Beauty Tips: ಮಾಡೆಲ್ ಗಳಂತೆ ಸಖತ್ತಾಗಿ ಕಾಣ್ಬೇಕು ಅಂದ್ರೆ ಹೀಗೆ ಮಾಡ್ಬೇಕಂತೆ, ಖುದ್ದು ರೂಪದರ್ಶಿ ವಿವರಿಸಿದ್ದಾರೆ ನೋಡಿ

Beauty Tips By Model: ಅನೇಕರಿಗೆ ಮಾಡೆಲ್‌ಗಳಂತೆ ನಾವು ಆಗ್ಬೇಕು ಅನ್ನೋ ಆಸೆ ಇರುತ್ತೆ, ಆದರೆ ಅನೇಕರಿಗೆ ತಮ್ಮ ದಿನನಿತ್ಯದ ಕೆಲಸದ ಮಧ್ಯೆ, ಹೆಚ್ಚಾಗಿ  ಬ್ಯೂಟಿ ಬಗ್ಗೆ ಎಲ್ಲ ಗಮನ ಹರಿಸೋಕೆ ಆಗೋದಿಲ್ಲ ಜೊತೆಗೆ, ಹೇಗೆ ಆ ರೀತಿ  ಆಗೋದು ಅನ್ನೋ  ವಿಚಾರ ಸರಿಯಾಗಿ ತಿಳಿದಿರುವುದಿಲ್ಲ

ಮಾಡೆಲ್ ದೀಪಾ

ಮಾಡೆಲ್ ದೀಪಾ

  • Share this:
    ಮಾಡೆಲ್‌ (Model) ಜಗತ್ತಿನಲ್ಲಿ ಬ್ಯೂಟಿ (Beauty) ತುಂಬಾನೇ ಇಂಪಾರ್ಟೆಂಟ್, ಅದಕ್ಕಾಗಿ ಅವರು ಫಾಲೋ ಮಾಡೋ ಲೈಫ್ ಸ್ಟೈಲ್ (Lifestyle), ಫುಡ್ ಹಾಬಿಟ್ (Food Habit) ಎಲ್ಲಾವೂ ಅತ್ಯಾವಶ್ಯಕವಾಗಿರುತ್ತದೆ. ಹೀಗಿರುವಾಗ ಅನೇಕರಿಗೆ ಮಾಡೆಲ್‌ಗಳಂತೆ ನಾವು ಆಗ್ಬೇಕು ಅನ್ನೋ ಆಸೆ ಇರುತ್ತೆ, ಆದರೆ ಅನೇಕರಿಗೆ ತಮ್ಮ ದಿನನಿತ್ಯದ ಕೆಲಸದ ಮಧ್ಯೆ, ಹೆಚ್ಚಾಗಿ  ಬ್ಯೂಟಿ ಬಗ್ಗೆ ಎಲ್ಲ ಗಮನ ಹರಿಸೋಕೆ ಆಗೋದಿಲ್ಲ ಜೊತೆಗೆ, ಹೇಗೆ ಆ ರೀತಿ  ಆಗೋದು ಅನ್ನೋ  ವಿಚಾರ ಸರಿಯಾಗಿ ತಿಳಿದಿರುವುದಿಲ್ಲ. ಹೀಗಾಗಿಯೇ ಅವರ ಅಂದದ ಕುರಿತು ಮಾಡೆಲ್ ದೀಪಾ ಅವರು ತಮ್ಮ ಡಯೆಟ್ ಹಾಗೂ ಬ್ಯೂಟಿ ಮೇಂಟೆನ್ ಬೇಗ ಮಾಡೋದು ಅನ್ನೋ ಸಿಂಪಲ್ ಟಿಪ್ಸ್‌ಗಳನ್ನ ನೀಡಿದ್ದಾರೆ ಅದೇನು ಅಂದ್ರೆ..

    1. ಫುಡ್ ಹ್ಯಾಬಿಟ್

    ನಮ್ಮ ಸೌಂದರ್ಯಕ್ಕೆ ಫುಡ್ ಹ್ಯಾಬಿಟ್ ಅನ್ನೋದು ತುಂಬಾನೇ ಮುಖ್ಯ ಅದ್ರಲ್ಲೂ ನಾವು ಸೇವಿಸೋ ಆಹಾರದಿಂದ ನಮ್ಮ ಬಾಡಿ ಸ್ಲಿಮ್ ಆಗೋದ್ರಲ್ಲಿ ಮುಖ್ಯ ಪಾತ್ರವಹಿಸುತ್ತೆ. ಹೀಗಾಗಿ ದಿನನಿತ್ಯ ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ರಾಗಿ ಮಾಲ್ಡ್ ಸೇವಿಸಿದ್ರೆ ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಅದ್ರಿಂದ ದೇಹ ಸ್ಲಿಮ್ ಆಗಿರೋದಕ್ಕೆ ತುಂಬಾನೆ ಹೆಲ್ಪ್ ಮಾಡುತ್ತೆ. ಇನ್ನು ಮಧ್ಯಾಹ್ನದ ಊಟಕ್ಕೆ ಚಪಾತಿ ಜೊತೆ ಯಾವ್ದಾದ್ರೂ ಒಂದು ವೆಜ್ ಸಲಾಡ್ ತಿಂದ್ರೆ ಒಳ್ಳೇದು ಇದನ್ನ ಕೂಡಾ ಮನೇಲಿ ಆರಾಮಾಗಿ ತಯಾರು ಮಾಡ್ಕೋಬೋದು ಇದಕ್ಕೆ ಹೆಚ್ಚೇನು ಟೈಂ ಬೇಕು ಅನ್ನೋದು ಇರೋದಿಲ್ಲ.

    ಇದನ್ನೂ ಓದಿ:ತೂಕ ಕಡಿಮೆ ಆಗ್ಬೇಕು ಅಂದ್ರೆ ಬೆಳಗ್ಗೆ ಇವುಗಳನ್ನ ತಿನ್ನಲೇಬೇಡಿ

    ಸಂಜೆ ಟೈಂಗೆ ಪಾನಿಪುರಿ, ಫ್ರೈಸ್, ಗೋಬಿ ಈ ತರ ಜಂಕ್ ಫುಡ್ ತಿನ್ನುವ ಬದಲು ಯಾವುದಾದರೂ ಒಂದು ಹಣ್ಣನ್ನು ಸ್ನ್ಯಾಕ್ಸ್  ಎಂದು ತಿನ್ನಬಹುದು. ಅದ್ರಲ್ಲೂ ಪಪ್ಪಾಯ, ಆ್ಯಪಲ್, ಗ್ರೇಪ್ಸ್‌ನಂತಹ ಫ್ರೂಟ್ಸ್ ಸೇವಿಸಿದ್ರೆ ತುಂಬಾನೇ ಒಳ್ಳೆದು. ಇದು ಸಂಜೆ ಸ್ನ್ಯಾಕ್ಸ್ ವಿಚಾರ ಆದ್ರೆ ರಾತ್ರಿ ಊಟಕ್ಕೆ  ರಾಗಿಮುದ್ದೆ ಅಥವಾ ಚಪಾತಿ ಸೇವಿಸಿದ್ರೆ ಒಳ್ಳೆಯದು. ರಾಗಿ ನಮ್ಮ ದೇಹವನ್ನ ತಂಪಾಗಿ ಇಡುವುದರ ಜೊತೆಗೆ ಬೊಜ್ಜು ಬರದಂತೆ ನೋಡಿಕೊಳ್ಳುತ್ತದೆ.

    2. ಸ್ಕಿನ್ ಕೇರ್ ಮಾಡೋದು ಹೇಗೆ?

    ನಮ್ಮ ದೇಹದಲ್ಲಿ ಸ್ಕಿನ್‌ಗೆ ತುಂಬಾನೆ ಇಂಪಾರ್ಟ್ಸ್ ಕೊಡ್ತಿವಿ. ನಮ್ಮ ಸ್ಕಿನ್ ಫಳಫಳ ಅಂತ ಹೊಳಿಬೇಕು. ಅರ್ಟ್ರಾಕ್ಟೀವ್ ಆಗಿ ಕಾಣ್ಬೇಕು ಅನ್ನೋ ಆಸೆ ಇರುತ್ತೆ. ಇದಕ್ಕಂತಲೇ ಅನೇಕರು ಹೆಚ್ಚು ಹಣ ಕೊಟ್ಟು ಕ್ರೀಮ್‌ಗಳನ್ನ ಬಳಕೆ ಮಾಡಿದ್ರೂ ಒಳ್ಳೆ ರಿಸಲ್ಟ್ ಸಿಗೋದಿಲ್ಲ. ಆದ್ರೆ ಸಿಂಪಲ್‌ ಆಗಿನೇ ಹೇಗೆ ಸ್ಕಿನ್ ಬಗ್ಗೆ ಕೇರ್ ಮಾಡಬಹುದು. ದೀಪಾ ಅವರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಅಲೋವೇರಾ ಸೇವನೆ ಮಾಡುತ್ತಾರೆ.

    ಇನ್ನು ಫ್ಲ್ಯೂಯಿಡ್ಸ್ ಅಂದ್ರೆ ದ್ರವ ರೂಪದ ಪದಾರ್ಥವನ್ನ ಸೇವಿಸ್ತಾರೆ. ಅದ್ರಲ್ಲೂ ಹೆಚ್ಚಾಗಿ ನೀರು ಸೇವಿಸೋದ್ರಿಂದ ನಮ್ಮ ಸ್ಕಿನ್ ಗ್ಲೋ ಆಗೋದ್ರ ಜೊತೆಗೆ ಇದು ಆರೋಗ್ಯಕ್ಕೂ ಕೂಡ ಒಳ್ಳೇದು. ಇದ್ರ ಜೊತೆ ಫ್ರೆಶ್ ಫ್ರೂಟ್ಸ್ ಜ್ಯೂಸ್ ಹಾಗೇ ಲೆಮೆನ್ ಸಾಲ್ಟ್ ವಾಟರ್‌ನ್ನ ಸೇವಿಸ್ತಾರೆ ಇದ್ರಿಂದ ಸ್ಕಿನ್ ಪ್ರಾಬ್ಲಮ್ಸ್ ಬರೋದಿಲ್ಲ. ಹಾಗೇಯೇ ಇದು ಒನ್ ಟೈಪ್ ಆಫ್ ಸ್ಕಿನ್ ಕೇರ್ ಕೂಡಾ ಆಗಿದೆ.

    3. ವರ್ಕೌಟ್

    ಬೆಳಗ್ಗೆಯೇ ಎದ್ದಾಗ ನೀರನ್ನ ಸೇವಿಸೋದ್ರಿಂದ ನಮ್ಮ ಬಾಡಿ ಫ್ಲೆಕ್ಸಿಬಲ್ ಆಗೋಕೆ ಸಹಾಯ ಆಗುತ್ತೆ. ಜೊತೆಗೆ ಜಿಮ್‌ನಲ್ಲಿ ಸ್ವಲ್ಪಕಾಲ ವರ್ಕೌಟ್ ಮಾಡೋದ್ರಿಂದ ಈ ಫುಡ್‌ ಜೊತೆಗೆ ನಮ್ಮ ದೇಹದ ಅಂದ ಹೆಚ್ಚಿಸೋದಕ್ಕೆ ಸಹಾಯ ಮಾಡುತ್ತೆ. ಜಿಮ್ ಮಾಡೋಕೆ ಆಗ್ಲಿಲ್ಲ ಅಂದ್ರೆ ಯೋಗ ಕೂಡಾ ಮಾಡ್ಬೋದು ಇದ್ರಿಂದ ಬಾಡಿ ಹಾಗೂ ನಮ್ಮ ಮೈಂಡ್ ತುಂಬಾನೆ ಆಕ್ಟೀವ್ ಆಗಿರೋದಕ್ಕೆ ತುಂಬಾ ಹೆಲ್ಪ್ ಆಗುತ್ತೆ. ಜೊತೆಗೆ ನಮ್ಮ ದೇಹವನ್ನು ಫಿಟ್ ಆಗಿ ಇಡೋದಕ್ಕೆ ತುಂಬಾ ಸಹಾಯ ಮಾಡುತ್ತೆ.

    ಇದನ್ನೂ ಓದಿ: ಮೊಡವೆಗಳಿಗೆ ರಾಮಬಾಣ ಈ ಟೊಮೊಟೊ ಫೇಸ್​ಪ್ಯಾಕ್

    ಮಾಡೆಲ್ ದೀಪ ಈ ಸಿಂಪಲ್ ಮೂರು ಕ್ರಮಗಳನ್ನ ಫಾಲೋ ಮಾಡೋ ಮೂಲಕ ತಮ್ಮ ಬ್ಯೂಟಿ ಹಾಗೂ ದೇಹವನ್ನ ಫಿಟ್‌ ಆಗಿ ಇಟ್ಕೊಂಡಿದಾರೆ. ನೀವೂ ಕೂಡಾ ಹೆಚ್ಚು ಖರ್ಚಿಲ್ಲದೆ ಬ್ಯೂಟಿ ಮೇಂಟೇನ್ ಮಾಡ್ಬೇಕು ಅಂದ್ರೆ ಈ ಕ್ರಮವನ್ನು ಅನುಸರಿಸಿ.

    ವರದಿ: ಹಂಸ ಶ್ಯಾಮಲ
    Published by:Sandhya M
    First published: