Marriage Tips: ಮದುವೆಯ ನಂತರದ ಜೀವನ ಚೆನ್ನಾಗಿರಬೇಕು ಅಂದ್ರೆ ಈ ಸಲಹೆ ಪಾಲಿಸಿ

Marriage Advice: ಅರೇ ಮದುವೆ ಮುರಿಯುವ ವಕೀಲರು ಮದುವೆ ಬಗ್ಗೆ ಉತ್ತಮ ಸಲಹೆ ನೀಡಲು ಹೇಗೆ ಸಾಧ್ಯ ಎಂದು ಅಂದುಕೊಳ್ಳಬೇಡಿ. ವಿಚ್ಛೇದನದ ವಕೀಲರು ಪ್ರತಿನಿತ್ಯ ಹಲವಾರು ಪ್ರಕರಣಗಳನ್ನು ನೋಡಿರುತ್ತಾರೆ. ಗಂಡ- ಹೆಂಡತಿ ನಡುವೆ ಬರುವ ಸಾಮಾನ್ಯ ಸಮಸ್ಯೆಗಳು ಅವರಿಗೆ ತಿಳಿದಿರುತ್ತದೆ ಮತ್ತು ಅವುಗಳಿಗೆ ಪರಿಹಾರವೂ ಅವರ ಬಳಿ ಇರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮದುವೆ (Wedding) ಅನ್ನೋದು ಪ್ರತಿಯೊಬ್ಬರ ಜೀವನದ ಒಂದು ಮುಖ್ಯವಾದ ಘಟ್ಟ. ವಿವಾಹ ಬಂಧನ ಶ್ರೇಷ್ಠವಾಗಿದ್ದು ಅದು ಜೀವನ ಪೂರ್ತಿ ನಿಮ್ಮ ಜೊತೆಗಿರುವ ಬಾಳ ಸಂಗಾತಿಯನ್ನು (Life Partners) ನಿರ್ಧರಿಸುತ್ತದೆ. ಇದು ಮದುವೆಯಾಗಿ ನಾಳೆ ಬಿಡುವ ಸಂಸ್ಕೃತಿ ಭಾರತೀಯರದ್ದಲ್ಲ. ಆದರೆ ಇತ್ತೀಚಿನ ಮನಸ್ಥಿತಿಗಳು ಮದುವೆಯನ್ನು ಹಗುರವಾಗಿ ಪರಿಗಣಿಸುತ್ತಿವೆ. ಸಂಗಾತಿಯನ್ನು ಆತುರದಿಂದ ಆಯ್ಕೆ ಮಾಡದೇ ನಿಮಗೆ ಹೊಂದುವ ಜೋಡಿಯು ಜೀವನದಲ್ಲಿ ನೆಮ್ಮದಿಯನ್ನು ತರುತ್ತಾರೆ. ಮದುವೆಯ ನಂತರದ ಜೀವನವೂ ಸಹ ಹೊಂದಿಕೊಂಡು ಹೋಗುವ, ಅರ್ಥ ಮಾಡಿಕೊಳ್ಳುವ, ಪ್ರೋತ್ಸಾಹ ನೀಡುವ ಭಾವನೆಗಳು ಸಕ್ಸಸ್ ಫುಲ್ ಮ್ಯಾರೇಜ್ ಗೆ ಕಾರಣವಾಗುತ್ತವೆ.

ಮದುವೆಯ ಜೀವನ ಹೇಗಿರಬೇಕು ಎಂದು ವಿಚ್ಛೇದನದ ವಕೀಲರು ಕೆಲವು ಮದುವೆ ಸಲಹೆ ನೀಡಿದ್ದು, ಅವುಗಳ ಬಗ್ಗೆ ತಿಳಿದುಕೊಳ್ಳೋಣ.
ಅರೇ ಮದುವೆ ಮುರಿಯುವ ವಕೀಲರು ಮದುವೆ ಬಗ್ಗೆ ಉತ್ತಮ ಸಲಹೆ ನೀಡಲು ಹೇಗೆ ಸಾಧ್ಯ ಎಂದು ಅಂದುಕೊಳ್ಳಬೇಡಿ. ವಿಚ್ಛೇದನದ ವಕೀಲರು ಪ್ರತಿನಿತ್ಯ ಹಲವಾರು ಪ್ರಕರಣಗಳನ್ನು ನೋಡಿರುತ್ತಾರೆ. ಗಂಡ- ಹೆಂಡತಿ ನಡುವೆ ಬರುವ ಸಾಮಾನ್ಯ ಸಮಸ್ಯೆಗಳು ಅವರಿಗೆ ತಿಳಿದಿರುತ್ತದೆ ಮತ್ತು ಅವುಗಳಿಗೆ ಪರಿಹಾರವೂ ಅವರ ಬಳಿ ಇರುತ್ತದೆ. ಆದರೆ ಕಕ್ಷಿದಾರನಿಗೆ ಅವನಿಗೆ ಬೇಕಾಗಿರುವುದನ್ನು ಕೊಡಿಸುವುದು ವಕೀಲರ ಕರ್ತವ್ಯವಷ್ಟೇ.

ಇದರಾಚೆ ಅವರಿಗೆ ಸಕ್ಸಸ್ ಫುಲ್ ಮ್ಯಾರೇಜ್ ಗಳ ಬಗ್ಗೆ ಚೆನ್ನಾಗಿಯೇ ತಿಳಿದಿರುತ್ತದೆ. ಪ್ರತಿ ವಿಚ್ಛೇದನ ವಕೀಲರು ಪ್ರಕರಣವನ್ನು ತೆಗೆದುಕೊಂಡಾಗಲೆಲ್ಲಾ ಮದುವೆಯ ಬಗ್ಗೆ ಏನನ್ನಾದರೂ ಕಲಿಯುತ್ತಾರೆ. ವಾಸ್ತವವಾಗಿ, ಅವರು ಮದುವೆ, ಪ್ರೀತಿ ಮತ್ತು ವಿಚ್ಛೇದನದ ಬಗ್ಗೆ ಕೆಲವು ಕುತೂಹಲಕಾರಿ ದೃಷ್ಟಿಕೋನಗಳನ್ನು ಹೊಂದಿರುತ್ತಾರೆ. ಸದ್ಯ ವಿಚ್ಛೇದನದ ವಕೀಲರು ಅತ್ಯುತ್ತಮ ವಿವಾಹ ಸಲಹೆಗಾರರು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಉತ್ತಮ ಮದುವೆ ಮತ್ತು ಮದುವೆಯ ನಂತರದ ಜೀವನಕ್ಕೆ ಸಲಹೆಗಳು
1) ಬದಲಾವಣೆ ಸುಲಭವಲ್ಲ

ನಿಮ್ಮ ಸಂಗಾತಿಯು ಬದಲಾಗುವುದಿಲ್ಲ. ನೀವು ಅವರನ್ನು ಬದಲಿಸಲು ಎಷ್ಟೇ ಪ್ರಯತ್ನ ಪಟ್ಟರೂ, ಅವರು ತಮ್ಮ ವ್ಯಕ್ತಿತ್ವದ ಲಕ್ಷಣಗಳು ಅಥವಾ ಅಭ್ಯಾಸಗಳನ್ನು ಉಳಿಸಿಕೊಳ್ಳುತ್ತಾರೆ, ಅದು ನಿಮ್ಮನ್ನು ಕೆರಳಿಸುತ್ತದೆ ಅಥವಾ ಅವರೊಂದಿಗೆ ಬೇರೆಯಾಗುವಷ್ಟು ಹತಾಶೆಯನ್ನು ಉಂಟುಮಾಡುತ್ತದೆ. ಯಾರಿಗಾದರೂ ಸರಿ ಕೆಲವು ಕಲಿತ ಗುಣಗಳನ್ನು ಒಮ್ಮೆಯ ಬದಲಾಯಿಸಿಕೊಳ್ಳುವುದು ಕಷ್ಟಸಾಧ್ಯ. ಹೀಗಾಗಿ ನಿಮ್ಮ ಸಂಗಾತಿ ನಿಮಗಾಗಿ ಬದಲಾಗುತ್ತಾರೆ ಎಂಬ ಭರವಸೆಯೊಂದಿಗೆ ಮದುವೆ ಆಗಬೇಡಿ. ಅದು ನಿಮ್ಮನ್ನು ಮುಂದಕ್ಕೆ ಬೇರೆ ಬೇರೆ ಮಾಡಬಹುದು.

ಇದನ್ನೂ ಓದಿ: ನಿಮ್ಮ ಸಂಗಾತಿ ಮತ್ತೊಬ್ಬರ ಜೊತೆ ಸಂಬಂಧ ಇಟ್ಕೊಂಡಿದ್ರೆ ನಿಭಾಯಿಸೋದು ಹೇಗೆ?

2) ಕುಟುಂಬವು ದೊಡ್ಡ ಸಮಸ್ಯೆಯಾಗಿರಬಹುದು
ಹೆಚ್ಚಿನ ಮದುವೆಗಳಲ್ಲಿ ಕುಟುಂಬಗಳು ದೊಡ್ಡ ಸವಾಲನ್ನು ಒಡ್ಡಬಹುದು. ಸಂಗಾತಿಯಲ್ಲಿ ಒಬ್ಬರು ತಮ್ಮ ಸಂಗಾತಿಗಿಂತ ಹೆಚ್ಚಾಗಿ ತಮ್ಮ ಕುಟುಂಬದವರ ಮಾತನ್ನು ಕೇಳುತ್ತಾರೆ, ಇದು ಉದ್ವೇಗ ಮತ್ತು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೀಗಾಗಿ ಹೆಚ್ಚಾಗಿ ಸಂಗಾತಿಗೆ ಆದ್ಯತೆ ನೀಡುವುದು ಉತ್ತಮ.

3) ಕಾನೂನು ಔಪಚಾರಿಕತೆಗಳ ಬಗ್ಗೆ ಜ್ಞಾನ ಇರಲಿ
ಹೆಚ್ಚಿನ ಸಮಯ, ದಂಪತಿಗಳು ಮದುವೆ ಆಗುವ ಮುನ್ನ ಯಾವುದೇ ಕಾನೂನು ಪ್ರಕ್ರಿಯೆಗಳ ಬಗ್ಗೆ ತಿಳಿದುಕೊಂಡಿರುವುದಿಲ್ಲ. ಮದುವೆಯ ನಂತರ, ನೀವು ಆಸ್ತಿಗಳು, ಷೇರುಗಳು ಅಥವಾ ಯಾವುದೇ ಪ್ರಮುಖ ಹಣಕಾಸು ನೀತಿಗಳಂತಹ ವಸ್ತುಗಳನ್ನು ಒಟ್ಟಿಗೆ ಖರೀದಿಸಿದಾಗ, ಅದು ಕಾನೂನುಬದ್ಧವಾಗಿ ಪಾಲುದಾರಿಕೆಯ ಅಡಿಯಲ್ಲಿ ಬರುತ್ತದೆ. ಆದ್ದರಿಂದ, ಪ್ರತಿ ದಂಪತಿಗಳು ಮದುವೆಯಲ್ಲಿ ತಮ್ಮ ಹಣಕಾಸಿನ ಅಂಶಗಳ ಬಗ್ಗೆ ತಿಳಿದಿರಬೇಕು.

ಇದನ್ನೂ ಓದಿ: ಈ ಟಿಪ್ಸ್ ಫಾಲೋ ಮಾಡಿದ್ರೆ ಪ್ರವಾಸಕ್ಕೆ ಹೋದಾಗ ಆರೋಗ್ಯ ಸಮಸ್ಯೆ ಬರಲ್ಲ

4) ಹಣಕಾಸನ್ನು ನಿಯಂತ್ರಣದಲ್ಲಿಡಿ
ವಿವಾಹಿತ ದಂಪತಿಗಳ ನಡುವಿನ ಸಮಸ್ಯೆಗಳ ದೊಡ್ಡ ಕಾರಣಗಳಲ್ಲಿ ಹಣಕಾಸು ಒಂದು. ಹೀಗಾಗಿ ಇಬ್ಬರು ಹಣಕಾಸಿನ ಸರಿಯಾದ ಪ್ಲ್ಯಾನ್ ರೂಪಿಸಿಕೊಂಡಿರಬೇಕು. ಪ್ರತಿ ದಂಪತಿಗಳು ತಮ್ಮ ಹಣಕಾಸುವನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಲು ಪ್ರಯತ್ನಿಸ ಬೇಕು. ಅವರು ತಮ್ಮ ಹಣಕಾಸುಗಳನ್ನು ಒಟ್ಟುಗೂಡಿಸಲು ಒಪ್ಪಿಗೆ ತಾವು ಮಾಡುವ ಪ್ರತಿನಿತ್ಯದ ಖರ್ಚು, ವೆಚ್ಚಗಳು ಮತ್ತು ಹೂಡಿಕೆಗಳ ದಾಖಲೆಯನ್ನು ಇಟ್ಟುಕೊಳ್ಳುವುದು ಉತ್ತಮ. ಈ ಕ್ರಮ ದಂಪತಿಗಳ ನಡುವೆ ಹಣಕಾಸಿನ ಸಮಸ್ಯೆಯನ್ನು ಸೃಷ್ಟಿಸುವುದಿಲ್ಲ.
Published by:Sandhya M
First published: