Weight Loss: ನೀವು ಕಾಯಿಲೆಯಿಂದ ಬಳಲುತ್ತಿದ್ದು, ನಿಮ್ಮ ತೂಕ ಕಡಿಮೆ ಆಗುತ್ತಿಲ್ಲವೇ? ಇಲ್ಲಿವೆ ಕೆಲವು ಸಲಹೆಗಳು

Weight Loss Tips: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಈಗ ನಮ್ಮ ದೇಶದ 5 ಜನ ಮಹಿಳೆಯರಲ್ಲಿ ಒಬ್ಬರಲ್ಲಿ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತಿದೆ. ಈ ಅಸ್ವಸ್ಥತೆಯು ಮಹಿಳೆಯರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

Lose Weight (Photo: Google)

Lose Weight (Photo: Google)

  • Share this:
ಸಾಮಾನ್ಯವಾಗಿ ನಮ್ಮ ದೇಹದಲ್ಲಿರುವ ಅತಿಯಾದ ತೂಕ ಕಡಿಮೆ ಮಾಡಿಕೊಳ್ಳಲು ನಾವು ತುಂಬಾ ಕಸರತ್ತುಗಳನ್ನು ಮಾಡುತ್ತೇವೆ. ನಾವು ಪ್ರತಿದಿನ ಸೇವಿಸುವಂತಹ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತೇವೆ ಮತ್ತು ನಾವು ಸೇವಿಸಿದ ಹೆಚ್ಚುವರಿ ಕ್ಯಾಲೋರಿಗಳನ್ನು ಸುಡಲು ಅನೇಕ ತರಹದ ವ್ಯಾಯಾಮ ಮಾಡುತ್ತೇವೆ. ಅದರಲ್ಲಿಯೂ ಇತ್ತೀಚೆಗೆ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಎಂಬ ಕಾಯಿಲೆ ನಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ತುಂಬಾನೇ ತೊಡಕು ಉಂಟು ಮಾಡುತ್ತದೆ. ಈ ಅಸ್ವಸ್ಥತೆಯನ್ನು ಹೇಗೆ ನಿಭಾಯಿಸಿಕೊಂಡು ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬ ಗೊಂದಲಕ್ಕೆ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಈಗ ನಮ್ಮ ದೇಶದ 5 ಜನ ಮಹಿಳೆಯರಲ್ಲಿ ಒಬ್ಬರಲ್ಲಿ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತಿದೆ. ಈ ಅಸ್ವಸ್ಥತೆಯು ಮಹಿಳೆಯರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಮತ್ತು ದೇಹದ ತೂಕ ಕಡಿಮೆ ಮಾಡಿಕೊಳ್ಳುವುದರಿಂದ ಮಾತ್ರ ನಾವು ಈ ಸಮಸ್ಯೆಯಿಂದ ಹೊರ ಬರಬಹುದು ಎಂದು ತಜ್ಞರು ಹೇಳುತ್ತಾರೆ.

ದೇಹದ ತೂಕ ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಿಸಿಕೊಳ್ಳುವುದು ಅತ್ಯಗತ್ಯ

ನೀವು ಪಿಸಿಒಎಸ್ ಹೊಂದಿದ್ದರೆ ನಿಮ್ಮ ದೇಹದ ತೂಕ ಕಳೆದುಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ ಮತ್ತು ನೀವು ಫಲಿತಾಂಶ ಪಡೆಯಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಹಾರ್ಮೋನ್ ಕಾರ್ಯನಿರ್ವಹಣೆ, ಚಯಾಪಚಯ ಕ್ರಿಯೆಯಲ್ಲಿ ತೊಂದರೆ, ಇನ್ಸುಲಿನ್ ಪ್ರತಿರೋಧ ಮತ್ತು ಅಡ್ರಿನಲ್ ಅಪಸಾಮಾನ್ಯ ಕ್ರಿಯೆ

ದೇಹದ ಬಿಎಂಐ ಮಟ್ಟವನ್ನು ಹೆಚ್ಚಿಸಬಹುದು.


ಪಿಸಿಒಎಸ್‌ನೊಂದಿಗೆ ತೂಕ ಕಡಿಮೆ ಮಾಡಿಕೊಳ್ಳುವುದು ಸಾಮಾನ್ಯ ಸಮಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ನೀವು ಪಿಸಿಒಎಸ್ ಹೊಂದಿದ್ದರೆ ಮತ್ತು ದೇಹದ ತೂಕ ಕಡಿಮೆ ಮಾಡಿಕೊಳ್ಳುವ ವಿಚಾರವಿದ್ದರೆ ನೀವು ಕೆಳಗೆ ನೀಡಿರುವಂತಹ ಸಲಹೆಗಳನ್ನು ಪಾಲಿಸಿರಿ.


Read Also- Weight Gain Tips: ಬಹುಬೇಗನೆ ತೂಕ ಹೆಚ್ಚಿಸಿಕೊಳ್ಳಬೇಕಾ? ಹಾಗಿದ್ದರೆ ಈ ಆರೋಗ್ಯಕರ ವಿಧಾನ ಅನುಸರಿಸಿ

ಹೆಚ್ಚು ಫೈಬರ್ ಇರುವ ಆಹಾರ ಸೇವಿಸಿ


ಪಿಸಿಒಎಸ್ ಹೊಂದಿರುವ ಮಹಿಳೆಯರು ಹೆಚ್ಚಿನ ಫೈಬರ್ ಅಂಶವಿರುವ ಆಹಾರಗಳನ್ನು ಸೇವಿಸಬೇಕು. ಏಕೆಂದರೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹಾರ್ಮೋನ್ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಹಣ್ಣುಗಳು, ತರಕಾರಿಗಳಿಂದ ಹಿಡಿದು ಸಿರಿ ಧಾನ್ಯಗಳವರೆಗೆ ಎಲ್ಲವನ್ನೂ ಸೇವಿಸಲು ಆರಂಭಿಸಿದರೆ ಒಳ್ಳೆಯದು.


ಪ್ರೋಟೀನ್ ಇರುವ ಆಹಾರ ಸೇವಿಸಿ


ಎಲ್ಲಾ ಪೋಷಕಾಂಶಗಳಲ್ಲಿ, ಪ್ರೋಟೀನ್ ಇರುವ ಆಹಾರವನ್ನು ನಾವೆಲ್ಲರೂ ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತೇವೆ. ಪ್ರೋಟೀನ್ ಇರುವ ಆಹಾರ ದೇಹದ ತೂಕ ಕಡಿಮೆ ಮಾಡುವಲ್ಲಿ ಮಹತ್ತರವಾದ ಅಂಶವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸುತ್ತದೆ.


ಒಂದೇ ಬಾರಿ ಜಾಸ್ತಿ ಊಟ ಮಾಡುವುದಕ್ಕಿಂತ ಸ್ವಲ್ಪ ಸ್ವಲ್ಪ ಆಹಾರ ಸೇವಿಸಿ


ತೂಕ ಕಡಿಮೆ ಮಾಡಿಕೊಳ್ಳಲು ಮತ್ತು ಪಿಸಿಒಎಸ್ ನಿಯಂತ್ರಿಸಲು ಮತ್ತೊಂದು ಆಹಾರ ಸಲಹೆಯೆಂದರೆ ಒಂದೇ ಬಾರಿಗೆ ಜಾಸ್ತಿ ಊಟ ಮಾಡುವುದಕ್ಕಿಂತ ಸ್ವಲ್ಪ ಸ್ವಲ್ಪ ಆಹಾರವನ್ನು ನಿಯಮಿತವಾಗಿ ಸೇವಿಸಿರಿ ಮತ್ತು ಹೀಗೆ ಮಾಡುವುದರಿಂದ ತುಂಬಾ ಆಹಾರ ತಿನ್ನುವುದನ್ನು ತಪ್ಪಿಸಿ ದೇಹಕ್ಕೆ ಬೇಕಾಗುವಷ್ಟು ಆಹಾರ ಸೇವಿಸಬಹುದು.


Read Also-Bisexual | 16 ವರ್ಷಗಳ ನಂತರ ಗಂಡ ಬಿಚ್ಚಿಟ್ಟ ಸತ್ಯಕ್ಕೆ ಶಾಕ್ ಆದ ಹೆಂಡತಿ; ಮುಂದೇನು ಮಾಡಿದಳು?

ಹೆಚ್ಚು ವ್ಯಾಯಾಮ ಮಾಡಿ


ದೈಹಿಕವಾಗಿ ಸಕ್ರಿಯವಾಗಿರಲು ಮತ್ತು ಪ್ರತಿದಿನ ವ್ಯಾಯಾಮ ಮಾಡುವುದು ತುಂಬಾ ಮುಖ್ಯವಾಗುತ್ತದೆ. ಪಿಸಿಒಎಸ್ ಪ್ರಚೋದಕಗಳನ್ನು ನಿವಾರಿಸುವಲ್ಲಿ ಮತ್ತು ತೂಕ ಕಡಿಮೆ ಮಾಡಿಕೊಳ್ಳಲು ಕಠಿಣವಾದ ತಾಲೀಮು ತುಂಬಾನೇ ಸಹಾಯಕವಾಗುತ್ತದೆ.

First published: