ಭಾರತೀಯರಾದ (Indians) ನಾವು ಎಷ್ಟು ಆಧುನಿಕರಾದರೂ ಸೀರೆಯ (Saree) ಬಗೆಗಿನ ಒಲವು ಮಾಸದು. ಸೀರೆಯ ಖದರೇ ಅಂತದ್ದು, ಆದ್ದರಿಂದ ಅತ್ಯಾಧುನಿಕ ಉಡುಗೆ ತೊಡುಗೆಗಳ ನಡುವೆಯೂ ಸೀರೆ ತನ್ನ ಸ್ಥಾನವನ್ನು ಉಳಿಸಿಕೊಂಡು ಬಂದಿದೆ. ಸೀರೆ ಉಟ್ಟಾಗ ಕ್ಲಾಸಿ (Classy) ಆಗಿಯೂ ಕಾಣಬಹುದು, ಸಾಂಪ್ರದಾಯಿಕವಾಗಿಯೂ (Traditional) ಕಾಣಿಸಿಕೊಳ್ಳಬಹುದು , ಇಲ್ಲ ಸರಳವಾಗಿಯೂ ಕಾಣಿಸಿಕೊಳ್ಳಬಹುದು. ಎಲ್ಲವೂ ನೀವು ಯಾವ ಸೀರೆಯನ್ನು , ಹೇಗೆ ಉಟ್ಟಿದ್ದೀರಿ ಎಂಬುದನ್ನು ಅವಲಂಬಿಸಿರುತ್ತದೆ. ಆರು ಗಜದ ಈ ಭಾರತೀಯ ಉಡುಗೆ ನಮ್ಮ ದೇಹಕ್ಕೆ ಹೇಗೆ ಬೇಕಾದರೂ ಹೊಂದಿಕೊಳ್ಳುತ್ತದೆ. ಮಾತ್ರವಲ್ಲ, ಅದನ್ನು ಯಾವ ಶೈಲಿಗೆ ಬೇಕಾದರೂ ಒಗ್ಗಿಸಬಹುದು. ಸೀರೆ ನಿಮ್ಮನ್ನು ಯಾವತ್ತೂ ನಿರಾಸೆಗೊಳಿಸುವುದಿಲ್ಲ.
ಸೀರೆಯಲ್ಲಿ ಇನ್ನಷ್ಟು ಸುಂದರವಾಗಿ ಕಾಣಬೇಕೆಂದರೆ ನೀವು ಹೈ ಹೀಲ್ಡ್ ಪಾದರಕ್ಷೆಗಳನ್ನು ಧರಿಸಬಹುದು, ನಿಮಗೆ ಅದು ಒಗ್ಗುವುದಿಲ್ಲ ಎಂದಾದಲ್ಲಿ ಧರಿಸದೆಯೂ ಇರಬಹುದು. ಆದರೆ ಇದರಲ್ಲೊಂದು ಸಮಸ್ಯೆ ಇದೆ. ಅದೇನೆಂದರೆ, ಹೈ ಹೀಲ್ಡ್ ಪಾದರಕ್ಷೆಗಳನ್ನು ಧರಿಸದೇ ಇದ್ದಾಗ ನೀವು ಕುಳ್ಳಗೆ ಕಾಣುತ್ತೀರಿ. ಹಾಗಾದಲ್ಲಿ ನಿಮ್ಮ ಸಂಪೂರ್ಣ ಲುಕ್ ಹಾಳಾಗುವ ಸಾಧ್ಯತೆ ಕೂಡ ಇರುತ್ತದೆ. ಹಾಗೆಂದು ಗಾಬರಿಯಾಗಬೇಕಿಲ್ಲ, ಎತ್ತರ ಹಿಮ್ಮಡಿಯ ಪಾದರಕ್ಷೆಗಳನ್ನು ಧರಿಸದೆಯೂ, ನೀವು ಸೀರೆ ಉಟ್ಟು ನೀಳಕಾಯರಾಗಿ ಹೇಗೆ ಕಂಗೊಳಿಸಬಹುದು ಎಂಬ ಕುರಿತು ಒಂದಿಷ್ಟು ಸಲಹೆಗಳನ್ನು ನಾವು ನೀಡುತ್ತೇವೆ.
ಅಗಲ ಬಾರ್ಡರ್ ಸೀರೆಗಳನ್ನು ಉಡಬೇಡಿ
ನೀವು ಕುಳ್ಳಗೆ ಕಾಣಬಾರದು ಮತ್ತು ತೆಳ್ಳಗೆ ಕಾಣಬೇಕು ಎಂಬ ಆಸೆ ಇದ್ದಲ್ಲಿ, ಯಾವತ್ತೂ ಭರ್ಜರಿ ಅಥವಾ ಅಗಲ ಬಾರ್ಡರ್ ಉಳ್ಳ ಸೀರೆಗಳನ್ನು ಉಡಬೇಡಿ. ಅಂತಹ ಸೀರೆಗಳು, ಅಸಲಿಗೆ ನೀವು ಇರುವುದಕ್ಕಿಂತಲೂ ನಿಮ್ಮನ್ನು ಹೆಚ್ಚು ಕುಳ್ಳಗೆ ಕಾಣುವಂತೆ ಮಾಡುತ್ತವೆ. ಏಕೆಂದರೆ ಅಗಲ ಬಾರ್ಡರ್ ಸೀರೆಯನ್ನು , ಅದರ ಗಾತ್ರಕ್ಕಿಂತ ಚಿಕ್ಕದಾಗಿ ಕಾಣುವಂತೆ ಮಾಡುತ್ತದೆ. ನೀವು ನೀಳಕಾಯದ ಚೆಲುವಯಾಗಿ ಮಿಂಚಬೇಕು ಎಂದಿದ್ದರೆ, ಚಿಕ್ಕ ಬಾರ್ಡರ್ ಉಳ್ಳ ಸೀರೆಗಳನ್ನು ಆರಿಸಿಕೊಳ್ಳಿ. ಅಂತಹ ಬಾರ್ಡರ್ಗಳು ಸೀರೆಯನ್ನು ಉದ್ದವಾಗಿ ಕಾಣುವಂತೆ ಮಾಡುತ್ತವೆ.
ಇದನ್ನೂ ಓದಿ: Alia Bhatt: ಬೇಸಿಗೆಯಲ್ಲಿ ಸೀರೆ-ಸರಳ ಮೇಕಪ್ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಹೃದಯ ಗೆದ್ದಆಲಿಯಾ
ಹಗುರವಾದ ಬಟ್ಟೆಯ ಸೀರೆ ಆಯ್ಕೆ ಮಾಡಿ
ಸೂಕ್ತ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳಿ ನೀಳಕಾಯದವರಾಗಿ ಕಾಣಬೇಕು ಎಂದು ನೀವು ಬಯಸಿದಾಗ, ನೀವು ಯಾವ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುವುದು ಕೂಡ ಮುಖ್ಯವಾಗುತ್ತದೆ. ಹಗುರವಾದ ಬಟ್ಟೆಯ ಸೀರೆಯನ್ನು ಆಯ್ಕೆ ಮಾಡಿಕೊಂಡರೆ, ಅದು ನಿಮ್ಮ ಅಸಲಿ ಎತ್ತರಕ್ಕಿಂತಲೂ, ಎತ್ತರವಾಗಿ ಕಾಣುವಂತೆ ಮಾಡುತ್ತದೆ. ಅದೇ ರೀತಿ, ಭಾರವಾದ ಮತ್ತು ದಪ್ಪನೆಯ ಬಟ್ಟೆಯ ಸೀರೆಗಳನ್ನು ಆಯ್ಕೆ ಮಾಡಿಕೊಂಡರೆ, ನೀವು ಕುಳ್ಳಗೆ ಕಾಣಿಸಿಕೊಳ್ಳುವುದು ಖಚಿತ. ಹತ್ತಿ ಸೀರೆಗಳು ಮೃದುವಾಗಿರುತ್ತವೆ, ಆದರೆ ಅವು ಭಾರವಾಗಿರುತ್ತವೆ. ಹಾಗಾಗಿ, ನೀಳಕಾಯದ ಲುಕ್ ಬೇಕೆಂದರೆ, ಅದು ಉತ್ತಮ ಆಯ್ಕೆ ಅಲ್ಲ. ಸಿಲ್ಕ್ ಮತ್ತು ಶಿಫಾನ್ನಂತಹ ಸೀರೆಗಳನ್ನು ಉಡಲು ಸುಲಭ. ಅದನ್ನು ಉಟ್ಟಾಗ ನೀವು ನೀಳಕಾಯರಾಗಿ ಕೂಡ ಕಂಗೊಳಿಸಬಹುದು.
ದೊಡ್ಡ ದೊಡ್ಡ ಪ್ರಿಂಟ್ ಉಳ್ಳ ಸೀರೆಗಳು ಬೇಡ
ಸೀರೆಗಳು ಹಲವು ವಿನ್ಯಾಸಗಳಲ್ಲಿ ಲಭ್ಯವಿರುತ್ತವೆ. ಕೆಲವು ಸೀರೆಗಳು ಪ್ಲೈನ್ ಆಗಿರುತ್ತವೆ ಮತ್ತು ಇನ್ನು ಕೆಲವು ಸೀರೆಗಳಲ್ಲಿ ವಿಭಿನ್ನ ಬಗೆಯ ದೊಡ್ಡ ಅಥವಾ ಚಿಕ್ಕ ಪ್ರಿಂಟ್ಗಳು ಇರುತ್ತವೆ. ನೀವು ಎತ್ತರವಾಗಿ ಕಾಣಬೇಕು ಎಂದಿದ್ದಲ್ಲಿ, ಚಿಕ್ಕ ಪ್ರಿಂಟ್ಗಳುಳ್ಳ ಸೀರೆಯನ್ನು ಆಯ್ಕೆ ಮಾಡಿಕೊಳ್ಳಿ. ಏಕೆಂದರೆ, ದೊಡ್ಡ ಪ್ರಿಂಟ್ಗಳುಳ್ಳ ಸೀರೆಯನ್ನು ಉಟ್ಟಾಗ ನೀವು ಕುಳ್ಳಗೆ ಕಾಣುತ್ತೀರಿ.
ಲಂಬ ರೇಖೆಗಳುಳ್ಳ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಿ
ನೀವು ಲಂಬ ರೇಖೆಗಳುಳ್ಳ ವಿನ್ಯಾಸದ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಿ, ಅಡ್ಡ ರೇಖೆಯುಳ್ಳ ವಿನ್ಯಾಸದ ಸೀರೆಗಳನ್ನು ದೂರವಿಡಿ. ಅಡ್ಡ ರೇಖೆಗಳುಳ್ಳ ಸೀರೆಗಳಲ್ಲಿ ನೀವು ತೆಳ್ಳಗೆ ಕಾಣುತ್ತೀರಿ ನಿಜ, ಜೊತೆಗೆ ಕುಳ್ಳಗೆ ಕೂಡ ಕಾಣುವ ಸಾಧ್ಯತೆ ಇರುತ್ತದೆ. ಹಾಗಾಗಿ, ನೀವು ನೀಳಕಾಯರಾಗಿ ಕಾಣಬೇಕಿದ್ದರೆ, ಅಡ್ಡ ರೇಖೆಯ ವಿನ್ಯಾಸವುಳ್ಳ ಸೀರೆಗಳನ್ನು ಉಡಬೇಡಿ.
ಇದನ್ನೂ ಓದಿ: Fashion Tips: ಮಹಿಳೆಯರೇ ಸೀರೆ ಕೊಳ್ಳುವಾಗ ಈ ಅಂಶಗಳನ್ನೂ ಒಮ್ಮೆ ನೋಡಿ, ನಿಮ್ಮ ಅಂದವನ್ನು ಹೆಚ್ಚಿಸಿಕೊಳ್ಳಿ..!
ಗಾಢ ಬಣ್ಣಗಳು ಉತ್ತಮ
ಗಾಢ ಬಣ್ಣದ ವಸ್ತ್ರಗಳು ನಮ್ಮನ್ನು ಸಪೂರವಾಗಿ ಕಾಣುವಂತೆ ಮಾಡುತ್ತವೆ ಎಂಬುವುದು ಎಲ್ಲರಿಗೂ ಗೊತ್ತೇ ಇದೆ. ಅವು ನಾವು ನೀಳಕಾಯರಾಗಿ ಕಾಣುವಂತೆಯೂ ಮಾಡುತ್ತವೆ. ಹಾಗಾಗಿ, ಕಪ್ಪು, ಕಡು ನೀಲಿ, ನೀಲ ಮತ್ತಿತರ ಗಾಢ ಬಣ್ಣದ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಿ.
ಉಡುವ ಶೈಲಿ
ನಿಮ್ಮ ಲುಕ್ , ನೀವು ಸೀರೆಯನ್ನು ಯಾವ ಶೈಲಿಯಲ್ಲಿ ಉಡುತ್ತೀರಿ ಎಂಬುದನ್ನು ಅವಲಂಬಿಸಿರುತ್ತದೆ. ಸೂಕ್ತ ಶೈಲಿಯ ಆಯ್ಕೆಯಿಂದ ನೀವು ನೀಳಕಾಯರಾಗಿ ಕಾಣಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ