Health Tips: ಎದೆ ಹಾಲು ಹೆಚ್ಚಿಸಲು ತಾಯಂದಿರು ಈ ಆಹಾರ ಪದಾರ್ಥಗಳನ್ನ ತಪ್ಪದೇ ಸೇವಿಸಿ

Breastfeeding: ಮಗುವಿಗೆ ತಾಯಿ ಎದೆಹಾಲು ಉಣಿಸುವುದರಿಂದ ಮಗು ಮತ್ತು ತಾಯಿಯ ನಡುವಿನ ಬಂಧವು ಹೆಚ್ಚುವುದು. ಮಗುವಿನ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳು ತಾಯಿಯ ಹಾಲಿನಲ್ಲಿ ಇರುತ್ತದೆ. ಹಾಗಾಗಿ ಮಗುವಿನ ಬೆಳವಣಿಗೆಯು ಸೂಕ್ತ ರೀತಿಯಲ್ಲಿ ಉಂಟಾಗುವುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪ್ರಕೃತಿ(Nature) ನಿಜಕ್ಕೂ ಅದ್ಭುತವಾದುದು. ಈ ಭೂಮಿ(Earth) ಮೇಲೆ ಯಾವುದೇ ಹೊಸ ಜೀವ ಸೃಷ್ಟಿಯಾದರೂ ಅದಕ್ಕೆ ತನ್ನ ತಾಯಿಯಿಂದ(Mother) ಆಹಾರ(Food) ಸಿದ್ಧವಾಗಿರುತ್ತದೆ. ಉದಾಹರಣೆಗೆ ಹುಟ್ಟಿದ ತಕ್ಷಣ ಕರುವಿಗೆ ತಾಯಿಯಾದ ಹಸುವಿನಿಂದ(Cow) ಹಾಲು ಕುಡಿಯಬೇಕೆಂದು ಸಹಜವಾಗಿ ತಿಳಿದಿರುತ್ತದೆ. ಹಾಗೆಯೇ ನವಜಾತ ಹಸುಳೆ ತನ್ನ ತಾಯಿಯ ಮೊಲೆಯಿಂದ ಹಾಲು ಕುಡಿಯುವುದನ್ನು ಹುಟ್ಟಿದಾಗಿನಿಂದಲೇ ಅರಿತಿರುತ್ತದೆ. ಎದೆ ಹಾಲು(BreastFeeding) ಕುಡಿಸುವುದು ಪ್ರಕೃತಿದತ್ತ ಮತ್ತು ಸ್ವಾಭಾವಿಕ ಪ್ರವೃತ್ತಿಯಿಂದ ಉದ್ಭವಿಸುವ ಕ್ರಿಯೆಯಾಗಿರುತ್ತದೆ. ಹೀಗಾಗಿಯೇ ತಾಯಿ ಹಾಲು ಸಂಜೀವಿನಿ, ಅಮೃತ ಸಮಾನ ಎಂದು ಹೇಳಲಾಗುತ್ತೆ.

  ನವಜಾತ ಶಿಶುಗಳಿಗೆ ಅಮೃತ ತಾಯಿ ಎದೆ ಹಾಲು

  ನವಜಾತ ಶಿಶುಗಳಿಗೆ, ಅವರ ತಾಯಿಯ ಹಾಲು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಶಿಶುಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಉತ್ತಮ ರೀತಿಯಲ್ಲಿ ನಡೆಯಲು ತಾಯಿಯ ಎದೆ ಹಾಲು ತುಂಬಾ ಆವಶ್ಯಕ. ಅದಕ್ಕಾಗಿಯೇ ಪ್ರತಿ ಮಗುವಿಗೆ ತಾಯಿಯ ಹಾಲು ಸಿಗಬೇಕು ಎಂಬ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ. ಮಗುವಿಗೆ ತಾಯಿ ಎದೆಹಾಲು ಉಣಿಸುವುದರಿಂದ ಮಗು ಮತ್ತು ತಾಯಿಯ ನಡುವಿನ ಬಂಧವು ಹೆಚ್ಚುವುದು. ಮಗುವಿನ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳು ತಾಯಿಯ ಹಾಲಿನಲ್ಲಿ ಇರುತ್ತದೆ. ಹಾಗಾಗಿ ಮಗುವಿನ ಬೆಳವಣಿಗೆಯು ಸೂಕ್ತ ರೀತಿಯಲ್ಲಿ ಉಂಟಾಗುವುದು. ತಾಯಿ ಸೂಕ್ತ ಸಮಯಗಳ ಕಾಲ ಮಗುವಿಗೆ ಹಾಲುಣಿಸುವುದರಿಂದ ಅಂಡಾಶಯದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಸೇರಿದಂತೆ ಇನ್ನಿತರ ಕ್ಯಾನ್ಸರ್ ಮತ್ತು ಅನಾರೋಗ್ಯ ಸಮಸ್ಯೆಯನ್ನು ತಡೆಯಬಹುದು. ಹೀಗಾಗಿ ಪ್ರತಿಯೊಬ್ಬ ತಾಯಿಯು ತಮ್ಮ ಎದೆ ಹಾಲು ಹೆಚ್ಚಿಸಿಕೊಳ್ಳಲು ಕೆಲವೊಂದು ಆಹಾರಗಳನ್ನ ಸೇವನೆ ಮಾಡಿದ್ರೆ ಸೂಕ್ತ.

  1)ಬೆಳ್ಳುಳ್ಳಿ: ಈ ಸಸ್ಯವನ್ನು ಪ್ರಪಂಚದಾದ್ಯಂತದ ವಿವಿಧ ಪಾಕಪದ್ಧತಿಗಳಿಗೆ ಮಸಾಲೆಯಾಗಿ ಬಳಸಲಾಗುತ್ತದೆ. ಬೆಳ್ಳುಳ್ಳಿ ಸಹ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಮತ್ತು ಎದೆ ಹಾಲು ಉತ್ಪಾದನೆಯಲ್ಲಿ ಸಹಕಾರಿಯಾಗಿದೆ. ಎಚ್ಚರಿಕೆ ಏನೆಂದರೆ ಸ್ತನ್ಯಪಾನ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸುವುದರಿಂದ ಎದೆ ಹಾಲಿನ ರುಚಿಯನ್ನು ಬದಲಾಗುತ್ತದೆ. ಮಕ್ಕಳು ಬೆಳ್ಳುಳ್ಳಿಯ ರುಚಿಯನ್ನು ಇಷ್ಟಪಡಬಹುದು ಅಥವಾ ಇಷ್ಟಪಡದಿರಬಹುದು.

  ಇದನ್ನೂ ಓದಿ: ಒಂದು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ತಿನ್ನಿಸಬೇಡಿ

  2)ಮೆಂತೆ: ಹಾಲು ಹೆಚ್ಚಿಸುವ ಮತ್ತೊಂದು ಸೂಪರ್ ಫುಡ್ ಎಂದರೆ ಮೆಂತ್ಯ ಕಾಳುಗಳು. ಆಯುರ್ವೇದವು ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಮೆಂತ್ಯ ಕಾಳಿಗೆ ಒತ್ತು ನೀಡುತ್ತದೆ. ನೀವು ಮೆಂತ್ಯ ಲಡ್ಡು ಅಥವಾ ಮೆಂತ್ಯ ಚೂರ್ಣ ತಯಾರಿಸಿ, ನಿಮ್ಮ ಊಟದ ನಂತರ ಅದನ್ನು ಸೇವಿಸಬಹುದು. ಮೆಂತ್ಯ ಕಾಳುಗಳನ್ನು ಒಂದು ಗ್ಲಾಸ್ ನೀರಿನಲ್ಲಿ ನೆನೆಸಿ, 6-7 ಗಂಟೆಗಳ ನಂತರ ಆ ನೀರನ್ನು ಕುಡಿಯುವುದು ಸುಲಭವಾದ ಮಾರ್ಗವಾಗಿದೆ.

  3)ಅಲ್ಫಾಲ್ಫಾ: ಅಲ್ಫಾಲ್ಫಾ ಇತಿಹಾಸದಲ್ಲಿ ಅತ್ಯಂತ ಹಳೆಯ ಮತ್ತು ಹೆಚ್ಚು ಬೆಳೆದ ಬೆಳೆಗಳಲ್ಲಿ ಒಂದಾಗಿದೆ. ಈ ಪೌಷ್ಠಿಕಾಂಶದ ಮೂಲಿಕೆ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ, ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ ಇದೆ. ಹಸುಗಳಿಗೆ ಆಹಾರದ ಮುಖ್ಯ ಮೂಲವಾಗಿ ಅಲ್ಫಾಲ್ಫಾವನ್ನು ಬಳಸಲಾಗುತ್ತದೆ. ಏಕೆಂದರೆ ಇದು ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

  4)ಎದೆ ಹಾಲು: ಎದೆ ಹಾಲಿನ ಉತ್ಪತ್ತಿ ಹೆಚ್ಚು ಮಾಡುವಲ್ಲಿ ನುಗ್ಗೆಕಾಯಿ ಸೊಪ್ಪು ಕೂಡ ಸಹಕಾರಿ. ಇದರಲ್ಲಿ ಕಬ್ಬಿಣದಂಶ ಅಧಿಕವಿರುವುದರಿಂದ ಬಾಣಂತಿಯರಿಗೆ ಅವಶ್ಯಕವಿರುವ ಕಬ್ಬಿಣದಂಶ ದೊರೆಯುವುದು

  5)ಮೊಟ್ಟೆ: ಸಂಪೂರ್ಣ ಪ್ರೋಟೀನ್ ಹೊಂದಿರುವ ಕೆಲವೇ ಆಹಾರಗಳಲ್ಲಿ ಮೊಟ್ಟೆ ಕೂಡ ಒಂದು. ಮೊಟ್ಟೆಗಳಲ್ಲಿ ವಿಟಮಿನ್ ಎ, ವಿಟಮಿನ್ ಬಿ 12, ವಿಟಮಿನ್ ಡಿ, ವಿಟಮಿನ್ ಇ ಮತ್ತು ಫೋಲೇಟ್, ಸೆಲೆನಿಯಮ್, ಕೋಲೀನ್ ಮತ್ತು ಇತರ ಅನೇಕ ಖನಿಜಾಂಶಗಳಿವೆ. ಮೊಟ್ಟೆಯ ಹಳದಿ ಲೋಳೆಯಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ, ಇದು ನವಜಾತ ಶಿಶುಗಳಿಗೆ ಮುಖ್ಯವಾಗಿದೆ.

  6)ಮೀನು: ಮೀನು ಗರ್ಭಿಣಿ ಮಹಿಳೆಗೆ ಮಾತ್ರವಲ್ಲದೆ ಹಾಲುಣಿಸುವ ತಾಯಿಗೆ ಸಹ ಪ್ರಯೋಜನಕಾರಿಯಾಗಿದೆ. ಸಾಲ್ಮನ್ ಮೀನು ಪ್ರೋಟೀನ್ ಮತ್ತು ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ. ಇದು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ, ಇದು ನರಮಂಡಲದ ಬೆಳವಣಿಗೆಗೆ ಮುಖ್ಯವಾಗಿದೆ.

  ಇದನ್ನೂ ಓದಿ: ಹಾಲುಣಿಸುವ ತಾಯಂದಿರೇ ತೂಕ ಇಳಿಸುವ ಚಿಂತೆಯೇ? ಹಾಗಾದರೆ ಇವುಗಳ ಬಗ್ಗೆ ತಿಳಿಯಿರಿ

  7) ಜೀರಿಗೆ ಹಾಲು: ಹೆರಿಗೆ ಬಳಿಕ ಜೀರಿಗೆ ಹಾಲು ಕುಡಿಯುವುದರಿಂದ ತಾಯಿಯ ಸ್ತನದಲ್ಲಿ ಹಾಲು ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ ಎದೆ ಹಾಲಿನ ಕೊರತೆ ಕಂಡು ಬರುವುದಿಲ್ಲ. ಇದರಿಂದ ಹಾರ್ಮೋನುಗಳನ್ನು ಸಹ ಸಮತೋಲನಗೊಳ್ಳುತ್ತದೆ .
  Published by:ranjumbkgowda1 ranjumbkgowda1
  First published: