Weight Loss Tips: ಈ ಸೊಪ್ಪುಗಳನ್ನು ತಿಂದ್ರೆ ತೂಕ ಬೇಗ ಇಳಿಯುತ್ತೆ

Greens For Weight Loss: ಈ ಅದ್ಭುತ ಎಲೆಗಳು ಬೇಯಿಸಿದ ನಂತರ ಸಹ ತಮ್ಮ ಪೌಷ್ಟಿಕಾಂಶದ ಮೌಲ್ಯಗಳನ್ನು ಉಳಿಸಿಕೊಳ್ಳುತ್ತವೆ ಮತ್ತು ಅದನ್ನು ದೇಹಕ್ಕೆ ರವಾನಿಸುತ್ತವೆ. ಇದು ಒದಗಿಸುವ ಟನ್ಗಳಷ್ಟು ಆರೋಗ್ಯ ಪ್ರಯೋಜನಗಳ ಹೊರತಾಗಿ, ಪಾಲಕವು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಳಿಗಾಲ (Winter) ಆರಂಭವಾಗಿದೆ, ಚಳಿ ಹೆಚ್ಚಿರುವ ಕಾರಣ ಜನರು ವಾಕಿಂಗ್ , ವ್ಯಾಯಾಮ (Walking) ಮಾಡುವುದನ್ನ ಕಡಿಮೆ ಮಾಡಿದ್ದಾರೆ. ಚಳಿಗಾಲದಲ್ಲಿ ದೈಹಿಕ ಚಟುವಟಿಕೆಗಳನ್ನು ಹೆಚ್ಚು ನಿರ್ಲಕ್ಷಿಸಿದರೂ, ಸರಿಯಾದ ಪ್ರಮಾಣದ ಆಹಾರವನ್ನು (Food) ತಿನ್ನುವ ಮೂಲಕ ಇದನ್ನು ಸರಿದೂಗಿಸಬಹುದು ಮತ್ತು ತೂಕ ಇಳಿಸುವ ಅಭ್ಯಾಸವನ್ನು ಮುಂದುವರಿಸಬಹುದು. ಅದರಲ್ಲೂ ಕೆಲವು ಸೊಪ್ಪು ಮತ್ತು ತರಕಾರಿಗಳು (Vegetables) ಚಳಿಗಾಲದಲ್ಲಿ ತೂಕ ಇಳಿಸಲು ಸಹಾಯ ಮಾಡುತ್ತದೆ. ಯಾವುವು ಆ ತರಕಾರಿ ಮತ್ತು ಸೊಪ್ಪುಗಳು ಎಂಬುದು ಇಲ್ಲಿದೆ.

 ಮೆಂತೆ ಸೊಪ್ಪು

ಈ ಕಹಿ ರುಚಿಯ ಹಸಿರು ಎಲೆಗಳನ್ನು ಯಾರೂ ಇಷ್ಟಪಡುವುದಿಲ್ಲ. ಆದರೆ ಆಲೂಗೆಡ್ಡೆಯಾಗಿರಲಿ ಅಥವಾ ಕ್ಯಾರೆಟ್‌ ಜೊತೆ ಮೆಂತೆ ಸೊಪ್ಪನ್ನ ಸೇರಿಸಿ ತಿನ್ನುವ ರುಚಿಯೇ ಬೇರೆ. ಕೆಲವರಿಗೆ ಈ ಸೊಪ್ಪನ್ನ ತರಕಾರಿಗಳ ಜೊತೆ ತಿನ್ನುವುದು ಇಷ್ಟವಾಗುತ್ತದೆ. ಮೆಂತೆಸೊಪ್ಪು  ಅಸಂಖ್ಯಾತ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಬಲವಾದ ಆ್ಯಂಟಿ ಶಕ್ಸಿಡೆಂಟ್​ಗಳನ್ನು ಸಹ ಹೊಂದಿದೆ.

ಮೆಂತ್ಯದ ತಾಜಾ ಎಲೆಗಳು ಆಸ್ಕೋರ್ಬಿಕ್ ಆಮ್ಲ ಮತ್ತು β- ಕ್ಯಾರೋಟಿನ್ ಅನ್ನು ಹೊಂದಿರುತ್ತವೆ. ಸ್ವಲ್ಪ ಪ್ರಮಾಣದಲ್ಲಿ ಮೆಂತೆ ಸೊಪ್ಪನ್ನ ತಿನ್ನುವುದು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ, ತೂಕ ಇಳಿಸುವ ಪ್ರಯತ್ನಕ್ಕೆ ಸಹಾಯ ಮಾಡುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಲ್ಲದೇ, ಹೃದಯ ಮತ್ತು ರಕ್ತದೊತ್ತಡ ಸಂಬಂಧಿತ ಸಮಸ್ಯೆಗಳನ್ನು ಹೊಂದಿರುವವರಿಗೆ ಇದು ಸಹಕಾರಿಯಾಗಿದೆ.

 ಮೂಲಂಗಿ ಸೊಪ್ಪು

ಇದರ ಬಳಕೆ ಸೀಮಿತವಾಗಿದ್ದರೂ, ಮೂಲಂಗಿಗೆ ಹೋಲಿಸಿದರೆ, ಈ ಎಲೆಗಳು ಬಿಳಿ ಬೇರು ತರಕಾರಿಗಿಂತ ಹೆಚ್ಚು ಪೌಷ್ಟಿಕ ಮತ್ತು ರುಚಿಕರವಾಗಿರುತ್ತದೆ. ಮೂಲಂಗಿ ಎಲೆಗಳು ದೊಡ್ಡ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತವೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ.

ಇದನ್ನೂ ಓದಿ: ಇವುಗಳನ್ನು ತಿಂದ್ರೆ ಪುರುಷರ ಲೈಂಗಿಕ ಆಸಕ್ತಿ ಹೆಚ್ಚಾಗುತ್ತಂತೆ

100 ಗ್ರಾಂ ಮೂಲಂಗಿ ಎಲೆಗಳು ಕೇವಲ 16 ಕ್ಯಾಲೋರಿಗಳನ್ನು ಹೊಂದಿರುತ್ತವೆ. ಉತ್ತಮ ಪ್ರಮಾಣದ ಫೈಬರ್ ಮತ್ತು ಕಡಿಮೆ ಕ್ಯಾಲೋರಿಗಳೊಂದಿಗೆ, ಮೂಲಂಗಿ ಎಲೆಗಳು ಚಯಾಪಚಯ  ಹೆಚ್ಚಿಸಲು ಸಹಾಯ ಮಾಡುತ್ತದೆ. ಸಾಸಿವೆ ಎಲೆಗಳಂತೆ, ಇದು ವಿಚಿತ್ರವಾದ ಕಟುವಾದ ವಾಸನೆಯನ್ನು ಹೊಂದಿದ್ದರೂ, ಇದರಿಂದ ಹಲವಾರು ವಿಧದ ಅಡುಗೆಗಳನ್ನು ತಯಾರಿಸಬಹುದು.

ಹರಿವೆ ಸೊಪ್ಪು 

ನಮ್ಮ ಭಾರತದಲ್ಲಿ ಯಾವುದೇ ಸೊಪ್ಪು ಸಿಕ್ಕರೂ ಅದನ್ನ ಬೇಯಿಸಿ ತಿನ್ನುತ್ತೇವೆ. ಈ ಹರಿವೆ ಸೊಪ್ಪು ಹೆಚ್ಚು ಪ್ರಸಿದ್ದ ಎಂದರೆ ತಪ್ಪಲ್ಲ. ಇದಕ್ಕೆ ಸಾಸಿವೆ ಕಾಳು, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಪಲ್ಯ ಮಾಡಿದರೆ ರುಚಿಯೇ ರುಚಿ. ಇವುಗಳು ಕಡಿಮೆ ಕ್ಯಾಲೋರಿ ಎಲೆಗಳಾಗಿದ್ದು, ವಿಟಮಿನ್ ಸಿ ಮತ್ತು ಫೈಬರ್ನಲ್ಲಿ ಸಮೃದ್ಧವಾಗಿದೆ. ಅಲ್ಲದೇ ಇದು  ತೂಕ ಇಳಿಸಲು ಸಹ ಸಹಾಯ ಮಾಡುತ್ತದೆ. 100 ಗ್ರಾಂ ಸಾಸಿವೆ ಹಸಿರು ಎಲೆಗಳು 27 ಕ್ಯಾಲೋರಿಗಳನ್ನು ಹೊಂದಿರುತ್ತವೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪನ್ನು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ. ಮನೆಯಲ್ಲಿಯೇ ಪಾಲಕ್​ ಸೊಪ್ಪು ಬಳಸಿ ದಾಲ್, ಪಾಲಕ್ ಪನೀರ್ ಹಿಗೆ ವಿವಿಧ ರೀತಿಯ ಆಹಾರಗಳನ್ನು ತಯಾರಿಸಬಹುದು. ಇದು ನಿಮ್ಮ ಹಸಿವನ್ನು ನೀಗಿಸುವುದು ಮಾತ್ರವಲ್ಲ, ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ಭಾರತೀಯರಿಗೆ ಪಾಲಕ್ ಎಂದರೆ ಅದೇನೋ ಪ್ರೀತಿ, ಅದರಿಂದ ಸೂಪ್ ಆಗಿರಲಿ ಅಥವಾ ಆಲೂಗಡ್ಡೆ ಅಥವಾ ಕಾಟೇಜ್ ಚೀಸ್ ಏನು ಸಿಗುತ್ತದೆಯೋ ಅದಕ್ಕೆ ಪಾಲಕ್ ಹಾಕಿ ತಿನ್ನುತ್ತಾರೆ.

ಇದನ್ನೂ ಓದಿ:ಅಕ್ಕಿ ನೀರನ್ನ ಹೀಗೆ ಯೂಸ್​ ಮಾಡಿದ್ರೆ ಕೂದಲು ಗಟ್ಟಿ ಮುಟ್ಟಾಗುತ್ತಂತೆ

ಈ ಅದ್ಭುತ ಎಲೆಗಳು ಬೇಯಿಸಿದ ನಂತರ ಸಹ ತಮ್ಮ ಪೌಷ್ಟಿಕಾಂಶದ ಮೌಲ್ಯಗಳನ್ನು ಉಳಿಸಿಕೊಳ್ಳುತ್ತವೆ ಮತ್ತು ಅದನ್ನು ದೇಹಕ್ಕೆ ರವಾನಿಸುತ್ತವೆ. ಇದು ಒದಗಿಸುವ ಟನ್ಗಳಷ್ಟು ಆರೋಗ್ಯ ಪ್ರಯೋಜನಗಳ ಹೊರತಾಗಿ, ಪಾಲಕವು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಈ ಎಲೆಗಳ 100 ಗ್ರಾಂ 23 ಕ್ಯಾಲೋರಿಗಳನ್ನು ಮತ್ತು 99 ಮಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಆದ್ದರಿಂದ ಇದನ್ನು ಮಹಿಳೆಯರು ಮತ್ತು ಹಿರಿಯರಿಗೆ ಹೆಚ್ಚು ಉತ್ತಮ ಎನ್ನಬಹುದು.
Published by:Sandhya M
First published: