ದೇಹದಲ್ಲಿ ಕಾಯಿಲೆಗಳು (Body Disease) ಬಾರದಂತೆ ರಕ್ಷಣೆ ಪಡೆಯಲು ರೋಗ ನಿರೋಧಕ ಶಕ್ತಿ (Immunity System) ಇರುವುದು ತುಂಬಾ ಮುಖ್ಯ. ಚಳಿಗಾಲದಲ್ಲಿ (Winter) ಕಾಯಿಲೆಗಳು, ಸಾಂಕ್ರಾಮಿಕ ರೋಗಗಳು ಹೆಚ್ಚು ಬಾಧಿಸುತ್ತವೆ. ಹಾಗಾಗಿ ದೇಹವನ್ನು ಬೆಚ್ಚಗೆ ಇರಿಸುವುದು ತುಂಬಾ ಮುಖ್ಯ. ದೇಹವನ್ನು ಕಾಯಿಲೆಗಳಿಂದ ರಕ್ಷಣೆ ಮಾಡಲು ರೋಗ ನಿರೋಧಕ ಶಕ್ತಿ ಸುಧಾರಿಸುವುದು ಮುಖ್ಯ. ಅದಾಗ್ಯೂ ನಮ್ಮ ಪ್ರತಿರಕ್ಷಣಾ ವ್ಯವಸ್ಥೆ ಕಡಿಮೆಯಾಗಲು ಹಾಗೂ ಕಳಪೆಯಾಗಲು ಕೆಟ್ಟ ಜೀವನಶೈಲಿ (Bad Lifestyle) ಮತ್ತು ಆಹಾರದಲ್ಲಿ ಪೋಷಕಾಂಶ ಭರಿತ ಆಹಾರ ಸೇವನೆ ಮಾಡದೇ ಇರುವುದು ಮುಖ್ಯ ಕಾರಣವಾಗಿದೆ. ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಗೆ ಧೂಮಪಾನ, ಆಲ್ಕೋಹಾಲ್ ಕಾರಣವಾಗಿದೆ.
ಆಹಾರ ಮತ್ತು ಪಾನೀಯದ ಬಗ್ಗೆ ಗಮನಹರಿಸಿ
ಲೈಂಗಿಕವಾಗಿ ಹರಡುವ ರೋಗಗಳು, ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಮೊದಲು ಕೆಟ್ಟ ಪರಿಣಾಮ ಬೀರುತ್ತವೆ.
ಪೋಷಕಾಂಶಗಳ ಕೊರತೆ ಇದ್ದಾಗ ನಾವು ಸೇವಿಸುವ ಆಹಾರದಲ್ಲಿ ಪೋಷಕ ತತ್ವಗಳು ಇಲ್ಲದಿರುವಾಗ ರೋಗ ನಿರೋಧಕ ಶಕ್ತಿ ಹೆಚ್ಚು ಪರಿಣಾಮ ಬೀರುತ್ತದೆ. ಈ ಬಗ್ಗೆ ತಜ್ಞರು ಆಹಾರ ಮತ್ತು ಪಾನೀಯದ ಬಗ್ಗೆ ಗಮನ ಹರಿಸಬೇಕು ಅಂತಾರೆ.
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಸುಧಾರಿಸಲು ಉತ್ತಮ ಆಹಾರ ಸೇವನೆ ಮುಖ್ಯ. ಕೋವಿಡ್ ಅಪಾಯ ಸೇರಿದಂತೆ ಹಲವು ಕಾಯಿಲೆಗಳ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಬಲಪಡಿಸುವುದು ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು ಅಂತಾರೆ ತಜ್ಞರು.
ಆಗಾಗ್ಗೆ ಶೀತ, ಜ್ವರ ತಪ್ಪಿಸಲು ರೋಗ ನಿರೋಧಕ ಶಕ್ತಿ ಬಲಪಡಿಸುವುದು ಮುಖ್ಯ. ವರ್ಷದಲ್ಲಿ ಎರಡು ಬಾರಿ ನ್ಯುಮೋನಿಯಾ ಆದರೆ ಆಗಾಗ್ಗೆ ಕಿವಿ ಸೋಂಕು ಉಂಟಾದರೆ ರೋಗ ನಿರೋಧಕ ಶಕ್ತಿ ದುರ್ಬಲವಾಗಿದೆ ಎಂದರ್ಥ.
ಬ್ರಾಂಕೈಟಿಸ್, ಆಗಾಗ್ಗೆ ಸೈನಸ್ ಅಗುವುದು, ಚರ್ಮದ ಸೋಂಕು ಮ್ತು ಕಾಯಿಲೆಗಳು ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗಿದ್ದನ್ನು ಸೂಚಿಸುತ್ತದೆ. ಪ್ಲೇಟ್ಲೆಟ್ ಸಂಖ್ಯೆ ಕಡಿಮೆಯಾಗುವುದು, ರಕ್ತಹೀನತೆ, ಆಂತರಿಕ ಅಂಗಗಳ ಉರಿಯೂತ ಮತ್ತು ಸೋಂಕು ಉಂಟಾಗುತ್ತದೆ.
ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುವ ಆಹಾರ ಪದಾರ್ಥಗಳು
ಫೈಬರ್ ಸೇವನೆ ಮುಖ್ಯ
ಸೂಕ್ಷ್ಮಜೀವಿಗಳು ಕರುಳಿನಲ್ಲಿ ಹೆಚ್ಚು ವಾಸಿಸುತ್ತದೆ. ಹಾಗಾಗಿ ಇವುಗಳನ್ನು ತೊಡೆದು ಹಾಕುವುದು ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಲು ಫೈಬರ್ ಸೇವನೆ ಮುಖ್ಯ. ಕರುಳಿನಲ್ಲಿ ಯಾವ ರೀತಿಯ ಸೂಕ್ಷ್ಮಜೀವಿಗಳು ವಾಸಿಸುತ್ತವೆ ಎಂಬುದನ್ನು ನಿರ್ಧರಿಸುವಲ್ಲಿ ಆಹಾರ ದೊಡ್ಡ ಪಾತ್ರ ವಹಿಸುತ್ತದೆ.
ಹಣ್ಣು, ತರಕಾರಿ, ಧಾನ್ಯ ಮತ್ತು ಬೀನ್ಸ್ ಸೇವನೆ ಮಾಡಿ. ಇದರಲ್ಲಿ ಹೆಚ್ಚಿನ ಫೈಬರ್ ಇದೆ. ಸಸ್ಯ ಆಹಾರಗಳು ಪ್ರಯೋಜನಕಾರಿ ಬ್ಯಾಕ್ಟೀರಿಯಾದ ಬೆಳವಣಿಗೆ ಬೆಂಬಲಿಸುತ್ತವೆ.
ಪ್ರೋಬಯಾಟಿಕ್ ಆಹಾರ ಸೇವನೆ ಮಾಡುವುದು
ಪ್ರೋಬಯಾಟಿಕ್ ಆಹಾರ ಸೇವನೆ ಮಾಡಿದ್ರೆ ಉತ್ತಮ ಬ್ಯಾಕ್ಟೀರಿಯಾ ಉಂಟಾಗುತ್ತವೆ. ಇದು ರೋಗ ನಿರೋಧಕ ಶಕ್ತಿ ಬಲಿಷ್ಠವಾಗಿಸಲು ಬಹಳ ಮುಖ್ಯ. ಮೊಸರು, ಹುದುಗಿಸಿದ ತರಕಾರಿ, ಕೊಂಬುಚಾ ಚಹಾ, ಕಿಮ್ಚಿ, ಸೌರ್ಕ್ರಾಟ್ ಮತ್ತು ಮಿಸೊ ಕೂಡ ಪ್ರೋಬಯಾಟಿಕ್ ಆಹಾರ ಸೇವಿಸಿ.
ಪ್ರಿಬಯಾಟಿಕ್ ಆಹಾರ ಸೇವನೆ ಮಾಡಿ
ಪ್ರಿಬಯಾಟಿಕ್ ಆಹಾರ ಸೇವನೆ ಮಾಡಿದರೆ ಫೈಬರ್ ಮತ್ತು ಆಲಿಗೋಸ್ಯಾಕರೈಡ್ ಇದೆ. ಒಳ್ಳೆಯ ಬ್ಯಾಕ್ಟೀರಿಯಾ ಬೆಳವಣಿಗೆಗೆ ಪ್ರಿಬಯಾಟಿಕ್ ಆಹಾರ ಸೇವನೆ ಮುಖ್ಯ.
ಪ್ರಿಬಯಾಟಿಕ್ ಆಹಾರಗಳಲ್ಲಿ ಬೆಳ್ಳುಳ್ಳಿ, ಈರುಳ್ಳಿ, ಶತಾವರಿ, ಶತಾವರಿ, ಕೇಲ್, ಬಾಳೆಹಣ್ಣು ಮತ್ತು ಸಮುದ್ರಾಹಾರ ಸೇರಿವೆ. ವಿವಿಧ ಹಣ್ಣುಗಳು, ತರಕಾರಿ, ಬೀನ್ಸ್ ಮತ್ತು ಧಾನ್ಯ ಸೇವನೆ ಮಾಡಿ.
ಖನಿಜ ಮತ್ತು ವಿಟಮಿನ್
ವಿಟಮಿನ್ ಮತ್ತು ಖನಿಜಗಳ ಕೊರತೆಯಿದ್ದಾಗ ಪ್ರತಿರಕ್ಷಣಾ ವ್ಯವಸ್ಥೆ ಕಳಪೆಯಾಗುತ್ತದೆ. ಸತು, ಸೆಲೆನಿಯಮ್, ಫೋಲಿಕ್ ಆಮ್ಲ, ಕಬ್ಬಿಣ, ತಾಮ್ರ, ವಿಟಮಿನ್ ಎ ಬೇಕು.
ಆರೋಗ್ಯಕರ ಕೋಶಗಳನ್ನು ರಕ್ಷಿಸಲು ಉತ್ಕರ್ಷಣ ನಿರೋಧಕಗಳು ಮತ್ತು ಪ್ರತಿಕಾಯಗಳ ಉತ್ಪಾದನೆ ಬೇಕು. ಅಪೌಷ್ಟಿಕತೆ ಹೊಂದಿರುವ ಜನರು ಬ್ಯಾಕ್ಟೀರಿಯಾ, ವೈರಲ್ ಮತ್ತು ಇತರ ಸೋಂಕುಗಳಿಗೆ ಹೆಚ್ಚಿನ ಅಪಾಯ ಹೊಂದಿರುತ್ತಾರೆ.
ಅಂಥವರು ಪೋಷಕಾಂಶ ಸಮೃದ್ಧ ಆಹಾರ ಸೇವನೆ ಮಾಡಬೇಕು. ಹಸಿರು ಎಲೆಗಳ ತರಕಾರಿ, ಬೀಜ, ಕಾಲೋಚಿತ ಹಣ್ಣು, ಕಾಲೋಚಿತ ತರಕಾರಿ ಸೇವನೆ ಮಾಡಿ.
ಇದನ್ನೂ ಓದಿ: ನಿಮ್ಮ ಮೂಳೆಗಳನ್ನು ಸ್ಟ್ರಾಂಗ್ ಮಾಡುತ್ತಂತೆ ಈ ಸ್ಟ್ರಾಬೆರಿ ಹಣ್ಣು!
ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ದಾಲ್ಚಿನ್ನಿ, ಲವಂಗ, ಅರಿಶಿನ ಮುಂತಾದ ವಿವಿಧ ಗಿಡಮೂಲಿಕೆ, ಚಹಾ ಸೇವಿಸಿ. ಬೆಳ್ಳುಳ್ಳಿ, ಹಸಿರು ಚಹಾ, ರೋಗ ನಿರೋಧಕ ಚಟುವಟಿಕೆ ಹೆಚ್ಚಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ