Fitness: 60 ದಾಟಿದ ನಂತರವೂ ಫಿಟ್ ಆಗಿರ್ಬೇಕಾ? ಹಾಗಿದ್ರೆ ತಪ್ಪದೆ ಈ ಸಲಹೆಗಳನ್ನು ಪಾಲಿಸಿ

ವಯಸ್ಸಾದವರಿಗೆ ಪೌಷ್ಠಿಕಾಂಶದ ಅಗತ್ಯಗಳು ಚಿಕ್ಕವರಿಗಿಂತ ಭಿನ್ನವಾಗಿವೆ ಮತ್ತು ಸಕ್ಕರೆ ಪದಾರ್ಥಗಳು ಮತ್ತು ಸಂಸ್ಕರಿಸಿದ ಆಹಾರಗಳಂತಹ ಕೆಲವು ಆಹಾರಗಳನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕಾಗುತ್ತದೆ. ಅಲ್ಲದೆ ಕೆಲವು ಆಹಾರಗಳನ್ನು ಅಗಿಯಲು ಕಷ್ಟವಾದರೆ, ಸೂಪ್, ಕಿಚಡಿ ಮತ್ತು ಬೇಳೆಕಾಳುಗಳು ಪೋಷಕಾಂಶಗಳ ಸೇವನೆಯನ್ನು ಹೆಚ್ಚಿಸುವುದು ಒಳ್ಳೆಯದು. ವೆಲ್ನೆಸ್ ಎಕ್ಸ್ಪರ್ಟ್ ನ ಪೌಷ್ಟಿಕ ತಜ್ಞೆಯಾದ ಕರಿಷ್ಮಾ ಷಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ 60 ವರ್ಷದ ನಂತರ ಜನರು ಅನುಸರಿಸಬೇಕಾದ ಫಿಟ್ನೆಸ್ ಸಲಹೆಗಳನ್ನು ಹಂಚಿಕೊಂಡಿದ್ದಾರೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಾವು ಮಕ್ಕಳಾಗಿದ್ದಾಗ ಮತ್ತು ನಮ್ಮ ಹದಿಹರೆಯದ ವಯಸ್ಸಿನಲ್ಲಿ ನಮ್ಮ ಫಿಟ್ನೆಸ್ (Fitness) ಅನ್ನು ಕಾಪಾಡಿಕೊಳ್ಳಲು ಅನೇಕ ರೀತಿಯ ದೈಹಿಕ ಚಟುವಟಿಕೆಗಳಲ್ಲಿ (Physical activity) ನಾವು ದಿನನಿತ್ಯ ಪಾಲ್ಗೊಳ್ಳುತ್ತೇವೆ ಮತ್ತು ಸಾಧಾರಣವಾಗಿಯೇ ಫಿಟ್ ಆಗಿ ಸಹ ಇರುತ್ತೇವೆ. ಆದರೆ ವಯಸ್ಸು 30 ಮತ್ತು 40 ರ ಗಡಿ ದಾಟಿದ ನಂತರ ಎಲ್ಲಾ ವ್ಯಾಯಾಮಗಳು (Exercise) ನಮಗೆ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಅಷ್ಟಾಗಿ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಹಾಗಾಗಿ ನಾವು ಈ ವಯಸ್ಸಿನಲ್ಲಿ ಫಿಟ್ ಆಗಿರಲು ಬೆಳಗ್ಗೆ (Morning) ಕೆಲವು ಆಟಗಳನ್ನು ಆಡಲು ಇಷ್ಟಪಡುತ್ತೇವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದೆಲ್ಲಾ ಒಂದು ಕಡೆ ಆದರೆ, ಇನ್ನೊಂದು ಕಡೆ ವಯಸ್ಸು 60 ದಾಟಿದ ನಂತರವಂತೂ ನಮ್ಮ ದೇಹದ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ತುಂಬಾನೇ ಕಷ್ಟವಾಗುತ್ತದೆ.

50ರ ನಂತರ ವಯಸ್ಸಾಗುವ ಪ್ರಕ್ರಿಯೆಯು ಸ್ವಲ್ಪ ಮಟ್ಟಿಗೆ ವೇಗಗೊಳ್ಳುತ್ತಿದ್ದಂತೆ, ಸ್ನಾಯು ದ್ರವ್ಯರಾಶಿಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಮತ್ತು ಮೂಳೆಯ ಆರೋಗ್ಯದ ಮೇಲೆ ಗಮನ ಹರಿಸುವುದು ಮುಂತಾದ ಅಂಶಗಳು ಗರಿಷ್ಠ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತವೆ.

60 ದಾಟಿದ ನಂತರವೂ ಫಿಟ್ನೆಸ್ ಕಾಪಾಡುವುದು ಹೇಗೆ?
ಈ ವಯಸ್ಸಿನಲ್ಲಿ ನೀವು ಗಂಟೆಗಟ್ಟಲೆ ಜಿಮ್ ನಲ್ಲಿ ತೀವ್ರವಾದ ತಾಲೀಮು ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಡಯಟ್ ಗಳನ್ನು ಮಾಡಲು ಸಹ ಆಗುವುದಿಲ್ಲ. ಆದರೆ ನಿಮ್ಮ ದೇಹಕ್ಕೆ ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳನ್ನು ಪೂರೈಸಲು, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸುಂದರವಾಗಿ ಕಾಣಲು ದೇಹದ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಪ್ರಯತ್ನವನ್ನು ನೀವು ಮಾಡಬಹುದು.

ವಯಸ್ಸಾದವರಿಗೆ ಪೌಷ್ಠಿಕಾಂಶದ ಅಗತ್ಯಗಳು ಚಿಕ್ಕವರಿಗಿಂತ ಭಿನ್ನವಾಗಿವೆ ಮತ್ತು ಸಕ್ಕರೆ ಪದಾರ್ಥಗಳು ಮತ್ತು ಸಂಸ್ಕರಿಸಿದ ಆಹಾರಗಳಂತಹ ಕೆಲವು ಆಹಾರಗಳನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕಾಗುತ್ತದೆ. ಅಲ್ಲದೆ, ಹಲ್ಲುಗಳಿಂದ ಕೆಲವು ಆಹಾರಗಳನ್ನು ಅಗಿಯಲು ಕಷ್ಟವಾದರೆ, ಸೂಪ್, ಕಿಚಡಿ ಮತ್ತು ಬೇಳೆಕಾಳುಗಳು ಪೋಷಕಾಂಶಗಳ ಸೇವನೆಯನ್ನು ಹೆಚ್ಚಿಸುವುದು ಒಳ್ಳೆಯದು.

ಇದನ್ನೂ ಓದಿ: Healthy Heart: ಹೃದಯದ ಆರೋಗ್ಯಕ್ಕಾಗಿ ಯಾವ ಪದಾರ್ಥಗಳ ಸೇವನೆ ಉತ್ತಮ? ನಿಮ್ಮ ಆಯ್ಕೆ ಹೀಗಿರಲಿ

ವೆಲ್ನೆಸ್ ಎಕ್ಸ್ಪರ್ಟ್ ನ ಪೌಷ್ಟಿಕ ತಜ್ಞೆಯಾದ ಕರಿಷ್ಮಾ ಷಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ 60 ವರ್ಷದ ನಂತರ ಜನರು ಅನುಸರಿಸಬೇಕಾದ ಫಿಟ್ನೆಸ್ ಸಲಹೆಗಳನ್ನು ಹಂಚಿಕೊಂಡಿದ್ದಾರೆ ನೋಡಿ.

1. ರುಚಿಕರವಾದ ಆಹಾರಗಳ ಮೇಲೆ ಕಡಿಮೆ ಅವಲಂಬಿತರಾಗಿ
ಫಾಸ್ಟ್ ಫುಡ್, ಕ್ಯಾಂಡಿ ಮತ್ತು ಸಂಸ್ಕರಿಸಿದ ತಿಂಡಿಗಳಂತಹ ಬಾಯಿಗೆ ರುಚಿಸುವ ಆಹಾರಗಳನ್ನು ನಿಯಮಿತವಾಗಿ ತಿನ್ನುವುದು ತೂಕ ಹೆಚ್ಚಳಕ್ಕೆ ಸಂಬಂಧಿಸಿದೆ ಮತ್ತು ನಿಮ್ಮ ತೂಕ ಇಳಿಸುವ ಪ್ರಯತ್ನಗಳಿಗೆ ಅಡ್ಡಿಯಾಗಬಹುದು. ಅನುಕೂಲಕರ ಆಹಾರಗಳು ಸಾಮಾನ್ಯವಾಗಿ ಹೆಚ್ಚಿನ ಕ್ಯಾಲೋರಿಗಳನ್ನು ಸಹ ಹೊಂದಿರುತ್ತವೆ ಮತ್ತು ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳಂತಹ ಪ್ರಮುಖ ಪೋಷಕಾಂಶಗಳಲ್ಲಿ ಕಡಿಮೆ ಇರುತ್ತವೆ.

2. ಸಾಮರ್ಥ್ಯ ತರಬೇತಿ ಪಡೆಯಿರಿ
ವೃದ್ಧಾಪ್ಯದಲ್ಲಿ ಸ್ನಾಯುವಿನ ದ್ರವ್ಯರಾಶಿಯನ್ನು ಕಳೆದುಕೊಳ್ಳುವುದು ಸಾಮಾನ್ಯವಾಗಿದ್ದರೂ, ಶಕ್ತಿ ತರಬೇತಿಯನ್ನು ಪಡೆಯುವುದರಿಂದ ನೀವು ಫಿಟ್ ಆಗಿರಬಹುದು. ನಿಮ್ಮ ಶಕ್ತಿ ಮತ್ತು ಸಹಿಷ್ಣುತೆಯನ್ನು ಬೆಳೆಸುವ ವಯಸ್ಸಿಗೆ ಸೂಕ್ತವಾದ ವ್ಯಾಯಾಮಗಳನ್ನು ಚರ್ಚಿಸಲು ನೀವು ಫಿಟ್ನೆಸ್ ತಜ್ಞರೊಂದಿಗೆ ಮಾತನಾಡಬೇಕು. ಉತ್ತಮ ಸ್ನಾಯು ದ್ರವ್ಯರಾಶಿಯು ಆ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಸಹ ನಿಮಗೆ ಸಹಾಯ ಮಾಡುತ್ತದೆ.

3. ದೇಹದ ಸಂಯೋಜನೆಯ ಮೇಲೆ ಗಮನ ಹರಿಸಿ
ದೇಹದ ತೂಕವು ಆರೋಗ್ಯದ ಉತ್ತಮ ಸೂಚಕವಾಗಿದ್ದರೂ, ನಿಮ್ಮ ದೇಹದಲ್ಲಿನ ಕೊಬ್ಬು ಮತ್ತು ಕೊಬ್ಬು ಮುಕ್ತ ದ್ರವ್ಯರಾಶಿಯ ಶೇಕಡಾವಾರು ಪ್ರಮಾಣದ ಸಂಯೋಜನೆಯೂ ಅಷ್ಟೇ ಮುಖ್ಯವಾಗಿದೆ. ಸ್ನಾಯುವಿನ ದ್ರವ್ಯರಾಶಿಯು ಒಟ್ಟಾರೆ ಆರೋಗ್ಯದ ಒಂದು ಪ್ರಮುಖ ಅಳತೆಯಾಗಿದೆ, ವಿಶೇಷವಾಗಿ ವಯಸ್ಸಾದ ವಯಸ್ಕರಲ್ಲಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ದೇಹದಿಂದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಿಕೊಳ್ಳುವ ಗುರಿ ನಿಮ್ಮದಾಗಿರಬೇಕು.

ಇದನ್ನೂ ಓದಿ:  Drinking Less Water: ಕಡಿಮೆ ನೀರು ಕುಡಿಯುವ ಅಭ್ಯಾಸ ಇದ್ರೆ ಈ ಸಮಸ್ಯೆಗಳು ತಪ್ಪಿದ್ದಲ್ಲ

4. ಚೆನ್ನಾಗಿ ನಿದ್ರೆ ಮಾಡಿರಿ
ಚೆನ್ನಾಗಿ ನಿದ್ರೆ ಮಾಡದಿರುವುದು ಸಹ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನಕ್ಕೆ ಅಡ್ಡಿಯಾಗಬಹುದು. ಆದ್ದರಿಂದ ಚೆನ್ನಾಗಿ ನಿದ್ರಿಸುವುದು ತುಂಬಾನೇ ಮುಖ್ಯವಾಗುತ್ತದೆ. ಸಾಕಷ್ಟು ನಿದ್ರೆಯನ್ನು ಪಡೆಯದಿರುವುದು ಸ್ಥೂಲಕಾಯದ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಅನೇಕವು ತೂಕ ಇಳಿಸುವ ಪ್ರಯತ್ನಗಳಿಗೆ ಅಡ್ಡಿಯಾಗುತ್ತವೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ.
Published by:Ashwini Prabhu
First published: