ನೀವೂ ತೆಳ್ಳಗೆ ಕಾಣಬೇಕಾ?; ಸೊಂಟದ ಕೊಬ್ಬು ಕರಗಿಸೋದು ಬಹಳ ಸುಲಭ!

ತೆಳ್ಳಗೆ ಕಾಣಬೇಕು, ದೇಹದಲ್ಲಿ ಕೊಬ್ಬಿನ ಅಂಶ ಇರಬಾರದು, ಆರೋಗ್ಯಕರವಾಗಿರಬೇಕು ಎಂಬುದು ಎಲ್ಲ ಮಹಿಳೆಯರ ಆಸೆ. ಪುರುಷರು ಕೂಡ ಫಿಟ್​ ಆಗಿರುವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಾರಾದರೂ ಮಹಿಳೆಯರಷ್ಟು ಸೌಂದರ್ಯದ ಕಡೆಗೆ ಗಮನ ನೀಡುವುದಿಲ್ಲ. ಹಾಗಾಗಿಯೇ ಪುರುಷರಿಗಿಂತ ಮಹಿಳೆಯರು ಡಯಟ್​ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ.

sushma chakre | news18
Updated:March 1, 2019, 4:40 PM IST
ನೀವೂ ತೆಳ್ಳಗೆ ಕಾಣಬೇಕಾ?; ಸೊಂಟದ ಕೊಬ್ಬು ಕರಗಿಸೋದು ಬಹಳ ಸುಲಭ!
ಸಾಂದರ್ಭಿಕ ಚಿತ್ರ
  • News18
  • Last Updated: March 1, 2019, 4:40 PM IST
  • Share this:
'ಆ ಬ್ಲೂ ಸೀರೆ ಉಟ್ಟೋರನ್ನು ನೋಡಿದ್ಯಾ? ನಾನು ಈ ಆಫೀಸಿಗೆ ಸೇರಿದಾಗ ಅವರು ಪ್ರೆಗ್ನೆಂಟ್​ ಆಗಿದ್ರು. ಮಗುವಾದ ಮೇಲೆ ಸಿಕ್ಕಾಪಟ್ಟೆ ಊದಿಕೊಂಡಿದ್ರು. ಈಗ ನೋಡಿದ್ರೆ ಮಗು ಇರೋದೇ ಸುಳ್ಳೇನೋ ಅನ್ಸುತ್ತೆ...'

'ಏನ್ರೀ ಸಹನಾ... ದಿನದಿಂದ ದಿನಕ್ಕೆ ಚಿಕ್ಕ ಹುಡುಗಿ ಹಾಗೆ ಆಗ್ತಿದೀರಲ್ಲ... ನಿಮಗೆ ಮದುವೆ ಆಗಿ 10 ವರ್ಷ ಆಯ್ತು ಅಂದ್ರೆ ಯಾರೂ ನಂಬೋದಿಲ್ಲ. ನಾನೂ ಮದುವೆಗೂ ಮೊದಲು ನಿಮ್ಮ ಹಾಗೇ ಇದ್ದೆ. ಈಗ ನೋಡಿ ಹೇಗೆ ಬೊಜ್ಜು ತುಂಬಿಕೊಂಡಿದೆ. ಬೆಳಗ್ಗೆ, ಸಂಜೆಯೆಲ್ಲ ಮನೆಯಲ್ಲಿ ಕೆಲಸ ಮಾಡಿ, ಆಫೀಸಿಗೂ ಹೋಗಿ ದುಡೀತೀನಿ. ಆದ್ರೂ ಮೈ ಕರಗ್ತಾ ಇಲ್ಲ. ನೀವೇನು ಯೋಗ ಮಾಡ್ತೀರಾ? ಜಿಮ್​ಗೆ ಹೋಗ್ತೀರಾ? ನಮಗೂ ಸ್ವಲ್ಪ ಟಿಪ್ಸ್​ ಕೊಡಿ. ನಂಗೆ ಈ ಹೊಟ್ಟೆಯ ಬೊಜ್ಜೊಂದು ಇಳಿದುಬಿಟ್ಟರೆ ಸಾಕು ಕಣ್ರೀ..'

ಇಂತಹ ಮಾತುಗಳೆಲ್ಲ ಹೆಂಗಸರ ಮಧ್ಯೆ ಕಾಮನ್​ ಆಗಿಬಿಟ್ಟಿದೆ. ಮೊದಲೆಲ್ಲ ಹೆಂಗಸರು ಸಿಕ್ಕರೆ ಅಡುಗೆಯೇನೂ ಮಾಡಿದ್ರಿ? ಮಕ್ಕಳೇನು ಓದ್ತಿದ್ದಾರೆ? ನೀವೇ ಧಾರಾವಾಹಿ ನೋಡ್ತೀರ? ಆ ಧಾರಾವಾಹಿಯಲ್ಲಿ ಹೀರೋಯಿನ್​ಗೆ ಎಷ್ಟೆಲ್ಲ ಕಷ್ಟ ಕೊಡ್ತಾರೆ ನೋಡಿ.. ನಾನಂತೂ ಅದನ್ನ ನೋಡೋದು ಮಿಸ್​ ಮಾಡೋದಿಲ್ಲ ಎಂಬಂತಹ ಮಾತುಗಳೇ ಕೇಳಿಬರುತ್ತಿತ್ತು. ಆದರೀಗ, ಫಿಟ್​ನೆಸ್​ ಬಗ್ಗೆ ಮಹಿಳೆಯರು ಹೆಚ್ಚೆಚ್ಚು ತಲೆಕೆಡಿಸಿಕೊಳ್ಳತೊಡಗಿದ್ದಾರೆ.

ನೀವು ಈರುಳ್ಳಿ- ಬೆಳ್ಳುಳ್ಳಿ ತಿನ್ನೋದಿಲ್ವ?; ಹಾಗಿದ್ದರೆ ಈ ಸುದ್ದಿ ಓದಿ...

ಟಿವಿ, ಯೂಟ್ಯೂಬ್​ಗಳನ್ನು ನೋಡಿ ಯೋಗ, ಜಿಮ್​ನತ್ತ ವಾಲುತ್ತಿರುವ ಮಹಿಳೆಯರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಲಾರಂಭಿಸಿದ್ದಾರೆ. ಇತ್ತೀಚಿನ ಜೀವನಶೈಲಿ, ಆಹಾರಕ್ರಮಗಳಿಂದಾಗಿ ಈ ಬಗೆಯ ಆರೋಗ್ಯ ಕಾಳಜಿ ಅಗತ್ಯವೂ ಹೌದು, ಅನಿವಾರ್ಯವೂ ಹೌದು. ತಿಂಗಳಿಗೆ ಸಾವಿರಾರು ರೂ. ಕೊಟ್ಟು ಜಿಮ್​ ಸೇರಿ ಬೆವರು ಹರಿಸುವ ಬದಲು ಆಹಾರ ಸೇವನೆಯಲ್ಲಿ ಸ್ವಲ್ಪ ಹೆಚ್ಚು ಜಾಗ್ರತೆ ವಹಿಸಿದರೂ ಸಾಕು, ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದು.

ಉಪ್ಪು ತಿಂದರೆ ನೀರು ಕುಡಿದರೆ ಸಾಕಾಗಲ್ಲ, ಮಾತ್ರೆಯನ್ನು ತಿನ್ನಬೇಕಾಗುತ್ತದೆ..ಎಚ್ಚರಿಕೆ

ಬಳುಕುವ ಬಳ್ಳಿಯಂತಾಗಲು ಸಾಧ್ಯವಾಗದಿದ್ದರೂ ಸೊಂಟದ ಸುತ್ತಲಿನ ಬೊಜ್ಜು ಕರಗಬೇಕು, ಆರಾಮಾಗಿ ಎದ್ದು, ಕೂತು, ಓಡಾಡಲು ಸಾಧ್ಯವಾಗಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ಅದರಲ್ಲೂ 40 ವರ್ಷವಾದ ನಂತರ ಮಹಿಳೆಯರ ಹಾರ್ಮೋನ್​ಗಳಲ್ಲಿಯೂ ವ್ಯತ್ಯಾಸ ಆಗುವುದರಿಂದ ಸೊಂಟದ ಸುತ್ತಲೂ ಬೊಜ್ಜು ಹೆಚ್ಚಾಗುತ್ತದೆ. ಸೊಂಟದ ಬೊಜ್ಜಿನಿಂದ ಡಯಾಬಿಟಿಸ್, ಕೆಲವು ರೀತಿಯ ಕ್ಯಾನ್ಸರ್​ನಂತಹ ಸಮಸ್ಯೆಗಳು ಶುರುವಾಗುತ್ತವೆ. ಹಾಗಿದ್ದರೆ ಸೊಂಟ ಅಥವಾ ಹೊಟ್ಟೆಯ ಬೊಜ್ಜನ್ನು ಕರಗಿಸುವುದು ಹೇಗೆ? ಯಾವ ರೀತಿಯ ಆಹಾರವನ್ನು ಸೇವಿಸುವುದರಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು? ಯಾವರೀತಿಯ ಜೀವನಕ್ರಮವನ್ನು ನಾವು ಅನುಸರಿಸಬೇಕು? ಇಲ್ಲವೆ ಕೆಲವು ಟಿಪ್ಸ್​...ಮೆಂತ್ಯೆಯನ್ನು ಬಳಸಿ:
ಮೆಂತ್ಯೆಯನ್ನು ಆಹಾರದಲ್ಲಿ ಹೆಚ್ಚೆಚ್ಚು ಬಳಸುವುದರಿಂದ ಸೊಂಟದ ಕೊಬ್ಬನ್ನು ಕರಗಿಸಬಹುದು. ಸ್ವಲ್ಪ ಮೆಂತ್ಯೆ ಕಾಳುಗಳನ್ನು ಹುರಿದು ಪುಡಿ ಮಾಡಿಟ್ಟುಕೊಳ್ಳಿ. ಅದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿಗೆ ಸೇರಿಸಿ ಕುಡಿಯಿರಿ. ಹಾಗೇ, ಮೆಂತ್ಯೆಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಕುಡಿಯುವುದರಿಂದಲೂ ಬೊಜ್ಜು ಕರಗುತ್ತದೆ.

ಸ್ವಿಗ್ಗಿ ಆ್ಯಪ್​ನಲ್ಲಿ ಊಟ ಆರ್ಡರ್​ ಮಾಡಿದ ಚೆನ್ನೈ ಗ್ರಾಹಕನಿಗೆ ಕಾದಿತ್ತು ಶಾಕ್​!

ಚಿಲ್ಲಿ ಪೆಪ್ಪರ್​, ಕ್ಯಾಪ್ಸಿಕಂ ಬಳಸಿ:
ನಿಮ್ಮ ಆಹಾರದಲ್ಲಿ ಚಿಲ್ಲಿ ಪೆಪ್ಪರ್​ ಬಳಸುವುದರಿಂದ ದೇಹದ ಕೊಬ್ಬಿನಂಶವನ್ನು ಕರಗಿಸಲು ಸಾಧ್ಯವಿದೆ. ಇದನ್ನು ವಿಜ್ಞಾನಿಗಳೇ ಒಪ್ಪಿಕೊಂಡಿದ್ದು, ಚಿಲ್ಲಿ ಪೆಪ್ಪರ್​ ಅನ್ನು ಆಹಾರದಲ್ಲಿ ಬಳಸುವುದರಿಂದ ಡಯಟಿಂಗ್​ ಮಾಡುವವರಿಗೆ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯಕವಾಗಲಿದೆ. ಕ್ಯಾಪ್ಸಿಕಂ (ಡೊಳ್ಳು ಮೆಣಸಿನಕಾಯಿ) ಕೂಡ ತೂಕವನ್ನು ಇಳಿಸಿಕೊಳ್ಳಲು ಉಪಯುಕ್ತ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ.

ಹೆಚ್ಚಿನ ಒತ್ತಡ ಒಳ್ಳೆಯದಲ್ಲ:
ದೈಹಿಕವಅಗಿ ಮತ್ತು ಮಾನಸಿಕವಾಗಿ ನೀವು ಒತ್ತಡಕ್ಕೆ ಒಳಗಾದಂತೆ ನಿಮ್ಮ ತೂಕವೂ ಹೆಚ್ಚತೊಡಗುತ್ತದೆ. ಒತ್ತಡ ಹೆಚ್ಚಾದಂತೆ ಸ್ಟ್ರೆಸ್​ ಹಾರ್ಮೋನ್ ಕಾಟ್ರಿಸಾಲ್​ ಉತ್ಪತ್ತಿಯಾಗಿ ಹಸಿವಿನ ಪ್ರಮಾಣವೂ ಹೆಚ್ಚುತ್ತದೆ. ಬಾಳೆಹಣ್ಣು, ಬಾದಾಮಿ, ಚೆರ್ರಿಯನ್ನು ಡಯಟ್​ನಲ್ಲಿ ಹೆಚ್ಚು ಬಳಸುವುದರಿಂದ ಒತ್ತಡವೂ ಕಡಿಮೆಯಾಗುತ್ತದೆ.

ಮಾದಕ ವ್ಯಸನಕ್ಕೆ ತುತ್ತಾಗುವವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು!

ನಿಧಾನವಾಗಿ ಆಹಾರ ಸೇವಿಸಿ:
ಮನೆಯಲ್ಲಿ ನೀವೇನಾದರೂ ಗಬಗಬನೆ ತಿನ್ನುತ್ತಿದ್ದರೆ ಅಜ್ಜನೋ ಅಜ್ಜಿಯೋ ಅಥವಾ ಅಮ್ಮನೋ ಬಯ್ಯುವುದನ್ನು ನೋಡಿರಬಹುದು. ಅದಕ್ಕೆ ಕಾರಣವೂ ಇದೆ. ಆಯುರ್ವೇದದ ಪ್ರಕಾರ ನಾವು ಆಹಾರವನ್ನು ಎಷ್ಟು ನಿಧಾನವಾಗಿ ಸೇವಿಸುತ್ತೇವೋ ಅಷ್ಟು ಸರಿಯಾಗಿ ಜೀರ್ಣಕ್ರಿಯೆಯೂ ಆಗುತ್ತದೆ. ನಿಧಾನವಾಗಿ ಆಹಾರವನ್ನು ಸೇವಿಸುವುದರಿಂದ ನಮಗೆ ಎಷ್ಟು ಆಹಾರ ಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ಮೆದುಳಿಗೆ ಸಹಾಯವಾಗುತ್ತದೆ. ನಾವು ತಿನ್ನುವ ಆಹಾರ ಸರಿಯಾಗಿ ಜೀರ್ಣವಾಗದಿರುವುದು ಕೂಡ ತೂಕ ಹೆಚ್ಚಾಗುವಿಕೆಗೆ ಒಂದು ಕಾರಣ. ಚಿಪ್ಸ್​ ಮುಂತಾದ ಎಣ್ಣೆತಿಂಡಿಗಳು, ಸಕ್ಕರೆ ಅಂಶ ಹೆಚ್ಚಾಗಿರುವ ಪದಾರ್ಥಗಳು, ಅತಿಯಾಗಿ ಸಿಹಿಯಾಗಿರುವ ಪಾನೀಯಗಳನ್ನು ಸೇವಿಸದಿರುವುದು ಉತ್ತಮ.

ಜ್ಯೂಸ್​ ಬದಲು ಹಣ್ಣುಗಳನ್ನೇ ತಿನ್ನಿ;
ಸಾಕಷ್ಟು ಜನ ಹಣ್ಣಿನ ಜ್ಯೂಸ್ ಅಥವಾ ಮಿಲ್ಕ್​ಶೇಕ್​​ ಮಾಡಿಕೊಂಡು ಕುಡಿಯುತ್ತಾರೆ. ಆದರೆ, ಅದಕ್ಕಿಂತಲೂ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಪೂರ್ತಿ ಹಣ್ಣನ್ನು ತಿನ್ನುವುದರಿಂದ ಅದರಲ್ಲಿನ ನಾರಿನಂಶ ನಮ್ಮ ದೇಹವನ್ನು ಸೇರುತ್ತದೆ. ಹಾಗಾಗಿ, ಸಕ್ಕರೆ ಹಾಕಿರುವ ಅಥವಾ ಹಾಲು ಸೇರಿಸಿರುವ ಜ್ಯೂಸ್​ ಕುಡಿಯುವುದಕ್ಕಿಂತ ತಾಜಾ ಹಣ್ಣುಗಳನ್ನೇ ಸೇವಿಸುವುದು ಒಳ್ಳೆಯದು.

ಈ ಐದು ಕಾರಣಗಳಿಂದ ತಲೆನೋವು ಬರುತ್ತೆ..!

ಒಂದೇ ಬಾರಿ ತಿನ್ನಬೇಡಿ:
ಹಸಿವಾಗಿದೆ ಎಂದು ಒಂದೇ ಸಲ ರಾಶಿಗಟ್ಟಲೆ ತಿನ್ನುವ ಬದಲು ಆಗಾಗ ಸ್ವಲ್ಪ ಸ್ವಲ್ಪ ತಿನ್ನುತ್ತಾ ಇರುವುದರಿಂದ ಜೀರ್ಣಕ್ರಿಯೆಗೆ ಸುಲಭವಾಗುತ್ತದೆ. ಇದರಿಂದ ಕೊಬ್ಬು ಶೇಖರವಾಗುವುದು ತಪ್ಪುತ್ತದೆ. ಹಾಗೇ, ಊಟದಲ್ಲಿ ತರಕಾರಿ, ಶೇಂಗಾ ಎಣ್ಣೆಯನ್ನು ಬಳಸಿ. ಮೊಟ್ಟೆಯನ್ನು ತಿನ್ನುವುದಾದರೆ ಹಳದಿ ಭಾಗದ ಬದಲಾಗಿ ಬಿಳಿಯ ಭಾಗವನ್ನು ಮಾತ್ರ ತಿನ್ನಿ. ಹೆಚ್ಚೆಚ್ಚು ಪ್ರೋಟೀನ್​ ಮತ್ತು ನಾರಿನಂಶ ಇರುವ ಆಹಾರ ಸೇವಿಸಿ.

ಹಾಲಿನ ಉತ್ಪನ್ನಗಳನ್ನು ಕಡಿಮೆ ಬಳಸಿ:
ಹಾಲು ಅಥವಾ ಹಾಲಿನ ಉತ್ಪನ್ನಗಳು ತೂಕವನ್ನು ಹೆಚ್ಚಿಸುತ್ತದೆ. ಹಾಗಾಗಿ, ಡಯಟ್​ ಮಾಡುವವರು ಇಂತಹ ಆಹಾರವನ್ನು ಸೇವಿಸದೇ ಇರುವುದು ಉತ್ತಮ. ಐಸ್​ಕ್ರೀಂ, ಮೊಸರು, ಪೇಡಗಳನ್ನು ಅವಾಯ್ಡ್​ ಮಾಡಿ.

First published:March 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ