Save Time: ಈ ಕೆಲವು ಅಭ್ಯಾಸಗಳನ್ನು ಬಿಟ್ಟರೆ ನಿಮ್ಮ ಅಮೂಲ್ಯ ಸಮಯ ಹಾಳಾಗದಂತೆ ತಡೆಯಬಹುದು!
Time management: ಮನುಷ್ಯ ಸೋಮಾರಿಯಾದಷ್ಟು ಆತನಿಗೆ ಮಾಡುವ ಕೆಲಸಗಳ ಮೇಲೆ ಉತ್ಸಾಹವೇ ಇರುವುದಿಲ್ಲ.. ಹೀಗಾಗಿ ಸೋಮಾರಿತನ ಹಾಗೂ ಆಲಸ್ಯತನವನ್ನ ಹೊರಗೆ ಬಿಟ್ಟಾಗ, ನಾವು ಯಾವ ಕೆಲಸವನ್ನು ಮಾಡಬೇಕು ಎಂದು ಕೊಂಡಿರುತ್ತೇವೆ ಆ ಕೆಲಸವನ್ನು ನಿಗದಿತ ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯ
ಪ್ರತಿಯೊಬ್ಬರಿಗೂ ಜೀವನದಲ್ಲಿ (Life) ಸಮಯ (Time) ನಿರ್ವಹಣೆ ಎಂಬುದು ಬಹಳ ಮುಖ್ಯವಾದದ್ದು.. ಕೆಲವೊಮ್ಮೆ ಎಷ್ಟು ಬೇಗ ಸಮಯ ಮುಗಿದು ಹೋಯಿತು ಎನ್ನುವ ಅನುಭವ (Experience) ಬರುತ್ತದೆ.. ಇನ್ನು ಕೆಲವೊಮ್ಮೆ ಸಮಯದ ಜೊತೆ ಇನ್ನು ಮುಂದೆ ಸಾಗುವುದು ಬಹುತೇಕರಿಗೆ ಕಷ್ಟವಾಗಿರುತ್ತದೆ.. ಇನ್ನು ಕೆಲವರು ಅಂದುಕೊಂಡ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಲಾಗದೇ ಸಮಯವನ್ನೇ ದೂಷಿಸುತ್ತಾರೆ. ಆದರೆ ಹೇಗೆ ಸಮಯ ಮುಂದೆ ಹೋಗುತ್ತಿದೆ ಎಂದು ನಾವು ಅಂದುಕೊಳ್ಳುತ್ತಾ ಕೂರುವ ಬದಲು ಇರುವ ಸಮಯದಲ್ಲಿ ನಮ್ಮ ಕೆಲಸವನ್ನ ಮಾಡಿಕೊಳ್ಳುವುದು ಸೂಕ್ತ.. ಕೆಲವರು ದಿನಪೂರ್ತಿ ಹರಟೆ (Time Waste) ಹೊಡೆದು ಕೊನೆಗಳಿಗೆಯಲ್ಲಿ ಕೆಲಸ ಮಾಡಲು ಶುರು ಮಾಡಿ, ಅಯ್ಯೋ ನಮಗೆ ಸಮಯವೇ ಸಾಲುತಿಲ್ಲ ಇಷ್ಟು ಬೇಗ ಟೈಮ್ ಮುಗಿದು ಹೋಯಿತು ಎಂದು ಕೊರಗಲು ಶುರುಮಾಡುತ್ತಾರೆ..ಇದು ಅವರದೇ ತಪ್ಪು ಆಗಿರುತ್ತದೆ.. ಹೀಗಾಗಿ ನೀವು ನಿಮ್ಮ ಜೀವನದಲ್ಲಿ ಸರಿಯಾಗಿ ಟೈಮ್ ಮ್ಯಾನೇಜ್ಮೆಂಟ್ (Time Management) ಮಾಡುವುದು ಬಹಳ ಮುಖ್ಯ.. ಹೀಗಾಗಿ ನೀವು ಎಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದೀರಾ ಎಂಬುದನ್ನು ಅರಿತುಕೊಳ್ಳುವುದು ಅಷ್ಟೇ ಮುಖ್ಯ.. ಅಲ್ಲದೇ ನೀವು ನಾವು ಹೇಳುವುದನ್ನು ಸರಿಯಾಗಿ ಪಾಲನೆ ಮಾಡಿದರೆ ನಿಮ್ಮ ಸಮಯವನ್ನು ಉಳಿತಾಯ ಮಾಡಿಕೊಳ್ಳಬಹುದು..
1) ಆಲಸ್ಯ: ಮನುಷ್ಯ ಸೋಮಾರಿಯಾದಷ್ಟು ಆತನಿಗೆ ಮಾಡುವ ಕೆಲಸಗಳ ಮೇಲೆ ಉತ್ಸಾಹವೇ ಇರುವುದಿಲ್ಲ.. ಹೀಗಾಗಿ ಸೋಮಾರಿತನ ಹಾಗೂ ಆಲಸ್ಯತನವನ್ನ ಹೊರಗೆ ಬಿಟ್ಟಾಗ, ನಾವು ಯಾವ ಕೆಲಸವನ್ನು ಮಾಡಬೇಕು ಎಂದು ಕೊಂಡಿರುತ್ತೇವೆ ಆ ಕೆಲಸವನ್ನು ನಿಗದಿತ ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯ.. ಕೆಲವರು ಕೆಲಸದ ಅವಧಿ ಮೀರಿ ಹೋದರೂ ಸಹ, ಕೆಲಸವನ್ನ ಪೂರ್ಣಗೊಳಿಸದೆ ಇಲ್ಲಸಲ್ಲದ ಒತ್ತಡಗಳನ್ನು ತಮ್ಮ ಮೈಮೇಲೆ ಮಾಡಿಕೊಳ್ಳುತ್ತಾರೆ.. ಇದಕ್ಕೆಲ್ಲಾ ಕಾರಣ ನಮ್ಮ ಬಳಿ ಇನ್ನೂ ಸಮಯವಿದೆ ಎನ್ನುವ ಭಾವನೆ.. ಹೀಗಾಗಿ ಆಲಸ್ಯದ ಭಾವ ಬಿಡುವುದು ಮುಖ್ಯ.
2) ಬೇರೊಬ್ಬರ ಕೆಲಸ ಮಾಡುವುದು: ನಮ್ಮ ಕೆಲಸವೇ ಸಂಪೂರ್ಣವಾಗಿ ಮುಗಿದಿರುವುದಿಲ್ಲ.. ಅಂತದ್ರಲ್ಲಿ ಇನ್ನೊಬ್ಬರ ಕೆಲಸ ಮಾಡಲು ಮುಂದಾದಾಗ ಸಮಯ ವ್ಯರ್ಥವಾಗುತ್ತದೆ.. ಹೀಗಾಗಿ ಮೊದಲು ನಮ್ಮ ಕೆಲಸವನ್ನು ಮಾಡಿಕೊಂಡು ಸಮಯ ಉಳಿದರೆ ಇನ್ನೊಬ್ಬರ ಕೆಲಸಕ್ಕೆ ಸಹಾಯ ಮಾಡುವುದು ಸೂಕ್ತ..
3) ಸೋಶಿಯಲ್ ಮೀಡಿಯಾ: ಇತ್ತೀಚಿನ ದಿನಗಳಲ್ಲಿ ಕಾಲಹರಣ ಮಾಡಲು ಉತ್ತಮ ವೇದಿಕೆ ಅಂದರೆ ಅದು ಸೋಶಿಯಲ್ ಮೀಡಿಯಾ.. ಸೋಷಿಯಲ್ ಮೀಡಿಯಾದ ಹುಚ್ಚು ಅದು ಎಷ್ಟರಮಟ್ಟಿಗೆ ಆವರಿಸಿಕೊಂಡಿರುತ್ತದೆ ಅಂದರೆ ಜನರು ತಾವು ಮಾಡುತ್ತಿರುವ ಕೆಲಸಗಳನ್ನು ಮರೆತು ಸೋಶಿಯಲ್ ಮೀಡಿಯಾದಲ್ಲಿ ಮುಳುಗಿ ಹೋಗಿ ಬಿಡುತ್ತಾರೆ.. ಇದರಿಂದ ಅಂದುಕೊಂಡ ಕೆಲಸ ಸರಿಯಾದ ಸಮಯಕ್ಕೆ ಆಗುವುದಿಲ್ಲ.. ಹೀಗಾಗಿ ಸಾಧ್ಯವಾದಷ್ಟು ಸೋಶಿಯಲ್ ಮೀಡಿಯಾದಿಂದ ದೂರವಿರುವುದು ಉತ್ತಮ.
4) ಅನಗತ್ಯ ಮಾತುಕಥೆ: ನಮ್ಮ ಕೆಲಸ ಕೆಲಸ ಮಾಡುವುದಕ್ಕಿಂತ ಬೇರೊಬ್ಬರೊಂದಿಗೆ ಅನಗತ್ಯವಾಗಿ ಮಾತು ಕಥೆಯಲ್ಲಿ ತೊಡಗಿಕೊಳ್ಳುವುದು, ನಾವು ಮಾಡುವ ಕೆಲಸದ ಮೇಲೆ ಪರಿಣಾಮ ಬೀರಲಿದೆ.. ನಾವು ಅನಗತ್ಯವಾಗಿ ಅವರೊಂದಿಗೆ ಸಂವಹನ ನಡೆಸುತ್ತಿದ್ದೇವೆ ಎಂದು ತಿಳಿದಿದ್ದರೂ ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಚರ್ಚಿಸುತ್ತಿರುವುದರಿಂದ ನಾವು ಅಂದುಕೊಂಡ ಕೆಲಸಗಳು ನಿಗದಿತ ಸಮಯಕ್ಕೆ ಆಗುವುದಿಲ್ಲ..
5) ವಸ್ತುಗಳನ್ನು ಅಸ್ತವ್ಯಸ್ತವಾಗಿ ಇಡುವುದು: ಒಂದು ವಸ್ತುವನ್ನು ತೆಗೆದುಕೊಂಡು ಬಳಸಿದರೆ ಮತ್ತು ಅದೇ ವಸ್ತುವನ್ನು ಅದೇ ಜಾಗದಲ್ಲಿ ಇಡುವುದು ಸೂಕ್ತ..ಇಲ್ಲದಿದ್ದರೆ ನಮಗೆ ಬೇಕಾದಾಗ ವಸ್ತುವನ್ನು ಹುಡುಕುವುದರಲ್ಲಿಯೇ ನಾವು ಸಮಯ ವ್ಯರ್ಥ ಮಾಡಬಹುದು..
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ