟ್ಸ್, ತಾಜಾ ಅಥವಾ ಒಣಗಿದ ಹಣ್ಣುಗಳು ಮಿಶ್ರಣವಾಗಿದೆ. ಇದು ಯಾವುದೇ ರೀತಿಯ ಸಕ್ಕರೆ ಲೇಪಿತ ಧಾನ್ಯ ಹೊಂದಿರುವುದಿಲ್ಲ. ಇದು ಬೆಳಗಿನ ಉಪಾಹಾರಕ್ಕೆ ಆರೋಗ್ಯಕರ ಆಯ್ಕೆ ಆಗಿದೆ.

    ಫೈಬರ್ನಲ್ಲಿ ಸಮೃದ್ಧವಾಗಿರುವ ಮುಸ್ಲಿ ಜೀರ್ಣಕಾರಿ ಆರೋಗ್ಯಕ್ಕೆ ಬಹಳ ಮುಖ್ಯ. ಕ್ಯಾಲೊರಿಗಳು ಅದರಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿವೆ. ಧಾನ್ಯಗಳು ಚಯಾಪಚಯ ಹೆಚ್ಚಿಸುತ್ತವೆ. ಓಟ್ಸ್ ತೂಕ ಕಡಿಮೆ ಮಾಡಲು ಪರಿಣಾಮಕಾರಿ ಆಯ್ಕೆಯಾಗಿದೆ.

    ಮುಸ್ಲಿ ಮೂಲತಃ ಬೀಟಾ-ಗ್ಲುಕನ್ ಎಂಬ ಓಟ್ ಫೈಬರ್ ಆಗಿದೆ. ಅದೇ ವೇಳೆ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ಅಧ್ಯಯನದ ಪ್ರಕಾರ ಬೀಟಾ-ಗ್ಲುಕನ್ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯ ಕಾಪಾಡುತ್ತದೆ.

    ಇದನ್ನೂ ಓದಿ: ಸಿಟ್ರಿಕ್ ಆಮ್ಲವಿರುವ ನಿಂಬೆ ಹಣ್ಣು ಕೂದಲ ಆರೈಕೆಗೆ ಹೇಗೆ ಪ್ರಯೋಜನಕಾರಿ?

    ಬೆಳಗಿನ ಉಪಾಹಾರಕ್ಕಾಗಿ ಹಾಲಿನೊಂದಿಗೆ ಸೇವಿಸಿ

    ಹಾಲಿನೊಂದಿಗೆ ಮುಸ್ಲಿ ತಿನ್ನುವುದು ಸುಲಭ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗ. ಅದನ್ನು ಬಿಸಿ ಅಥವಾ ತಣ್ಣನೆಯ ಹಾಲಿನೊಂದಿಗೆ ಸೇವಿಸಿ. ನೀವು  ಇದಕ್ಕೆ ಎಲ್ಲಾ ರೀತಿಯ ಹಣ್ಣು ಮತ್ತು ಬೀಜಗಳು, ಕೆಲವು ತಾಜಾ ಸ್ಟ್ರಾಬೆರಿಗಳು ಮತ್ತು ಇತರ ಪೌಷ್ಟಿಕಾಂಶ-ಭರಿತ ಆಹಾರ ಸೇರಿಸಿ ಸೇವನೆ ಮಾಡಬಹುದು.
    Published by:renukadariyannavar
    First published: