Weight Loss: ಕೇವಲ ಐದು ತಿಂಗಳಲ್ಲಿ 15 ಕೆಜಿ ತೂಕ ಕಳೆದುಕೊಳ್ಳುವುದು ಹೇಗೆ? ಇಲ್ಲಿದೆ ವೇಟ್ ಲಾಸ್ ಸ್ಟೋರಿ

ಇಪ್ಪತ್ತೇಳು ವರ್ಷದ ಗ್ವಾಲಿಯರ್ ನಿವಾಸಿ ಆಕಾಶ್ ಬನ್ಸಾಲ್ ಎಂಬಾತ ತನ್ನ ಬೊಜ್ಜಿನಿಂದಾಗಿ ಹಲವು ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದ. ಬೊಜ್ಜಿನ ಸಮಸ್ಯೆಯಿಂದ ತಾನು ಇಷ್ಟೊಂದು ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ ಎಂಬುದು ಆತ ಊಹಿಸಿರಲಿಲ್ಲ. ಕೊನೆಗೆ ಆತನ ತೂಕ ಇಳಿದಿದ್ದು ಹೇಗೆ ಅಂತ ನೀವೇ ಓದಿ..

108 ಕೆಜಿ ತೂಕ ಹೊಂದಿದ್ದ ಆಕಾಶ್ ಬನ್ಸಾಲ್

108 ಕೆಜಿ ತೂಕ ಹೊಂದಿದ್ದ ಆಕಾಶ್ ಬನ್ಸಾಲ್

 • Share this:
  ತೂಕ ಹೆಚ್ಚಾಗುವುದು (Weight Gain) ಅಥವಾ ಹೆಚ್ಚಾದ ತೂಕ, ಬೊಜ್ಜು (Obesity) ಇದು ಅನೇಕ ಆರೋಗ್ಯ ಸಮಸ್ಯೆ (Health Issue) ಮತ್ತು ಗಂಭೀರ ಕಾಯಿಲೆಗೆ (Serious Disease) ಕಾರಣವಾಗುತ್ತದೆ. ಅನೇಕ ಬಾರಿ ದೀರ್ಘಕಾಲದ ಕಾಯಿಲೆಗಳು ಬೊಜ್ಜಿನ ಸಮಸ್ಯೆಯಿಂದ ನಮ್ಮನ್ನು ಸುತ್ತುವರೆಯುತ್ತವೆ. ಅದು ಹೆಚ್ಚು ತೂಕ ಅಥವಾ ಬೊಜ್ಜು ಹೊಂದಿರುವವರಿಗೆ ತಿಳಿಯುವುದೇ ಇಲ್ಲ. ಇಪ್ಪತ್ತೇಳು ವರ್ಷದ ಗ್ವಾಲಿಯರ್ ನಿವಾಸಿ ಆಕಾಶ್ ಬನ್ಸಾಲ್  ಎಂಬಾತ ಕೂಡ ತನ್ನ ಬೊಜ್ಜಿನ ಸಮಸ್ಯೆಯಿಂದ ಹಲವು ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದ. ಬೊಜ್ಜಿನ ಸಮಸ್ಯೆಯಿಂದ ತಾನು ಇಷ್ಟೊಂದು ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ ಎಂಬುದು ಆತ ಊಹಿಸಿರಲಿಲ್ಲ. ಆಕಾಶ್ ಬನ್ಸಾಲ್  ಗೆ ಫೆಬ್ರವರಿಯಲ್ಲಿ ತಲೆಯಲ್ಲಿ ಅಸಹನೀಯ ನೋವು ಕಾಣಿಸಿಕೊಂಡಿತ್ತು.

  108 ಕೆಜಿ ತೂಕ ಹೊಂದಿದ್ದ ಆಕಾಶ್ ಬನ್ಸಾಲ್  

  ಆಗ ಆತನ ತೂಕ 108 ಕೆಜಿ ಇತ್ತು. ಅತಿಯಾದ ತಲೆನೋವು ಉಂಟಾದಾಗ ವೈದ್ಯರಿಗೆ ತೋರಿಸಿದಾಗ, ಅವರು ತೂಕ ಇಳಿಸಿಕೊಳ್ಳಲು ಸಲಹೆ ನೀಡಿದ್ದರು. ಜೊತೆಗೆ ದಿಂಬು ಬಳಸದಂತೆ ಹೇಳಿದ್ದರು. ವೈದ್ಯರ ಸಲಹೆ ಮೇರೆಗೆ ಆಕಾಶ್ ಬನ್ಸಾಲ್  ತೂಕ ಇಳಿಸಿಕೊಳ್ಳಲು ನಿರ್ಧರಿಸಿದರು. ಆರಂಭದಲ್ಲಿ 1 ಕಿ.ಮೀ ನಡೆದು ನಂತರ 4 ಕಿ.ಮೀ. ಈಗ ನಾನು 6 ಕಿಮೀ ಓಟದೊಂದಿಗೆ ದಿನಕ್ಕೆ 11 ಕಿಮೀ ವರೆಗೆ ವರ್ಕ್ ಔಟ್ ಮಾಡುತ್ತೇನೆ ಎನ್ನುತ್ತಾರೆ.

  ದಿನಕ್ಕೆ 18 ಸಾವಿರ ಹೆಜ್ಜೆ ನಡೆಯುತ್ತೇನೆ. ದಿನಚರಿಯಲ್ಲಿ ಹೀಗೆ ಆ್ಯಕ್ಟಿವ್ ಆಗಿದ್ದ ಆಕಾಶ್ ಕೇವಲ 5 ತಿಂಗಳಲ್ಲೇ 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅವರ ಪ್ರಕಾರ, ಈಗ ಅವರು ಮೊದಲಿಗಿಂತ ಆರೋಗ್ಯವಾಗಿದ್ದಾರೆ. ಮತ್ತು ಆತ್ಮವಿಶ್ವಾಸ ಹೆಚ್ಚಾಗಿದೆ.

  ಇದನ್ನೂ ಓದಿ: ರಕ್ತ ಪರೀಕ್ಷೆಯನ್ನು ಯಾವ ವಯಸ್ಸಿನವರು ಮಾಡಿಸಬೇಕು ಮತ್ತು ಯಾಕೆ? ತಜ್ಞರ ಅಭಿಪ್ರಾಯವೇನು?

  ಇಷ್ಟು ಕಡಿಮೆ ಸಮಯದಲ್ಲಿ 15 ಕೆಜಿ ತೂಕ ಇಳಿಸುವ ಪ್ರಯಾಣದಲ್ಲಿ ಆಕಾಶ್ ಬನ್ಸಾಲ್  ಮಾಡಿದ ಬದಲಾವಣೆಗಳು ಮತ್ತು ಯಾವ ರೀತಿಯ ಸವಾಲು ಎದುರಿಸಿದರು ಎಂಬುದನ್ನು ತಿಳಿಯೋಣ.

  ಹೆಸರು- ಆಕಾಶ್ ಬನ್ಸಾಲ್

  ವಯಸ್ಸು - 27 ವರ್ಷ

  ನಗರ - ಗ್ವಾಲಿಯರ್

  ಅತಿ ಹೆಚ್ಚು ದಾಖಲಾದ ತೂಕ - 108 ಕೆಜಿ

  ಕಡಿಮೆ ತೂಕ - 15 ಕೆಜಿ

  ತೂಕ ನಷ್ಟ ಸಮಯ - 5 ತಿಂಗಳು

  ಅಧಿಕ ತೂಕದಿಂದಾಗಿ ಯಾವ ಸಮಸ್ಯೆ ಎದುರಿಸಿದ್ದರು?  

  ಆಕಾಶ್ ಹೇಳುವ ಪ್ರಕಾರ, ಅತಿಯಾದ ತೂಕದಿಂದಾಗಿ ನಡೆಯಲು ತೊಂದರೆಯಾಗುತ್ತಿತ್ತು. ಜನರು ನನ್ನನ್ನು ಗೇಲಿ ಮಾಡುತ್ತಿದ್ದರು. ಬಟ್ಟೆ ನನಗೆ ಆಗುತ್ತಿರಲಿಲ್ಲ. ಸೈಜ್ ಸಿಗುತ್ತಿರಲಿಲ್ಲ. ಎಲ್ಲಿಯೂ ಹೋಗಬೇಕೆಂದು ಅನ್ನಿಸುತ್ತಿರಲಿಲ್ಲ.

  ಆಹಾರ ಪದ್ಧತಿ ಹೇಗಿತ್ತು?

  ಉಪಹಾರ: ಗಂಜಿ / ಖಿಚಡಿ / ಪೋಹಾ / ಉಪ್ಮಾ

  ಊಟ: ಬಾಟಲ್ ಸೋರೆಕಾಯಿ ಮತ್ತು ಬೇಳೆ ಕಾಳುಗಳು ಮತ್ತು ಹಸಿರು ತರಕಾರಿಗಳೊಂದಿಗೆ 3 ರೊಟ್ಟಿಗಳು ಮತ್ತು ಸಲಾಡ್

  ಊಟ: ಚಿಲಾ/ಪೋಹಾ/ಗಂಜಿ/ಖಿಚಡಿ

  ತಾಲೀಮು ಪೂರ್ವ ಊಟ : ಜೇನುತುಪ್ಪದೊಂದಿಗೆ ಕಪ್ಪು ಕಾಫಿ ಅಥವಾ ನಿಂಬೆ ಪಾನಕ

  ವ್ಯಾಯಾಮದ ನಂತರದ ಊಟ

  ಮಜ್ಜಿಗೆ, ಬಾದಾಮಿ ಮೊಳಕೆ ಮತ್ತು ಸೋರೆಕಾಯಿ ಸೂಪ್

  ಪ್ರೇರೇಪಣೆ ಸಿಕ್ಕಿದ್ದು ಹೇಗೆ?

  ಆರೋಗ್ಯ ಸಮಸ್ಯೆಗಳು ಶುರುವಾದಾದಲೇ ತೂಕ ಇಳಿಸಿಕೊಳ್ಳಲು ನಿರ್ಧರಿಸಿದೆ. ಇದಕ್ಕಾಗಿ ಮೊದಲು ನಾನು ತೂಕವನ್ನು ಕಳೆದುಕೊಳ್ಳುವ ಪ್ರಕ್ರಿಯೆ ಅರ್ಥ ಮಾಡಿಕೊಂಡೆ. ಈ ಸಮಯದಲ್ಲಿ ಉತ್ತಮ ಜೀವನಕ್ರಮ ಮತ್ತು ಆರೋಗ್ಯಕರ ಆಹಾರ ನನ್ನನ್ನು ಎಲ್ಲಾ ಸಮಯದಲ್ಲೂ ಪ್ರೇರೇಪಿಸುತ್ತಿತ್ತು ಎಂದಿದ್ದಾರೆ.

  ಜೀವನಶೈಲಿಯಲ್ಲಿ ಯಾವ ಬದಲಾವಣೆ ಮಾಡಿದ್ದರು ?

  ತೂಕ ಇಳಿಸಲು ಜೀವನಶೈಲಿಯಲ್ಲಿ ಸಾಕಷ್ಟುಬದಲಾವಣೆಗಳನ್ನು ಮಾಡಿದೆ. ಆಹಾರವನ್ನು ನಿಯಂತ್ರಿಸಿದೆ. ಈಗ ನಾನು ಏನು ತಿನ್ನುತ್ತೇನೆ ಎಂಬ ಬಗ್ಗೆ ಹೆದರುವುದಿಲ್ಲ. ಈಗ ಆರೋಗ್ಯಕರ ಆಹಾರ ಸೇವನೆಯಿಂದ ನಾನು ಮೊದಲಿಗಿಂತ ಹೆಚ್ಚು ಚೈತನ್ಯವಾಗಿದ್ದೇನೆ.

  ಇದನ್ನೂ ಓದಿ: ಹಾಲಿನ ಜೊತೆ ಚಿಕನ್ ಯಾಕೆ ತಿನ್ನಬಾರದು? ಈ ಬಗ್ಗೆ ಆಯುರ್ವೇದ ಹೇಳೋದೇನು?

  ತೂಕ ನಷ್ಟದಿಂದ ಏನು ಕಲಿತಿದ್ದೀರಿ?

  ಯಾವ ಕೆಲಸವೂ ಕಷ್ಟವಲ್ಲ. ಬೇಕಾಗಿರುವುದು ಒಳ್ಳೆಯ ಮತ್ತು ಪ್ರಾಮಾಣಿಕ ಪ್ರಯತ್ನ. ಜನರ ಮಾತಿಗೆ, ಗೇಲಿ ಮಾಡುವುದಕ್ಕೆ ತಲೆಕೆಡಿಸಿಕೊಳ್ಳದೇ ನಿಮ್ಮ ಪ್ರಯತ್ನ ಮಾಡಿ ಎನ್ನುತ್ತಾರೆ ಆಕಾಶ್.
  Published by:renukadariyannavar
  First published: