Healthy Relationships: ನಿಮ್ಮವರೊಂದಿಗೆ ಭಾವನಾತ್ಮಕ ಸಂಬಂಧ ಚೆನ್ನಾಗಿರಬೇಕಾ? ಈ 5 ಸಲಹೆಗಳನ್ನು ಫಾಲೋ ಮಾಡಿ

ತಮ್ಮ ಪ್ರೀತಿಪಾತ್ರರಾಗಿರುವ ವ್ಯಕ್ತಿಗಳೊಂದಿಗೆ ವನಾತ್ಮಕ ಸಂಬಂಧವನ್ನು ಚೆನ್ನಾಗಿಟ್ಟುಕೊಳ್ಳಲು ಬಹುತೇಕರು ಹೆಣಗಾಡುತ್ತಿರುತ್ತಾರೆ. ಹೌದು.. ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಸ್ನೇಹವನ್ನು ಸಂಪಾದನೆ ಮಾಡಬಹುದು ಮತ್ತು ಅವನೊಂದಿಗೆ ಸಲುಗೆಯನ್ನು ಸಹ ಬೆಳೆಸಿಕೊಳ್ಳಬಹುದು. ಅಂತಹ ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸಲಹೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈ ಸಂಬಂಧಗಳು (relationship) ಸಹ ಒಂದು ರೀತಿಯಲ್ಲಿ ಚಿಕ್ಕ ಚಿಕ್ಕ ಗಿಡಗಳಿದ್ದಂತೆ.  ಚಿಕ್ಕ ಗಿಡಗಳಿಗೆ (plant) ಪ್ರತಿದಿನ ಹೇಗೆ ನಾವು ನೀರುಣಿಸಬೇಕೋ ಹಾಗೆಯೇ ಸಂಬಂಧಗಳನ್ನು ಸಹ ನಾವು ಚೆನ್ನಾಗಿಟ್ಟುಕೊಳ್ಳಲು (keep well) ತುಂಬಾನೇ ಪೋಷಣೆ ಮಾಡಬೇಕಾಗುತ್ತದೆ. ಅದರಲ್ಲೂ ನಮ್ಮ ಪ್ರೀತಿಪಾತ್ರರಾಗಿರುವ ವ್ಯಕ್ತಿಗಳೊಂದಿಗೆ (Loved one) ನಾವು ಭಾವನಾತ್ಮಕ ಸಂಬಂಧವನ್ನು (Emotional Relationship) ಚೆನ್ನಾಗಿಟ್ಟುಕೊಳ್ಳಲು ಬಹುತೇಕರು ಹೆಣಗಾಡುತ್ತಿರುತ್ತಾರೆ. ಹೌದು.. ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಸ್ನೇಹವನ್ನು (friendship) ಸಂಪಾದನೆ ಮಾಡಬಹುದು ಮತ್ತು ಅವನೊಂದಿಗೆ ಸಲುಗೆಯನ್ನು ಸಹ ಬೆಳೆಸಿಕೊಳ್ಳಬಹುದು. ಆದರೆ ಅವರೊಂದಿಗೆ ಭಾವನಾತ್ಮಕ ಸಂಬಂಧವನ್ನು ಚೆನ್ನಾಗಿಟ್ಟುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ.

ಪ್ರೀತಿಪಾತ್ರರೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸುವುದು ಏಕೆ ಅಗತ್ಯ 
ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಅವರ ಭಾವನೆಗಳ ಬಗ್ಗೆ ಸಂವಹನ ನಡೆಸಲು ಎಷ್ಟು ಆಸಕ್ತಿ ಹೊಂದಿದ್ದಾನೆ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ಸಮಯದೊಂದಿಗೆ, ಈ ಸಂಬಂಧಗಳು ಗಟ್ಟಿಯಾಗುತ್ತಾ ಹೋಗುತ್ತವೆ.

ನಮ್ಮ ಸಂಗಾತಿಗಳ ಬದುಕಿನಲ್ಲಿ ಆದಂತಹ ಕೆಲವು ಆಘಾತಗಳು ಮತ್ತು ಅಪರಿಪೂರ್ಣತೆಗಳ ಬಗ್ಗೆ ಅವರೊಂದಿಗೆ ಮುಕ್ತವಾಗಿ ಮಾತನಾಡಲು ಶುರು ಮಾಡುತ್ತೇವೆ. ಆಗ ನಾವು ಅವೆಲ್ಲವನ್ನೂ ಅರ್ಥಮಾಡಿಕೊಳ್ಳಲು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ ಮತ್ತು ಅವರ ಭಾವನೆಗಳು ಬೆಳೆಯಲು ಆರೋಗ್ಯಕರ ಮತ್ತು ಸುರಕ್ಷಿತ ಸ್ಥಳವನ್ನು ಅವರಿಗಾಗಿ ಸೃಷ್ಟಿಸಬೇಕು.

ಸಂಬಂಧ ಗಟ್ಟಿಯಾಗಿ ಬೆಳೆಯಬೇಕಂದ್ರೆ ಏನು ಮಾಡಬೇಕು?
ಒಂದು ಸಂಬಂಧವು ಗಟ್ಟಿಯಾಗಿ ಬೆಳೆಯಬೇಕು ಎಂದರೆ ಅಲ್ಲಿ ಇಬ್ಬರು ವ್ಯಕ್ತಿಗಳು ಪರಸ್ಪರ ಚೆನ್ನಾಗಿ ಆಲಿಸುವವರಾಗಿರಬೇಕು. ಹೃದಯವಂತಿಕೆ ಇರಬೇಕು. ಪರಸ್ಪರರು ಚೆನ್ನಾಗಿ ಅರ್ಥಮಾಡಿಕೊಳ್ಳುವ ಅಗತ್ಯದ ಮೇಲೆಯೂ ಇದು ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ: Baby Sleep: ನಿಮ್ಮ ಮಗು ಚೆನ್ನಾಗಿ ನಿದ್ರಿಸಬೇಕೆ? ಈ ಟಿಪ್ಸ್​ ಫಾಲೋ ಮಾಡಿ

ಖ್ಯಾತ ಮನಶ್ಶಾಸ್ತ್ರಜ್ಞ ನಿಕೋಲ್ ಲೆಪೆರಾ ಅವರು ತಮ್ಮ ಪೋಸ್ಟ್ ನಲ್ಲಿ ಹಲವು ಪ್ರಶ್ನೆಗೆ ಉತ್ತರಿಸಿದ್ದಾರೆ. ಭಾವನಾತ್ಮಕವಾಗಿ ಆರೋಗ್ಯಕರ ಸಂಬಂಧವನ್ನು ಸೃಷ್ಟಿಸಲು ಅವರು ಐದು ಸಲಹೆಗಳ ಬಗ್ಗೆ ಮಾತಾಡಿದ್ದಾರೆ.

1) ಪ್ರಶಂಸೆ ಮಾಡುವುದು
ಒಂದು ಸಣ್ಣ ಮೆಚ್ಚುಗೆಯ ಮಾತು ನಿಮ್ಮ ಸಂಗಾತಿಯ ಮನಸ್ಸಿಗೆ ತುಂಬಾನೇ ಸಂತೋಷ ನೀಡುತ್ತದೆ. ದಿನವಿಡೀ, ನಮ್ಮ ಜೊತೆಗಿರುವವರು ಮಾಡುವ ಅನೇಕ ಕೆಲಸಗಳಲ್ಲಿ ಅನೇಕ ಕೆಲಸಗಳನ್ನು ನಾವು ಮೆಚ್ಚಿಕೊಳ್ಳುತ್ತೇವೆ. ಆದರೆ ಅವರನ್ನು ಪ್ರಶಂಸಿಸುವುದನ್ನು ಮರೆತು ಬಿಡುತ್ತೇವೆ.  ಸಂಬಂಧಗಳನ್ನು ಆರೋಗ್ಯಕರವಾಗಿರಿಸಿಕೊಳ್ಳಲು ನಾವು ಪ್ರಶಂಸಿಸುವುದು  ಬಹಳ ಮುಖ್ಯ.

2) ನಮಗೆ ಕುತೂಹಲವಿರಬೇಕು
ನಾವು ನಮ್ಮ ಸಂಗಾತಿಯ ವಿಷಯಗಳಲ್ಲಿ ಆಸಕ್ತಿ ಹೊಂದಿಲ್ಲ ಎಂದು ಅವರಿಗೆ ಅನ್ನಿಸಬಾರದು. ನಾವು ಅವರ ಭಾವನೆಗಳ ಬಗ್ಗೆ, ಅವರು ಹೇಗೆ ಭಾವಿಸುತ್ತಿದ್ದಾರೆ ಮತ್ತು ಅವರ ಆಂತರಿಕ ಜಗತ್ತಿನ ಬಗ್ಗೆ ಕುತೂಹಲ ಹೊಂದಿರಬೇಕು ಮತ್ತು ಅದನ್ನು ನಮ್ಮೊಂದಿಗೆ ಹಂಚಿಕೊಳ್ಳುವಂತೆ ಅವರನ್ನು ಪ್ರೇರೇಪಿಸಬೇಕು.

3) ಸಮಯ ನೀಡಬೇಕು
ಕೆಲವೊಮ್ಮೆ ಒಬ್ಬರಿಗೊಬ್ಬರು ಸಮಯ ನೀಡುವುದು ಮತ್ತು ಜೊತೆಯಲ್ಲಿ ಸಮಯ ಕಳೆಯುವುದು ಮ್ಯಾಜಿಕ್ ನಂತೆ ಭಾಸವಾಗಬಹುದು. ಇದು ಡೇಟಿಂಗ್ ಆಗಿರಬೇಕಾಗಿಲ್ಲ, ಕೆಲವೊಮ್ಮೆ ಚಲನಚಿತ್ರವನ್ನು ನೋಡುವುದು, ಅಡುಗೆ ಮಾಡುವಷ್ಟು ಸಹ ಸರಳವಾಗಿರಬಹುದು.

ಇದನ್ನೂ ಓದಿ: Mother Care: ಮಕ್ಕಳ ನಡುವೆ ಕೋಪ ಮತ್ತು ಪೈಪೋಟಿ ಬರುವುದೇಕೆ; ತಾಯಿಯಾದವಳು ಇದನ್ನು ಹೇಗೆ ನಿಭಾಯಿಸಬೇಕು?

4) ಅವರ ಸಮಸ್ಯೆಯನ್ನು ಚೆನ್ನಾಗಿ ಕೇಳಿಸಿಕೊಳ್ಳಿರಿ
ಕೆಲವೊಮ್ಮೆ ಅವರು ಮಾತನಾಡುವಾಗ, ಅವರು ನಿಮ್ಮಿಂದ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಹುಡುಕದೆ ಇರಬಹುದು. ಅವರು ಕೇವಲ ಒಬ್ಬ ವ್ಯಕ್ತಿ ನಮ್ಮನ್ನು ತಾಳ್ಮೆಯಿಂದ ಕೇಳಿಸಿಕೊಂಡರೆ ಸಾಕು ಅಂತ ಬಯಸುತ್ತಾರೆ.

5) ನೀವು ನೀವಾಗಿರಿ
 ಸಂಬಂಧಗಳಲ್ಲಿ, ನಾವು ನಮ್ಮ ವ್ಯಕ್ತಿತ್ವವನ್ನು ಎಂದಿಗೂ ಕಳೆದುಕೊಳ್ಳಬಾರದು. ಬದಲಾಗಿ ನಾವು ಮತ್ತು ನಮ್ಮ ಸಂಗಾತಿಯು ಪ್ರಾಮಾಣಿಕ ಮತ್ತು ನಮ್ಮ ನಿಜವಾದ ಆವೃತ್ತಿಯನ್ನು ಹೊಂದಿರುವ ಆರೋಗ್ಯಕರ ಸ್ಥಳವನ್ನು ನಾವು ಸೃಷ್ಟಿಸಬೇಕು.
Published by:Ashwini Prabhu
First published: