• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Weight Loss: ಸ್ನಾಯುವಿನ ತೂಕ ಕಳೆದುಕೊಳ್ಳದೆ ದೇಹದ ಬೊಜ್ಜು ಕಳೆದುಕೊಳ್ಳುವುದು ಹೇಗೆ? ಇಲ್ಲಿದೆ ಆರೋಗ್ಯಕರ ಮಾರ್ಗಗಳ ಮಾಹಿತಿ

Weight Loss: ಸ್ನಾಯುವಿನ ತೂಕ ಕಳೆದುಕೊಳ್ಳದೆ ದೇಹದ ಬೊಜ್ಜು ಕಳೆದುಕೊಳ್ಳುವುದು ಹೇಗೆ? ಇಲ್ಲಿದೆ ಆರೋಗ್ಯಕರ ಮಾರ್ಗಗಳ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಹಕ್ಕೆ ಆರೋಗ್ಯಕರ ಕೊಬ್ಬು ಬೇಕೇಬೇಕು. ಕೆಟ್ಟ ಕೊಲೆಸ್ಟ್ರಾಲ್‌ ಅನಾರೋಗ್ಯ ಸೃಷ್ಟಿಸಿದರೆ, ಒಳ್ಳೆಯ ಕೊಬ್ಬು ಕೆಟ್ಟ ಕೊಬ್ಬನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

  • Trending Desk
  • 4-MIN READ
  • Last Updated :
  • Share this:

ಇತ್ತೀಚಿನ ದಿನಗಳಲ್ಲಿ ತೂಕ ಇಳಿಕೆಗೆ (Weight Loss) ಹಲವಾರು ಜನರು ಹಲವಾರು ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ತೂಕ ಇಳಿಕೆ ಎಂದರೆ ಕೆಲವರು ಸಂಪೂರ್ಣ ದೇಹದ ತೂಕ (Body Weight ) ಇಳಿಸಿಕೊಂಡರೆ, ಇನ್ನೂ ಕೆಲವರು ಸ್ನಾಯುವಿನ ತೂಕವನ್ನು (Muscle Weight) ಕಳೆದುಕೊಳ್ಳದೆ ಕೇವಲ ಬೊಜ್ಜು (Fatness) ಮತ್ತು ಕೊಬ್ಬನ್ನು ಕಳೆದುಕೊಳ್ಳುತ್ತಾರೆ. ಬೊಜ್ಜು ಅಥವಾ ಹೆಚ್ಚಿನ ಕೊಬ್ಬನ್ನು ಹೊಂದಿರುವ ಜನರಿಗೆ ತೂಕ ಇಳಿಕೆ ದೊಡ್ಡ ಚಿಕಿತ್ಸೆಯಾಗಿದ್ದು (Treatment), ಹಲವು ಅನಾರೋಗ್ಯ ಸಮಸ್ಯೆಗಳನ್ನು (Health Problem) ದೂರ ಮಾಡುತ್ತದೆ.


ಇದು ಮಧುಮೇಹ, ಹೃದ್ರೋಗಗಳು ಮತ್ತು ಕ್ಯಾನ್ಸರ್‌ನಂತಹ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡಿ ದೇಹದ ಒಟ್ಟಾರೆ ಕಾರ್ಯನಿರ್ವಹಣೆ, ಉತ್ತಮ ದೈಹಿಕ ಚಟುವಟಿಕೆ ಮತ್ತು ನಿಯಮಿತ ಫಿಟ್‌ನೆಸ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಅದರಲ್ಲೂ ಬೊಜ್ಜು ಹೊಂದಿರುವವರು ಸುರಕ್ಷಿತ ತೂಕ ಇಳಿಕೆಯ ಮಾರ್ಗವನ್ನು ಅನುಸರಿಸುವುದು ತುಂಬಾ ಮುಖ್ಯ.


ಸುರಕ್ಷಿತ ತೂಕ ಇಳಿಕೆ ಪ್ರಕ್ರಿಯೆ ಎಂದರೆ ಇಲ್ಲಿ ನಿರ್ದಿಷ್ಟವಾಗಿ ದೇಹದಿಂದ ಸ್ನಾಯುರಾಶಿ ಕಳೆದುಕೊಳ್ಳದೇ ಕೇವಲ ಕೊಬ್ಬಿನ ದ್ರವ್ಯರಾಶಿಯನ್ನು ಮಾತ್ರ ಕಳೆದುಕೊಳ್ಳುವುದು ಎಂದರ್ಥ. ಆಹಾರ ಮತ್ತು ಜೀವನಶೈಲಿ ಸಲಹೆಗಾರರಾದ ವಸುಂಧರಾ ಅಗರ್ವಾಲ್, ಸ್ನಾಯುವಿನ ತೂಕವನ್ನು ಕಳೆದುಕೊಳ್ಳದೆ ತೂಕವನ್ನು ಕಳೆದುಕೊಳ್ಳಲು 4 ಆರೋಗ್ಯಕರ ಮಾರ್ಗಗಳನ್ನು ನಮಗಿಲ್ಲಿ ತಿಳಿಸಿಕೊಟ್ಟಿದ್ದಾರೆ, ಯಾವುವು ಅಂತಾ ನೋಡಿ.


ಸಾಂದರ್ಭಿಕ ಚಿತ್ರ


ಸ್ನಾಯುವಿನ ತೂಕ ಕಳೆದುಕೊಳ್ಳದೆ ತೂಕವನ್ನು ಕಳೆದುಕೊಳ್ಳುವ ಆರೋಗ್ಯಕರ ಮಾರ್ಗಗಳು


1. ಪ್ರೋಟೀನ್ ಸೇವನೆಯನ್ನು ಹೆಚ್ಚಿಸಿ: ಹೆಚ್ಚಿನ ಪ್ರೋಟೀನ್‌ ಸೇವನೆ ದೇಹದ ಬೇಡದ ಕೊಬ್ಬನ್ನು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆಯೇ ಸ್ನಾಯುಗಳ ಬಲವನ್ನು ಹೆಚ್ಚಿಸುತ್ತದೆ. ಹೀಗಾಗಿ ಸ್ನಾಯು ತೂಕ ಕಳೆದುಕೊಳ್ಳದೇ ಕೇವಲ ಕೊಬ್ಬನ್ನು ಕರಗಿಸುವ ಪ್ರಕ್ರಿಯೆಯಲ್ಲಿ ಪ್ರೋಟೀನ್‌ ಭರಿತ ಆಹಾರವನ್ನು ಹೆಚ್ಚೆಚ್ಚು ಸೇವಿಸಬೇಕು.


ಪ್ರೋಟೀನ್ ಆಹಾರವು ಚಯಾಪಚಯವನ್ನು ಹೆಚ್ಚಿಸುತ್ತದೆ, ಹಸಿವನ್ನು ಕಡಿಮೆ ಮಾಡುತ್ತದೆ, ತೂಕ ನಷ್ಟವನ್ನು ಉತ್ತೇಜಿಸುತ್ತದೆ ಮತ್ತು ನೇರ ಸ್ನಾಯುವಿನ ದ್ರವ್ಯರಾಶಿಯನ್ನು ಉಳಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.


ಪ್ರೋಟೀನ್ ಅಮೈನೋ ಆಮ್ಲಗಳನ್ನು ಹೊಂದಿದ್ದು, ಇದು ಸ್ನಾಯು ಅಂಗಾಂಶಗಳಿಗೆ ಬಲ ನೀಡುತ್ತದೆ. ಒಟ್ಟಾರೆ ತೂಕ ಇಳಿಕೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರೋಟೀನ್ ಸೇವನೆ ಸ್ನಾಯುವಿನ ನಷ್ಟ ತಡೆದು ಕೆಟ್ಟ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
2. ಅತಿಯಾದ ಕ್ಯಾಲೋರಿ ನಿರ್ಬಂಧ ಬೇಡ: ತೂಕ ನಷ್ಟಕ್ಕೆ ಕ್ಯಾಲೋರಿ ಕಡಿಮೆ ಮಾಡಿಕೊಳ್ಳುವುದು ಅಗತ್ಯ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದಾಗ್ಯೂ ತಿನ್ನುವ ಪ್ರತಿ ಆಹಾರದಲ್ಲೂ ಅತಿಯಾದ ಕ್ಯಾಲೋರಿ ನಿರ್ಬಂಧವು ತೂಕ ನಷ್ಟಕ್ಕಿಂತ ಹೆಚ್ಚಾಗಿ ಸ್ನಾಯುವಿನ ನಷ್ಟಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ವಸುಂಧರಾ ಅಗರ್ವಾಲ್.


ಹೀಗಾಗಿ ಅತಿಯಾಗಿ ಕ್ಯಾಲೋರಿ ಕಡಿತ ಮಾಡುವುದನ್ನು ತಪ್ಪಿಸಿದರೆ ಸ್ನಾಯುಗಳ ನಷ್ಟವನ್ನೂ ಸಹ ತಪ್ಪಿಸಬಹುದು. ಹೀಗಾಗಿ ಸರಿಯಾದ ಮತ್ತು ಸಮತೋಲನ ಕ್ಯಾಲೋರಿ ಆಹಾರ ಸ್ನಾಯು ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ತೂಕ ನಷ್ಟಕ್ಕೆ ಸಹಕರಿಸುತ್ತದೆ.,


3. ಕೊಬ್ಬಿನ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಡಿ: ದೇಹಕ್ಕೆ ಆರೋಗ್ಯಕರ ಕೊಬ್ಬು ಬೇಕೇಬೇಕು. ಕೆಟ್ಟ ಕೊಲೆಸ್ಟ್ರಾಲ್‌ ಅನಾರೋಗ್ಯ ಸೃಷ್ಟಿಸಿದರೆ, ಒಳ್ಳೆಯ ಕೊಬ್ಬು ಕೆಟ್ಟ ಕೊಬ್ಬನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.


ಅಪರ್ಯಾಪ್ತ ಕೊಬ್ಬು ನಿಮ್ಮ ಸ್ನಾಯುಗಳನ್ನು ನಿರ್ಮಿಸುವ ಆಹಾರಕ್ಕೆ ಅತ್ಯುತ್ತಮವಾದ ಸೇರ್ಪಡೆಯಾಗಿದೆ. ಏಕೆಂದರೆ, ಇದು ನಿಮ್ಮ ಸ್ನಾಯುಗಳಿಗೆ ಶಕ್ತಿಯನ್ನು ಪೂರೈಸಲು ಸಹಾಯ ಮಾಡುತ್ತದೆ.


ಬಹು ಅಪರ್ಯಾಪ್ತ ಕೊಬ್ಬು ಮತ್ತು ಮೊನೊಸಾಚುರೇಟೆಡ್ ಕೊಬ್ಬು ಎರಡೂ ರೀತಿಯ ಅಪರ್ಯಾಪ್ತ ಕೊಬ್ಬುಗಳಾಗಿವೆ. ಹೀಗಾಗಿ ಇಲ್ಲಿ ಕೆಟ್ಟ ಕೊಬ್ಬುಗಳಾದ ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬಿನಂತಹ ಅನಾರೋಗ್ಯಕರ ಕೊಬ್ಬುಗಳನ್ನು ದೂರ ಮಾಡಿ ಅಪರ್ಯಾಪ್ತ ಕೊಬ್ಬಿನ ಸೇವನೆಯನ್ನು ಅಗತ್ಯವಾಗಿ ಮಾಡಬೇಕು. ಸರಿಯಾದ ಕೊಬ್ಬಿನ ಆಹಾರ ತೂಕ ನಷ್ಟವನ್ನು ಉತ್ತೇಜಿಸುತ್ತವೆ ಮತ್ತು ಸ್ನಾಯುವಿನ ದ್ರವ್ಯರಾಶಿಯನ್ನು ಉಳಿಸಿಕೊಳ್ಳುತ್ತವೆ.


ಸಾಂದರ್ಭಿಕ ಚಿತ್ರ


4. ಸಾಕಷ್ಟು ನೀರು ಕುಡಿಯಿರಿ: ತೂಕ ನಷ್ಟದಲ್ಲಿ ನೀರು ಅಗ್ರಗಣ್ಯ ಪಾತ್ರ ವಹಿಸುತ್ತದೆ. ನೀರು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಏಕೆಂದರೆ, ಅದು ನೈಸರ್ಗಿಕವಾಗಿ ನಿಮ್ಮ ಹಸಿವನ್ನು ನಿಗ್ರಹಿಸುತ್ತದೆ ಮತ್ತು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ.


ನೀರು ಕ್ಯಾಲೋರಿ ಮುಕ್ತವಾಗಿರುವುದರ ಜೊತೆ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ನೀರು ದೇಹದಲ್ಲಿನ ಸ್ನಾಯುಗಳ ಬಿಲ್ಡಿಂಗ್ ಬ್ಲಾಕ್ಸ್ ಆಗಿರುವ ಪ್ರೋಟೀನ್ ಮತ್ತು ಗ್ಲೈಕೋಜೆನ್ ರಚನೆಗಳ ಉತ್ಪಾದನೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಹೀಗಾಗಿ ತೂಕ ಇಳಿಕೆಯಲ್ಲಿ ಹೆಚ್ಚಿನ ನೀರು ಸೇವನೆ ಸ್ನಾಯು ಶಕ್ತಿಯನ್ನು ಕಳೆದಕೊಳ್ಳದೇ ಕೇವಲ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು