Monsoon Weight Loss: ಮಳೆಗಾಲದಲ್ಲಿ ವೇಟ್ ಲಾಸ್ ಹಾಗೂ ಡಯಟ್ ಮುಂದುವರೆಸಲು ಏನು ಮಾಡಬೇಕು ಗೊತ್ತಾ?

ಮಾನ್ಸೂನ್‌ನಲ್ಲಿ ಚಾಟ್-ಪಕೋಡ ತಿನ್ನುವ ಬಯಕೆಯನ್ನು ಬದಿಗೊತ್ತಿ, ಹೆಲ್ದೀ ಆಹಾರ ಸೇವನೆಯ ಜೊತೆಗೆ ವೇಟ್ ಲಾಸ್‌ನತ್ತ ಗಮನಹರಿಸುವುದು ತುಂಬಾ ಕಷ್ಟ ಎಂದು ನಿಮಗೆ ಅನ್ನಿಸಿದರೆ, ಈ ಭಾವನೆ ಬಿಡಿ. ಯಾಕೆಂದರೆ ನಿಮಗಾಗಿ ನಾವು ಕೆಲವು ಆಹಾರ ಟಿಪ್ಸ್ ತೆಗೆದುಕೊಂಡು ಬಂದಿದ್ದೇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಳೆಗಾಲದಲ್ಲಿ (Monsoon) ಕರಿದ ಮತ್ತು ಹುರಿದ ಹಾಗೂ ಜಂಕ್ ಫುಡ್ (Junk Food) ತಿನ್ನಲು (Eating) ಇಷ್ಟ (Like) ಪಡುವವರೇ ಹೆಚ್ಚು. ಮಳೆಗಾಲದಲ್ಲಿ ಡಯಟ್ (Diet) ಮಾಡಲು ಮನಸ್ಸು ಬರುವುದಿಲ್ಲ. ತಂಪು ವಾತಾವರಣ ಸಾಕಷ್ಟು ತಿನ್ನುವ ಬಯಕೆ ಹುಟ್ಟಿಸುತ್ತದೆ. ಅದರಲ್ಲೂ ಪಕೋಡ, ಸಮೋಸಗಳ ಹಾಗೂ ಮಿರ್ಚಿ ಇಂಥಹ ಕರಿದ ಪದಾರ್ಥ ಸವಿಯಲು ಮನಸ್ಸಾಗುತ್ತದೆ. ಆಗಾಗ ಬೀದಿ ಬದಿಯ ಅಂಗಡಿಗಳಲ್ಲಿ ಸಿಗುವ ತಿಂಡಿಗಳು ಸೇವಿಸಲು ಜನರು ಸಾಳುಗಟ್ಟಿ ನಿಂತಿರುತ್ತಾರೆ. ಆದರೆ ಮಳೆಗಾಲದಲ್ಲಿ ಆರೋಗ್ಯ ಹಾಗೂ ಕಾಯಿಲೆಗಳಿಂದ ದೂರವಿರಲು ಹೆಲ್ದೀ ಆಹಾರ ಸೇವನೆ ಮಾಡುವುದು ಮುಖ್ಯ. ಮಳೆಗಾಲದಲ್ಲಿ ವೇಟ್ ಲಾಸ್ ಮಾಡುವುದು ಒಂದು ಸಾಹಸವೇ ಸರಿ.

    ಮಳೆಗಾಲದಲ್ಲಿ ವೇಟ್ ಲಾಸ್ ಮಾಡುವ ಟಿಪ್ಸ್

    ಮಾನ್ಸೂನ್‌ನಲ್ಲಿ, ಚಾಟ್-ಪಕೋಡ ತಿನ್ನುವ ಬಯಕೆಯನ್ನು ಬದಿಗೊತ್ತಿ ಹೆಲ್ದೀ ಆಹಾರ ಸೇವನೆಯ ಜೊತೆಗೆ ವೇಟ್ ಲಾಸ್ ನತ್ತ ಗಮನಹರಿಸುವುದು ತುಂಬಾ ಕಷ್ಟ ಎಂದು ನಿಮಗೆ ಅನ್ನಿಸಿದರೆ, ಈ ಭಾವನೆ ಬಿಡಿ. ಯಾಕೆಂದರೆ ನಿಮಗಾಗಿ ನಾವು ಕೆಲವು ಆಹಾರ ಟಿಪ್ಸ್ ತೆಗೆದುಕೊಂಡು ಬಂದಿದ್ದೇವೆ. ಮಳೆಗಾಲದಲ್ಲಿ ಈ ರೀತಿಯ ಆಹಾರವನ್ನು ಸೇವಿಸುವುದರಿಂದ ನಿಮ್ಮ ಡಯಟ್ ಚೆನ್ನಾಗಿ ಮೆಂಟೇನ್ ಮಾಡಬಹುದು.

    ಬೀದಿ ಬದಿಯ ಜಂಕ್ ಫುಡ್ ಆಹಾರ ಸೇವಿಸಬೇಡಿ

    ನೀವು ಮಳೆಯಲ್ಲಿ ಬೀದಿ ಸಿಗುವ ಜಂಕ್ ಫುಡ್ ಸೇವನೆ ತಪ್ಪಿಸಬೇಕು. ಸ್ಟ್ರೀಟ್ ಫುಡ್ ಸಾಕಷ್ಟು ಎಣ್ಣೆಯಲ್ಲಿ ಹಾಗೂ ಪದೇ ಪದೇ ಬಳಕೆ ಮಾಡಿದ ಎಣ್ಣೆ ಬಳಸುತ್ತಾರೆ. ಇದು ನಿಮ್ಮ ದೇಹದ ಕೊಬ್ಬು ಕರಗಿಸುವ ಬದಲು ಹೆಚ್ಚಿಸುತ್ತದೆ.

    ಇದನ್ನೂ ಓದಿ: ಕೂದಲು ಬಿಳಿ ಹಾಗೂ ಉದುರುವುದನ್ನು ತಡೆಯಲು ಹರಳೆಣ್ಣೆ ಹಚ್ಚುವುದು ಹೇಗೆ?

    ಹಾಗಾಗಿ ಕರಿದ, ಹುರಿದ ಆಹಾರ ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಗಳು ಉಂಟಾಗಬಹುದು. ಇದು ನಿಮ್ಮ ವೇಟ್ ಲಾಸ್ ಹಾಗೂ ಡಯಟ್ ಪ್ಲಾನ್ ಗೆ ಕತ್ತರಿ ಹಾಕುತ್ತದೆ. ನಿಮಗೆ ಏನಾದರೂ ತಿನ್ನಬೇಕು ಅನ್ನಿಸಿದಾಗ ಬಿಸಿ ಬಿಸಿ ಸೂಪ್ ಕುಡಿಯುವುದು ರೂಢಿಸಿಕೊಳ್ಳಿ.

    ವ್ಯಾಯಾಮದ ಬಗ್ಗೆ ಹೆಚ್ಚು ಒಲವು ತೋರಿ

    ನೀವು ತೂಕ ಇಳಿಸಿಕೊಳ್ಳಲು ನಿಮ್ಮ ಆಹಾರ ಮತ್ತು ವ್ಯಾಯಾಮದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಮುಖ್ಯ. ಕರಿದ ವಸ್ತುಗಳನ್ನು ತಿನ್ನಲು ಮನಸಾದರೆ ಅಲ್ಪ ಪ್ರಮಾಣದಲ್ಲಿ ಸೇವಿಸಿ. ಇದು ನಿಮ್ಮ ಕಡುಬಯಕೆಗಳನ್ನು ಶಾಂತಗೊಳಿಸುತ್ತದೆ. ಜೊತೆಗೆ ಸ್ಕಿಪ್ಪಿಂಗ್, ಫುಶಪ್ಸ್, ಜಂಪಿಂಗ್, ಯೋಗ ಮಾಡಿ.

    ಹೆಚ್ಚು ಆರೋಗ್ಯಕರ ಆಹಾರವನ್ನು ಸೇವಿಸಿ

    ನೀವು ಹೆಚ್ಚು ಆಹಾರದ ಕಡುಬಯಕೆ ಹೊಂದಿದ್ದರೆ, ಸಣ್ಣ ಊಟ ತೆಗೆದುಕೊಳ್ಳಿ. ಇದು ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಮಳೆಗಾಲದಲ್ಲಿ ದೇಹವು ಆಹಾರ ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಆರೋಗ್ಯಕರ ಮತ್ತು ಜೀರ್ಣವಾಗುವ ಆಹಾರ ಮಾತ್ರ ಸೇವಿಸಿ.

    ಸಾಕಷ್ಟು ನೀರು ಕುಡಿಯಿರಿ

    ಮಳೆಗಾಲದಲ್ಲಿ ನಿಮಗೆ ನೀರು ಕುಡಿಯಲು ಮನಸ್ಸಾಗುವುದಿಲ್ಲ. ನಿಮಗೆ ಶಾಖ ಮತ್ತು ಬಾಯಾರಿಕೆ ಕಡಿಮೆ ಇರುತ್ತದೆ. ಸಾಕಷ್ಟು ನೀರು ಕುಡಿಯಬೇಕು. ಸಾಕಷ್ಟು ನೀರು ಕುಡಿಯುವುದರಿಂದ ದೇಹದಿಂದ ವಿಷವನ್ನು ಹೊರ ಹಾಕುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕುಡಿಯುವ ನೀರು ಹಸಿವನ್ನು ಕಡಿಮೆ ಮಾಡುತ್ತದೆ.

    ಸೂಪ್ ಕುಡಿಯಿರಿ

    ಮಳೆಗಾಲದಲ್ಲಿ ತುಂಬಾ ತಣ್ಣನೆಯ ವಸ್ತುಗಳನ್ನು ಸೇವಿಸಬೇಡಿ. ಬದಲಿಗೆ ನೀವು ಸೂಪ್ ಕುಡಿಯಬಹುದು. ಅನೇಕ ತರಕಾರಿಗಳು ಮತ್ತು ಅವುಗಳ ಪೋಷಕಾಂಶಗಳು ಸೂಪ್ ಮೂಲಕ ದೇಹಕ್ಕೆ ಹೋಗುತ್ತವೆ. ಇದರಿಂದಾಗಿ ನಿಮ್ಮ ತೂಕವು ವೇಗವಾಗಿ ಕಡಿಮೆಯಾಗುತ್ತದೆ.

    ಇದಲ್ಲದೆ ತರಕಾರಿ ಸೂಪ್ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಹೆಚ್ಚು ಮಸಾಲೆಗಳನ್ನು ಸೇರಿಸಬೇಡಿ. ಸೂಪ್‌ಗೆ ಉತ್ತಮ ಪ್ರಮಾಣದ ತರಕಾರಿಗಳನ್ನು ಸೇರಿಸಿ. ಮಳೆಯಲ್ಲಿ ಬಿಸಿಯಾದ ಸೂಪ್ ಬೆಸ್ಟ್.

    ಉತ್ಕರ್ಷಣ ನಿರೋಧಕ ಹಣ್ಣುಗಳನ್ನು ಸೇವಿಸಿ

    ಮಾನ್ಸೂನ್‌ನಲ್ಲಿ ಬರುವ ಋತುಮಾನದ ಹಣ್ಣುಗಳೊಂದಿಗೆ ನಿಮ್ಮ ತೂಕವನ್ನು ಸಹ ಕಡಿಮೆ ಮಾಡಿಕೊಳ್ಳಬಹುದು. ನಿಮ್ಮ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಕಾಲೋಚಿತ ಹಣ್ಣುಗಳು ಸೋಂಕಿನಿಂದ ರಕ್ಷಿಸುತ್ತವೆ.

    ಆರೋಗ್ಯಕರ ಜೀವನಶೈಲಿಗೆ ಹಣ್ಣು ಸೇವನೆ ಮಾಡಿ. ಎಣ್ಣೆಯುಕ್ತ ವಸ್ತುಗಳಿಂದ ದೂರವಿರಿ. ಮಳೆಗಾಲದಲ್ಲಿ ನೀವು ಚಿಕೂ, ಲಿಚಿ, ಜಾಮೂನ್, ಪೀಚ್ ಮುಂತಾದ ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳನ್ನು ತಿನ್ನಬೇಕು.

    ಇದನ್ನೂ ಓದಿ: ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್ ಬೆಳವಣಿಗೆ ತಡೆಯುತ್ತೆ ಶುಂಠಿ-ಬೆಳ್ಳುಳ್ಳಿ

    ಶುಂಠಿ ಚಹಾ

    ಶುಂಠಿ ಚಹಾವನ್ನು ಕುಡಿಯಿರಿ. ಶುಂಠಿ ಆರೋಗ್ಯಕ್ಕೆ ಮತ್ತು ತೂಕವನ್ನು ಕಡಿಮೆ ಮಾಡಲು ಪ್ರಯೋಜನಕಾರಿ. ಚಹಾದಲ್ಲಿ ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡಬೇಕು.
    Published by:renukadariyannavar
    First published: