Breastfeeding: ಹಾಲುಣಿಸುವ ತಾಯಂದಿರೇ ತೂಕ ಇಳಿಸುವ ಚಿಂತೆಯೇ? ಹಾಗಾದರೆ ಇವುಗಳ ಬಗ್ಗೆ ತಿಳಿಯಿರಿ

ಹೆರಿಗೆ ನಂತರ ಸ್ವಲ್ಪ ಕಾಲದವರೆಗೆ ಹೊಟ್ಟೆ ಹಸಿದುಕೊಂಡು ಇರಬಾರದು. ಈ ರೀತಿ ಹಸಿವಿನಿಂದ ಇದ್ದರೆ ನಿಶ್ಯಕ್ತಿ ಉಂಟಾಗುತ್ತದೆ. ಸರಿಯಾದ ಸಮಯಕ್ಕೆ ತಿನ್ನದೇ ಹೋದರೆ ಮಗುವಿಗೆ ಹಾಲಿನ ಕೊರತೆ ಉಂಟಾಗಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಗುವಿಗೆ (Baby) ಜನ್ಮ ಕೊಡುವುದು ನಿಜಕ್ಕೂ ತಾಯಿ (Mother) ಪುನರ್‌ ಜನ್ಮವಿದ್ದಂತೆ, (Giving birth to a baby) ಗರ್ಭಿಣಿಯಾಗುತ್ತಿದ್ದಂತೆ ತನ್ನೆಲ್ಲಾ ಆಸೆ, ಆಡಂಬರವನ್ನು ಬದಿಗಿಡುವ ಮಹಿಳೆ, ಹೆರಿಗೆಯಾಗುತ್ತಿದಂತೆ ಇನ್ನಷು ಕುಗ್ಗಿ ಹೋಗಿ ಮಾನಸಿಕವಾಗಿ ಬಳಲುತ್ತಿರುತ್ತಾರೆ. ಇದರ ಮಧ್ಯೆ ದಿಡೀರನೇ ತೂಕ ಏರಿಕೆ (amount of exercise)ಅವರನ್ನು ಇನ್ನಷ್ಟು ಖಿನ್ನತೆಗೆ ತಳ್ಳುತ್ತದೆ. ಮದುವೆ, ಮಕ್ಕಳು ಎಂದೆಲ್ಲಾ ಜವಾಬ್ದಾರಿ ಬರುವ ಮೊದಲ ಹೆಣ್ಣುಮಕ್ಕಳು ತಮ್ಮ ಬಳಕುವ ಮೈಮಾಟಕ್ಕಾಗಿ ಭಾರಿ ಕಸರತ್ತು ನಡೆಸಿರುತ್ತಾರೆ. ಅದೇ ಮೈಮಾಟ ಮರಳಿ ಪಡೆಯಲು ಹೆರಿಗೆ ಬಳಿಕವು ಪ್ರಯತ್ನಿಸಿ ಅನೇಕ ವಿಫಲವಾಗಿದ್ದಾರೆ.

  ಇದನ್ನು ಓದಿ:Breast Feeding: ಹಾಲುಣಿಸುವ ಮಹಿಳೆಯರು ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ತಿನ್ನಬಾರದು

  ದೇಹದಲ್ಲಿ ಅನೇಕ ಬದಲಾವಣೆ(Many changes in the body)
  ಮೊದಲೆಲ್ಲಾ ಡಯಟ್, ವ್ಯಾಯಾಮ ಮಾಡಿ ಹೆಚ್ಚಿನವರು ಆಕರ್ಷಕ ಮೈಕಟ್ಟು ಹೊಂದಿರುತ್ತಾರೆ. ಆದರೆ ಮದುವೆಯಾಗಿ ಒಂದು ಮಗುವಿನ ತಾಯಿಯಾದಾಗ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಕೆಲವರು ಗುಂಡಗೆ ಆಗುವವರು. ಆದರೆ ಈ ಬದಲಾವಣೆಯನ್ನು ಸ್ವಾಗತಿಸಲು ಹೆಚ್ಚಿನವರು ತಯಾರು ಇರುವುದಿಲ್ಲ. ಮಗುವಾದ ನಂತರ ಕೂಡ ಬಳಕುವ ಮೈಮಾಟ ಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಹೆರಿಗೆಯಾದ ಕೆಲವೇ ತಿಂಗಳಿನಲ್ಲಿ ಜಿಮ್ ಗೆ ಸೇರಕೊಳ್ಳ ಬಯಸುತ್ತಾರೆ, (gym a few months after childbirth,)ಆಹಾರ ಕಡಿಮೆ ತಿನ್ನುತ್ತಾರೆ. ಒಟ್ಟಿನಲ್ಲಿ ಒಂದು ಮಗುವಿನ ತಾಯಿಯಾದರೂ ಎಷ್ಟು ಆಕರ್ಷಕ ಮೈಮಾಟ ಹೊಂದಿದ್ದಾಳೆ ಎಂದು ಇತರರಿಂದ ಹೊಗಳಿಸಿಕೊಳ್ಳಬೇಕೆಂಬ ಹಂಬಲ ಕೂಡ ಇರುತ್ತದೆ. ಮಗುವಾದ ನಂತರ ಕೂಡ ಬಳಕುವ ಮೈಮಾಟ ಪಡೆಯುವುದು ತಪ್ಪಲ್ಲ. ಆದರೆ ಹೆರಿಗೆಯಾದ ಕೆಲವೇ ತಿಂಗಳಿನಲ್ಲಿ ತೂಕ ಇಳಿಸಲು ಪ್ರಯತ್ನಿಸುವುದು ಉತ್ತಮ

  ಗರ್ಭವತಿಯಾದಾಗ ಮೈ(during pregnancy) ತೂಕ ಸ್ವಲ್ಪ ಜಾಸ್ತಿಯಾಗುವುದು ಸಹಜವಾಗಿರುತ್ತದೆ, ಹಾಗಾಗಿ ಹೆರಿಗೆ ನಂತರ ದೇಹದ ಆರೈಕೆಗೆ ಉತ್ತಮ ಪೋಷಕಾಂಶಗಳಿರುವ ಆಹಾರ ಸೇವನೆ ಅವಶ್ಯಕ. ಅಲ್ಲದೆ ಮಗುವಿಗೆ ಹಾಲು ಕೊಡುವುದರಿಂದ ಪೌಷ್ಠಿಕ ಆಹಾರದ ಕಡೆ ಗಮನ ಕೊಡಬೇಕೆ ಹೊರತು ಡಯಟ್ ಕಡೆ ಹೆಚ್ಚಿನ ತಲೆಕೆಡೆಸಿಕೊಳ್ಳುವಂತಿಲ್ಲ, ಯಾಕೆಂದರೆ ಆ ಸಮಯದಲ್ಲಿ ಮಗುವ ಆರೈಕೆ ಬಹಳ ಮುಖ್ಯವಾಗಿರುತ್ತದೆ.

  ತೂಕ ಹೆಚ್ಚುವುದು ಸಹಜ(Weight gain is normal)
  ಹೆರಿಗೆ ನಂತರ ಸ್ವಲ್ಪ ಕಾಲದವರೆಗೆ ಹೊಟ್ಟೆಯನ್ನು ಹಸಿದುಕೊಂಡು ಇರಬಾರದು. ಈ ರೀತಿ ಹಸಿವಿನಿಂದ ಇದ್ದರೆ ನಿಶ್ಯಕ್ತಿ ಉಂಟಾಗುತ್ತದೆ. ಆದ್ದರಿಂದ ತೂಕ ಹೆಚ್ಚಾಗುತ್ತದೆ ಎಂದು ತಿನ್ನದೆ ಕೂರದೆ ಸರಿಯಾಗಿ ತಿನ್ನಬೇಕು. ಅಲ್ಲದೇ ಸರಿಯಾದ ಸಮಯಕ್ಕೆ ತಿನ್ನದೇ ಹೋದರೆ ಮಗುವಿಗೆ ಹಾಲಿನ ಕೊರತೆ ಉಂಟಾಗಬಹುದು, ತಾಯಿ ಸ್ತನಪಾನ ಮಾಡಿಸಬೇಕಾಗಿರುವುದರಿಂದ ಗಂಟೆಗಂಟೆಗೊಮ್ಮೆ ತಿನ್ನಬೇಕಾಗುತ್ತದೆ. ಇದರಿಂದ ತೂಕ ಹೆಚ್ಚುವುದು ಸಹಜ.

  ಪ್ರಸವದ ನಂತರ ದಿನಕ್ಕೆ 400-500 ಕ್ಯಾಲೋರಿ ಆಹಾರವನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳಬೇಕು. ಮಗುವಿನ ಆರೋಗ್ಯ ತಾಯಿ ತಿನ್ನುವ ಆಹಾರದ ಮೇಲೆ ಅವಲಂಭಿಸಿರುತ್ತದೆ. ಈ ಸಮಯದಲ್ಲಿ ಕೆಲ ಆಹಾರಗಳು ನಿಷೀದ್ಧವಾಗಿರುತ್ತದೆ. ಕಾರಣ ಮಗುವಿನ ಮೇಲೆ ಪರಿಣಾಮಬೀರಲಿದೆ ಎಂದು, ತಾಯಿ ತಾನು ಸಣ್ಣಕ್ಕೆ ಆಗಬೇಕೆಂದು ಡಯಟ್‌ ಮಾಡಲು ಬೇಕಾದ ಆಹಾರವನ್ನು ತಿನ್ನುವಂತಿಲ್ಲ

  ತೀರ ದಪ್ಪವಾಗಬಹುದು(Can be very thick)
  ಹೆರಿಗೆಯಾಗಿ ಒಂದು ಆರು ತಿಂಗಳವರೆಗೆ ದೇಹದ ತೂಕದ ಬಗ್ಗೆ ಚಿಂತೆ ಮಾಡಬಾರದು. ಊಟ ಬಿಟ್ಟು ತೆಳ್ಳಗಾಗುವ ಪ್ರಯತ್ನ ಮಾಡಬಾರದು. ಈ ವೇಳೆ ತಾಯಿ ದೇಹದಲ್ಲಿ ಅನೇಕ ಬದಲಾವಣೆಗಳಾಗುವುದು ಸಹಜ. ಕೆಲವೊಬ್ಬರು ತೀರ ದಪ್ಪವಾಗಬಹುದು, ಇನ್ನು ಕೆಲವೊಬ್ಬರು ನಿಶಕ್ತಿಗೊಂಡು ಸಣ್ಣಗಾಗಿ ನಂತರ ದಪ್ಪವಾಗಬಹುದು. ಹಾಗಾಗಿ ಈ ಬಗ್ಗೆ ಹೊಸ ತಾಯಂದಿರು ತಲೆಕೆಡಿಸಿಕೊಳ್ಳದೇ ಕೆಲತಿಂಗಳು ಸುಮ್ಮನೇ ತಿಂದು ಮಗುವಿಗೆ ಹಾಲುಣಿಸಿ ಮಲಗಬೇಕು.

  ಹೆರಿಗೆಯಾದ 2 ತಿಂಗಳ ಬಳಿಕ ನಿಧಾನಕ್ಕೆ ಒಂದು 30 ನಿಮಿಷ ನಡೆಯುವ ವ್ಯಾಯಾಮ ಮಾಡಬೇಕು. ಮನೆಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿದರೆ ಸ್ವಲ್ಪ ವ್ಯಾಯಾಮ ದೊರಕುವುದು. ಜೋರಾಗಿ ನಡೆಯುವುದು, ಭಾರದ ವಸ್ತುಗಳನ್ನು ಎತ್ತುವುದು, ತಣ್ಣಿರಿನಲ್ಲಿ ಕೈಯಾಡುವುದನ್ನು ಮಾಡಲೇಬಾರದು. ಭಾರದ ವಸ್ತುಗಳನನು ಎತ್ತುವುದರರಿಂದ ಸೊಂಟ ನೋವು ಕಾಣಿಸಿಕೊಳ್ಳುವುದರ ಜೊತೆಗೆ ಭಟ್ಟಿ ಬೀಳುವ ಸಾಧ್ಯತೆ ಹೆಚ್ಚು ಹಾಗಾಗಿ ಎಚ್ಚರವಹಿಸಿ ವ್ಯಾಯಾಮ ಮಾಡಿ.

  ವ್ಯಾಯಾಮ ಒಳ್ಳೆಯದು(Exercise is good)
  ನಾರ್ಮಲ್ ಡೆಲಿವರಿಯಾದವರು 6 ತಿಂಗಳ ಬಳಿಕ ಪುಶ್ ಅಪ್. ಪುಲ್ ಅಪ್ ಮುಂತಾದ ವ್ಯಾಯಾಮ ಮಾಡುವುದು ಒಳ್ಳೆಯದು. ಸಹಜ ಹೆರಿಗೆ ವೇಳೆಯೇ ತಾಯಿ ಸಾಕಷ್ಟು ಯಾತನೆ ಅನುಭವಿಸಿರುತ್ತಾಳೆ. ಹಾಗಾಗಿ ಸಿಸೇರಿಯನ್‌ ಯಾದ ಮಹಿಳೆಯಿಂದ ಸಹಜ ಹೆರಿಗೆಯಾದವರು ಬಹಳ ಸೂಕ್ಷ್ಮವಾಗಿರುಬೇಕು.

  ಸಿಸೇರಿಯನ್ ಆದರೆ ಹೊಟ್ಟೆ ಹೆಚ್ಚಾಗಿ ಬಬರಬಹುದು. ಇದನ್ನು ನಿಯಂತ್ರಿಸಲು ಬೆಲ್ಟ್ ಧರಿಸುವುದು ಅವಶ್ಯಕ. ಇಲ್ಲದಿದ್ದರೆ ಅಧಿಕ ಬೊಜ್ಜು ತುಂಬಿ ದೇಹದ ತನ್ನ ಸುಂದರ ಆಕಾರವನ್ನು ಕಳೆದುಕೊಳ್ಳುತ್ತದೆ. ಆದರೆ ಈ ಬೆಲ್ಟ್ ಧರಿಸಿದರೆ ಹೊಟ್ಟೆ ಕರಗುವುದರಿಂದ ತೆಳ್ಳಗೆ ಕಾಣಿಸಬಹುದು ಅಲ್ಲದೆ ಸಿಸೇರಿಯನ್ ಆದವರಿಗೆ ಸ್ವಲ್ಪ ದಿನಗಳವರೆಗೆ ಎದ್ದು ಕೂರಲು ತುಂಬಾ ಕಷ್ಟವಾಗುತ್ತದೆ. ಈ ಬೆಲ್ಟ್ ಧರಿಸಿದರೆ ಎದ್ದು ಕೂರಲು ಸುಲಭವಾಗುವುದು. ಬೆಲ್ಟ್‌ ಇಲ್ಲದಿದ್ದರೇ ಕಾಟನ್‌ ಸೀರೆಯನ್ನು ಸೊಂಟಕ್ಕೆ ಭ್ರದವಾಗಿ ಕಟ್ಟಿಕೊಳ್ಳಿ. ಈ ಆಯ್ಕೆಗಳನ್ನು ಧರಿಸದೇ ಹಾಗೆ ಓಡಾಡುವುದರಿಂದ ದೇಹ ಸಂರ್ಪೂಣವಾಗಿ ಭಾಗಿ ಶಕ್ತಿ ಇಲ್ಲದಂತಾಗುವುದು.

  ಇದನ್ನು ಓದಿ:Breastfeeding: ಎದೆಹಾಲು ನೀಡಿದ್ರೆ ಮಗುವಿಗೆ ಕ್ಯಾನ್ಸರ್​ನಿಂದ ರಕ್ಷಣೆ ಸಿಗುತ್ತೆ, ಹಾಲೂಡಿಸುವ ಸರಿಯಾದ ವಿಧಾನ ಏನು? ವೈದ್ಯರು ತಿಳಿಸಿದ್ದಾರೆ...

  ಆರೋಗ್ಯ ಕಾಪಾಡಿಕೊಳ್ಳಿ(Maintain health)
  ಸಿಸೇರಿಯನ್ ಆದವರು 6 ತಿಂಗಳ ನಂತರ ನಿಧಾನಕ್ಕೆ ನಡೆಯುವ ವ್ಯಾಯಾಮ ಮಾಡಬಹುದು, ನಡೆಯುವಾಗ ಬೀಳದಂತೆ ಜಾಗೃತಿವಹಿಸಬೇಕು. ಕಷ್ಟದ ವ್ಯಾಯಾಮವನ್ನು ಒಂದು ವರ್ಷದ ಬಳಿಕ ಮಾಡಬಹುದು. ಹೆರಿಗೆ ಬಳಿಕ ಕಟ್ಟುನಿಟ್ಟಿನ ಡಯಟ್ ಬದಲು, ಉತ್ತಮ ಸಮತೋಲನ ಆಹಾರ ಮತ್ತು ಸೂಕ್ತ ವ್ಯಾಯಾಮ ಕ್ರಮಗಳನ್ನು ಅನುಸರಿಸುವುದು ಸೂಕ್ತ. ಇದರಿಂದ ದೇಹವು ಅಪೌಷ್ಠಿಕತೆಗೆ ಈಡಾಗುವುದಿಲ್ಲ. ಒಟ್ಟಿನಲ್ಲಿ ಹೆರಿಗೆ ಚೆನ್ನಾಗಿ ತಿಂದು ತಮ್ಮ ಆರೋಗ್ಯ ಕಾಪಾಡಿಕೊಂಡು ನಂತರ ತೂಕ ಇಳಿಸುವ ಕಡೆ ಗಮನಹರಿಸುವುದು ಉತ್ತಮ.
  Published by:vanithasanjevani vanithasanjevani
  First published: