• Home
  • »
  • News
  • »
  • lifestyle
  • »
  • Life Hacks: ತರಕಾರಿ ಇಷ್ಟ ಇಲ್ಲ ಅಂತ ಬಿಡ್ಬೇಡಿ, ಇಲ್ಲಿದೆ ನೋಡಿ ಸೂಪರ್ ಐಡಿಯಾ

Life Hacks: ತರಕಾರಿ ಇಷ್ಟ ಇಲ್ಲ ಅಂತ ಬಿಡ್ಬೇಡಿ, ಇಲ್ಲಿದೆ ನೋಡಿ ಸೂಪರ್ ಐಡಿಯಾ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Vegetables Tips: ತರಕಾರಿಗಳನ್ನು ಆಹಾರದಿಂದ ಹೊರಗಿಡುವುದರಿಂದ ಪೌಷ್ಠಿಕಾಂಶದ ಕೊರತೆಗಳು, ಸ್ಥೂಲಕಾಯತೆ ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು. ತರಕಾರಿಗಳು, ವಿಶೇಷವಾಗಿ ಹಸಿರು ಎಲೆಗಳು ಕರಗುವ ಮತ್ತು ಕರಗದ ಫೈಬರ್, ವಿಟಮಿನ್‌ಗಳು, ಖನಿಜಗಳು, ಕ್ಯಾಲ್ಸಿಯಂ, ಕಬ್ಬಿಣ, ಫೋಲಿಕ್ ಆಮ್ಲ, ಪೊಟ್ಯಾಶಿಯಮ್, ಫಾಸ್ಫರಸ್ ಮತ್ತು ಮೆಗ್ನೀಶಿಯಮ್‌ಗಳಲ್ಲಿ ಸಮೃದ್ಧವಾಗಿವೆ.

ಮುಂದೆ ಓದಿ ...
  • Share this:

ತರಕಾರಿಗಳು (Vegetables) ನಮ್ಮ ಆರೋಗ್ಯಕಾರಿ (Healthy)  ಜೀವನಕ್ಕೆ ಹಲವು ಪ್ರಮುಖ ಪೋಷಕಾಂಶಗಳನ್ನು ನೀಡುತ್ತವೆ. ಪ್ರತಿನಿತ್ಯ ನಮ್ಮ ಆಹಾರ ಪದ್ಧತಿಯಲ್ಲಿ ತರಕಾರಿಗಳು ಇರಲೇಬೇಕು ಎನ್ನತ್ತಾರೆ ಆಹಾರ ತಜ್ಞರು. ಕೆಲವರು ಹಸಿ ತರಕಾರಿ ಇಷ್ಟಪಟ್ಟು ತಿಂದರೆ, ಕೆಲವರು ಬೇಯಿಸಿದ ತರಕಾರಿ ತಿನ್ನುತ್ತಾರೆ. ಇನ್ನೂ ಕೆಲವರು ತರಕಾರಿಗಳನ್ನು ತಟ್ಟೆಯಲ್ಲಿ ಸೈಡಿಗೆ ಬದಿಗೊತ್ತಿಡುತ್ತಾರೆ. ತರಕಾರಿಯ ಲಾಭ ಗೊತ್ತಿದ್ದರೂ ಕೆಲವರು ಅವುಗಳ ಸೇವನೆಯನ್ನು ಇಷ್ಟಪಡುವುದಿಲ್ಲ. ಇಂತವರಿಗಾಗಿ ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಲು ರುಚಿಕರವಾದ ಮಾರ್ಗಗಳ ಬಗ್ಗೆ ಮಾಹಿತಿ ಇಲ್ಲಿದೆ.


ತರಕಾರಿಗಳನ್ನು ಆಹಾರದಿಂದ ಹೊರಗಿಡುವುದರಿಂದ ಪೌಷ್ಠಿಕಾಂಶದ ಕೊರತೆಗಳು, ಸ್ಥೂಲಕಾಯತೆ ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು. ತರಕಾರಿಗಳು, ವಿಶೇಷವಾಗಿ ಹಸಿರು ಎಲೆಗಳು ಕರಗುವ ಮತ್ತು ಕರಗದ ಫೈಬರ್, ವಿಟಮಿನ್‌ಗಳು, ಖನಿಜಗಳು, ಕ್ಯಾಲ್ಸಿಯಂ, ಕಬ್ಬಿಣ, ಫೋಲಿಕ್ ಆಮ್ಲ, ಪೊಟ್ಯಾಶಿಯಮ್, ಫಾಸ್ಫರಸ್ ಮತ್ತು ಮೆಗ್ನೀಶಿಯಮ್‌ಗಳಲ್ಲಿ ಸಮೃದ್ಧವಾಗಿವೆ. ಇವು ಮಲಬದ್ಧತೆಗೆ ಸಹಾಯ ಮಾಡುತ್ತವೆ ಮತ್ತು ಮೂಳೆಯ ಆರೋಗ್ಯವನ್ನು ಬೆಂಬಲಿಸುತ್ತವೆ. ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆ ಇರುವ ಜನರು ತಮ್ಮ ಸ್ಥಿತಿಯನ್ನು ನಿರ್ವಹಿಸಲು ಸಾಕಷ್ಟು ಪ್ರಮಾಣದಲ್ಲಿ ತಿನ್ನಲು ಸಲಹೆ ನೀಡಲಾಗುತ್ತದೆ.


ಸಾಂಬಾರ್, ಪಲ್ಯದಂತ ಸಾಂಪ್ರದಾಯಿಕ ರೂಪದಲ್ಲಿ ತರಕಾರಿಗಳನ್ನು ಸೇವಿಸು ಇಷ್ಟಪಡದಿದ್ದರೆ, ನಿಮ್ಮ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳನ್ನು ಪಡೆಯಲು ಕೆಲವು ಆಸಕ್ತಿದಾಯಕ ಮಾರ್ಗಗಳು ಇಲ್ಲಿವೆ.


ತರಕಾರಿಗಳನ್ನು ತಿನ್ನಲು 5 ಸುಲಭ ಮತ್ತು ರುಚಿಯಾದ ಮಾರ್ಗಗಳು


1) ವೆಜಿಟೇಬಲ್ ಜ್ಯೂಸ್


ತರಕಾರಿಗಳಲ್ಲಿರುವ ಎಲ್ಲಾ ಅದ್ಭುತವಾದ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ಒಂದು ಮಾರ್ಗವೆಂದರೆ ಅವುಗಳನ್ನು ಜ್ಯೂಸ್ ಮಾಡುವುದು. ಜ್ಯೂಸ್ನಲ್ಲಿ ನೀವು ಒಂದಕ್ಕಿಂತ ಹೆಚ್ಚು ತರಕಾರಿಗಳನ್ನು ಸೇರಿಸಿಕೊಳ್ಳಬಹುದು, ಆದಾಗ್ಯೂ ನೀವು ಇನ್ನೂ ಫೈಬರ್ ಅನ್ನು ಪಡೆದುಕೊಂಡಿಲ್ಲ ಎಂದರೆ ಯಾವುದಾದರೂ ಮೂರು ಬಣ್ಣದ ತರಕಾರಿಗಳನ್ನು ತೆಗೆದುಕೊಳ್ಳಿ, ಜ್ಯೂಸ್ ಮಾಡಿ ಸೇವಿಸಿ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳ ಎಲ್ಲಾ ಉತ್ತಮ ಗುಣಗಳನ್ನು ಪಡೆಯಬಹುದು ಎನ್ನುತ್ತಾರೆ ತಜ್ಞರು.


ಇದನ್ನೂ ಓದಿ: ದಿನಕ್ಕೆರಡು ಬಿಯರ್ ಕುಡಿದರೆ ಮೆದುಳಿಗೆ ಡೇಂಜರ್! ಅಧ್ಯಯನದಲ್ಲಿ ರಿವೀಲಾಯ್ತು ಬಿಯರ್ ಅಪಾಯ


2) ರುಚಿಕರವಾದ ಸೂಪ್


ತರಕಾರಿಗಳನ್ನು ಜಗಿಯುವುದು ನಿಮಗೆ ಇಷ್ಟವಿಲ್ಲದಿದ್ದರೆ, ನೀವು ತರಕಾರಿಗಳಿಂದ ಸೂಪ್ ತಯಾರಿಸಬಹುದು. ಪಾಲಕ್, ಮೆಂತ್ಯ, ಕ್ಯಾರೆಟ್, ಬಟಾಣಿ, ಟೊಮ್ಯಾಟೋ, ಕೆಲವು ಹರ್ಬ್ಸ್ ಜೊತೆ ಈ ತರಕಾರಿಗಳನ್ನು ಕತ್ತರಿಸಿ ಬೇಯಿಸಿ ಅದರ ರಸದಿಂದ ಸೂಪ್ ತಯಾರಿಸಿಕೊಂಡು ಸೇವಿಸಬಹುದು. ನೀವು ಇದರ ಜೊತೆ ಚಿಕನ್ ಸ್ಟಾಕ್ ಅನ್ನು ಸಹ ಸೇರಿಸಿ ಕುಡಿಯಬಹುದು.


3) ಟೇಸ್ಟಿ ಪರಾಠಗಳು
ತರಕಾರಿಗಳನ್ನು ಹಾಗೆ ನೇರವಾಗಿ ತಿನ್ನಲು ಕಷ್ಟವಾದರೆ ವೆಜಿಟೇಬಲ್ ಪರಾಠ ಮಾಡಬಹುದು. ನಿಮಗೆ ಇಷ್ಟವಾಗುವ ತರಕಾರಿಗಳನ್ನು ತುರಿದು ಅವುಗಳನ್ನು ಪರಾಠದ ಹಿಟ್ಟಿನ ಜೊತೆ ಸೇರಿಸಿ ಲಟ್ಟಿಸಿ, ಬೇಯಿಸಿ ತಿನ್ನುವುದರಿಂದ ನೀವು ಸಹ ಹೆಚ್ಚು ಫೈಬರ್, ಪ್ರೋಟೀನ್ ಪಡೆಯುತ್ತೀರಿ.


4) ಪಿಜ್ಜಾ


ಕ್ಯಾರೆಟ್, ಪಾಲಕ್, ಅಥವಾ ಲಭ್ಯವಿರುವ ಯಾವುದಾದರೂ ತರಕಾರಿಗಳನ್ನು ತೆಗೆದುಕೊಳ್ಳಿ. ಗೋಧಿ ಹಿಟ್ಟು ಅಥವಾ ರಾಗಿ ಹಿಟ್ಟು ಯಾವುದೇ ಹಿಟ್ಟನ್ನು ಎರಡು ಚಮಚ ಅದರಿಂದ ಪಿಜ್ಜಾ ಬೇಸ್ ಮಾಡಿ. ಸ್ವಲ್ಪ ಮರೀನಾ ಸಾಸ್, ಸ್ವಲ್ಪ ಪಾಸ್ತಾ ಸಾಸ್, ಪಿಜ್ಜಾ ಸಾಸ್, ಚೀಸ್ ಸೇರಿಸಿ ಮತ್ತು ತರಕಾರಿಗಳನ್ನು ಅದರ ಮೇಲೆ ಹಾಕಿ ಚೀಸ್ ಮೆಲ್ಟ್ ಆಗುವವರೆಗೆ ಬೇಯಿಸಿದರೆ ನೀವು ಮನೆಯಲ್ಲಿಯೇ ಪಿಜ್ಜಾ ತಿನ್ನುವುದರ ಜೊತೆಗೆ ತರಕಾರಿಯನ್ನು ಸಹ ಸೇವಿಸಬಹುದು.


5) ರುಚಿಕರವಾದ ಪಾಸ್ತಾ


ಇದನ್ನೂ ಓದಿ: ಪೇರಲ ಹಣ್ಣಿನಷ್ಟೇ ಎಲೆಗಳಿಂದ ಹಲವು ಪ್ರಯೋಜನಗಳಿವೆ..! ಕೂದಲು ಆರೋಗ್ಯವಾಗಿರಲು ಹೀಗೆ ಮಾಡಿ


ತರಕಾರಿಗಳ ಸಹಾಯದಿಂದ ರುಚಿಕರವಾದ ಪಾಸ್ತಾವನ್ನು ಸಹ ತಯಾರಿಸಬಹುದು. ಕುಂಬಳಕಾಯಿ ಅಥವಾ ಕ್ಯಾರೆಟ್ ಅನ್ನು ತುರಿ ಮಾಡಿ ಮತ್ತು ಅದರಿಂದ ಸಾಸ್ ತಯಾರಿಸಿ. ನೀವು ಈ ಸಾಸ್ ಅನ್ನು ನಿಮ್ಮ ಪಾಸ್ತಾಗೆ ಸೇರಿಸಬಹುದು ಮತ್ತು ಈ ರೀತಿಯಲ್ಲಿ ನೀವು ನಿಮ್ಮ ತರಕಾರಿಗಳನ್ನು ತಿನ್ನಬಹುದು ಮತ್ತು ಅವುಗಳ ಪ್ರಯೋಜನ ಪಡೆಯಬಹುದು.

Published by:Sandhya M
First published: