Weight Loss: ಕೊಬ್ಬಿನಾಂಶ ಇದ್ದರೂ ತೂಕ ಇಳಿಸುತ್ತೆ ಈ ಆಹಾರ ಪದಾರ್ಥಗಳು!

ಹೆಚ್ಚುವರಿ ಕ್ಯಾಲೊರಿ ಸೇವನೆ ತಪ್ಪಿಸಿ. ಬೀಜಗಳು ಚೀಸ್ ಮತ್ತು ಬೆಣ್ಣೆಯಂತಹ ಆಹಾರ ಸೇವನೆ ತಪ್ಪಿಸಬೇಡಿ. ಈ ವಸ್ತುಗಳಲ್ಲಿ ಕಂಡು ಬರುವ ಆರೋಗ್ಯಕರ ಕೊಬ್ಬು ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳಿಗಿಂತ ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ತೂಕ ಹೆಚ್ಚಳ (Weight Gain) ಒಂದು ಗಂಭೀರ ಸಮಸ್ಯೆ (Serious Problem) ಆಗಿದೆ. ಮತ್ತು ಇದು ಅನೇಕ ಗಂಭೀರ ಆರೋಗ್ಯ ಸಮಸ್ಯೆ ಹುಟ್ಟು ಹಾಕಲು ಕಾರಣ ಆಗ್ತಿದೆ. ಜನರು ತೂಕ ಇಳಿಸಲು (Weight Loss) ಎಲ್ಲಾ ರೀತಿಯ ಕ್ರಮ ಕೈಗೊಳ್ತಾರೆ. ತೂಕ ಇಳಿಕೆಗೆ ಸಾಕಷ್ಟು ಜನರು (People) ತಿನ್ನುವುದು ಮತ್ತು ಕುಡಿಯುವ ವಿಚಾರದಲ್ಲಿ ಕಠಿಣ ನಿಯಮ ಪಾಲಿಸುತ್ತಾರೆ. ಎಲ್ಲಾ ರೀತಿಯ ಆಹಾರ ಕ್ರಮ ಫಾಲೋ ಮಾಡ್ತಾರೆ. ಇಲ್ಲವೇ ಜಿಮ್‌ ಗೆ ಹೋಗಿ ಗಂಟೆಗಟ್ಟಲೆ ವರ್ಕೌಟ್ ಮಾಡಿ ಬೆವರಿಳಿಸುತ್ತಾರೆ. ತೂಕ ನಷ್ಟ ಪರಿಹಾರ ಏನು ಎಂಬುದು ಹಲವರ ಪ್ರಶ್ನೆ ಆಗಿದೆ. ಸಹಜವಾಗಿ ತೂಕ ನಷ್ಟ ಸುಲಭದ ಕೆಲಸವಲ್ಲ.

  ತೂಕ ಇಳಿಸಲು ಏನು ಮಾಡಬೇಕು?

  ಆದರೆ ಆಹಾರ ಮತ್ತು ದೈಹಿಕ ಚಟುವಟಿಕೆ ಮತ್ತು ತಿನ್ನುವುದು ಮತ್ತು ಕುಡಿಯುವುದಕ್ಕೆ ಸಂಬಂಧಿಸಿದ ಕೆಲವು ಅಭ್ಯಾಸಗಳನ್ನು ನೆನಪಿಟ್ಟುಕೊಳ್ಳುವುದು ಸುಲಭವಾಗಿ ತೂಕ ಕಡಿಮೆ ಮಾಡಬಹುದು.

  ಆಲಿವ್ ಎಣ್ಣೆಯ ವಾಸನೆ ತೆಗೆದುಕೊಳ್ಳುವುದು, ಉಸಿರಾಡುವುದು, ಬೆಳಗಿನ ಉಪಾಹಾರಕ್ಕೆ ಗಟ್ಟಿಯಾದ ಆಹಾರ ಸೇವಿಸುವುದು ಅಥವಾ ಕ್ಯಾಲ್ಸಿಯಂ ಪೂರಕ ಸೇವನೆ ಮಾಡುವ ಪರಿಹಾರಗಳು ತೂಕ ಕಡಿಮೆ ಮಾಡಲು ಪರಿಣಾಮಕಾರಿ ಎಂದು ನಂಬಲಾಗಿದೆ.

  ಇದನ್ನೂ ಓದಿ: ಕೂದಲು, ನೆತ್ತಿಯ ರಕ್ಷಣೆಗೆ ಎಳ್ಳೆಣ್ಣೆಯ ಮಸಾಜ್! ಎಷ್ಟು ಪರಿಣಾಮಕಾರಿ?

  ಜೊತೆಗೆ ಇವುಗಳನ್ನು ವಿಜ್ಞಾನವು ಸಹ ಬೆಂಬಲಿಸುತ್ತದೆ. ನೀವು ಸ್ಥೂಲಕಾಯದಿಂದ ಬಳಲುತ್ತಿದ್ದರೆ ಮತ್ತು ತೂಕ ಇಳಿಕೆಗೆ ಯೋಜಿಸುತ್ತಿದ್ದರೆ ಕೆಲ ಆಹಾರ ಪದ್ಧತಿ ಫಾಲೋ ಮಾಡಿ.

  ಆರೋಗ್ಯಕರ ಕೊಬ್ಬು ಹೊಂದಿರುವ ಪದಾರ್ಥಗಳ ಸೇವನೆ

  ಹೆಚ್ಚುವರಿ ಕ್ಯಾಲೊರಿ ಸೇವನೆ ತಪ್ಪಿಸಿ. ಬೀಜಗಳು, ಚೀಸ್ ಮತ್ತು ಬೆಣ್ಣೆಯಂತಹ ಆಹಾರ ಸೇವನೆ ತಪ್ಪಿಸಬೇಡಿ. ಈ ವಸ್ತುಗಳಲ್ಲಿ ಕಂಡು ಬರುವ ಆರೋಗ್ಯಕರ ಕೊಬ್ಬು ಪ್ರೋಟೀನ್ ಮತ್ತು

  ಕಾರ್ಬೋಹೈಡ್ರೇಟ್‌ಗಳಿಗಿಂತ ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಇದು ನೀವು ಹಸಿವು ಅನುಭವಿಸುವ ಸಾಧ್ಯತೆ ಕಡಿಮೆ ಇರುತ್ತದೆ. ಜನರು ವ್ಯಾಯಾಮ ಮಾಡುವಾಗ  ಹೆಚ್ಚು ಕ್ಯಾಲೋರಿ ಬರ್ನ್ ಮಾಡುತ್ತಾರೆ. ಇದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

  ಹಣ್ಣು ಮತ್ತು ತರಕಾರಿ ಚೆನ್ನಾಗಿ ತೊಳೆಯಿರಿ

  ಸಂಪೂರ್ಣವಾಗಿ ಹಣ್ಣು ಮತ್ತು ತರಕಾರಿಗಳನ್ನು ತೊಳೆಯದಿದ್ದಲ್ಲಿ ಅದು ತೂಕ ಹೆಚ್ಚಾಗಲು ಒಂದು ಪ್ರಮುಖ ಕಾರಣ ಆಗಬಹುದು. ಏಕೆಂದರೆ ಉಳಿದಿರುವ ಕೀಟನಾಶಕಗಳು ನಿಮ್ಮ ಚಯಾಪಚಯ ನಿಧಾನಗೊಳಿಸಬಹುದು. ಇದು ತೂಕ ಹೆಚ್ಚಾಗಲು ಕಾರಣ.

  ಆಲಿವ್ ಎಣ್ಣೆಯ ವಾಸನೆ ತೆಗೆದುಕೊಳ್ಳಬಹುದು

  ನಿಮ್ಮ ಆಹಾರದಲ್ಲಿ ಆಲಿವ್ ಎಣ್ಣೆ ಸೇರಿಸುವುದು ನಿಮಗೆ ಶೀಘ್ರ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆಲಿವ್ ಎಣ್ಣೆಯ ವಾಸನೆ ಸಕ್ಕರೆಯ ಮಟ್ಟ ಸ್ಥಿರಗೊಳಿಸುವ ಸಮಯ ಹೆಚ್ಚಿಸುತ್ತದೆ.

  ಇದರಿಂದ ನೀವು ಹಸಿವು ಅನುಭವಿಸುವುದಿಲ್ಲ. ಹಸಿವನ್ನು ಗ್ರೆಲಿನ್ ಎಂಬ ಹಾರ್ಮೋನ್ ನಿಯಂತ್ರಿಸುತ್ತದೆ. ನೀವು ಒತ್ತಡದಲ್ಲಿದ್ದಾಗ ಅದರ ಮಟ್ಟವು ಹೆಚ್ಚಾಗುತ್ತದೆ ಮತ್ತು ನೀವು ತಿನ್ನುವುದನ್ನು ಆನಂದಿಸಿದಾಗ ಕಡಿಮೆ ಆಗುತ್ತದೆ.

  ಡೈರಿ ಉತ್ಪನ್ನ ಸೇವನೆ ಬದಲು ಕ್ಯಾಲ್ಸಿಯಂ ವಿಟಮಿನ್ ಸೇವಿಸಿ

  ಅನೇಕ ಜನರು ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿರುತ್ತಾರೆ. ಅವರು ತಮ್ಮ ಆಹಾರದಿಂದ ಡೈರಿ ಪದಾರ್ಥಗಳನ್ನು ತೆಗೆದು ಹಾಕುತ್ತಾರೆ. ಆದರೆ ಕಾಟೇಜ್ ಚೀಸ್, ಹಾಲು ಮತ್ತು ಕಾಟೇಜ್ ಚೀಸ್ ಕ್ಯಾಲ್ಸಿಯಂ ಉತ್ತಮ ಮೂಲ. ಇದು ವಿಜ್ಞಾನಿಗಳ ಪ್ರಕಾರ ಕೊಬ್ಬಿನ ಚಯಾಪಚಯ ವೇಗಗೊಳಿಸಲು ಸಹಾಯ ಮಾಡುತ್ತದೆ.

  ಕ್ಯಾಲ್ಸಿಯಂ ವಿಟಮಿನ್ ಅನ್ನು ಸೇವಿಸಿದ ಪ್ರಯೋಗದಲ್ಲಿ ಭಾಗವಹಿಸುವವರು ತಮ್ಮ ತೂಕದ 26 ರಿಂದ 70 ಪ್ರತಿಶತ ತೂಕ ಕಳೆದುಕೊಂಡರು. ಆದ್ದರಿಂದ ನೀವು ಕ್ಯಾಲ್ಸಿಯಂ, ವಿಟಮಿನ್ ಮತ್ತು ವಿಟಮಿನ್ ಡಿ ಬದಲಿಸಬಹುದು.

  ಬೆಳಿಗ್ಗೆ ಘನ ಆಹಾರ ಸೇವಿಸಿ

  ಬೆಳಗಿನ ಉಪಾಹಾರವು ದೀರ್ಘಕಾಲದವರೆಗೆ ಅಗತ್ಯ ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಬೆಳಿಗ್ಗೆ ಘನ ಪದಾರ್ಥ ತಿನ್ನುವುದು ಪ್ರೋಟೀನ್ ದಕ್ಷತೆ ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಅಂದರೆ ಸ್ಮೂಥಿಗಳ ಬದಲು ಕಾಟೇಜ್ ಚೀಸ್ ತಿಂದರೆ ತಡವಾಗಿ ಹಸಿವಾಗುತ್ತದೆ.

  ಇದನ್ನೂ ಓದಿ: ತೂಕ ಇಳಿಸಲು ಈ ಡಯಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಹಾನಿಕರವಾಗಬಹುದು ಎಚ್ಚರ!

  ಕಪ್ಪು ಚಾಕೊಲೇಟ್ ಸೇವಿಸಿ

  ಚಾಕೊಲೇಟ್ ಅನೇಕ ಆರೋಗ್ಯ ಪ್ರಯೋಜನ ಹೊಂದಿದೆ. ತೂಕ ಕಡಿಮೆ ಮಾಡಲು ಮತ್ತು ಕಾಪಾಡಲು ಸಹ ಇದು ಸಹಾಯಕ. ಕಡಿಮೆ ಕಾರ್ಬ್ ಆಹಾರ ಸೇವಿಸುವವರು, ಸ್ವಲ್ಪ ಪ್ರಮಾಣದ ಡಾರ್ಕ್ ಚಾಕೊಲೇಟ್ ತಿನ್ನುವವರು ತೂಕ ಹೆಚ್ಚಿಸುವುದಿಲ್ಲ.
  Published by:renukadariyannavar
  First published: