ನಿಮ್ಮ ಪರ್ಸ್​ನಲ್ಲಿ ಹಣ ಉಳಿಯುವುದಿಲ್ಲವೇ...? ಹಾಗಿದ್ರೆ ಇಲ್ಲಿದೆ ಕಾರಣ

news18
Updated:June 25, 2018, 5:36 PM IST
ನಿಮ್ಮ ಪರ್ಸ್​ನಲ್ಲಿ ಹಣ ಉಳಿಯುವುದಿಲ್ಲವೇ...? ಹಾಗಿದ್ರೆ ಇಲ್ಲಿದೆ ಕಾರಣ
news18
Updated: June 25, 2018, 5:36 PM IST
-ನ್ಯೂಸ್ 18 ಕನ್ನಡ

ಪ್ರತಿಯೊಬ್ಬರೂ ದುಡಿಯುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ. ಆದರೆ, ತಿಂಗಳು ಪೂರ್ತಿ ದುಡಿದರೂ ಹೊಟ್ಟೆಗೆ ಇದ್ದರೆ ಬಟ್ಟೆಗೆ ಇಲ್ಲಾ ಎಂಬ ಪರಿಸ್ಥಿತಿ ಹೆಚ್ಚಿನವರದ್ದು. ಹಣವಿದೆಯೇ ಎಂದು ಕೇಳಿದರೆ ಪರ್ಸ್​ನಲ್ಲಿ ಒಂದು ನಯಾ ಪೈಸೆ ಇಲ್ಲ ಎಂಬ ಉತ್ತರ ಇಂದು ಸಾಮಾನ್ಯವಾಗಿಬಿಟ್ಟಿದೆ. ಎಷ್ಟೇ ಹಣ ಗಳಿಸಿದರೂ ಪರ್ಸ್​ನಲ್ಲಿ ದುಡ್ಡು ನಿಲ್ಲದಿರಲು ಅನೇಕ ಕಾರಣಗಳಿವೆ ಎನ್ನುತ್ತಾರೆ ವಾಸ್ತುಶಾಸ್ತ್ರ ತಜ್ಞರು.  ವಾಸ್ತು ಶಾಸ್ತ್ರದ ಪ್ರಕಾರ ಕೆಲ ವಿಷಯಗಳ ಬಗ್ಗೆ ಗಮನ ನೀಡಿದರೆ ಈ ಸಮಸ್ಯೆಗೆ ಪರಿಹಾರ ಕಾಣಬಹುದು.

1- ಸಾಮಾನ್ಯವಾಗಿ  ಹೆಚ್ಚಿನವರ ಪರ್ಸ್​ಗಳಲ್ಲಿ ಹಳೆಯ ಕಾಗದ, ರಸೀದಿ ಇತ್ಯಾದಿಗಳನ್ನು ಇಟ್ಟುಕೊಂಡಿರುತ್ತಾರೆ. ಇಂತಹ ಪರ್ಸ್​ಗಳಲ್ಲಿ ರಾಹುವಿನ ಪ್ರಭಾವ ಹೆಚ್ಚಾಗಿರುತ್ತದೆ. ಹಳೆಯ ವಸ್ತುಗಳಿರುವ ಜಾಗದಲ್ಲಿ ಧನಲಕ್ಷ್ಮಿ ಇರುವುದಿಲ್ಲ ಎನ್ನುತ್ತಾರೆ ವಾಸ್ತುಶಾಸ್ತ್ರಜ್ಞರು.

2- ವಾಸ್ತು ಶಾಸ್ತ್ರದ ಪ್ರಕಾರ, ಹರಿದಿರುವ ಪರ್ಸ್​ಗಳನ್ನು ಬಳಸಬಾರದು. ಹರಿದಿರುವಂತಹ ಪರ್ಸ್​ನಲ್ಲಿ ಹಣ ಇಡುವುದರಿಂದ ಆರ್ಥಿಕ ನಷ್ಟ ಉಂಟಾಗಲಿದೆ.

3- ಪರ್ಸ್​ಗಳಲ್ಲಿ ಔಷಧಿ ಮುಂತಾದವುಗಳನ್ನು ಇಟ್ಟುಕೊಳ್ಳುವುದರಿಂದ ಕೂಡ ಹಣದ ನಷ್ಟಕ್ಕೆ ಕಾರಣವಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ ಇದರಿಂದ ಪರ್ಸ್​ನಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

4- ಕಬ್ಬಿಣ ವಸ್ತುಗಳು, ಚಾಕು, ಬ್ಲೇಡ್​ ಮುಂತಾದವುಗಳನ್ನು ಕೂಡ ಪರ್ಸ್​ನಲ್ಲಿಟ್ಟರೆ ಹಣದ ಸಮಸ್ಯೆ ಎದುರಿಸಬೇಕಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ತಾಮ್ರ ಅಥವಾ ಬೆಳ್ಳಿ ವಸ್ತುಗಳನ್ನು ಪರ್ಸ್​ನಲ್ಲಿಡುವುದು ಮಂಗಳಕರವಾಗಿದೆ.

5- ಚಾಕೊಲೇಟ್, ಮಿಠಾಯಿ, ಪಾನ್ ಮಸಾಲಾ ಮುಂತಾದ ಆಹಾರ ಪದಾರ್ಥಗಳನ್ನು ಸಹ ಪರ್ಸ್​ನಲ್ಲಿ ಇರಿಸಬಾರದು. ಇದರಿಂದ ಕೂಡ ಹಣದ ಕೊರತೆಯ ಸಮಸ್ಯೆ ಕಾಡಲಿದೆ ಎನ್ನುತ್ತಾರೆ ವಾಸ್ತುಶಾಸ್ತ್ರಜ್ಞರು.
Loading...

6- ಪರ್ಸ್ ಅ​ನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳಿ. ಏಕೆಂದರೆ ಕೊಳಕಾಗಿರುವ ಸ್ಥಳದಲ್ಲಿ ಧನಲಕ್ಷ್ಮಿಯ ಕೃಪೆ ಇರುವುದಿಲ್ಲ.
First published:June 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...