• Home
  • »
  • News
  • »
  • lifestyle
  • »
  • ಬಾಯಿಯಿಂದ ದುರ್ವಾಸನೆ ಬರೋ ಸಮಸ್ಯೆ ನಿವಾರಣೆಗೆ ಈ ಟಿಪ್ಸ್ ಫಾಲೋ ಮಾಡಿ

ಬಾಯಿಯಿಂದ ದುರ್ವಾಸನೆ ಬರೋ ಸಮಸ್ಯೆ ನಿವಾರಣೆಗೆ ಈ ಟಿಪ್ಸ್ ಫಾಲೋ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಿನಕ್ಕೆರಡು ಬಾರಿ ಹಲ್ಲುಜ್ಜಲು ಪ್ರಾರಂಭಿಸಬೇಕು ಎಂದು ಡಾ. ದೇಸಾಯಿ ಹೇಳುತ್ತಾರೆ. "ಬಾಯಿಯ ಆರೋಗ್ಯವನ್ನು ಸುಧಾರಿಸಲು ಡೆಂಟಲ್ ಫ್ಲೋಸ್ ಅಥವಾ ವಾಟರ್ ಫ್ಲೋಸರ್ ಅನ್ನು ಬಳಸುವುದು ಸೂಕ್ತ" ಎಂಬುದು ಅವರ ಅಭಿಪ್ರಾಯವಾಗಿದೆ.

  • Trending Desk
  • 3-MIN READ
  • Last Updated :
  • Share this:

ಬೆಳಗ್ಗೆ ಎದ್ದ ತಕ್ಷಣ ಕೆಲವರು ತಮ್ಮ ಹಲ್ಲುಗಳನ್ನು ಚೆನ್ನಾಗಿ ಬ್ರಶ್ (Teeth Brush) ಮಾಡಿ ಮತ್ತು ಬಾಯಿಯೊಳಗೆ ಉಪ್ಪು ಮಿಶ್ರಿತ ನೀರನ್ನು (Mouth Wash) ಹಾಕಿಕೊಂಡು ಬಾಯಿ ಮುಕ್ಕಳಿಸಿದರೂ ಒಂದೆರಡು ಗಂಟೆಗಳ ನಂತರ ಮತ್ತೆ ಬಾಯಿಯಿಂದ ದುರ್ವಾಸನೆ (Smell) ಬರುತ್ತಿರುತ್ತದೆ. ಎಷ್ಟೋ ಜನರು ಈ ಬಾಯಿ ವಾಸನೆಯಿಂದ ತುಂಬಾನೇ ಮುಜುಗರಕ್ಕೆ ಒಳಗಾಗುತ್ತಾರೆ ಮತ್ತು ಅನೇಕ ಸಭೆ ಸಮಾರಂಭಗಳಿಗೆ ಬಂದರೂ ಸಹ ತುಂಬಾ ಹತ್ತಿರ ಹೋಗಿ ಯಾರೊಂದಿಗೂ ಮಾತಾಡುವುದಿಲ್ಲ ಅಂತಾನೆ ಹೇಳಬಹುದು. ಈ ಸಮಸ್ಯೆ ಏಕೆ ಅನೇಕ ಜನರನ್ನು ಕಾಡುತ್ತದೆ ಅಂತ ಹೇಳಿದರೆ, ಇದು ಹ್ಯಾಲಿಟೋಸಿಸ್ ಅಂತ ಹೇಳಬಹುದು ಎಂದರೆ (ಲ್ಯಾಟಿನ್ ಫಾರ್ ಬ್ಯಾಡ್ ಬ್ರೀತ್) Halitosis (Latin for bad breath) ಇದು ಬಾಯಿಯ ಆರೋಗ್ಯ ಸಮಸ್ಯೆಯಾಗಿದ್ದು, ಅಲ್ಲಿ ಮುಖ್ಯ ಲಕ್ಷಣವೆಂದರೆ ಕೆಟ್ಟ ವಾಸನೆಯ ಉಸಿರಾಟ.


ಇದು ಸಾಮಾನ್ಯವಾಗಿ, ಬಹುಶಃ ಮಸಾಲೆಯುಕ್ತ ಊಟವನ್ನು ಸೇವಿಸಿದ ನಂತರ ಮತ್ತು ಬೆಳಗ್ಗೆ ಎದ್ದ ನಂತರ ಹೆಚ್ಚಾಗಿ ಸಂಭವಿಸುತ್ತದೆ.


ಬಾಯಿಯ ಕೆಟ್ಟ ವಾಸನೆಯ ಬಗ್ಗೆ ಏನ್ ಹೇಳ್ತಾರೆ ದಂತ ವೈದ್ಯರು?


ಮುಂಬೈ ಸೆಂಟ್ರಲ್ ನ ವೋಕ್ಹಾರ್ಡ್ ಆಸ್ಪತ್ರೆಯ ದಂತ ಶಸ್ತ್ರಚಿಕಿತ್ಸಕ ಡಾ. ಚಿರಾಗ್ ದೇಸಾಯಿ ಅವರ ಪ್ರಕಾರ, ದುರ್ವಾಸನೆಯನ್ನು ಎರಡು ಪ್ರಕಾರಗಳಾಗಿ ವಿಂಗಡಿಸಬಹುದು.


ಕಳಪೆ ಬಾಯಿಯ ನೈರ್ಮಲ್ಯ, ಸರಿಯಾಗಿ ಹೊಂದಿಕೊಳ್ಳದ ಪ್ರೊಸ್ಥೆಸಿಸ್ ಮತ್ತು ಒಸಡಿನ ಸೋಂಕಾಗಿರುವ ಪೀರಿಯಡಾಂಟೈಟಿಸ್ ಗೆ ಕಾರಣವಾಗುವ ಕಾರಣ ಹ್ಯಾಲಿಟೋಸಿಸ್ ನ ಪ್ರಕರಣಗಳು.


"ಬಾಯಿಯ ಕೆಟ್ಟ ವಾಸನೆಯನ್ನು ನಿಗ್ರಹಿಸಲು ಪ್ರಯತ್ನಿಸುವ ಬದಲು ಮೂಲ ಕಾರಣವನ್ನು ಕಂಡು ಹಿಡಿಯುವುದು ಮತ್ತು ಅದಕ್ಕೆ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯವಾಗುತ್ತದೆ" ಎಂದು ಡಾ. ದೇಸಾಯಿ ಹೇಳುತ್ತಾರೆ.


How to maintain oral hygiene expert advise stg mrq
ಸಾಂದರ್ಭಿಕ ಚಿತ್ರ


ದುರ್ವಾಸನೆಯ ಇತರ ಕಾರಣಗಳೆಂದರೆ ಕೊಳೆತ ಹಲ್ಲುಗಳು, ಜಿಂಗೈವಿಟಿಸ್, ಬಾಯಿಯಲ್ಲಿನ ಗುಳ್ಳೆಗಳು, ನೆಗಡಿ, ಮ್ಯಾಕ್ಸಿಲರಿ ಸೈನಸೈಟಿಸ್ ಮತ್ತು ಕ್ಸೆರೊಸ್ಟೋಮಿಯಾ (ಒಣಗಿದ ಬಾಯಿ) ಅಂತ ಹೇಳಬಹುದು.


ಬಾಯಿಯ ಕೆಟ್ಟ ವಾಸನೆಗೆ ಕಾರಣಗಳು ಏನು ಗೊತ್ತೇ?


ಕೊಚ್ಚಿಯ ಅಮೃತಾ ಆಸ್ಪತ್ರೆಯ ಡೆಂಟಲ್ ಆಂಕಾಲಜಿಸ್ಟ್ ಡಾ.ನಿತಿನ್ ಆನಂದ್ ಕೃಷ್ಣನ್ ಅವರು “ಬಾಯಿ ದುರ್ವಾಸನೆ ಕಳಪೆ ಆರೋಗ್ಯದ ಲಕ್ಷಣವಾಗಿದೆ” ಎಂದು ಹೇಳುತ್ತಾರೆ.


"ರೋಗಿಯು ನಿಯಮಿತವಾಗಿ ದಂತ ವೈದ್ಯರನ್ನು ಭೇಟಿಯಾಗುವುದಿಲ್ಲ ಎಂದು ಇದು ಸೂಚಿಸುತ್ತದೆ. ಉದಾಹರಣೆಗೆ, ರೋಗಿಯು ನಿಯಮಿತವಾಗಿ ಹಲ್ಲುಗಳನ್ನು ಸ್ವಚ್ಛಗೊಳಿಸದೆ ಇರಬಹುದು ಅಥವಾ ಅನೇಕ ಕೊಳೆತ ಹಲ್ಲುಗಳು ಇರಬಹುದು ಅಥವಾ ದೀರ್ಘಕಾಲದ ಹುಣ್ಣುಗಳನ್ನು ಹೊಂದಿರಬಹುದು" ಎಂದು ಡಾ. ಕೃಷ್ಣನ್ ಹೇಳುತ್ತಾರೆ.


ಆದಾಗ್ಯೂ, ಚಿಕಿತ್ಸೆಯ ನಂತರವೂ ಬಾಯಿಯಲ್ಲಿ ಕೆಟ್ಟ ವಾಸನೆ ಹಾಗೆಯೇ ಮುಂದುವರಿದರೆ, ಮೂತ್ರಪಿಂಡದ ಕಾಯಿಲೆ, ಪಿತ್ತಜನಕಾಂಗದ ಕಾಯಿಲೆ, ಮಧುಮೇಹ, ಒಣ ಬಾಯಿ ಮುಂತಾದ ಇತರ ಕಾರಣಗಳನ್ನು ಪರೀಕ್ಷಿಸಿಕೊಳ್ಳುವುದು ಒಳಿತು ಎಂದು ಡಾ. ಕೃಷ್ಣನ್ ಹೇಳಿಕೆಯಾಗಿದೆ.


ಈ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ಬೇಡ


ದುರ್ವಾಸನೆಯ ಬಗ್ಗೆ ದೂರು ನೀಡುವ ವ್ಯಕ್ತಿಯು ಮೂಲ ಕಾರಣವನ್ನು ಅರ್ಥಮಾಡಿಕೊಳ್ಳಲು ಮೊದಲು ಸಾಮಾನ್ಯ ವೈದ್ಯರ ಬಳಿ ಹೋಗಿ ತಮ್ಮನ್ನು ತಾವು ಒಮ್ಮೆ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.


ಬಾಯಿಯ ಕೆಟ್ಟ ವಾಸನೆಗೆ ಡಯಾಬಿಟಿಕ್ ಕೆಟೊಅಸಿಡೋಸಿಸ್, ಗ್ಯಾಸ್ಟ್ರಿಕ್ ಸ್ಥಿತಿಗಳು ಮತ್ತು ಸ್ಜೋಗ್ರೆನ್ ಸಿಂಡ್ರೋಮ್ ಗಳು ಸೇರಿವೆ. ಇದು ಎರಡು ಸಾಮಾನ್ಯ ರೋಗಲಕ್ಷಣಗಳಾದ ಒಣ ಕಣ್ಣುಗಳು ಮತ್ತು ಒಣ ಬಾಯಿಯಿಂದ ಗುರುತಿಸಲ್ಪಟ್ಟ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಅಸ್ವಸ್ಥತೆಯಾಗಿದೆ.


ಇದನ್ನೂ ಓದಿ: ಸ್ನಾನಕ್ಕೂ ಮೊದಲು ದೇಹಕ್ಕೆ ಬೇಕು ಎಣ್ಣೆಯ ಮಸಾಜ್, ಇದರಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ?


ಕೆಟ್ಟ ಉಸಿರಾಟಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದು ಹೇಗೆ?


"ಮೊದಲನೆಯದಾಗಿ, ದಂತ ವೈದ್ಯರ ಬಳಿ ಹೋಗಿ ಅವರನ್ನು ಭೇಟಿ ಮಾಡಿ ಮತ್ತು ಅದಕ್ಕೆ ಕಾರಣವಾದ ಅಂಶಗಳ ಬಗ್ಗೆ ತಿಳಿದುಕೊಳ್ಳಿರಿ ಮತ್ತು ಚಿಕಿತ್ಸೆ ಪಡೆಯಿರಿ.


ಇಷ್ಟಾದ ಮೇಲೂ ನಿಮ್ಮ ಬಾಯಿಯಲ್ಲಿನ ದುರ್ವಾಸನೆ ಹಾಗೆಯೇ ಉಳಿದಿದ್ದರೆ, ವ್ಯವಸ್ಥಿತ ಕಾರಣಗಳನ್ನು ಪರಿಶೀಲಿಸಲು ವೈದ್ಯರನ್ನು ಭೇಟಿ ಮಾಡಿ. ಕೆಲವು ಔಷಧೋಪಚಾರಗಳು ಬಾಯಿಯ ಶುಷ್ಕತೆಗೆ ಕಾರಣವಾಗಬಹುದು. ಝೆರೊಸ್ಟೋಮಿಯಾ (ಒಣ ಬಾಯಿ) ಇದ್ದರೆ, ಆಗ ಒಣ ಬಾಯಿಯ ಜೆಲ್ ಅನ್ನು ಬಳಸಿ" ಎಂದು ಕೃಷ್ಣನ್ ತಿಳಿಸುತ್ತಾರೆ.


How to maintain oral hygiene expert advise stg mrq
ಸಾಂದರ್ಭಿಕ ಚಿತ್ರ


ದಿನಕ್ಕೆರಡು ಬಾರಿ ಹಲ್ಲುಜ್ಜಲು ಪ್ರಾರಂಭಿಸಬೇಕು ಎಂದು ಡಾ. ದೇಸಾಯಿ ಹೇಳುತ್ತಾರೆ. "ಬಾಯಿಯ ಆರೋಗ್ಯವನ್ನು ಸುಧಾರಿಸಲು ಡೆಂಟಲ್ ಫ್ಲೋಸ್ ಅಥವಾ ವಾಟರ್ ಫ್ಲೋಸರ್ ಅನ್ನು ಬಳಸುವುದು ಸೂಕ್ತ" ಎಂಬುದು ಅವರ ಅಭಿಪ್ರಾಯವಾಗಿದೆ.


ಇದನ್ನೂ ಓದಿ:  Weight Loss: ಶೀಘ್ರ ಫಲಿತಾಂಶಕ್ಕಾಗಿ ತೂಕ ಇಳಿಕೆ ಪ್ಲಾನ್​ನಲ್ಲಿ ಈ ಅಂಶಗಳನ್ನು ಅಳವಡಿಸಿಕೊಳ್ಳಿ


ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಹೇಗೆ?


ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಡಾ. ದೇಸಾಯಿ ಈ ಕೆಳಗಿನ ಸಲಹೆಗಳನ್ನು ಪಟ್ಟಿ ಮಾಡಿದ್ದಾರೆ.


ಪ್ರತಿ ಆರು ತಿಂಗಳಿಗೊಮ್ಮೆ ದಂತ ವೈದ್ಯರನ್ನು ಭೇಟಿ ಮಾಡಿ.


ವರ್ಷಕ್ಕೆ ಒಮ್ಮೆಯಾದರೂ ಸ್ಕೇಲಿಂಗ್ ಮಾಡಿಸಿ.


ರೋಗಿಗಳು ಬಾಯಿಯಲ್ಲಿ ಶುಷ್ಕತೆಯನ್ನು ಹೊಂದಿದ್ದರೆ, ಜೆಲ್ ಗಳನ್ನು ಬಳಸಿ ಮತ್ತು ಹೆಚ್ಚು ನೀರನ್ನು ಕುಡಿಯಿರಿ.


ಕೊಳೆತ ಹಲ್ಲುಗಳನ್ನು ಸ್ವಚ್ಛ ಮಾಡಿಸಿಕೊಳ್ಳಿ ಅಥವಾ ಅದನ್ನು ಪುನಃ ಹಚ್ಚಿಸಿಕೊಳ್ಳಿರಿ.


ಊಟ ಮಾಡಿದ ನಂತರ ಹಲ್ಲುಗಳ ನಡುವೆ ಸಿಕ್ಕಿ ಹಾಕಿಕೊಂಡಿರುವ ಆಹಾರವನ್ನು ಸ್ವಚ್ಛಗೊಳಿಸಲು ಡೆಂಟಲ್ ಫ್ಲಾಸ್ ಅಥವಾ ಇಂಟರ್ ಡೆಂಟಲ್ ಬ್ರಷ್ ಬಳಸಿ.


ಪ್ರತಿ ಊಟದ ನಂತರ ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಿಕೊಳ್ಳಿ.


ಪ್ರತಿ ರಾತ್ರಿ ಬೆಚ್ಚಗಿನ ನೀರನ್ನು ಬಾಯಿಗೆ ಹಾಕಿಕೊಂಡು ಬಾಯಿಯನ್ನು ಮುಕ್ಕಳಿಸಿ.


ರಕ್ತ ಪರಿಚಲನೆಯನ್ನು ಸುಧಾರಿಸಿಕೊಳ್ಳಲು ಪ್ರತಿದಿನ ನಿಮ್ಮ ಒಸಡುಗಳನ್ನು ಮಸಾಜ್ ಮಾಡಿ.


ಮಕ್ಕಳಿಗೆ ಫ್ಲೋರೈಡ್ ಯುಕ್ತ ಟೂತ್ ಪೇಸ್ಟ್ ಬಳಸಿ.


ದಿನಕ್ಕೆರಡು ಬಾರಿ ಹಲ್ಲುಜ್ಜಿ.


ನಿಯಮಿತವಾಗಿ ಮೌತ್ ವಾಶ್ ಬಳಸಿ.

Published by:Mahmadrafik K
First published: